For Quick Alerts
ALLOW NOTIFICATIONS  
For Daily Alerts

ರಾತ್ರಿಯ ಹೊತ್ತು ಇಂತಹ ಆಹಾರದ ಕಡೆ ಕಣ್ಣೆತ್ತಿಯೂ ನೋಡಬೇಡಿ!

By Super
|

ನಾಗರಿಕತೆ ಬೆಳೆಯುತ್ತಿದ್ದಂತೆಯೇ ಆರಾಮ ಹೆಚ್ಚುತ್ತಿದೆ, ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಅಂತೆಯೇ ನಮ್ಮ ಆಹಾರಕ್ರಮಗಳು ಕೂಡಾ. ಹೆಚ್ಚು ಸಮಯ ಮತ್ತು ಶ್ರಮ ಬೇಡುವ ಅಡುಗೆಗಳು ಈಗ ಯಾರಿಗೂ ಬೇಡ. ಬದಲಿಗೆ ಸಿದ್ಧರೂಪದಲ್ಲಿ ಸಿಗುತ್ತಿರುವ ಆಹಾರಗಳು ಅಪಾರ ಜನಪ್ರಿಯತೆಗಳಿಸುತ್ತಿವೆ. ಇದಕ್ಕೆ ವಿದೇಶದಿಂದ ಆಗಮಿಸಿರುವ ಬಹುರಾಷ್ಟ್ರೀಯ ಸಂಸ್ಥೆಗಳ ಆಹಾರ ಉತ್ಪನ್ನಗಳ ಆಕರ್ಷಣೆಯೇ ಕಾರಣ. ಇವುಗಳು ಒಂದು ಹೊತ್ತಿನ ಊಟಕ್ಕಿಂತ ಹೆಚ್ಚಾಗಿ ಪ್ರತಿಷ್ಠೆಯ ವಿಷಯವಾಗಿದೆ. ರಾತ್ರಿ ಊಟ ಮಾಡಿದ ತಕ್ಷಣ ಮಾಡಬಾರದ 10 ಕಾರ್ಯಗಳು!

ಹಳದಿ ಇರುವುದೆಲ್ಲಾ ಬಂಗಾರವಲ್ಲ ಎಂಬ ಮಾತು ಈ ಆಹಾರಗಳಿಗೂ ಅನ್ವಯಿಸುತ್ತವೆ. ನೋಡಲು ತುಂಬಾ ಆಕರ್ಷಕವಾಗಿರುವ ಈ ಆಹಾರಗಳು ಆರೋಗ್ಯಕ್ಕೆ ಅತ್ಯುತ್ತಮ ಎಂದು ಯಾರೂ ಹೇಳುವುದಿಲ್ಲ. ಅದರಲ್ಲೂ ತಡರಾತ್ರಿ ಸೇವಿಸುವ ಈ ಆಹಾರಗಳು ಅರೋಗ್ಯದ ಮೇಲೆ ಮಾಡುವ ಪರಿಣಾಮಗಳು ಅತಿ ಮಾರಕವಾಗಿವೆ. ಒಂದು ವೇಳೆ ನೀವು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಕಾಳಜಿ ವಹಿಸುವವರಾದರೆ ಇಂತಹ ಆಹಾರಗಳ ಬಗ್ಗೆ ನೀಡಿರುವ ಮಾಹಿತಿಗಳನ್ನು ಓದಿ ಖಂಡಿತಾ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ...

