For Quick Alerts
ALLOW NOTIFICATIONS  
For Daily Alerts

ಹವಾನಿಯಂತ್ರಿತ: ಪ್ರಾಣಕ್ಕೆ ಸಂಚಕಾರ ತರುವ ಸಂಚುಕೋರ!

By Super
|

ಸೆಖೆ ತಡೆಯಲು ಉಪಯೋಗಿಸುತ್ತಿದ್ದ ಫ್ಯಾನ್ ನಿಧಾನವಾಗಿ ಅವಸಾನದತ್ತ ಸರಿಯುತ್ತಿದೆ. ಹೆಚ್ಚಿನವರು ಹವಾನಿಯಂತ್ರಣಗಳನ್ನು (ಹವಾನಿಯಂತ್ರಿತ) ತಮ್ಮ ಮನೆ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಸ್ಥಾಪಿಸಿದ್ದಾರೆ. ಈಗ ಹವಾನಿಯಂತ್ರಿತ ಇಲ್ಲದ ಕಾರು ಸಹಾ ದೊರಕುವುದಿಲ್ಲ. ವ್ಯವಹಾರ ಕುದುರಲು ಹವಾನಿಯಂತ್ರಣ ಒಂದು ಅನಿವಾರ್ಯ ಅವಶ್ಯಕತೆಯಾಗಿದೆ. ಹವಾನಿಯಂತ್ರಿತವಿರುವ ವಾತಾವರಣವನ್ನೇ ಬಯಸುವ ನಮಗೆ ಈ ಹವೆ ಅನಾರೋಗ್ಯಕರ ಎಂಬ ವಿಷಯ ತಿಳಿದಿಲ್ಲ.

ಅತಿಹೆಚ್ಚಿನ ಸೆಖೆಯಲ್ಲಿ ಹವಾನಿಯಂತ್ರಿತ ಉಪಯೋಗಕ್ಕೆ ಬಂದರೂ ಜನರ ಮನಃಸ್ಥಿತಿ ಅದಕ್ಕೂ ಮಿಗಿಲಾಗಿದೆ. ಅಂದರೆ ಹವಾನಿಯಂತ್ರಣದ ಅಗತ್ಯವಿರಲೀ ಇಲ್ಲದಿರಲಿ, ಹೊರಗಿನ ತಾಪಮಾನ ಸುಡುವಷ್ಟಿರಲಿ, ಸಹಿಸುವಷ್ಟಿರಲಿ, ಇತ್ತ ಹವಾನಿಯಂತ್ರಣ ಚಾಲೂ ಇರಬೇಕಷ್ಟೇ. ಇಲ್ಲದಿದ್ದರೆ ಎಲ್ಲರ ದೃಷ್ಟಿ ಮೊದಲು ಹೊರಳುವುದೇ ಹವಾನಿಯಂತ್ರಣ ಇರುವೆಡೆ. ಇದರ ಅವಶ್ಯಕತೆ ನಿಜವಾಗಿ ದೈಹಿಕಕ್ಕಿಂತ ಹೆಚ್ಚಾಗಿ ಮಾನಸಿಕವಾಗಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ: ಅಡುಗೆ ಪಾತ್ರೆ ಕೂಡ ಸುರಕ್ಷಿತವಲ್ಲ!

ಆದರೆ ಹವಾನಿಯಂತ್ರಿತದ ಹವೆ ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹಲವು ಸಂಶೋಧನೆಗಳು ದೃಢೀಕರಿಸಿವೆ. ಆದರೆ ಇಂದು ಎಲ್ಲೆಡೆ ಸಾಂಕ್ರಾಮಿಕವಾಗಿರುವ ಹವಾನಿಯಂತ್ರಣವನ್ನು ಒಮ್ಮೆಲೇ ಬೇಡ ಎನ್ನಲಾಗುವುದಿಲ್ಲ. ಅನಿವಾರ್ಯವಾಗಿ ಸಹಿಸಲೇಬೇಕಾಗುತ್ತದೆ. ಹಾಗಾದರೆ ಇದನ್ನು ಸುರಕ್ಷಿತವಾಗಿ ಎದುರಿಸುವುದು ಹೇಗೆ? ಈ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಸತತ ಆಯಾಸ ಮತ್ತು ಅನಾರೋಗ್ಯ ಬಾಧಿಸುತ್ತದೆ

