For Quick Alerts
ALLOW NOTIFICATIONS  
For Daily Alerts

ಪುರುಷರೇ ಎಚ್ಚರ, ನಿಮಗೂ ಇಂತಹ ಸಮಸ್ಯೆ ಇರಬಹುದು!

By Super
|

ನಿಸರ್ಗ ಗಂಡುಹೆಣ್ಣಿನಲ್ಲಿ ನೀಡಿರುವ ವ್ಯತ್ಯಾಸಗಳಲ್ಲಿ ಪ್ರಮುಖವಾದುದೆಂದರೆ ಹೆಣ್ಣಿಗೆ ನೀಡಿರುವ ರಜೋನಿವೃತ್ತಿ. ಗಂಡಸರು ವಯೋವೃದ್ಧರಾಗುವವರೆಗೂ ಸಂತಾನೋತ್ಪತ್ತಿಗೆ ಶಕ್ತರಾಗಿರುತ್ತಾರೆ. ಆದರೆ ಈ ಶಕ್ತಿ ಇಂದಿನ ದಿನಗಳಲ್ಲಿ ಕುಂಠಿತವಾಗಿರುವುದು ಸಂಶೋಧನೆಗಳಿಂದ ಕಂಡುಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ವಂಶ ಬೆಳೆಯುವುದರಿಂದ ಪುರುಷನ ಪೌರುಷ ಸಾಬೀತಾಗುವುದು ಮಾತ್ರವಲ್ಲ, ಸಮಾಜದಲ್ಲಿ ಮರ್ಯಾದೆ, ಪ್ರತಿಷ್ಟೆಯೂ ಹೆಚ್ಚುತ್ತದೆ. ಸಂತಾನವಿರದ ದಂಪತಿಗಳಿಗೆ ಸುತ್ತಮುತ್ತಲ ಕೀಳು ಮನಸ್ಸಿನವರು ಚುಚ್ಚು ಮಾತುಗಳನ್ನಾಡಿ ಮನ ನೋಯಿಸುತ್ತಾರೆ. ಪುರುಷರೇ ವಯಸ್ಸು ಮೂವತ್ತಾಯಿತೇ?, ಮದ್ಯಪಾನ ಬಿಟ್ಟು ಬಿಡಿ!

ಆದರೆ ಸಂತಾನಭಾಗ್ಯಕ್ಕೆ ಪುರುಷರೂ ಅಷ್ಟೇ ಕಾರಣರು ಎಂದು ಹೆಚ್ಚಿನವರಿಗೆ ತಿಳಿದಿರಲಾರದು. ಪುರುಷರಲ್ಲಿ ಉದ್ರೇಕತೆ ಕಡಿಮೆಯಾಗುವುದು, ಶೀಘ್ರಸ್ಖಲನ, ಆರೋಗ್ಯವಂತ ವೀರ್ಯಾಣುಗಳ ಸಂಖ್ಯೆಯಲ್ಲಿ ಕೊರತೆ ಮೊದಲಾದವು ಸಂತಾನ ನಿಷ್ಪಲತೆಗೆ ಕಾರಣವಾಗಿವೆ. ಈ ತೊಂದರೆಗಳು ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದಕ್ಕೆ ಕಾರಣಗಳನ್ನು ಹುಡುಕಿದರೆ ಬದಲಾದ ಜೀವನಾಭ್ಯಾಸವನ್ನು ನೇರವಾಗಿ ಬೊಟ್ಟು ಮಾಡಿ ತೋರಿಸಬಹುದಾದರೂ ಪರ್ಯಾಯವಾಗಿ ಮಧುಮೇಹ, ಹೃದಯದ ತೊಂದರೆಗಳು, ರಕ್ತನಾಳಗಳು ಒಳಗಿನಿಂದ ಕಟ್ಟಿಕೊಂಡಿರುವುದು, ಮೂವತ್ತರ ಬಳಿಕ ಪುರುಷರು, ಸಾಮರ್ಥ್ಯ ಕಳೆದುಕೊಳ್ಳುತ್ತಾರಂತೆ!

