For Quick Alerts
ALLOW NOTIFICATIONS  
For Daily Alerts

ನಂಬಿದರೆ ನಂಬಿ ಬಿಟ್ಟರೆ ಬಿಡಿ: ಅಡುಗೆ ಪಾತ್ರೆ ಕೂಡ ಸುರಕ್ಷಿತವಲ್ಲ!

By manu
|

ಬಹುತೇಕ ಜನಗಳಿಗೆ ವಾಯು ಮಾಲಿನ್ಯ, ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಹಾಗು ಅವುಗಳಿಂದ ಸಂಭವಿಸುವ ಅಪಾಯಗಳ ಕುರಿತು ತಿಳಿದಿರುತ್ತದೆ. ಜೊತೆಗೆ ಮನೆಯಲ್ಲಿ ಬಳಸಲಾಗುವ ರಾಸಾಯನಿಕಗಳು ಮತ್ತು ಅವುಗಳಿಂದ ಸಂಭವಿಸುವ ಹಾನಿಯ ಬಗ್ಗೆಯೂ ಮಾಹಿತಿ ಇರುತ್ತದೆ.

ಆದರೆ ಅಡುಗೆಗೆ ಬಳಸುವ ಪಾತ್ರೆಗಳಿಂದ ನಮಗೆ ಆಗುವ ಅಪಾಯದ ಕುರಿತು ನಿಮಗೆ ಮಾಹಿತಿ ಇದೆಯೇ? ಬನ್ನಿ ಇಂದು ನಮ್ಮ ಸಾಂಪ್ರದಾಯಿಕ ಪಾತ್ರೆಗಳಲ್ಲಿ ಅಡಗಿರುವ ಅಪಾಯಗಳ ಕುರಿತು ತಿಳಿದುಕೊಳ್ಳೋಣ...

Hidden Dangers In Cookware

ಸ್ಟೈನ್‌ಲೆಸ್ ಸ್ಟೀಲ್
ಸ್ಟೈನ್‌ಲೆಸ್ ಸ್ಟೀಲ್‌ನಲ್ಲಿ ಹಲವಾರು ದರ್ಜೆಗಳಿವೆ. ಸಾಮಾನ್ಯ ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಯನ್ನು ಅಲಾಯ್ ಜೊತೆಗೆ ತ್ಯಾಜ್ಯ ಲೋಹಗಳನ್ನು ಬೆರೆಸಿ ತಯಾರಿಸಲಾಗುತ್ತದೆ. " ಅಂಗಡಿಗಳಲ್ಲಿ ಮಾರಲ್ಪಡುವ ಬಹುತೇಕ ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳು ಕ್ರೋಮ್ ಮತ್ತು ನಿಕ್ಕಲ್ ಅನ್ನು ನಮ್ಮ ಆಹಾರ ಪದಾರ್ಥಗಳಿಗೆ ಸೇರಿಸುತ್ತದೆ. ಏಕೆಂದರೆ ಆಹಾರಗಳಲ್ಲಿರುವ ಉಪ್ಪು ಮತ್ತು ಆಸಿಡ್‌ಗಳ ಜೊತೆಗೆ ಇವು ಪ್ರಕ್ರಿಯೆಗೆ ಒಳಪಡುತ್ತವೆ" ಎಂದು ಡಾ.ಶೆಲ್ಟನ್ ಹೇಳಿದ್ದಾರೆ. ಆದ್ದರಿಂದ ನಿಮ್ಮ ಆಹಾರ ಪದಾರ್ಥಗಳನ್ನು ತಯಾರಿಸಲು ಸರ್ಜಿಕಲ್ ಸ್ಟೈನ್‌ಲೆಸ್ ಸ್ಟೀಲ್ ದರ್ಜೆಯ ಪಾತ್ರೆಗಳನ್ನು ಬಳಸಿ.

ಕ್ಯಾಸ್ಟ್ ಐರನ್ (ಎರಕ ಹೊಯ್ದ ಕಬ್ಬಿಣ)

ಈ ಬಗೆಯ ಕಬ್ಬಿಣವು ಎಲ್ಲಾ ಲೋಹಗಳ ಪ್ರಕಾರದಲ್ಲಿಯೇ ಅತ್ಯಂತ ಕಠಿಣವಾದುದು. ಕೆಲವು ಜನ ಈ ಬಗೆಯ ಕಬ್ಬಿಣವನ್ನು ಬಳಸುತ್ತೇವೆ ಎಂದು ಹೆಮ್ಮೆ ಪಡುತ್ತಾರೆ. ಆದರೆ ನೈಜ ವಿಚಾರವೇನೆಂದರೆ, ಇದರಲ್ಲಿ ಫೆರಸ್ ಆಸಿಡ್ ಇರುತ್ತದೆ. ಇದು ನಿಮ್ಮ ದೇಹಕ್ಕೆ ಒಳ್ಳೆಯದಲ್ಲ. ನಮ್ಮ ದೇಹವು ಈ ಆಮ್ಲವನ್ನು ಅರಗಿಸಿಕೊಳ್ಳುವ ಸಾಮರ್ಥ್ಯವನ್ನು ಪಡೆದಿರುವುದಿಲ್ಲ. ಅಲ್ಯುಮಿನಿಯಂ: ಪ್ರಾಣಕ್ಕೆ ಸಂಚಕಾರ ತರುವ ಸಂಚುಕೋರ

