For Quick Alerts
ALLOW NOTIFICATIONS  
For Daily Alerts

ಬಿರುಬೇಸಿಗೆಯಲ್ಲಿ ತಂಪುಣಿಸುವ ಮೊಸರಿನ ಕರಾಮತ್ತೇನು?

By Deepak
|

ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರವೆಂದರೆ ನೀರು. ಅದು ಬಿಟ್ಟರೆ ಮೊಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಹಾಲನ್ನು ಮೊಸರನ್ನಾಗಿಸುವ ಕ್ರಿಯೆಯಲ್ಲಿ ನಮ್ಮ ಜೀರ್ಣಾಂಗಗಳು ಮಾಡುವ ಮುಕ್ಕಾಲುಪಾಲು ಕೆಲಸವನ್ನು ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳೇ ಮುಗಿಸಿರುತ್ತವೆ. ಹಾಗಾಗಿ ಮೊಸರು ನಮಗೆ ಅತ್ಯುತ್ತಮವಾದ ಆಹಾರವಾಗಿದೆ.

ಬೇಸಿಗೆಯಲ್ಲಿ ಮೊಸರನ್ನು ತಿಂದರೆ ಏನೆಲ್ಲಾ ಲಾಭಗಳು ದೊರೆಯುತ್ತವೆ? ನಿಮಗೆ ತಿಳಿದಿರುವಂತೆ, ಇದರಲ್ಲಿ ಕ್ಯಾಲ್ಸಿಯಂ, ಪ್ರೋಟಿನ್ ಮತ್ತು ಕಾರ್ಬೊಹೈಡ್ರೇಟ್‍ಗಳು ಹೆಚ್ಚಾಗಿ ಇರುತ್ತವೆ. ನೀವು ಪ್ರತಿನಿತ್ಯ ಮೊಸರನ್ನು ಸೇವಿಸಬಹುದು. ಆದರೆ ಈ ಮೊಸರು ಬೇಸಿಗೆಯಲ್ಲಿ ಸೇವಿಸುವುದು ಒಳ್ಳೆಯದೆ? ಎಂಬ ನಿಮ್ಮ ಪ್ರಶ್ನೆಗೆ ಹಲವರ ಅಭಿಪ್ರಾಯ ಉತ್ತರ ಹೌದು ಆದರೆ ಇನ್ನೂ ಕೆಲವರ ಅಭಿಪ್ರಾಯ ಇಲ್ಲ. ಎಲ್ಲರಿಗು ತಿಳಿದಿರುವಂತೆ ಮಜ್ಜಿಗೆಯನ್ನು ಸೇವಿಸುವುದರಿಂದ ದೇಹ ತಂಪಾಗುತ್ತದೆ.

ಆದ್ದರಿಂದ ಜನ ಈ ಬೇಸಿಗೆಯಲ್ಲಿ ಮಜ್ಜಿಗೆಯನ್ನು ಸೇವಿಸಲು ಇಷ್ಟಪಡುತ್ತಾರೆ. ಆಸಿಡಿಟಿಯಿಂದ ಬಳಲುವವರು ಮೊಸರನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಅಲ್ಲದೆ ಅರ್ಥರಿಟಿಸ್‌ನಿಂದ ಬಳಲುವವರು ಮೊಸರು ಮುಂತಾದ ಹೈನು ಪದಾರ್ಥಗಳಿಂದ ದೂರವಿರುವುದು ಒಳ್ಳೆಯದು. ಮೊಸರನ್ನು ಸೇವಿಸಿದರೆ ಅವರ ಕೀಲು ನೋವು ಹೆಚ್ಚಾಗಬಹುದು. ಇನ್ನಿತರ ಸೂಪರ್ ಫುಡ್‍ಗಳಂತೆ ಮೊಸರಿನಲ್ಲು ಸಹ ಸಮೃದ್ಧವಾದ ಪೋಷಕಾಂಶಗಳು ಇರುತ್ತವೆ. ಮೊಸರು ಸೇವನೆಯಿಂದ ಆರೋಗ್ಯವೃದ್ಧಿ ಹೇಗೆ?

ಅದಕ್ಕಾಗಿಯೇ ಅದನ್ನು ಬಹಳಷ್ಟು ಭಾರತೀಯ ತಿನಿಸುಗಳಲ್ಲಿ ಬಳಸಲಾಗುತ್ತದೆ. ಭಾರತದ ಕೆಲವೊಂದು ಭಾಗಗಳಲ್ಲಿ, ಮೊಸರನ್ನ ಊಟದ ಒಂದು ಅವಿಭಾಜ್ಯ ಅಂಗವಾಗಿ ಸ್ಥಾನ ಪಡೆದಿರುವುದು ಗೊತ್ತಿರುವ ಸಂಗತಿ. ಬನ್ನಿ ಬೇಸಿಗೆಯಲ್ಲಿ ಮೊಸರನ್ನು ತಿಂದರೆ ದೊರೆಯುವ ಲಾಭಗಳು ಯಾವುವು ಎಂದು ತಿಳಿದುಕೊಳ್ಳೋಣ.

