For Quick Alerts
ALLOW NOTIFICATIONS  
For Daily Alerts

ವಿಶ್ವವನ್ನೇ ಕಂಗೆಡಿಸಿರುವ ಮಹಾಮಾರಿ ರೋಗ ಹಂದಿಜ್ವರದ ಲಕ್ಷಣಗಳೇನು?

By Super
|

ವಿಶ್ವವನ್ನು ಕಂಗೆಡಿಸಿರುವ ಕೆಲವು ಸಾಂಕ್ರಾಮಿಕ ರೋಗಗಳಲ್ಲಿ ಹಂದಿಜ್ವರವೂ ಒಂದು. ಮೊತ್ತಮೊದಲು ಮೆಕ್ಸಿಕೋದಲ್ಲಿ ಕಾಣಿಸಿಕೊಂಡಿದ್ದ ಈ ಸಾಂಕ್ರಾಮಿಕ ಜ್ವರ ಕೆಲವೇ ದಿನಗಳಲ್ಲಿ ವಿಶ್ವದ ವಿವಿಧ ಭಾಗಗಳನ್ನು ಆವರಿಸಿರುವುದು ಮಾತ್ರ ಆತಂಕಕಾರಿ ಬೆಳವಣಿಗೆ. ಹಲವಾರು ಜನರು ಇಂದಿಗೂ ಪೀಡಿತರಾಗಿ ಈ ಜ್ವರದ ವಿರುದ್ಧ ಸೆಣೆಸಾಡುತ್ತಿದ್ದಾರೆ. ಪಕ್ಕದ ಮನೆಗೆ ಬೆಂಕಿ ಬಿದ್ದಿರುವುದೆಂದು ನಾವು ನೆಮ್ಮದಿಯಲ್ಲಿರುವಂತಿಲ್ಲ.

ಏಕೆಂದರೆ ಪಕ್ಕದ ಮನೆಯ ಬೆಂಕಿ ನಮ್ಮ ಮನೆಗೂ ವ್ಯಾಪಿಸಬಹುದು. ಆದುದರಿಂದ ಈ ಜ್ವರ ಬಂದ ಮೇಲೆ ಚಿಕಿತ್ಸೆ ತೆಗೆದುಕೊಳ್ಳುವುದಕ್ಕಿಂತಲೂ ಜ್ವರದ ಮುನ್ಸೂಚನೆಗಳನ್ನು ಅರಿತುಕೊಂಡು ಜ್ವರವನ್ನು ಎದುರಿಸಲು ಸೂಕ್ತ ಎಚ್ಚರಿಕೆಗಳನ್ನು ಕೈಗೊಳ್ಳುವುದು ಜಾಣತನ. ಈ ಜ್ವರದ ಭಯಾನಕತೆ ಏನೆಂದರೆ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ವೇಗ.

ಕೋಳಿ ಫಾರಮ್ಮಿನಲ್ಲಿ ಒಂದು ಕೋಳಿಗೆ ಬಂದ ಕಾಯಿಲೆ ಇನ್ನೊಂದಕ್ಕೆ ಹರಡಲು ಸಮಯಾವಕಾಶವೇ ಇಲ್ಲದೇ ಇಡಿಯ ಗುಂಪೇ ನಿರ್ನಾಮವಾಗುವಂತೆ ಸುಲಭವಾಗಿ ಈ ಕಾಯಿಲೆಗೆ ಕಾರಣವಾದ ಸ್ವೈನ್ ಫ್ಲೂ ವೈರಸ್ ಎಂಬ ಕ್ರಿಮಿಗಳು ಒಬ್ಬರಿನ್ನೊಂಬ್ಬರಿಗೆ ಹರಡುತ್ತದೆ. ಈ ಜ್ವರದ ಲಕ್ಷಣಗಳೇನು? ಇದನ್ನು ತಡೆಯುವುದು ಹೇಗೆ ಎಂಬ ಬಗ್ಗೆ ವೈದ್ಯರು ನೀಡಿರುವ ಮಾಹಿತಿಗಳಲ್ಲಿ ಪ್ರಮುಖವಾದ ಹದಿನೈದು ವಿಷಯಗಳನ್ನು ಇಲ್ಲಿ ನೀಡಲಾಗಿದೆ. ಎಚ್ಚರ: ಔಷಧಿ ತೆಗೆದುಕೊಳ್ಳುವಾಗ ಇಂತಹ ತಪ್ಪುಗಳನ್ನು ಮಾಡದಿರಿ!