ಹಾರ್ಮೋನುಗಳ ಏರುಪೇರು, ಕೆಲವು ನರಸಂಬಂಧಿ ತೊಂದರೆಗಳು, ಖಿನ್ನತೆ ಮೊದಲಾದವು ಕಾರಣ ಎಂದು ಸ್ಥೂಲವಾಗಿ ಪರಿಗಣಿಸಬಹುದು. ಆದರೆ ಕೆಲವು ಅಭ್ಯಾಸಗಳು ಪುರುಷರ ನಪುಂಸಕತ್ವವನ್ನು ಪ್ರೋತ್ಸಾಹಿಸುತ್ತವೆ. ನಿಮಗರಿಯದೇ ಈ ಅಭ್ಯಾಸಗಳು ನಿಮ್ಮನ್ನು ಆವರಿಸಿಕೊಂಡಿದ್ದರೆ ಇದರಿಂದ ಹೊರಬರಲು ಮನಸ್ಸು ಗಟ್ಟಿಯಾಗಿಸಲು ಮತ್ತು ಈ ಅಂಗದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕೆಳಗಿನ ಸ್ಲೈಡ್ ಶೋ ನಿಮಗೆ ನೆರವು ನೀಡಲಿದೆ...

ಮಾಹಿತಿ1: ಧೂಮಪಾನಿಗಳಲ್ಲಿ ಪುರುಷಾಂಗ ಚಿಕ್ಕದಾಗುತ್ತದೆ

ಮಾಹಿತಿ1: ಧೂಮಪಾನಿಗಳಲ್ಲಿ ಪುರುಷಾಂಗ ಚಿಕ್ಕದಾಗುತ್ತದೆ

ಧೂಮಪಾನಿಗಳಲ್ಲಿ ಪುರುಷಾಂಗದ ಉದ್ರೇಕಸ್ಥಿತಿಯಲ್ಲಿದ್ದಾಗಿನ ಗಾತ್ರ ಸಾಮಾನ್ಯಕ್ಕಿಂತ ಕನಿಷ್ಟ ಒಂದು ಸೆಂಟಿಮೀಟರ್ ಕಡಿಮೆ ಇರುತ್ತದೆ. ನಿತ್ಯ ಧೂಮಪಾನಿಗಳಲ್ಲಿ ಸುಮಾರು ಒಂದಿಂಚು ಕಡಿಮೆಯಾಗಿರುವುದೂ ತಿಳಿದುಬಂದಿದೆ. The Boston University School of Medicine ನಲ್ಲಿ ನಡೆಸಿದ ಸಂಶೋಧನೆಯಲ್ಲಿ ಇದು ಸಾಬೀತಾಗಿದ್ದು ಉದ್ರೇಕಕ್ಕೆ ಅಗತ್ಯವಾದಷ್ಟು ಪ್ರಮಾಣದಲ್ಲಿ ರಕ್ತ ತುಂಬಿಕೊಳ್ಳದೇ ಇರುವುದು ಇದಕ್ಕೆ ಕಾರಣ ಎಂದು ಗೊತ್ತಾಗಿದೆ. ಧೂಮಪಾನವನ್ನು ಸಂಪೂರ್ಣವಾಗಿ ಬಿಡುವ ಮೂಲಕ ಮತ್ತೆ ಮೂಲ ಗಾತ್ರವನ್ನು ಪಡೆಯಬಹುದು.

ಮಾಹಿತಿ 2: ಸ್ಖಲನಕ್ಕೆ ಮೆದುಳುಬಳ್ಳಿ ಕಾರಣ

ಮಾಹಿತಿ 2: ಸ್ಖಲನಕ್ಕೆ ಮೆದುಳುಬಳ್ಳಿ ಕಾರಣ

ಪ್ರೇಮದಾಟದಲ್ಲಿ ಅತ್ಯಂತ ಉತ್ತಂಗದ ಸಮಯದಲ್ಲಿ ಸ್ಖಲನವನ್ನು ಮೆದುಳು ನಿಯಂತ್ರಿಸುತ್ತದಾದರೂ ಸುಖದ ಪರಾಕಾಷ್ಠೆಯ ಅನುಭವವನ್ನು ಮಾತ್ರ ಮೆದುಳುಬಳ್ಳಿ ನೀಡುತ್ತದೆ. ಆದ್ದರಿಂದ ಬೆನ್ನುಮೂಳೆಯನ್ನು ಬಾಗಿಸಿ ಆರಾಮವಾಗಿ ಕುಳಿತು ಅಭ್ಯಾಸವಿರುವವರಲ್ಲಿ ಮೆದುಳುಬಳ್ಳಿ ಪೂರ್ಣಪ್ರಮಾಣದ ಸಂವೇದನೆ ಪಡೆಯಲು ಸಾಧ್ಯವಿಲ್ಲದಿರುವುದರಿಂದ ಆರಾಮಜೀವಿಗಳಲ್ಲಿ ಸಂವೇದನೆ ಕಡಿಮೆ ಇರುತ್ತದೆ.