ಸತತ ಆಯಾಸ ಮತ್ತು ಅನಾರೋಗ್ಯ ಬಾಧಿಸುತ್ತದೆ

ಇಡಿಯ ದಿನ ಕಛೇರಿ ಅಥವಾ ಕೆಲಸದ ಸ್ಥಳದಲ್ಲಿ ಹವಾನಿಯಂತ್ರಣದ ಹವೆಯನ್ನು ಮಾತ್ರ ಸೇವಿಸಿರುವವರು ಇತರರಿಗಿಂತ ಹೆಚ್ಚು ಸುಸ್ತು ಮತ್ತು ಅನಾರೋಗ್ಯಪೀಡಿತರಾಗುತ್ತಾರೆ ಎಂದು ಸಂಶೋಧನೆಗಳ ಮೂಲಕ ದೃಢಪಟ್ಟಿದೆ. ಅತಿ ಹೆಚ್ಚಿನ ತಲೆನೋವು, ವಿಪರೀತ ಸುಸ್ತು, ಕೆಲಸದಲ್ಲಿ ಮಗ್ನರಾಗಲು ಏಕಾಗ್ರತೆಯ ತೊಂದರೆ ಅನುಭವಿಸುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸತತ ಆಯಾಸ ಮತ್ತು ಅನಾರೋಗ್ಯ ಬಾಧಿಸುತ್ತದೆ

ಸತತ ಆಯಾಸ ಮತ್ತು ಅನಾರೋಗ್ಯ ಬಾಧಿಸುತ್ತದೆ

ಅದರಲ್ಲೂ ಹೊರಗಿನ ಗಾಳಿ ಒಂದಿನಿತೂ ಒಳಬರದೇ ಕೇವಲ ಹವಾನಿಯಂತ್ರಣದ ಗಾಳಿ ಮಾತ್ರ ಒಳಾಂಗಣವನ್ನು ಬಿರುಬೇಸಿಗೆಯ ಸಮಯದಲ್ಲಿಯೂ ಹಿಮಾಲಯದಷ್ಟು ತಣ್ಣಗಿಸಿರುವಾಗ ಒಳಗೆ ತಮ್ಮ ದಿನದ ಹೆಚ್ಚಿನ ಸಮಯವನ್ನು ಕಳೆಯುವವರಲ್ಲಿ ಗಂಟಲು, ಮೂಗು, ಕಿರುನಾಲಿಗೆ ಮೊದಲಾದ ಲೋಳೆಯಿರುವ ಸ್ಥಳಗಳಲ್ಲೆಲ್ಲಾ ಸೋಂಕು ಮತ್ತು ಉಸಿರಾಟದಲ್ಲಿ ತೊಂದರೆ ಅನುಭವಿಸುತ್ತಾರೆ. ಇದು ಶೀತ, ಫ್ಲೂ ಮತ್ತು ಇತರ ವ್ಯಾಧಿಗಳಿಂದ ಸತತವಾಗಿ ಬಳಲುವಂತೆ ಮಾಡುತ್ತದೆ.