ಹಂದಿ ಜ್ವರ ಎಂದರೇನು?

ಹಂದಿ ಜ್ವರ ಎಂದರೇನು?

ಸಾಮಾನ್ಯವಾಗಿ ಹಂದಿಗಳಲ್ಲಿ ಕಂಡುಬರುವ ಇನ್ಫ್ಲೂಯೆಂಜಾ ಎ (influenza A) ಎಂಬ ಹೆಸರಿನ ವೈರಸ್ ಮೂಲಕ ಮನುಷ್ಯರಿಗೆ ಹರಡುವ ಜ್ವರವನ್ನೇ ಹಂದಿಜ್ವರ ಅಥವಾ ಸ್ವೈನ್ ಫ್ಲೂ ಎಂದು ಕರೆಯುತ್ತಾರೆ.

ಇದು ಅತ್ಯಂತ ಸಾಂಕ್ರಾಮಿಕ ಕ್ರಿಮಿಯಾಗಿದೆ

ಇದು ಅತ್ಯಂತ ಸಾಂಕ್ರಾಮಿಕ ಕ್ರಿಮಿಯಾಗಿದೆ

ಈ ಜ್ವರಕ್ಕೆ ಹೆದರಬೇಕಾದ ಪ್ರಮುಖ ಕಾರಣ ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ವೇಗ. ನೋಡುನೋಡುತ್ತಲೇ ಇಡಿಯ ಊರಿಗೆ ಊರೇ ಈ ವೈರಸ್ ಧಾಳಿಗೆ ತುತ್ತಾಗಿರುವುದು ಮೆಕ್ಸಿಕೋದಲ್ಲಿ ಕಂಡುಬಂದಿದೆ. ಸೂಕ್ತ ಮುಂಜಾಕರೂಕತೆಯಿಂದ ಈ ಹರಡುವಿಕೆಯನ್ನು ನಿಯಂತ್ರಿಸಬಹುದು. ಇದಕ್ಕಾಗಿ ಎಲ್ಲರೂ ಈ ಬಗ್ಗೆ ತಿಳಿದುಕೊಂಡಿರುವುದು ಅಗತ್ಯವಾಗಿದೆ.

ಇದು ಹೇಗೆ ಹರಡುತ್ತದೆ?

ಇದು ಹೇಗೆ ಹರಡುತ್ತದೆ?

