For Quick Alerts
ALLOW NOTIFICATIONS  
For Daily Alerts

ಬೊಜ್ಜು ಕರಗಿಸಲು ಟಿಪ್ಸ್-ಕಡಿಮೆ ವೆಚ್ಚ ಅಧಿಕ ಲಾಭ!

By manu
|

ಈ ಜಗತ್ತಿನಲ್ಲಿ ಶೇಖಡಾ ಐವತ್ತಕ್ಕಿಂತಲೂ ಹೆಚ್ಚಿನ ಜನರಿಗೆ ಕಾಡುವ ತೊಂದರೆ ಎಂದರೆ ಹೊಟ್ಟೆಯ ಬೊಜ್ಜು. ಇದು ನಿಮ್ಮ ಶರೀರದ ಸೌಂದರ್ಯವನ್ನು ಕುಂದಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ಮಾರಕ! ಹೊಟ್ಟೆಯನ್ನು ಮುಂದೆ ದಬ್ಬಿರುವ ಈ ಕೊಬ್ಬು ಮಧುಮೇಹ, ಹೃದಯಸಂಬಂಧಿ ರೋಗಗಳು, ಪಾರ್ಶ್ವವಾಯು ಮತ್ತು ಮರೆಗುಳಿತನಕ್ಕೂ ಕಾರಣವಾಗಬಲ್ಲುದು. ಆದ್ದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಆರೋಗ್ಯದ ದೃಷ್ಟಿಯಿಂದ ಅನಿವರ್ಯವೂ ಹೌದು. ಆದರೆ ಈ ಕೊಬ್ಬನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಹೊಟ್ಟೆಯ ಬೊಜ್ಜಿನ ಸಮಸ್ಯೆ: ಪುರುಷರ ಸಂಖ್ಯೆಯೇ ಜಾಸ್ತಿ!

ಏಕೆಂದರೆ ನಮ್ಮ ದೇಹ ಕೊಬ್ಬು ಸಂಗ್ರಹಿಸಿಡುವಲ್ಲಿ ಸೊಂಟದ ಸುತ್ತಳತೆಯನ್ನು ಬಳಸುತ್ತದಾದರೂ ಬಳಕೆಯಲ್ಲಿ ಮಾತ್ರ ಕಟ್ಟ ಕಡೆಗೆ ಬಳಸುತ್ತದೆ. ಅಂದರೆ ನಮ್ಮ ಕೊಬ್ಬು ಕರಗಿಸುವ ಪ್ರಯತ್ನದಲ್ಲಿ ಮೊದಲು ಇತರ ಭಾಗದ ಕೊಬ್ಬುಗಳೆಲ್ಲಾ ಕರಗಿದ ಬಳಿಕವೇ ಸೊಂಟದ ಕೊಬ್ಬು ಕರಗಲು ಪ್ರಾರಂಭವಾಗುತ್ತದೆ. ನಡುವೆ ನಾಲಿಗೆ ಚಪಲ ತಾಳಲಾರದೇ ಏನಾದರೂ ತಿಂದಾಕ್ಷಣ ಕರಗಿದ್ದ ಕೊಬ್ಬನ್ನು ಮತ್ತೆ ದೇಹ ತುಂಬಿಸಿಬಿಡುತ್ತದೆ. ಇದೇ ಹೊಟ್ಟೆಯ ಕೊಬ್ಬು ಕರಗದಿರಲಿಕ್ಕೆ ಮುಖ್ಯ ಕಾರಣ. ಚಿಟಿಕೆ ಹೊಡೆದಷ್ಟು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ!

ಆದರೆ ಪ್ರಯತ್ನವಿಲ್ಲದೇ ಯಾವ ಕೆಲಸವೂ ಸಾಧ್ಯವಿಲ್ಲ. ಅಂತೆಯೇ ದೇಹದ ಈ ಸೊಕ್ಕನ್ನು ಅಡಗಿಸಲು ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಹೆಚ್ಚಿನ ಕೊಬ್ಬನ್ನು ಅನಿವಾರ್ಯವಾಗಿ ಕರಗಿಸುವಂತೆ ಮಾಡಬಹುದು. ಉದಾಹರಣೆಗೆ ಲಿಂಬೆರಸ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವ ಲಿಂಬೆರಸ ಆಮ್ಲೀಯವಾದುದರಿಂದ ಇದನ್ನು ಜೀರ್ಣಿಸಿಕೊಳ್ಳಲು ದೇಹ ಅನಿವಾರ್ಯವಾಗಿ ಹೆಚ್ಚಿನ ಕೊಬ್ಬನ್ನು ಬಳಸಲೇಬೇಕಾಗುತ್ತದೆ. ಇದೇ ತೂಕ ಇಳಿಕೆಗೆ ಜಾಣತದ ಮಾರ್ಗವಾಗಿದೆ. ಇದರಂತೆಯೇ ಇನ್ನೂ ಕೆಲವು ವಿಧಾನಗಳಿದ್ದು ನಿಮಗೆ ಸೂಕ್ತವೆನಿಸಿದ ವಿಧಾನವನ್ನು ಆರಿಸಿಕೊಳ್ಳಲು ಕೆಳಗಿನ ಸ್ಲೈಡ್ ಶೋ ನೆರವಾಗಲಿದೆ..