ಗಾಜು ಮತ್ತು ಎನಾಮೆಲ್ ಕೋಟ್

ಇದರಲ್ಲಿ ಶಾಖವು ಸರಿ ಸಮನಾಗಿ ಹಂಚಿಕೆಯಾಗುವುದಿಲ್ಲ. ಇದರಲ್ಲಿ ಆಹಾರ ಅಂಟಿಕೊಳ್ಳುತ್ತದೆ ಮತ್ತು ಸುಟ್ಟು ಹೋಗುತ್ತದೆ. ಇದರಲ್ಲಿ ಸೀಸ ಇರುತ್ತದೆ. ಸೀಸವು ಸಂತಾನೋತ್ಪತ್ತಿಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಮತ್ತು ಕಲಿಕೆಯ ತೊಂದರೆಗಳನ್ನು ಉಂಟು ಮಾಡುತ್ತದೆ. ನಾವು ಈಗ ಸೀಸ ರಹಿತ ಇಂಧನವನ್ನು ಗಾಡಿಗಳಿಗೆ ಹಾಕಿಸುತ್ತೇವೆ. ಅದೇ ನಾವು ತಿನ್ನುವ ಆಹಾರವು ಸೀಸರಹಿತವಾಗಬಾರದೇ?

ನಾನ್-ಸ್ಟಿಕ್ ಕೋಟೇಡ್/ ಟೆಫ್ಲಾನ್

ಇವುಗಳು ಸ್ಕ್ರ್ಯಾಚ್ ಆಗಬಹು, ತುಂಡಾಗಬಹುದು ಮತ್ತು ಕಣಗಳು ಹೊರಬರಬಹುದು. " ಇವುಗಳನ್ನು 393º ಫ್ಯಾರನ್ ಹೀಟ್‌ನಲ್ಲಿಟ್ಟಾಗ ಇವುಗಳು ಒಂದು ಬಗೆಯ ಪಾಲಿಮರ್‌ಗಳಾಗಿ ಪರಿವರ್ತನೆಯಾಗುತ್ತವೆ. ಇದರಿಂದ ನಿಮಗೆ ಜ್ವರ, ಮೈಕೈ ನೋವು, ನಾಸಿಯಾ ಮತ್ತು ವಾಂತಿ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. "ಫೆಡೆರಲ್ ಏವಿಯೇಶನ್ ಏಜೆನ್ಸಿ ಆಕ್ಯೂಪೇಶನ್ ಹೆಲ್ತ್ ಅಂಡ್ ಸೇಫ್ಟಿ ಬುಲ್ಲೆಟಿನ್ ಪ್ರಕಾರ C-8 ಎಂಬ ರಾಸಾಯನಿಕವನ್ನು ನಾನ್ ಸ್ಟಿಕ್ ಕೋಟ್ ಮಾಡಲಾದ ಪ್ಯಾನ್ ತಯಾರಿಸಲು ಬಳಸಲಾಗುತ್ತದೆ. ಇದು ಮನುಷ್ಯರಲ್ಲಿ ಕ್ಯಾನ್ಸರ್ ತರುತ್ತವೆ. ಇದು ರಕ್ತದಲ್ಲಿ ನಾಲ್ಕು ವರ್ಷಗಳ ಕಾಲ ಇರುತ್ತದೆ. ಆದ್ದರಿಂದ ತಾಯಿಯ ಎದೆಹಾಲಿನಲ್ಲೂ ಸಹ ಇದು ಮಗುವಿಗೆ ವರ್ಗಾವಣೆಯಾಗಬಹುದು. ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!