ಮಾಹಿತಿ 3: ಪುರುಷಾಂಗ ತುಂಡಾಗಲೂಬಹುದು

ಮಾಹಿತಿ 3: ಪುರುಷಾಂಗ ತುಂಡಾಗಲೂಬಹುದು

ಸಾಮಾನ್ಯಸ್ಥಿತಿಯಲ್ಲಿ ಮೆತ್ತಗಿರುವ ಪುರುಷಾಂಗ ಉದ್ರೇಕಸ್ಥಿತಿಯಲ್ಲಿ ಘರ್ಷಣೆಯ ವೇಳೆ ಅಕಾಸ್ಮಾತ್ತಾಗಿ ಗಟ್ಟಿಯಾದ ಸ್ಥಳಕ್ಕೆ ಢಿಕ್ಕಿ ಹೊಡೆದರೆ ಮರದ ತುಂಡು ತುಂಡಾದಂತೆ ನಡುವೆ ತುಂಡಾಗಲೂ ಬಹುದು. ಇದಕ್ಕೆ ಕನಿಷ್ಠ ಮೂರು ತಿಂಗಳು ಪೂರ್ಣ ವಿಶ್ರಾಂತಿ ಮತ್ತು ಆರೈಕೆ ಬೇಕು. ನಂತರವೂ ಮೊದಲಿನಷ್ಟು ದೃಢತೆ ಇರುತ್ತದೆ ಎಂದು ಖಡಾಖಂಡಿತವಾಗಿ ಹೇಳಲಾಗದು. ಆದ್ದರಿಂದ ಘರ್ಷಣೆಯ ವೇಳೆ ಅತಿ ಹೆಚ್ಚಿನ ಕಾಳಜಿ ಅಗತ್ಯ.

ಮಾಹಿತಿ 4: ಶೀಘ್ರಸ್ಖಲನಕ್ಕೆ ಪ್ರೋಸ್ಟ್ರೇಟ್ ಗ್ರಂಥಿ ಕಾರಣ

ಮಾಹಿತಿ 4: ಶೀಘ್ರಸ್ಖಲನಕ್ಕೆ ಪ್ರೋಸ್ಟ್ರೇಟ್ ಗ್ರಂಥಿ ಕಾರಣ

ಒಂದು ವೇಳೆ ಉದ್ರೇಕತೆಯಲ್ಲಿ ಕೊರತೆ ಮತ್ತು ಶೀಘ್ರಸ್ಖಲನದ ತೊಂದರೆಯಿದ್ದರೆ ಇದಕ್ಕೆ ನಿಮ್ಮ ಪ್ರೋಸ್ಟ್ರೇಟ್ ಗ್ರಂಥಿ ಕಾರಣವಾಗಿರಲೂ ಬಹುದು. ತಕ್ಷಣ ನಿಮ್ಮ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದರೆ ತೊಂದರೆಯಿಂದ ಮುಕ್ತಿ ಪಡೆಯಬಹುದು ಅಲ್ಲದೇ ಪ್ರೊಸ್ಟೇಟ್ ಕ್ಯಾನ್ಸರ್ ಆವರಿಸುವ ಸಂಭವದಿಂದಲೂ ಕಾಪಾಡಿದಂತಾಗುತ್ತದೆ.