ಇದು ಹರಡುವುದು ಹೀಗೇ ಎಂದು ಒಂದೇ ಮಾತಿನಲ್ಲಿ ಕಡ್ದಿ ಮುರಿದಂತೆ ಹೇಳಲು ಸಾಧ್ಯವಿಲ್ಲ. ಈ ಜ್ವರದ ಬಗ್ಗೆ ಅಧ್ಯಯನ ನಡೆಸಿದ ವೈದ್ಯರ ತಂಡದ ಅಭಿಪ್ರಾಯದ ಪ್ರಕಾರ ವೈರಸ್ ಬೆರೆತ ನೀರು, ಮಾಂಸ, ಸೇವಿವುದರಿಂದ ಕೊಂಚ ಮಟ್ಟಿಗೆ ಹರಡಬಹುದಾದರೂ ಬಹುಮಟ್ಟಿಗೆ ಈ ಜ್ವರಪೀಡಿತ ವ್ಯಕ್ತಿಯ ಜೊಲ್ಲು, ಸೀನಿನ ಮೂಲಕ ಸಿಡಿದ ದ್ರವ, ಈ ದ್ರವವನ್ನು ಒರೆಸಿಕೊಂಡ ಕೈಯನ್ನು ಮುಟ್ಟಿದ ಜಾಗವನ್ನು ಬೇರೆಯವರು ಮುಟ್ಟಿ ಆಹಾರವಸ್ತುಗಳನ್ನು ಮುಟ್ಟಿದಾಗ ಇದು ಹರಡುತ್ತದೆ. ಸತತ ಕೆಮ್ಮು ಈ ಜ್ವರದ ಒಂದು ಲಕ್ಷಣವಾಗಿದ್ದು ಜನನಿಬಿಡ ಸ್ಥಳಗಳಲ್ಲಿ ಸೀನುವುದರಿಂದ ಅಥವಾ ಕೆಮ್ಮುವುದರಿಂದ ತಕ್ಷಣ ಅಲ್ಲಿ ಉಪಸ್ಥಿತರಿದ್ದ ಅಷ್ಟೂ ಜನರು ಪೀಡಿತರಾಗುತ್ತಾರೆ.

ಈ ಜ್ವರ ಪ್ರಾಣಾಪಾಯವನ್ನು ತರಬಲ್ಲುದೇ?

ಈ ಜ್ವರ ಪ್ರಾಣಾಪಾಯವನ್ನು ತರಬಲ್ಲುದೇ?

ಮೆಕ್ಸಿಕೋ, ಭಾರತ ಸೇರಿದಂತೆ ಕೆಲವೆಡೆ ಈ ಜ್ವರದಿಂದ ಸಾವುಗಳಾಗಿರುವ ವರದಿಯಾಗಿದೆ. ಆದರೆ ಇದಕ್ಕೆ ಸೂಕ್ತ ಚಿಕಿತ್ಸೆ ಸಕಾಲಕ್ಕೆ ಸಿಗದೇ ಇದ್ದುದು ಈ ಸಾವುಗಳಿಗೆ ಕಾರಣವಾಗಿದೆ. ಈ ಜ್ವರವನ್ನು ನಿಯಂತ್ರಿಸಲು ಸೂಕ್ತ ಔಷಧಿಗಳು ಲಭ್ಯವಿವೆ. ಒಂದು ವೇಳೆ ಕ್ಲುಪ್ತಕಾಲಕ್ಕೆ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಮಾತ್ರ ಪ್ರಾಣಾಪಾಯವಿದೆ.

ಈ ಜ್ವರದ ಲಕ್ಷಣಗಳೇನು?

ಈ ಜ್ವರದ ಲಕ್ಷಣಗಳೇನು?

ಈ ಜ್ವರದ ಪ್ರಮುಖ ಲಕ್ಷಣಗಳೆಂದರೆ ಸತತ ಕೆಮ್ಮು, ಅತೀವ ಜ್ವರ, ಕಫಗಟ್ಟಿರುವ ಗಂಟಲು, ಇಡಿಯ ದೇಹದ ಒಂದೊಂದು ಅಂಗವೂ ನೋವಿನಿಂದ ಕಿರುಗುಟ್ಟುವುದು, ಅತೀವ ಸುಸ್ತು, ತಲೆ ಎತ್ತಲಾರದಷ್ಟು ತಲೆನೋವು. ಕೆಲವರಲ್ಲಿ ವಾಂತಿ ಮತ್ತು ಬೇಧಿಯಾಗಿರುವುದನ್ನೂ ಗಮನಿಸಲಾಗಿದೆ.

ಈ ಜ್ವರ ಬರದಂತೆ ತಡೆಗಟ್ಟುವುದು ಹೇಗೆ?

ಈ ಜ್ವರ ಬರದಂತೆ ತಡೆಗಟ್ಟುವುದು ಹೇಗೆ?