ಪ್ರಮುಖ ಋಣಾತ್ಮಕ ಪರಿಣಾಮ

ಪ್ರಮುಖ ಋಣಾತ್ಮಕ ಪರಿಣಾಮ

ಕಾರಿನಲ್ಲಿರುವ ಹವಾನಿಯಂತ್ರಣಕ್ಕೆ ಹೊರಗಿನ ತಾಜಾಹವೆ ಮತ್ತು ಒಳಗಿನ ಹವೆಯನ್ನು ಮರುಬಳಸುವ ಆಯ್ಕೆಯಿದೆ.ಆದರೆ ಕಟ್ಟಡಗಳಲ್ಲಿ ಶೇಖಡಾ 99ರಷ್ಟು ಸಂದರ್ಭಗಳಲ್ಲಿ ಒಳಗಿನ ಗಾಳಿಯನ್ನೇ ಮತ್ತೆ ಮತ್ತೆ ತಂಪುಮಾಡಿ ದೂಡಲಾಗುತ್ತದೆ. ಏಕೆಂದರೆ ಹೊರಗಿನ ತಾಜಾ ಹವೆಯನ್ನು ತಂಪು ಮಾಡಿ ಒತ್ತಡದಿಂದ ಕಳಿಸಲು ಬಹಳ ಹಣ ಖರ್ಚಾಗುತ್ತದೆ. ಒಳಗಿನ ತಂಪು ಹವೆಯನ್ನೇ ಹೊರಕಳುಹಿಸದೇ ಮತ್ತೆ ವಾಪಾಸು ದೂಡಲಾಗುತ್ತದೆ. ಇದರಿಂದ ಉದ್ಯಮಿಗಳಿಗೆ ಹಣ ಉಳಿಯುತ್ತದಾದರೂ ಸತತವಾಗಿ ಮರುಬಳಕೆಯಾದ ಹವೆ ಅತ್ಯಂತ ಅನಾರೋಗ್ಯಕರವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪ್ರಮುಖ ಋಣಾತ್ಮಕ ಪರಿಣಾಮ

ಪ್ರಮುಖ ಋಣಾತ್ಮಕ ಪರಿಣಾಮ

ಎಕೆಂದರೆ ಇದರಲ್ಲಿರುವ ಆಮ್ಲಜನಕವನ್ನು ಈಗಾಗಲೇ ಬಳಸಲಾಗಿದ್ದು ನಿಃಶ್ವಾಸದ ಮೂಲಕ ಸಂಗ್ರಹವಾದ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ದಿನೇ ದಿನೇ ಹೆಚ್ಚು ಸಾಂದ್ರತೆಗೊಳ್ಳುತ್ತಾ ಹೋಗುತ್ತದೆ. ಸಾವಿರಾರು ಜನರ ಸೀನು, ಕೆಮ್ಮು, ಬೆವರು ಮೊದಲಾದ ಮೂಲಗಳಿಂದ ಆಗಮಿಸಿದ ಸೂಕ್ಷ್ಮ ಕ್ರಿಮಿಗಳು ಹೊರಹೋಗಲು ಯಾವುದೇ ದ್ವಾರ ಇಲ್ಲದುದರಿಂದ ರಾಜಾರೋಶವಾಗಿ ಒಳಗಡೆಯೇ ತಿರುಗಾಡುತ್ತಾ ಹೊಸ ಬಲಿಗಳಿಗಾಗಿ ಹೊಂಚು ಹಾಕುತ್ತವೆ. ಈ ವಾಯುವನ್ನು ಸೇವಿಸಿದ ಎಲ್ಲರಿಗೂ ಒಂದಲ್ಲ ಒಂದು ಬ್ಯಾಕ್ಟೀರಿಯಾದಿಂದ ತೊಂದರೆಯಿದ್ದೇ ಇದೆ. ಜೊತೆಗೆ ಧೂಳು ಸಹಾ ಪ್ರಮುಖ ಪಾತ್ರ ವಹಿಸುತ್ತದೆ. ಮುಂದಿನ ಸ್ಲೈಡ್ ಲಿಕ್ ಮಾಡಿ

ಪ್ರಮುಖ ಋಣಾತ್ಮಕ ಪರಿಣಾಮ

ಪ್ರಮುಖ ಋಣಾತ್ಮಕ ಪರಿಣಾಮ

ಈ ಧೂಳಿನಲ್ಲಿ ನಮ್ಮ ಚರ್ಮದಿಂದ ಹೊರಬಿದ್ದ ಸತ್ತ ಜೀವಕೋಶಗಳೇ ಅಧಿಕವಾಗಿದ್ದು ಇವು ಬ್ಯಾಕ್ಟೀರಿಯಾಗಳಿಗೆ ಸೂಕ್ತವಾದ ಆಹಾರವಾಗಿವೆ. ಈ ಆಹಾರ ಸೇವಿಸಿದ ಬ್ಯಾಕ್ಟೀರಿಯಾ ಹೆಚ್ಚು ಕಾಲ ಜೀವಂತವಿದ್ದು ಹೊಸ ಬಲಿಗಳನ್ನು ಪಡೆಯಲು ನೆರವಾಗುತ್ತದೆ. ಈ ಧೂಳು, ಪರಾಗ ಮೊದಲಾದ ಕಣಗಳಿಂದ ಅಲರ್ಜಿಯಿದ್ದವರು ಸುಲಭವಾಗಿ ತೊಂದರೆಗೆ ಒಳಗಾಗುತ್ತಾರೆ.