ಮಾಹಿತಿ 5: ಮಿಲನದ ಸಾಮಾನ್ಯ ಅವಧಿ ಎರಡೂವರೆ ನಿಮಿಷಗಳು

ಮಾಹಿತಿ 5: ಮಿಲನದ ಸಾಮಾನ್ಯ ಅವಧಿ ಎರಡೂವರೆ ನಿಮಿಷಗಳು

ಭಾರತದ ಬಿಡಿ, ವಿಶ್ವದ ಪುರುಷರ ಮಿಲನದ ಅವಧಿಯ ಸರಾಸರಿ ತೆಗೆದರೆ ಇದಕ್ಕೆ ಎರಡರಿಂದ ಎರಡೂವರೆ ನಿಮಿಷ ಎಂಬ ಉತ್ತರ ದೊರಕುತ್ತದೆ. ಆದ್ದರಿಂದ ಹಲವು ಮಾಧ್ಯಮ, ಚಿತ್ರಗಳಲ್ಲಿ ನೀಡುವ ವೈವಿಧ್ಯಗಳೆಲ್ಲಾ ಕಾಲ್ಪನಿಕವಾಗಿದ್ದು ಹಣದೋಚುವ ತಂತ್ರವಾಗಿದೆ. ಒಂದು ವೇಳೆ ಈ ಅವಧಿ ಎರಡೂವರೆ ನಿಮಿಷದ ಆಸುಪಾಸಿನಲ್ಲಿದ್ದರೆ ನೀವು ಲೈಂಗಿಕವಾಗಿ ಆರೋಗ್ಯವಂತರಾಗಿದ್ದೀರಿ ಎಂದರ್ಥ. ಇದರ ಹೊರತಾದ ಯಾವುದೇ ಉತ್ಪ್ರೇಕ್ಷೆಗಳನ್ನು ನಂಬಬೇಡಿ.

ಮಾಹಿತಿ 6: ವಯಸ್ಸಾದಂತೆ ಸಂವೇದನೆಯೂ ಕಡಿಮೆಯಾಗುತ್ತದೆ

ಮಾಹಿತಿ 6: ವಯಸ್ಸಾದಂತೆ ಸಂವೇದನೆಯೂ ಕಡಿಮೆಯಾಗುತ್ತದೆ

ಪುರುಷರು ವೃದ್ಧ್ಯಾಪ್ಯದವರೆಗೂ ಲೈಂಗಿಕವಾಗಿ ಚಟುವಟಿಕೆಯಿಂದಿದ್ದರೂ ಸಂವೇದನೆ ಮಾತ್ರ ವರ್ಷಗಳೆದಂತೆ ಕಡಿಮೆಯಾಗುತ್ತಾ ಹೋಗುತ್ತದೆ. ಇದು ಅತ್ಯಂತ ಸ್ವಾಭಾವಿಕವಾಗಿದ್ದು ಯಾವುದೇ ಆತಂಕಕ್ಕೆ ಕಾರಣವಿಲ್ಲ.

ಮಾಹಿತಿ 7: ಉಪಯೋಗವಿಲ್ಲದ ಉಪಕರಣ ನಿಷ್ಫಲ

ಮಾಹಿತಿ 7: ಉಪಯೋಗವಿಲ್ಲದ ಉಪಕರಣ ನಿಷ್ಫಲ

ಯಾವುದೇ ಉಪಕರಣವನ್ನು ಉಪಯೋಗಿಸುತ್ತಿದ್ದರೆ ಮಾತ್ರ ಅದು ಹೊಳಪುಳ್ಳದ್ದೂ, ಸುಸ್ಥಿತಿಯಲ್ಲಿಯೂ ಇರುತ್ತದೆ. ಅದೇ ರೀತಿ ಪುರುಷರ ಅಂಗವನ್ನೂ ನಿಯಮಿತವಾಗಿ ಪೂರ್ಣ ಉದ್ರೇಕಾವಸ್ಥೆಗೆ ತಲುಪಿಸುತ್ತಾ ಪೂರ್ಣ ಪ್ರಮಾಣದಲ್ಲಿ ರಕ್ತವನ್ನು ತುಂಬಿಕೊಳ್ಳುವಂತೆ ಮಾಡುತ್ತಿದ್ದರೆ ಲೈಂಗಿಕ ಶಕ್ತಿ ಬಹಳ ವರ್ಷಗಳವರೆಗೆ ಕ್ರಿಯಾತ್ಮಕವಾಗಿರುತ್ತದೆ.