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬೆ ರಸವನ್ನು ಕುಡಿಯಿರಿ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬೆ ರಸವನ್ನು ಕುಡಿಯಿರಿ

ಕೊಬ್ಬು ಸಂಗ್ರಹವಾಗಲು ನಮ್ಮ ಯಕೃತ್ (liver) ಆಯಾಸಗೊಂಡಾಗ ಪೂರ್ಣಪ್ರಮಾಣದಲ್ಲಿ ಕೊಬ್ಬನ್ನು ಜೀರ್ಣಿಸಿಕೊಳ್ಳಲು ಅಸಮರ್ಥವಾಗಿ ಹೆಚ್ಚಿನ ಕೊಬ್ಬು ಸಂಗ್ರಹವಾಗುತ್ತಾ ಹೋಗುತ್ತದೆ. ಲಿಂಬೆರಸದ ಸೇವನೆಯಿಂದ ದೇಹದಲ್ಲಿ ಹಲವು ಎಂಜೈಮ್ ಅಥವಾ ಕಿಣ್ವಗಳ ಪ್ರಮಾಣವನ್ನು ಹೆಚ್ಚಿಸಿ ಯಕೃತ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕೊಬ್ಬು ಜೀರ್ಣಗೊಂಡು ಸಂಗ್ರಹವಾಗಬಹುದಾಗಿದ್ದ ಕೊಬ್ಬನ್ನು ತಡೆದಂತಾಗುತ್ತದೆ. ಅತ್ತ ಇತರ ದೈಹಿಕ ಚಟುವಟಿಕೆಗಳ ಮೂಲಕ ಕೊಬ್ಬು ಕರಗತೊಡಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಳಕೆಯ ವಿಧಾನ

ಬಳಕೆಯ ವಿಧಾನ

ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ. ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು. ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಳಕೆಯ ವಿಧಾನ

ಬಳಕೆಯ ವಿಧಾನ

ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ. ಕನಿಷ್ಠ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ. ಅತ್ಯಂತ ಆಯಾಸ ಅನ್ನಿಸಿದರೆ ಮಾತ್ರ ಅರ್ಧಗಂಟೆಯ ಬಳಿಕ ಕೊಂಚ ನೀರು ಕುಡಿಯಬಹುದು. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಬಹುದು.

ಶುಂಠಿ ಸೇರಿಸಿದ ಟೀ ಕುಡಿಯಿರಿ

ಶುಂಠಿ ಸೇರಿಸಿದ ಟೀ ಕುಡಿಯಿರಿ

ಹಸಿಶುಂಠಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಸರಿ, ಆದರೆ ಇದು ದೇಹದ ಬಿಸಿಯನ್ನೂ ಹೆಚ್ಚಿಸುತ್ತದೆಂದು (thermogenic) ನಿಮಗೆ ಗೊತ್ತಿತ್ತೇ ? ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ. ಸೊಂಟದ ಸುತ್ತ ಈಗಾಗಲೇ ಸಂಗ್ರಹವಾಗಿರುವ ಕೊಬ್ಬು ಎಷ್ಟೋ ವರ್ಷಗಳ ಹಿಂದಿನಿಂದ ಸಂಗ್ರಹವಾಗುತ್ತಾ ಬಂದಿರಬಹುದಾಗಿದ್ದು ಶುಂಠಿಯ ನಿಯಮಿತ ಸೇವನೆಯಿಂದ ನಿಧಾನವಾಗಿ ಕರಗತೊಡಗುತ್ತದೆ.