ಚರ್ಮವನ್ನು ಒಣದಾಗಿಸುತ್ತದೆ

ಚರ್ಮವನ್ನು ಒಣದಾಗಿಸುತ್ತದೆ

ನಮ್ಮ ಚರ್ಮಕ್ಕೆ ಸತತವಾಗಿ ಆರ್ದ್ರತೆ ದೊರಕುತ್ತಾ ಇರಬೇಕು. ಇಲ್ಲದಿದ್ದರೆ ಚರ್ಮ ಒಣದಾಗುತ್ತಾ ಒಡೆಯಲು ಮತ್ತು ಬಿರಿಬಿಡಲು ತೊಡಗುತ್ತದೆ. ಹವಾನಿಯಂತ್ರಣದ ಗಾಳಿ ತಣ್ಣಗಿದ್ದರೂ ಅದರಲ್ಲಿರುವ ನೀರಿನ ಅಂಶ ಮರುಬಳಕೆಯಾಗುವುದರಿಂದ ಆವಿಯಾಗಿ ಹೋಗಿದ್ದು ಈ ಹವೆ ಒಣದಾಗಿರುತ್ತದೆ. ಈ ಹವೆ ಒಣಚರ್ಮಕ್ಕೆ ನೇರವಾದ ಕಾರಣವಾಗಿದೆ.

ಈಗಾಗಲೇ ಬಾಧಿಸಿರುವ ಸಾಂಕ್ರಾಮಿಕ ರೋಗವನ್ನು ಉಲ್ಬಣಿಸುತ್ತದೆ

ಈಗಾಗಲೇ ಬಾಧಿಸಿರುವ ಸಾಂಕ್ರಾಮಿಕ ರೋಗವನ್ನು ಉಲ್ಬಣಿಸುತ್ತದೆ

ನಿಮಗೆ ಯಾವುದಾದರೂ ತೊಂದರೆ ಈಗಾಗಲೇ ಬಾಧಿಸುತ್ತಿದ್ದರೆ ಸಂಪೂರ್ಣ ಹವಾನಿಯಂತ್ರಿತ ಹವೆ ನಿಮ್ಮ ತೊಂದರೆಯನ್ನು ಇನ್ನಷ್ಟು ಉಲ್ಬಣಿಸಬಹುದು. ಕಡಿಮೆ ರಕ್ತದೊತ್ತಡ, ಸಂಧಿವಾತ, ನ್ಯೂರೈಟಿಸ್ (ನರಗಳ ಉರಿಯೂತ) ಮೊದಲಾದ ತೊಂದರೆಗಳಿಂದ ಬಾಧಿತರಾದವರ ತೊಂದರೆ ಹವಾನಿಯಂತ್ರಣದಲ್ಲಿ ಹೆಚ್ಚಾಗುತ್ತದೆ.