ಈ ಜ್ವರವಿರುವ ಊರಿನಲ್ಲಿ ಅಥವಾ ಇರಬಹುದೆಂಬ ಅನುಮಾನವಿರುವ ಯಾವುದೇ ಸ್ಥಳದಲ್ಲಿ ನಿಮ್ಮ ಮೂಗು ಮತ್ತು ಬಾಯಿಯನ್ನು ಒಂದು ಕರವಸ್ತ್ರದಿಂದ ಮುಚ್ಚಿಕೊಳ್ಳಿ. ಅಥವಾ ಔಷಧಿ ಅಂಗಡಿಗಳಲ್ಲಿ ದೊರಕುವ ಮಾಸ್ಕ್ ಗಳನ್ನೂ ಬಳಸಬಹುದು. (ಆದರೆ ಪ್ರತಿಬಾರಿ ಹೊಸತನ್ನೇ ಬಳಸಬೇಕು, ಉಪಯೋಗಿಸಿದ್ದನ್ನು ಸುಟ್ಟುಬಿಡಬೇಕು). ಸಾರ್ವಜನಿಕ ಸ್ಥಳಗಳಲ್ಲಿ ಅನಿವಾರ್ಯವಾಗಿ ಸ್ಪರ್ಶಿಸಲೇಬೇಕಾದ ಮೆಟ್ಟಿಲ ಪಕ್ಕದ ಕಟಕಟೆ,ಬಾಗಿಲ ಹಿಡಿ, ಚಿಕಲ ಮೊದಲಾದವುಗಳನ್ನು ಸ್ಪರ್ಶಿಸಿದ ಬಳಿಕ ತಪ್ಪಿಯೂ ಕೈ ತೊಳೆಯದೇ ಯಾವುದೇ ಆಹಾರವಸ್ತುಗಳನ್ನೂ ನಿಮ್ಮ ಮೂಗು, ಬಾಯಿ, ಕಣ್ಣುಗಳನ್ನು ಸ್ಪರ್ಶಿಸಲೇ ಬೇಡಿ. ಈ ಜ್ವರ ಬಂದವರ ಸಾಂಗತ್ಯದಿಂದ ದೂರವಿರಿ. ಈಗ ನೀರಿಲ್ಲದೇ ಕೈತೊಳೆಯಬಹುದಾದ hand sanitizer ಎಂಬ ದಟ್ಟಸೋಪಿನ ದ್ರಾವಣ ಔಷಧಿ ಅಂಗಡಿಯಲ್ಲಿ ಲಭ್ಯವಿದೆ. ಕೊಂಚ ದುಬಾರಿಯೆಂದು ಕಂಡುಬಂದರೂ ಪರವಾಗಿಲ್ಲ, ಒಂದು ಚಿಕ್ಕ ಬಾಟಲಿ ಸದಾ ನಿಮ್ಮೊಂದಿಗಿರಲಿ. ಈ ದ್ರವದಿಂದ ಕೈತೊಳೆದುಕೊಂಡು ಕಾಗದದ ವಸ್ತ್ರದಿಂದ ಒರೆಸಿಕೊಳ್ಳುವ ಮೂಲಕ ಈ ಜ್ವರದಿಂದ ಪೀಡಿತರಾಗುವ ಸಂಭವದಿಂದ ಪಾರಾಗಬಹುದು.

ಕೇವಲ ಮಾಸ್ಕ್ ಧರಿಸುವುದರಿಂದ ಈ ಜ್ವರವನ್ನು ತಡೆಗಟ್ಟಬಹುದೇ?

ಕೇವಲ ಮಾಸ್ಕ್ ಧರಿಸುವುದರಿಂದ ಈ ಜ್ವರವನ್ನು ತಡೆಗಟ್ಟಬಹುದೇ?