ಶುಂಠಿ ಸೇರಿಸಿದ ಟೀ ಕುಡಿಯಿರಿ

ಶುಂಠಿ ಸೇರಿಸಿದ ಟೀ ಕುಡಿಯಿರಿ

ಜೊತೆಗೇ ಶುಂಠಿಯ ಸೇವನೆಯಿಂದ ದೇಹದಲ್ಲಿ ಒತ್ತಡದ ಕಾರಣ ಉತ್ಪತ್ತಿಯಾಗುವ ಕಾರ್ಟಿಸೋಲ್ (cortisol) ಎಂಬ ಹಾರ್ಮೋನು ಉತ್ಪತ್ತಿಯನ್ನು ತಡೆಯಬಹುದು. ಇದರಿಂದ ರಕ್ತದಲ್ಲಿ ಹೆಚ್ಚಬಹುದಾಗಿದ್ದ ಸಕ್ಕರೆಯ ಪ್ರಮಾಣವನ್ನು ಮಿತಿಗೊಳಿಸಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

ಒಂದು ಲೋಟಕ್ಕಿಂತ ಕೊಂಚ ಹೆಚ್ಚು ನೀರನ್ನು ಕುದಿಸಿ.

ಈ ನೀರಿನಲ್ಲಿ ಒಂದು ಇಂಚು ಹಸಿಶುಂಠಿಯನ್ನು ಜಜ್ಜಿ ಸುಮಾರು ಹತ್ತು ನಿಮಿಷಗಳವೆರೆಗೆ ಚಿಕ್ಕ ಉರಿಯಲ್ಲಿ ಕುದಿಸಿ.

ಈಗ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ ಒಂದು ಚಮಚ ಈಗತಾನೇ ಹಿಂಡಿದ ಲಿಂಬೆರಸ ಮತ್ತು ಒಂದು ಚಮಚ ಜೇನು ಸೇರಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಳಕೆಯ ವಿಧಾನ

ಬಳಕೆಯ ವಿಧಾನ

ಇನ್ನು ಈ ಟೀ ಅನ್ನು ಸೋಸಿ ಬಿಸಿಬಿಸಿ ಇರುವಂತೆಯೇ ಸೇವಿಸಿ. ಒಂದು ದಿನಕ್ಕೆ ಕನಿಷ್ಟ ಎರಡು ಕಪ್ ಈ ಟೀ ಸೇವಿಸಿ ಕೊಬ್ಬಿನಿಂದ ಮುಕ್ತಿಪಡೆಯಿರಿ.

ಪ್ರತಿದಿನ ಎರಡು ಕಪ್ ಕುಡಿಯುವ ಮೂಲಕ ಜೀವರಾಸಾಯನಿಕ ಕ್ರಿಯೆಯಲ್ಲಿ ನಿಯಂತ್ರಣ, ಜೀರ್ಣಕ್ರಿಯೆಯಲ್ಲಿ ಪ್ರಚೋದನೆ, ಕಾರ್ಟಿಸೋಲ್ ಎಂಬ ರಸದೂತದ ಉತ್ಪತ್ತಿ ಪ್ರಮಾಣದಲ್ಲಿ ಇಳಿತ ಮೊದಲಾದ ಫಲಗಳನ್ನು ಕಾಣಬಹುದು.

ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬಳಸಿ

ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬಳಸಿ

ಬೆಳ್ಳುಳ್ಳಿಯನ್ನು ನಿಮ್ಮ ಆಹಾರದ ಮೂಲಕ ಸೇವಿಸುವುದರಿಂದ ಜೀರ್ಣಾಂಗಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ವಿಶೇಷವಾಗಿ ಕರುಳಿನ ಹುಣ್ಣು, ಅಜೀರ್ಣತೆ, ಹೊಟ್ಟೆಯ ಉರಿ ಮೊದಲಾದವುಗಳನ್ನು ತಡೆಯುವ ಬೆಳ್ಳುಳ್ಳಿ ಅಧಿಕ ಮತ್ತು ಕಡಿಮೆ ರಕ್ತದೊತ್ತಡವನ್ನು ತಹಬಂದಿಗೆ ತರುವ ಗುಣವಿದೆ. ಬೆಳ್ಳುಳ್ಳಿಯ ನಿಯಮಿತ ಸೇವನೆಯಿಂದ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ (HDL-High density Lipoprotein) ಹೆಚ್ಚುತ್ತದೆ ಹಾಗೂ ನರಗಳ ಗೋಡೆಗಳ ದಪ್ಪವನ್ನು ಕಡಿಮೆಗೊಳಿಸುವ atherosclerosis, ಹೃದಯ ಸ್ತಂಭನಕ್ಕೆ ಕಾರಣವಾಗುವ ಟ್ರೈಗ್ಲಿಸರೈಡ್ ಎಂಬ ಕಣಗಳನ್ನು ನಿಯಂತ್ರಿಸಲೂ ನೆರವಾಗುತ್ತದೆ.

ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬಳಸಿ

ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬಳಸಿ

ಈ ಪುಟ್ಟ ಬೆಳ್ಳುಳ್ಳಿಗೆ ಸ್ಥೂಲಕಾಯವನ್ನು ನಿಯಂತ್ರಿಸುವ ಶಕ್ತಿಯೂ ಇದೆ. ಪಚನಕ್ರಿಯೆಯನ್ನು ಶೀಘ್ರಗೊಳಿಸಲು ಕರಗಿದ್ದ ಕೊಬ್ಬನ್ನು ಬಳಸುವುದರಿಂದ ಸೊಂಟದ ಸುತ್ತಳತೆ ಶೀಘ್ರವೇ ಕಡಿಮೆಯಾಗುತ್ತಾ ಹೋಗುತ್ತದೆ.

ಬಳಕೆಯ ವಿಧಾನ

ಬಳಕೆಯ ವಿಧಾನ

*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ

*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಳಕೆಯ ವಿಧಾನ

ಬಳಕೆಯ ವಿಧಾನ

ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಘಂಟೆ ಏನನ್ನೂ ಸೇವಿಸಬೇಡಿ. ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

ಹಸಿರು ಟೀ ಸೇವಿಸಿ

ಹಸಿರು ಟೀ ಸೇವಿಸಿ

ಅಮೇರಿಕಾದ ಖ್ಯಾತ ವೈದ್ಯಸಾಹಿತ್ಯ ಪ್ರಕಾಶನ ಪ್ರಕಟಿಸುವ The American Journal of Clinical Nutrition ಪ್ರಕಾರ ದಿನಕ್ಕೆ ನಾಲ್ಕು ಕಪ್ ಹಸಿರು ಟೀ ಸೇವಿಸುವ ಮೂಲಕ ಎಂಟು ವಾರದಲ್ಲಿ ಸುಮಾರು ಆರು ಪೌಂಡ್ (ಸುಮಾರು ಎರಡೂ ಮುಕ್ಕಾಲು ಕೇಜಿ) ಕಡಿಮೆಯಾಗಿರುವುದು ಕಂಡುಬಂದಿದೆ. ಆರೋಗ್ಯಕ್ಕೆ ಹಲವು ವಿಧದಲ್ಲಿ ಉಪಯುಕ್ತವಾದ ಹಸಿರು ಟೀ ಕೊಬ್ಬು ಕರಗಿಸಲೂ ನೆರವಾಗುತ್ತದೆ.

ಇದನ್ನು ಈ ರೀತಿಯಾಗಿ ಬಳಸಿ

ಇದನ್ನು ಈ ರೀತಿಯಾಗಿ ಬಳಸಿ

ಹಸಿರು ಟೀಪುಡಿ -ಒಂದರಿಂದ ಎರಡು ಚಿಕ್ಕ ಚಮಚ ಅಥವಾ ಹಸಿ ಟೀ ಬ್ಯಾಗ್ - ಒಂದು

ಕುದಿಯುವ ನೀರು-ಒಂದು ಕಪ್

ಪುದಿನಾ ಎಲೆಗಳು: ನಾಲ್ಕರಿಂದ ಐದು

ಲಿಂಬೆರಸ: ½ ದಿಂದ 1 ಚಿಕ್ಕ ಚಮಚ

ಜೇನು (ಅಗತ್ಯವೆನಿಸಿದರೆ, ಇಲ್ಲದಿದ್ದರೂ ಸರಿ) - ಒಂದರಿಂದ ಎರಡು ಚಿಕ್ಕ ಚಮಚ (ಸಿಹಿಯ ಆದ್ಯತೆಗೆ ತಕ್ಕಂತೆ) ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇದನ್ನು ಈ ರೀತಿಯಾಗಿ ಬಳಸಿ