ಕಪ್ಪು ಚಾಕಲೇಟ್

ಕಪ್ಪು ಚಾಕಲೇಟ್

ಕೋಕೋ ಹಣ್ಣಿನಿಂದ ತಯಾರಿಸಿದ ಚಾಕಲೇಟು ಪ್ರಾರಂಭಿಕ ಹಂತದಲ್ಲಿ ಕಂದು ಬಣ್ಣದಲ್ಲಿ ಬೆಣ್ಣೆಯಂತಿರುತ್ತದೆ. ಇದರಲ್ಲಿ ಕೆಫೀನ್ ಪ್ರಮಾಣ ಅಲ್ಪವಾಗಿದ್ದು ರುಚಿಯಾಗಿಯೂ ಇದ್ದು ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ ಇದರ ಸಂಸ್ಕರಿತ ರೂಪವಾದ ಕಪ್ಪು ಚಾಕಲೇಟಿನಲ್ಲಿ (dark chocoloate) ಅತ್ಯಧಿಕ ಪ್ರಮಾಣದಲ್ಲಿ ಕೆಫೀನ್ ಇರುವುದರಿಂದ ರಾತ್ರಿ ಹೊತ್ತಿನ ಸೇವನೆ ಅತಿ ಹೆಚ್ಚಿನ ಪರಿಣಾಮ ಬೀರುತ್ತದೆ. ಹೆಚ್ಚಿನ ಕೆಫೀನ್ ನಮ್ಮ ನರವ್ಯವಸ್ಥೆಯ ಮೇಲೆ ಧಾಳಿ ಮಾಡಿ ಹಲವು ತೊಂದರೆಗಳು ಎದುರಾಗಬಹುದು. ವಿಕೋಪಕ್ಕೆ ತಿರುಗಿದರೆ ಪಾರ್ಶ್ವವಾಯುವಿಗೂ ತುತ್ತಾಗಬಹುದು.

ಪ್ಯಾಕ್ ಮಾಡಿದ ಸಿದ್ಧರೂಪದ ಧಾನ್ಯಗಳು

ಪ್ಯಾಕ್ ಮಾಡಿದ ಸಿದ್ಧರೂಪದ ಧಾನ್ಯಗಳು

ಬೆಳಗ್ಗಿನ ಹೊತ್ತಿನ ಉಪಾಹಾರಕ್ಕೆ ನಿಮಗೆ ಸಮಯವಿಲ್ಲವೇ? ಬಳಸಿರಿ ಈ ಧಾನ್ಯಗಳನ್ನು... ಎಂಬ ಜಾಹೀರಾತು ನಿಮ್ಮ ಮನಸೆಳೆಯಬಹುದು. ಇಂದು ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಸಿದ್ಧರೂಪದ ಧಾನ್ಯ ಹಾಗೂ ಧಾನ್ಯಾಧಾರಿತ ತಿನಿಸುಗಳು ಲಭ್ಯವಿವೆ. ಇದನ್ನು ಸೇವಿಸಲು ಏನೂ ತಯಾರಿ ಬೇಕಿಲ್ಲ. ಕೇವಲ ಹಾಲಿಗೆ ಸುರಿದು ನೆನೆಸಿ ತಿಂದರಾಯಿತು. ಆದರೆ ಈ ಆಹಾರ ರಾತ್ರಿ ಹೊತ್ತಿಗೆ ಸರ್ವಥಾ ತಕ್ಕುದಲ್ಲ. ಏಕೆಂದರೆ ಈ ಆಹಾರಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ ಇದ್ದು ರಾತ್ರಿ ಹೊತ್ತಿನ ಸೇವನೆಯಲ್ಲಿ ಅಧಿಕ ಪ್ರಮಾಣದ ಸಕ್ಕರೆ ಕರಗಲು ಯಾವುದೇ ಚಟುವಟಿಕೆ ಇಲ್ಲದ ಕಾರಣ ಹಲವು ತೊಂದರೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ.ಸ್ಥೂಲಕಾಯ ಇದರಲ್ಲಿ ಪ್ರಮುಖವಾದುದು. ಇನ್ನುಳಿದಂತೆ ಅಧಿಕ ರಕ್ತದೊತ್ತಡ, ಇನ್ಸುಲಿನ್ ಪ್ರಮಾಣದಲ್ಲಿ ಏರುಪೇರು, ಯಕೃತ್ ವೈಫಲ್ಯ, ಸತತ ಹಸಿವು, ಮೂತ್ರಪಿಂಡಗಳಲ್ಲಿ ಕಲ್ಲು, ಬಾಡಲಿಯ ಕ್ಯಾನ್ಸರ್, ಸಕ್ಕರೆಗೆ ದಾಸರಾಗುವುದು, ಸಂಧಿವಾತ ಮೊದಲಾದ ತೊಂದರೆಗಳು ಎದುರಾಗಬಹುದು. ಈಗಾಗಲೇ ನೀವು ಈ ಆಹಾರಗಳನ್ನು ತಿನ್ನದಿದ್ದರೆ ಆಗುವುದಿಲ್ಲ ಎಂಬ ಸ್ಥಿತಿ ಮುಟ್ಟಿದ್ದರೆ ಇದರಿಂದ ಹೊರಬರಲು ಯಾವುದೇ ಖಾರ ಅಥವ ಉಪ್ಪಿಲ್ಲದ ಪಾಪ್ ಕಾರ್ನ್ ಸೇವಿಸಿ ಈ ತೊಂದರೆಯಿಂದ ಹೊರಬರಲು ಯತ್ನಿಸಿ.