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

Benefits Of Eating Curd In Summer

ರಕ್ತದ ಅಧಿಕ ಒತ್ತಡವನ್ನು ಕಡಿಮೆಗೊಳಿಸಲು ಆಹಾರದಲ್ಲಿ ಪೊಟ್ಯಾಶಿಯಂ ಅಗತ್ಯವಿದೆ. ಮೊಸರಿನಲ್ಲಿ ಪೊಟ್ಯಾಶಿಯಂ ಹೇರಳವಾಗಿದ್ದು ನಿಯಮಿತ ಸೇವನೆಯಿಂದ ಅಧಿಕ ರಕ್ತದೊತ್ತಡ ಕಡಿಮೆಯಾಗಲು ನೆರವಾಗುತ್ತದೆ. ಉತ್ತಮ ಆರೋಗ್ಯ ಮತ್ತು ಮೈಕಟ್ಟಿಗಾಗಿ ದಿನಕ್ಕೊಂದು ಬಟ್ಟಲು ಮೊಸರನ್ನು ಊಟದ ಬಳಿಕ ಸೇವಿಸುವುದು ಉತ್ತಮವಾಗಿದೆ.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಮೊಸರಿನಲ್ಲಿ ದೇಹಕ್ಕೆ ಮಾರಕವಾದ ಯಾವುದೇ ಅಂಶವಿಲ್ಲ. ಇದರಲ್ಲಿರುವ ಸಕಲ ಅಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿವೆ. ವಿಶೇಷವಾಗಿ ರಕ್ತದಲ್ಲಿರುವ ಬಿಳಿರಕ್ತಕಣಗಳನ್ನು ಹೆಚ್ಚಿಸಲು ಮತ್ತು ಪ್ರತಿಕಣದ ಸಾಮರ್ಥ್ಯ ಹೆಚ್ಚಿಸಲು ಮೊಸರು ನೆರವಾಗುತ್ತದೆ. ಈ ಕಣಗಳು ರೋಗಕಾರಕ ಕಣಗಳನ್ನು ಸದೆಬಡಿದು ದೇಹದ ಆರೋಗ್ಯವನ್ನು ಕಾಪಾಡುತ್ತದೆ.

ವಿವಿಧ ವಿಟಮಿನ್ ಮತ್ತು ಖನಿಜಗಳ ಆಗರವಾಗಿದೆ


ಮೊಸರಿನಲ್ಲಿ ಹಲವು ವಿಟಮಿನ್ ಮತ್ತು ಖನಿಜಗಳಿವೆ. ವಿಟಮಿನ್ ಬಿ12, ಸತು(zinc), ರಂಜಕ (phosphorus), ರೈಬೋಫ್ಲೋವಿನ್ ಮತ್ತು ಐಯೋಡಿನ್ ನಂತಹ ಖನಿಜಗಳಿವೆ. ಇವೆಲ್ಲವೂ ಅರೋಗ್ಯವನ್ನು ಸಮಗ್ರವಾಗಿ ಕಾಪಾಡುವಲ್ಲಿ ನೆರವಾಗುತ್ತವೆ.

ಆಸ್ಟಿಯೊಪೊರೊಸಿಸ್
ಕೆಲವೊಂದು ಸಂಶೋಧನೆಗಳ ಪ್ರಕಾರ ಮೊಸರು ಆಸ್ಟಿಯೊಪೊರೊಸಿಸ್ ಅನ್ನು ನಿಯಂತ್ರಣ ಮಾಡುತ್ತದೆ. ಆದ್ದರಿಂದ ಇದನ್ನು ಪ್ರತಿನಿತ್ಯ ಮಿತವಾಗಿ ಸೇವಿಸುತ್ತ ಇರಿ.

ಭೇದಿ
ಒಂದು ವೇಳೆ ನೀವು ಭೇದಿಯಿಂದ ಬಳಲುತ್ತಿದ್ದಲ್ಲಿ, ಮೊಸರು ನಿಮಗೆ ಸ್ವಲ್ಪ ಮಟ್ಟಿಗೆ ಪರಿಹಾರವನ್ನು ಒದಗಿಸುತ್ತದೆ. ಈ ಪರಿಹಾರಕ್ಕಾಗಿ ಒಂದು ಸಣ್ಣ ಕಪ್ ಮೊಸರನ್ನು ಸೇವಿಸಿ.

English summary

Benefits Of Eating Curd In Summer

Are there any benefits of curd in summer? Well, it is rich in calcium, protein and carbohydrates. You can regularly consume curd. But is curd good in summer? Now, let us discuss about the benefits of curd in summer.
X
Desktop Bottom Promotion