ಇದನ್ನು ಈ ರೀತಿಯಾಗಿ ಬಳಸಿ

ಹಸಿರು ಟೀಪುಡಿಯನ್ನು ಕುದಿಯುವ ನೀರಿನಲ್ಲಿ ಕನಿಷ್ಠ ಒಂದು ನಿಮಿಷದವರೆಗೆ ಇರಿಸಿ. ಉತ್ತಮ ಪರಿಣಾಮಕ್ಕಾಗಿ ಮೂರು ನಿಮಿಷಗಳವರೆಗೆ ಇರಿಸುವುದು ಉತ್ತಮ. ಬಳಿಕ ಉಳಿದ ಎಲ್ಲಾ ಸಾಮಾಗ್ರಿಗಳನ್ನು ಹಾಕಿ, ಪುದಿನಾ ಎಲೆಗಳನ್ನು ಕೊಂಚವೇ ಬೆರಳುಗಳಿಂದ ಹಿಸುಕಿ ಕಡೆಗೆ ಹಾಕಿ ಬಿಸಿಬಿಸಿಯಿರುವಂತೆಯೇ ಕುಡಿಯಿರಿ.

ದಾಲ್ಚಿನ್ನಿ ಅಥವಾ ಚೆಕ್ಕೆಯನ್ನು ಬಳಸಿ

ದಾಲ್ಚಿನ್ನಿ ಅಥವಾ ಚೆಕ್ಕೆಯನ್ನು ಬಳಸಿ

ಕೊಂಚ ಖಾರವಾಗಿರುವ ದಾಲ್ಚಿನ್ನಿಯ ಚೆಕ್ಕೆ (cinnamon) ಅಡುಗೆಯ ರುಚಿಯನ್ನು ಹೆಚ್ಚಿಸುವುದರ ಜೊತೆಗೇ ದೇಹದ ಕೊಬ್ಬನ್ನು ಕರಗಿಸಲೂ ನೆರವಾಗುತ್ತದೆ. ಈ ಕೊಬ್ಬಿನಲ್ಲಿ ಸೊಂಟದ ಕೊಬ್ಬು ಸಹಾ ಒಂದು. ದಾಲ್ಚಿನ್ನಿಯ ಸೇವನೆಯಿಂದ ದೇಹದಲ್ಲಿ ಶಾಖ ಉತ್ಪತ್ತಿಯಾಗುವುದರಿಂದ ಹಲವು ರೀತಿಯಲ್ಲಿ ಇದು ಅರೋಗ್ಯಕ್ಕೆ ಪೂರಕವಾಗಿದೆ. ಮುಂದೆ ಓದಿ

ಬಳಕೆಯ ವಿಧಾನ

ಬಳಕೆಯ ವಿಧಾನ

* ನಿಮ್ಮ ನಿತ್ಯದ ಪೇಯಗಳಾದ ಟೀ, ಕಾಫಿ ಅಥವಾ ಹಾಲಿನ ಮೇಲೆ ಒಂದು ಚಿಕ್ಕಚಮಚ ದಾಲ್ಚಿನ್ನಿ ಪುಡಿಯನ್ನು ಚಿಮುಕಿಸಿ ಕಲಕಿ ಕುಡಿಯಿರಿ.

* ನಿಮ್ಮ ನಿತ್ಯದ ಉಪಾಹಾರಗಳಾದ ಉಪ್ಪಿಟ್ಟು, ಬ್ರೆಡ್ ಟೋಸ್ಟ್ ಮೊದಲಾದವುಗಳ ಮೇಲೆ ಕೊಂಚವಾಗಿ ದಾಲ್ಚಿನ್ನಿ ಪುಡಿ ಸೇರಿಸಿ ತಿನ್ನಿರಿ

* ನಿತ್ಯದ ಸಲಾಡ್ (ಅಥವಾ ಪಲ್ಯ)ಗಳ ಮೇಲೆ ಚಿಮುಕಿಸಿ ಸೇವಿಸಿ.

ಕೆಲವೇ ದಿನಗಳಲ್ಲಿ ಕೊಬ್ಬು ಕರಗತೊಡಗಿರುವುದು ಗಮನಕ್ಕೆ ಬರುತ್ತದೆ.

English summary

Amazing Home Remedies to Lose Belly Fat

Every other person on this planet wants to lose belly fat! Yes it is this great an issue. Belly fat not only gives you an ugly look but can be dangerous for your health too. There are numerous fat burning foods and spices that can help you lose your belly fat. Here are some really effective home remedies to lose belly fat with the help of such foods and spices.
Story first published: Monday, November 2, 2015, 12:30 [IST]
X
Desktop Bottom Promotion