ಹವಾನಿಯಂತ್ರಣದಲ್ಲಿದ್ದವರು ಸಾಮಾನ್ಯ ತಾಪಮಾನವನ್ನೂ ಸಹಿಸರು

ಹವಾನಿಯಂತ್ರಣದಲ್ಲಿದ್ದವರು ಸಾಮಾನ್ಯ ತಾಪಮಾನವನ್ನೂ ಸಹಿಸರು

ಹವಾನಿಯಂತ್ರಣದಲ್ಲಿಯೇ ಇಡಿಯ ದಿನ ಕಳೆದವರ ಮನಃಸ್ಥಿತಿ ಹೇಗಿರುತ್ತದೆ ಎಂದರೆ ಹವಾನಿಯಂತ್ರಣವಿಲ್ಲದೇ ಒಂದು ಕ್ಷಣ ಕೂಡಾ ಇರಲಾರೆವು ಎಂದು ಭಾವಿಸಿರುತ್ತಾರೆ. ಹೊರಗಿನ ತಾಪಮಾನ ಎಷ್ಟೇ ಇರಲಿ, ಇದನ್ನು ನಮಗೆ ಸಹಿಸಲು ಸಾಧ್ಯವೇ ಇಲ್ಲ ಎಂಬಂತೆ ವರ್ತಿಸುತ್ತಾರೆ. ಏಕೆಂದರೆ ಸತತವಾಗಿ ಹವಾನಿಯಂತ್ರಣದಲ್ಲಿದ್ದ ದೇಹ ಆ ತಾಪಮಾನಕ್ಕೆ ಒಗ್ಗಿಕೊಂಡಿರುತ್ತದೆ. ಹೊರಗೆ ಹೋದಾಕ್ಷಣ ದೇಹ ತನ್ನ ಎಲ್ಲಾ ವ್ಯವಸ್ಥೆಗಳನ್ನು ಮರುಪ್ರಾರಂಭಿಸಬೇಕಾದುದರಿಂದ, ಅದಕ್ಕೆ ಕೊಂಚ ಸಮಯಾವಕಾಶ ಬೇಕಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹವಾನಿಯಂತ್ರಣದಲ್ಲಿದ್ದವರು ಸಾಮಾನ್ಯ ತಾಪಮಾನವನ್ನೂ ಸಹಿಸರು

ಹವಾನಿಯಂತ್ರಣದಲ್ಲಿದ್ದವರು ಸಾಮಾನ್ಯ ತಾಪಮಾನವನ್ನೂ ಸಹಿಸರು

ಆದರೆ ಅಷ್ಟು ಸಮಯ ತಾಳಿಕೊಳ್ಳಲು ದೇಹಕ್ಕೆ ಅಭ್ಯಾಸವೇ ಇಲ್ಲದಿರುವುದರಿಂದ ಬಿಸಿಯನ್ನು ಸಹಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಈ ಪರಿಸ್ಥಿತಿಗೆ ತಾಪಮಾನ ಅಸಹಿಷ್ಣುತೆ (heat intolerance) ಎಂದು ಕರೆಯುತ್ತಾರೆ. ಈ ಸ್ಥಿತಿಯಲ್ಲಿದ್ದವರು ಹೊರಗಿನ ತಾಪಮಾನವನ್ನು ಸಹಿಸಲಾರದೇ ಅವರ ಸೂಕ್ಷ್ಮ ಅಂಗಗಳು ವಿಫಲಗೊಳ್ಳುತ್ತವೆ, ಪರಿಣಾಮವಾಗಿ ಸಾವು ಸಂಭವಿಸುತ್ತದೆ.

ಉಸಿರಾಟದ ತೊಂದರೆ ಎದುರಾಗುತ್ತದೆ

ಉಸಿರಾಟದ ತೊಂದರೆ ಎದುರಾಗುತ್ತದೆ

ನಿಮ್ಮ ಕಾರಿನಲ್ಲಾಗಲೀ ಹವಾನಿಯಂತ್ರಿತ ಕಟ್ಟಡದಲ್ಲಾಗಲೀ ನೀವು ಸೇವಿಸುವ ಹವೆಯಲ್ಲಿ ಸಾವಿರಾರು ವಿಧದ ಬ್ಯಾಕ್ಟೀರಿಯಾಗಳಿರುತ್ತವೆ. ಇವುಗಳಲ್ಲಿ ಕನಿಷ್ಟ ಹತ್ತಾದರೂ ನಿಮ್ಮ ದೇಹಕ್ಕೆ ಹೊಸದಾಗಿರುತ್ತವೆ. ಅಂದರೆ ಈ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ಪಡೆಯಲು ನಿಮ್ಮ ರೋಗ ನಿರೋಧಕ ವ್ಯವಸ್ಥೆ ಸಿದ್ದವಿರುವುದಿಲ್ಲ. ಇವು ನಿಮ್ಮ ಆರೋಗ್ಯವನ್ನು ಕೆಡಿಸುತ್ತವೆ. ವಿಶೇಷವಾಗಿ ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉಸಿರಾಟದ ತೊಂದರೆ ಎದುರಾಗುತ್ತದೆ