ನಮ್ಮಲ್ಲಿ ಹೆಚ್ಚಿನವರು ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ. ಆದರೆ ಕೇವಲ ಮಾಸ್ಕ್ ತೊಡುವುದರಿಂದ ಗಾಳಿಯಲ್ಲಿ ತೇಲಿ ಬರುತ್ತಿರುವ ಕ್ರಿಮಿಗಳನ್ನು ತಡೆಗಟ್ಟಬಹುದೇ ವಿನಃ ನಿಮ್ಮ ಕೈಗಳ ಮೂಲಕ ಬರುವ ಕ್ರಿಮಿಗಳನ್ನಲ್ಲ. ಆದುದರಿಂದ ಸ್ವಚ್ಛತೆಯನ್ನು ಎಲ್ಲಾ ರೀತಿಯಲ್ಲಿ ಕಾಪಾಡಿಕೊಳ್ಳುವುದು ಅತಿಮುಖ್ಯವಾಗಿದೆ. ಅದರಲ್ಲೂ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಹಿಂದಿರುಗಿದ ಬಳಿಕ ಕೈ, ಕಾಲು, ಮುಖಗಳನ್ನು ಸೋಪಿನಿಂದ ಸ್ವಚ್ಛವಾಗಿ ತೊಳೆದ ಬಳಿಕವೇ ಯಾವುದೇ ಕೆಲಸಕ್ಕೆ ತೊಡಗುವುದು ಉತ್ತಮ.

ಈ ಜ್ವರಕ್ಕೆ ಔಷಧಿ ಇದೆಯೇ?

ಈ ಜ್ವರಕ್ಕೆ ಔಷಧಿ ಇದೆಯೇ?

ಹೌದು, ಇಂದು ಈ ವೈರಸ್ಸುಗಳನ್ನು ಸದೆಬಡಿಯಲು ಸಮರ್ಥವಾಗಿರುವ ಔಷಧಿಗಳು ಲಭ್ಯವಿದ್ದು ಎಲ್ಲಾ ದೇಶಗಳ ಸರ್ಕಾರಗಳು ಇವುಗಳ ಸುಲಭ ವಿಲೇವಾರಿಗೆ ರೆಡ್ ಕ್ರಾಸ್ ಸಂಸ್ಥೆಯ ನೆರವಿನೊಂದಿಗೆ ವ್ಯವಸ್ಥೆ ಮಾಡಿಕೊಂಡಿವೆ. ಹಾಗಾಗಿ ಈ ಜ್ವರದ ಲಕ್ಷಣಗಳು ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅವರು ನೀಡುವ ಚಿಕಿತ್ಸೆ ಮತ್ತು ರೋಗ ಹರಡದಂತೆ ಕೈಗೊಳ್ಳುವ ಕ್ರಮಗಳನ್ನು ಪಾಲಿಸಿ. ಉಲ್ಬಣಾವಸ್ಥೆಗೂ ಮುನ್ನ ಔಷಧಿ ತೆಗೆದುಕೊಳ್ಳುವ ಮೂಲಕ ಈ ಜ್ವರವನ್ನು ನಿಗ್ರಹಿಸಬಹುದು.

ಈ ಜ್ವರ ಬರದಂತೆ ತಡೆಗಟ್ಟುವ ಲಸಿಕೆ ಇದೆಯೇ?

ಈ ಜ್ವರ ಬರದಂತೆ ತಡೆಗಟ್ಟುವ ಲಸಿಕೆ ಇದೆಯೇ?

ಇಲ್ಲ, ಇದುವರೆಗೂ ಈ ಲಸಿಕೆಯನ್ನು ಕಂಡುಹಿಡಿಯಲಾಗಿಲ್ಲ. ಆದರೆ ಈ ಬಗ್ಗೆ ವಿವಿಧ ದೇಶಗಳಲ್ಲಿ ಸಂಶೋಧನೆಗಳು ಪ್ರಗತಿಯಲ್ಲಿದ್ದು ಶೀಘ್ರವೇ ಲಸಿಕೆಯನ್ನು ಕಂಡುಹಿಡಿಲು ಸಾಧ್ಯವಾಗಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ.