316Ti ಸ್ಟೈನ್‌ಲೆಸ್ ಸ್ಟೀಲ್
Saladmaster® ನ ಕುಕುವೇರ್ 316Ti ಸರ್ಜಿಕಲ್ ಸ್ಟೈನ್‌ಲೆಸ್ ಸ್ಟೀಲ್ ಇಡೀ ಉದ್ಯಮದಲ್ಲಿಯೇ ಅತ್ಯಂತ ಶ್ರೇಷ್ಠ ದರ್ಜೆಯ ಪಾತ್ರೆಯ ಲೋಹವಾಗಿರುತ್ತದೆ. ಇದರಲ್ಲಿ ಎಣ್ಣೆಯೇ ಬಳಸದೆ ನೀವು ಅಡುಗೆ ಮಾಡಬಹುದು. ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಯನ್ನು ತೊಳೆಯುವುದಕ್ಕಿಂತ ಇದನ್ನು ಸುಲಭವಾಗಿ ತೊಳೆಯಬಹುದು.

ಲೋಹದ ಕುರಿತಾಗಿ ತಿಳಿಸಬೇಕೆಂದರೆ, ಬಹುತೇಕ ಪಾತ್ರೆಗಳು 18/10 ಗ್ರೇಡಿನ ಸ್ಟೀಲ್ ಬಳಸಿ ತಯಾರಿಸಲ್ಪಟ್ಟಿರುತ್ತವೆ. ಏಕೆಂದರೆ ಈ ಲೋಹಗಳ ಮೃದುತ್ವವನ್ನು ಹೊಂದಿರುತ್ತವೆ, ಬಿಸಿ ಮಾಡಿದಾಗ ಇವು ಹಿಗ್ಗುತ್ತವೆ ಮತ್ತು ಪ್ಯಾನ್‌ಗೆ ಆಹಾರ ಅಂಟಿಕೊಳ್ಳುತ್ತದೆ. ಇದರಿಂದಾಗಿ ನೀವು ಎಣ್ಣೆಯನ್ನು ಬಳಸಿ ಆಹಾರ ತಯಾರಿಸಲು ಆರಂಭಿಸುತ್ತೀರಿ. ಆಹಾರಗಳಲ್ಲಿರುವ ಸ್ವಾಭಾವಿಕ ಆಸಿಡ್‌ಗಳ ಜೊತೆಗೆ ಅದರಲ್ಲಿ ಉಪ್ಪು ಮುಂತಾದ ಅಂಶಗಳು ತೀವ್ರತರವಾದ ರಾಸಾಯನಿಕ ಪ್ರಕ್ರಿಯೆಗೆ ಒಳಪಡುತ್ತವೆ. ಹೀಗೆ ಇವು ನಮ್ಮ ದೇಹಕ್ಕೆ ಅಪಾಯಕಾರಿ ರಾಸಾಯನಿಕಗಳನ್ನು ಸೇರಿಸುತ್ತವೆ. ಮೆಡಿಕಲ್‌ಗಳ ಔಷಧಿ ಸೇವಿಸುವ ಮುಂಚೆ ಸ್ವಲ್ಪ ಆಲೋಚಿಸಿ!

ಬಹುತೇಕ ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳಲ್ಲಿ ಬಳಸಲಾಗುವ ಸ್ಟೈನ್‌ಲೆಸ್ ಸ್ಟೀಲ್ ಆಹಾರ ಪದಾರ್ಥಗಳನ್ನು ತಯಾರಿಸಲು ಉತ್ತಮವಾಗಿರುವ ಲೋಹಗಳಾಗಿರುವುದಿಲ್ಲ. ಇವುಗಳಲ್ಲಿ ಕ್ರೋಮ್, ಪಾದರಸ, ನಿಕೆಲ್ ಮುಂತಾದ ಅಪಾಯಕಾರಿ ಲೋಹಗಳು ಬೆರೆತಿರುತ್ತವೆ. ಇವು ಬಿಸಿ ಮಾಡಿದಾಗ, ಆ ಅಂಶಗಳನ್ನು ಆಹಾರ ಪದಾರ್ಥಗಳಿಗೆ ಸೇರಿಸುತ್ತವೆ. ಕ್ರೋಮ್ ಮತ್ತು ನಿಕೆಲ್‌ಗಳು ಹಾಗೆಯೇ ಉಳಿದುಕೊಳ್ಳುವ ಗುಣವಿರುವ ಲೋಹಗಳು. ಇವುಗಳನ್ನು ನಾಶ ಮಾಡಲು ಸಾಧ್ಯವಾಗುವುದಿಲ್ಲ. ಇವುಗಳು ನಮ್ಮ ದೇಹ ಸೇರಿದರೆ ಅದರಿಂದ ಉಂಟಾಗುವ ಅಪಾಯವನ್ನು ವಿವರಿಸಲು ಸಾಧ್ಯವಿಲ್ಲ.

English summary

Hidden Dangers In Cookware

Most people are aware of air pollution, water pollution and the dangers of household chemicals. Studies are now showing that certain cookware can also be polluting our bodies. Below are just some examples of how "traditional" cookware can be hazardous to you and you and your family's health.
X
Desktop Bottom Promotion