ಉಸಿರಾಟದ ತೊಂದರೆ ಎದುರಾಗುತ್ತದೆ

ಅಮೇರಿಕಾದ ಲೂಸಿಯಾನಾ ಸ್ಟೇಟ್ ಮೆಡಿಕಲ್ ಸೆಂಟರ್ ನ ಪ್ರಯೋಗಾಲಯದಲ್ಲಿ ಬರೆಯ ಇಪ್ಪತ್ತೈದು ಕಾರುಗಳಲ್ಲಿ ನಡೆಸಿದ ಕೂಲಂಕಶ ತಪಾಸಣೆಯಿಂದ ಇಪ್ಪತ್ತೆರಡು ಕಾರುಗಳಲ್ಲಿ ಆರೋಗ್ಯವನ್ನು ಬಹುವಾಗಿ ಬಾಧಿಸಬಹುದಾದ ಕನಿಷ್ಟ ಎಂಟು ಬ್ಯಾಕ್ಟೀರಿಯಾಗಳನ್ನು ಪತ್ತೆ ಮಾಡಲಾಗಿದೆ. ಈ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿಯೇ ತೇಲುತ್ತಾ ಜೀವಂತವಿದ್ದು ಹಲವು ಸಾಂಕ್ರಾಮಿಕ ರೋಗವನ್ನು ಹರಡಬಹುದು. ಉದಾಹರಣೆಗೆ Legionairre's Disease ಎಂಬ ಜ್ವರ ಬಾಧಿಸಿದರೆ ದೇಹದ ತಾಪಮಾನ ಅತಿಬಿಸಿಯಾಗಿ ನ್ಯೂಮೋನಿಯಾ ಸ್ಥಿತಿಗೆ ತಲುಪಬಹುದು. ಇವರು ಉಸಿರಾಡಿದ ಗಾಳಿಯನ್ನು ಉಸಿರಾಡುವವರಿಗೂ ಈ ಜ್ವರ ಬಾಧಿಸುವ ಸಾಧ್ಯತೆಗಳು ಹೆಚ್ಚು.

ಸಾಮಾನ್ಯ ಶೀತ

ಸಾಮಾನ್ಯ ಶೀತ

ಗಾಳಿಯು ಒಂದೇ ಕೋಣೆಯಲ್ಲಿ ಸುಳಿದಾಡುವುದರಿಂದ ಇನ್ನೊಬ್ಬರಿಗೆ ನೆಗಡಿ ಉಂಟಾಗಿದ್ದರೆ ಅದು ವೇಗವಾಗಿ ಮತ್ತೊಬ್ಬರಿಗೆ ಹರಡುತ್ತದೆ.

ಹವಾನಿಯಂತ್ರಣದ ಕೆಡುಕಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

ಹವಾನಿಯಂತ್ರಣದ ಕೆಡುಕಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

1) ಹೆಚ್ಚಿನ ಹವಾನಿಯಂತ್ರಣಗಳನ್ನು ಹದಿನೇಳು ಹದಿನೆಂಟು ಡಿಗ್ರಿಗಳಲ್ಲಿ ಇರಿಸಿರುತ್ತಾರೆ. ಇದನ್ನು ಇಪ್ಪತ್ತೈದಕ್ಕೆ ಏರಿಸುವುದು ಮತ್ತು ಇದರ ಸೆಟ್ಟಿಂಗ್ ಬದಲಿಸಲು ಜನಸಾಮಾನ್ಯರಿಗೆ ಸಾಧ್ಯವಿಲ್ಲದಂತೆ ಬೀಗವಿರುವ ಪೆಟ್ಟಿಗೆಗಳಲ್ಲಿ ಏಸಿಯ ಸ್ವಿಚ್ ಇರಿಸುವುದು ಉತ್ತಮ.

2) ಸತತವಾಗಿ ಇಡಿಯ ದಿನ ಹವಾನಿಯಂತ್ರಣದಲ್ಲಿರುವವರು ದಿನಕ್ಕೆ ನಾಲ್ಕಾರು ಬಾರಿಯಾದರೂ ಹೊರಗಿನ ತಾಜಾಹವೆಗೆ ತಮ್ಮನ್ನು ತಾವು ಒಡ್ಡಿಕೊಳ್ಳಬೇಕು. ಇದಕ್ಕಾಗಿ ಯಾವುದಾದರೊಂದು ನೆವ ಹಾಕಿ ಹೊರಗಿನ ಗಾಳಿಯಲ್ಲಿ ಪ್ರತಿಬಾರಿ ಕನಿಷ್ಟ ಹತ್ತು ನಿಮಿಷವಾದರೂ ನಡೆದಾಡಬೇಕು

3) ಏರ್ ಕಂಡೀಶನ್ ಮೂಲಕ ತಾಜಾ ಹವೆ ಒಳಬರುವಂತೆ ನೋಡಿಕೊಳ್ಳಬೇಕು.