ಮಾಹಿತಿ 8: ಭಾವ ಪರಾಕಾಷ್ಠೆ ಆರು ಸೆಕೆಂಡ್ ಮಾತ್ರ

ಮಾಹಿತಿ 8: ಭಾವ ಪರಾಕಾಷ್ಠೆ ಆರು ಸೆಕೆಂಡ್ ಮಾತ್ರ

ನಿಸರ್ಗ ನೀಡಿರುವ ಶಕ್ತಿಗಳ ವೈಚಿತ್ರದಲ್ಲಿ ಇದೂ ಒಂದು. ಕೆಲವು ಕೀಟಗಳ ಸಮಾಗಮ ಕೆಲವು ಮಿಲಿಸೆಕೆಂಡುಗಳು ಮಾತ್ರವಿದ್ದರೆ ಕೆಲವು ಬಹಳ ಹೊತ್ತಿನವರೆಗೆ ನಡೆಯುತ್ತಿರುತ್ತದೆ. ಮನುಷ್ಯರಲ್ಲಿಯೂ ಪುರುಷರ ಪ್ರೇಮದಾಟ ಎಷ್ಟೇ ಹೊತ್ತು ನಡೆಯಲಿ, ಆದರೆ ಕಟ್ಟಕಡೆಯ ಭಾವಪರಾಕಾಷ್ಠೆ ಮಾತ್ರ ಕೇವಲ ಆರು ಸೆಕೆಂಡಿನದ್ದಾಗಿದೆ. ಆದರೆ ಮಹಿಳೆಯರು ಮಾತ್ರ ಇನ್ನೂ ಹೆಚ್ಚಿನ ನಮಯ ಭಾವಪರಾಕಾಷ್ಠೆಯಲ್ಲಿ ಇರಬಲ್ಲರು.

 ಮಾಹಿತಿ 9: ಉದ್ರೇಕಗೊಂಡಾಗ ಎಲ್ಲರ ಗಾತ್ರವೂ ಒಂದೇ

ಮಾಹಿತಿ 9: ಉದ್ರೇಕಗೊಂಡಾಗ ಎಲ್ಲರ ಗಾತ್ರವೂ ಒಂದೇ

ಸಾಮಾನ್ಯಸ್ಥಿತಿಯಲ್ಲಿ ಪ್ರತಿಯೊಬ್ಬರ ಅಂಗದ ಗಾತ್ರ ಬೇರೆ ತೆರನಾಗಿದ್ದರೆ ಉದ್ರೇಕಗೊಂಡ ಬಳಿಕ ಮಾತ್ರ ಸಾಮಾನ್ಯವಾಗಿ ಆರರಿಂದ ಏಳು ಇಂಚಿನಷ್ಟು ಮಾತ್ರ ಇರುತ್ತದೆ. ಅತಿ ಅಪರೂಪವಾಗಿ ಕೆಲವರಲ್ಲಿ ಇದು ಕಡಿಮೆ ಗಾತ್ರದಲ್ಲಿರಬಹುದು. ಆದರೆ ಇದರ ಗಾತ್ರಕ್ಕೂ ನಡೆಸುವ ಕಾರ್ಯಕ್ಕೂ ಯಾವುದೇ ಸಂಬಂಧವಿಲ್ಲ. ಇವರೂ ಎಲ್ಲರಂತೆಯೇ ಸುಖಕರ ದಾಂಪತ್ಯಜೀವನ ನಡೆಸಲು ಸಾಧ್ಯ.

ಮಾಹಿತಿ 10: ಸೀಳುವುದು, ಜಜ್ಜುವುದು ಅಪಾಯಕಾರಿ

ಮಾಹಿತಿ 10: ಸೀಳುವುದು, ಜಜ್ಜುವುದು ಅಪಾಯಕಾರಿ

ಕೆಲವೊಮ್ಮೆ ಯಾವುದೋ ಕಲ್ಪಿತ ಪ್ರಯೋಗಗಳನ್ನು ಮಾಡಲು ಹೋಗಿ ಸೀಳು ಅಥವಾ ಜಜ್ಜಿದರೆ ಇದು ಮತ್ತೆ ರಿಪೇರಿಯಾಗುವ ಸಂಭವ ಅತಿಕಡಿಮೆಯಾದುದರಿಂದ ಈ ಅಂಗದ ಮೇಲೆ ಪ್ರಯೋಗಗಳನ್ನು ಮಾಡಲು ಹೋಗಬೇಡಿ. ಉದಾಹರಣೆಗೆ ಲೋಹದ ತಂತಿಯ ಮೇಲೆ ನಡೆಯಲು ಹೋಗಿ ಎರಡೂ ಕಾಲುಗಳು ತಂತಿಯ ಆಚೀಚೆ ಬರುವಂತೆ ಜಾರಿ ಇಡಿಯ ದೇಹದ ಭಾರ ಪುರುಷಾಂಗದ ಮೇಲೆ ಬಿದ್ದರೆ ತಂತಿಯ ಒತ್ತಡ ಅಂಗವನ್ನು ಘಾಸಿಗೊಳಿಸಬಹುದು. ಆದ್ದರಿಂದ ಟೀವಿಯಲ್ಲಿ ಯಾರೋ ಮಾಡಿದ ಇಂತಹ ಮಂಗಾಟಗಳನ್ನು ಸರ್ವಥಾ ಅನುಸರಿಸಲು ಹೋಗಬೇಡಿ.