ಹಂದಿ ಮಾಂಸದ ಸೇವನೆಯಿಂದ ಈ ಜ್ವರ ಬರುತ್ತದೆಯೇ?

ಹಂದಿ ಮಾಂಸದ ಸೇವನೆಯಿಂದ ಈ ಜ್ವರ ಬರುತ್ತದೆಯೇ?

ಈ ಜ್ವರ ಬರಲು ಹಂದಿಮಾಂಸ ತಿನ್ನುವುದು ಪ್ರಮುಖ ಕಾರಣವಲ್ಲ. ಆದರೆ ಈ ವೈರಸ್ ಪೀಡಿತ ಹಂದಿಯ ಮಾಂಸವನ್ನು ಸರಿಯಾಗಿ ಸ್ವಚ್ಛಗೊಳಿಸದೇ ಅಥವಾ ಬೇಯಿಸದೇ ತಿಂದರೆ ಮಾತ್ರ ರೋಗ ಹರಡುವ ಸಂಭವವಿದೆ. ಅಲ್ಲದೇ ಇಂತಹ ಮಾಂಸವನ್ನು ಸೇವಿಸುವುದರಿಂದ ಇತರ ರೋಗಗಳಿಗೂ ಆಹ್ವಾನ ನೀಡಿದಂತಾಗುತ್ತದೆ.

ಇಂತಹ ಲಕ್ಷಣಗಳು ಕಂಡು ಬಂದ ಕೂಡಲೇ ಏನು ಮಾಡಬೇಕು?

ಇಂತಹ ಲಕ್ಷಣಗಳು ಕಂಡು ಬಂದ ಕೂಡಲೇ ಏನು ಮಾಡಬೇಕು?

ಪ್ರಥಮವಾಗಿ ನಿಮ್ಮ ಮೂಗು, ಬಾಯಿಗಳನ್ನು ಕರವಸ್ತ್ರ ಅಥವಾ ಮಾಸ್ಕ್ ನಿಂದ ಮುಚ್ಚಿಕೊಂಡು ನಿಮ್ಮ ಕುಟುಂಬ ವೈದ್ಯರ ಅಥವಾ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ. ನಿಮ್ಮ ಕುಟುಂಬವರ್ಗದವರಿಗೆ ನಿಮ್ಮಿಂದ ಈ ರೋಗ ಹರಡುವ ಎಲ್ಲಾ ಸಂಭವವಿರುವುದರಿಂದ ಅತಿಹೆಚ್ಚಿನ ಕಾಳಜಿ ವಹಿಸಿ. ಬಳಿಕ ನಿಮ್ಮ ವೈದ್ಯರು ಸೂಚಿಸುವ ಔಷಧಿಗಳನ್ನು ಮತ್ತು ಸ್ವಚ್ಛತೆಯ ಕ್ರಮಗಳನ್ನು ಕೈಗೊಳ್ಳಿ. ಶೀಘ್ರದಲ್ಲಿಯೇ ನೀವು ಗುಣಮುಖರಾಗುವಿರಿ.

ಈ ಜ್ವರ ಯಾವ ಪರಿಣಾಮಗಳನ್ನು ಉಂಟು ಮಾಡುತ್ತದೆ?

ಈ ಜ್ವರ ಯಾವ ಪರಿಣಾಮಗಳನ್ನು ಉಂಟು ಮಾಡುತ್ತದೆ?

ಈ ಜ್ವರ ನಿಮಗೆ ಉಸಿರಾಡಲು ತೊಂದರೆ, ನೀರು ಕುಡಿಯಲು ಕಷ್ಟವಾಗುವುದು, ಚರ್ಮ ನೀಲಿಗಟ್ಟುವುದು ಮತ್ತು ಅತೀವವಾದ ಜ್ವರ ಪ್ರಮುಖವಾದ ಲಕ್ಷಣಗಳಾಗಿವೆ.