ಹವಾನಿಯಂತ್ರಣದ ಕೆಡುಕಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

ಹವಾನಿಯಂತ್ರಣದ ಕೆಡುಕಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

4) ಹೊರಗಿನ ಹವೆ ಇಪ್ಪತ್ತೈದು ಅಥವಾ ಅದರ ಆಸುಪಾಸು ಇದ್ದರೆ ಏಸಿ ಬಂದ್ ಮಾಡಬೇಕು. ಇದು ಸಾಧ್ಯವಿಲ್ಲದಿದ್ದಲ್ಲಿ ಹವಾನಿಯಂತ್ರಣ ಬಂದ್ ಮಾಡಿ ಕೇವಲ ಫ್ಯಾನ್ ತಿರುಗುವಂತೆ ನೋಡಿಕೊಳ್ಳಬೇಕು

6) ಏಸಿಯ ಫಿಲ್ಟರುಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸುತ್ತಿರಬೇಕು.

7) ಒಳಾಂಗಣದಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಸಿರು ಗಿಡಗಳನ್ನು ಬೆಳೆಸಬೇಕು

ಹವಾನಿಯಂತ್ರಣದ ಕೆಡುಕಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

ಹವಾನಿಯಂತ್ರಣದ ಕೆಡುಕಿನಿಂದ ತಪ್ಪಿಸಿಕೊಳ್ಳುವುದು ಹೇಗೆ?

8) ಹಲವೆಡೆ ತನ್ನಿಂತಾನೇ ಸ್ಪ್ರೇ ಆಗುವ ಸುವಾಸನೆಗಳನ್ನು ಸಿಂಪಡಿಸುವ ಮೆಷೀನ್ ಗಳನ್ನು ಅಳವಡಿಸಿರುತ್ತಾರೆ. ಶೌಚಾಲಯ ಹೊರತುಪಡಿಸಿ ಇತರೆಡೆ ಇವು ಬೇಡ ಎಂದು ವ್ಯವಸ್ಥಾಪಕರನ್ನು ಮನವೊಲಿಸಬೇಕು.ಏಕೆಂದರೆ ಸುವಾಸನೆಯ ಈ ಕಣಗಳು ಸಹಾ ಆರೋಗ್ಯಕ್ಕೆ ಉತ್ತಮವಲ್ಲ. ಶೌಚಾಲಯದಲ್ಲಿಯಾದರೆ ಎಕ್ಸ್ ಹಾಸ್ಟ್ ಫ್ಯಾನ್ ಮೂಲಕ ಗಾಳಿ ಹೊರಹೋಗುತ್ತಿರುವುದರಿಂದ ಮತ್ತು ಹೆಚ್ಚು ಹೊತ್ತು ಕಳೆಯದೇ ಇರುವುದರಿಂದ ಅಪಾಯ ಕನಿಷ್ಟವಾಗಿದೆ.

9) ಮನೆ, ಕಛೇರಿ, ಪ್ರಯಾಣ ಎಲ್ಲೆಡೆಯೂ ಹವಾನಿಯಂತ್ರಣದಲ್ಲಿಯೇ ಇರುವವರ ದೇಹ ಬೇಗನೇ ಶಿಥಿಲವಾಗುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ಇದನ್ನು ತಡೆಯಲು ಪ್ರತಿದಿನ ಒಂದೆರಡು ಗಂಟೆಗಳನ್ನಾದರೂ, ಅದರಲ್ಲೂ ಮುಂಜಾನೆಯ ಹೊತ್ತು ನಿಸರ್ಗದಲ್ಲಿ ಕಳೆಯಬೇಕು.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary

Health problems associated with air conditioning

Air conditioning can help us to feel healthier and fresher on a hot day and generally it’s not something we think of as being unhealthy. While air conditioning can have benefits though in preventing us from feeling hot and stuffy, actually they unfortunately do have a number of negative impacts on our health. Here we will look at the negative impacts of air conditioners, and how to limit the damage as much as possible.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X