 ಮಾಹಿತಿ 11: ಉದ್ರೇಕಕ್ಕೆ ನರವ್ಯವಸ್ಥೆ ಕಾರಣ

ಮಾಹಿತಿ 11: ಉದ್ರೇಕಕ್ಕೆ ನರವ್ಯವಸ್ಥೆ ಕಾರಣ

ನಿಮ್ಮ ಅಂಗವನ್ನು ಒಂದು ಉದ್ದೇಶಕ್ಕೆ ತಯಾರುಮಾಡಲು ನಿಮ್ಮ ಮೆದುಳು ನರವ್ಯವಸ್ಥೆಯ ಮೂಲಕ ಸೂಚನೆ ನೀಡುತ್ತದೆ. ಇದರ ಹೊರತಾಗಿ ಅಂಗವನ್ನು ಉದ್ರೇಕದಲ್ಲಿರಿಸಿಕೊಳ್ಳಲು ಅಥವಾ ಇಳಿಸಲು ಸಾಧ್ಯವಿಲ್ಲ. ಆದ್ದರಿಂದ ಕೆಲವೊಮ್ಮೆ ಪೂರ್ಣ ಉದ್ರೇಕ ಪಡೆಯಲು ಕೊಂಚ ತಾಳ್ಮೆಯ ಅಗತ್ಯವಿದೆ. ಆದರೆ ಇದೇ ಗುಣವನ್ನು ನಿಮ್ಮ ಲಾಭಕ್ಕೂ ಪಡೆದುಕೊಳ್ಳಬಹುದು. ಪ್ರೇಮದಾಟ ಪರಾಕಾಷ್ಠೆಗೆ ತಲುಪುವ ಮುನ್ನ ನೂರರಿಂದ ಇಳಿಕೆ ಕ್ರಮದಲ್ಲಿ ಒಂದರವರೆಗೆ ಅಂಕಿಗಳನ್ನು ಮನದಲ್ಲಿಯೇ ಹೇಳುತ್ತಾ ಬನ್ನಿ. ಇದರ ಪರಿಣಾಮವನ್ನು ನಿಮ್ಮ ಸಂಗಾತಿಯಿಂದ ಅರಿಯಿರಿ.

ಮಾಹಿತಿ 12: ಪ್ರತಿ ಪುರುಷನಿಗೂ ಇದರ ಗಾತ್ರವನ್ನು ಹೆಚ್ಚಿಸಿ ಹೇಳುವ ಅಭ್ಯಾಸವಿದೆ

ಮಾಹಿತಿ 12: ಪ್ರತಿ ಪುರುಷನಿಗೂ ಇದರ ಗಾತ್ರವನ್ನು ಹೆಚ್ಚಿಸಿ ಹೇಳುವ ಅಭ್ಯಾಸವಿದೆ

ಭಾರತ ಬಿಡಿ, ಇಡಿ ವಿಶ್ವದ ಪುರುಷರಲ್ಲಿ ಅವರ ಪತ್ನಿಯರು ಪುರುಷಾಂಗದ ಗಾತ್ರದ ಬಗ್ಗೆ ವಿಚಾರಿಸಿದರೆ ಇರುವುದಕ್ಕಿಂತಲೂ ಒಂದು ಇಂಚು ಹೆಚ್ಚೇ ಹೇಳುತ್ತಾರೆ. ಇದು ಸುಳ್ಳು ಎಂದು ಗೊತ್ತಿದ್ದರೂ ಎಲ್ಲರಿಗೂ ಇದೊಂದು ಹೆಮ್ಮೆಯ ವಿಷಯವಾಗಿದೆ.

English summary

Facts You Didn’t Know About Manhood

Reproductive health is very important for men in almost all stages of life. Why? Well, apart from helping you in reproduction, your manhood also plays a role in your self-esteem levels. Today, the percentage of men experiencing erectile dysfunction and premature ejaculation is higher than ever.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more