ವಯಸ್ಕರಲ್ಲಿ ಈ ಜ್ವರ ಯಾವ ಪರಿಣಾಮಗಳನ್ನು ಉಂಟು ಮಾಡುತ್ತದೆ?

ವಯಸ್ಕರಲ್ಲಿ ಈ ಜ್ವರ ಯಾವ ಪರಿಣಾಮಗಳನ್ನು ಉಂಟು ಮಾಡುತ್ತದೆ?

ಜ್ವರದ ಲಕ್ಷಣಗಳು ಕಂಡುಬಂದ ಕೆಲವೇ ಸಮಯದಲ್ಲಿ ವಾಂತಿ, ತಲೆಸುತ್ತುವುದು, ಹೊಟ್ಟೆಯಲ್ಲಿ ನೋವು, ಉಸಿರಾಟದಲ್ಲಿ ತೊಂದರೆ ಮತ್ತು ಗೊಂದಲದಲ್ಲಿರುವುದು ಮೊದಲಾದ ಪರಿಣಾಮಗಳನ್ನು ನೋಡಬಹುದು.

ಯಾವ ಮುಂಜಾಗ್ರತೆಗಳನ್ನು ಕೈಗೊಳ್ಳಬೇಕು?

ಯಾವ ಮುಂಜಾಗ್ರತೆಗಳನ್ನು ಕೈಗೊಳ್ಳಬೇಕು?

ಒಂದು ವೇಳೆ ನಿಮ್ಮ ವಸತಿ ಪ್ರದೇಶದಲ್ಲಿ ಹಂದಿಜ್ವರ ಕಾಣಿಸಿಕೊಂಡರೆ ಇದಕ್ಕೆ ಅಗತ್ಯವಾದ ಔಷಧಿಗಳನ್ನು ವೈದ್ಯರ ಸಲಹೆ ಮೇರೆಗೆ ಮುಂಚಿತವಾಗಿ ಕೊಂಡು ಶೇಖರಿಸಿಟ್ಟುಕೊಳ್ಳಿ. ಜ್ವರದ ಲಕ್ಷಣಗಳು ಕಂಡು ಬಂದ ಕೂಡಲೇ ಈ ಔಷಧಿಗಳನ್ನು ರೋಗಿಗೆ ಸೇವಿಸಲು ನೀಡಿ ಪೂರ್ಣ ವಿಶ್ರಾಂತಿ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಿರಿ.

ಇದಕ್ಕೆ ಯಾವುದಾದರೂ ಮನೆಮದ್ದು ಲಭ್ಯವಿದೆಯೇ?

ಇದಕ್ಕೆ ಯಾವುದಾದರೂ ಮನೆಮದ್ದು ಲಭ್ಯವಿದೆಯೇ?

ಈ ವೈರಸ್ ಅತ್ಯಂತ ಮಾರಕವಾಗಿದ್ದು ಯಾವುದೇ ಮನೆಮದ್ದಿಗೆ ಬಗ್ಗುವುದಿಲ್ಲವಾದುದರಿಂದ ವೈದ್ಯರು ಶಿಫಾರಸ್ಸು ಮಾಡಿದ ಔಷಧಿಗಳನ್ನೇ ಅನುಸರಿಸಿ. ಯಾವುದೇ ಕಾರಣಕ್ಕೂ ಈ ಜ್ವರವನ್ನು ಲಘುವಾಗಿ ಪರಿಗಣಿಸುವುದು ತರವಲ್ಲ. ಮನೆಮದ್ದು ಈ ಜ್ವರಕ್ಕೆ ಸೂಕ್ತವಲ್ಲ.

English summary

15 Facts You Should Know About Swine Flu

Are you aware of swine flu symptoms? It is very important to know about swine flu and its symptoms. Recently, this disease has been spreading in many parts of the world. This virus was first seen in Mexico and later spread to other areas of the world. Let us discuss all such facts about swine flu in this article.
X