 ಐಸ್ ಕ್ರೀಮ್

ಐಸ್ ಕ್ರೀಮ್

ಐಸ್ ಕ್ರೀಂ ನಲ್ಲಿ ಅತ್ಯಧಿಕ ಪ್ರಮಾಣದ ಸಕ್ಕರೆ ಇರುವುದರಿಂದ ಹಾಗೂ ಇದರ ತಯಾರಿಕೆಯಲ್ಲಿ ಬಳಸಲಾಗುವ ಕೆಲವು ರಾಸಾಯನಿಕಗಳು ಸುಲಭವಾಗಿ ಜೀರ್ಣವಾಗುವುದಿಲ್ಲವಾದ್ದರಿಂದ ರಾತ್ರಿ ಹೊತ್ತು ಸೇವಿಸುವುದು ಒಳ್ಳೆಯದಲ್ಲ. ಜೀರ್ಣವ್ಯವಸ್ಥೆಯಲ್ಲಿ ತೊಂದರೆಯ ಜೊತೆಗೇ ಅನಗತ್ಯವಾಗಿ ಕೊಬ್ಬು ಬೆಳೆದು ತೂಕ ಹೆಚ್ಚಲೂ ಐಸ್ ಕ್ರೀಮ್ ಕಾರಣವಾಗುತ್ತದೆ.

ಹಣ್ಣಿನ ಸ್ವಾದದ ಮೊಸರು.

ಹಣ್ಣಿನ ಸ್ವಾದದ ಮೊಸರು.

ಇಂದು ಮೊಸರಿಗೂ ವಿವಿಧ ಹಣ್ಣುಗಳ ರುಚಿಯನ್ನು ಸೇರಿಸಿ ಮಾರುಕಟ್ಟೆಯಲ್ಲಿ ಜನರನ್ನು ಆಕರ್ಷಿಸಲಾಗುತ್ತಿದೆ. ವಾಸ್ತವವಾಗಿ ಈ ಮೊಸರಿನಲ್ಲಿ ಹಣ್ಣಿನ ಪ್ರಮಾಣ ಹೆಸರಿಗೆ ಮಾತ್ರ ಒಂದು ಸ್ವಲ್ಪವಿದ್ದು ಇನ್ನುಳಿದಂತೆ ಕೃತಕವಾದ ರುಚಿಯನ್ನು ಮತ್ತು ಬಣ್ಣವನ್ನು ಸೇರಿಸಲಾಗಿರುತ್ತದೆ. ಮೂಲತಃ ಕಹಿಯಾಗಿರುವ ಈ ಕೃತಕ ಬಣ್ಣಗಳ ರುಚಿ ಗೊತ್ತಾಗದೇ ಇರಲು ಹೆಚ್ಚಿನ ಸಕ್ಕರೆಯನ್ನು ಸೇರಿಸಿರಲಾಗುತ್ತದೆ. ಈ ರಾಸಾಯನಿಕಗಳು ಆರೋಗ್ಯಕ್ಕೆ ಹಾನಿಕರವಾಗಿವೆ. ಅದರಲ್ಲೂ ರಾತ್ರಿ ಹೊತ್ತು ಸೇವಿಸಿದಾಗ ಈ ರಾಸಾಯನಿಕಗಳ ಪ್ರಭಾವ ಅಧಿಕವಾಗಿರುತ್ತದೆ.

ಅತಿ ಹೆಚ್ಚು ಮಸಾಲೆಯುಕ್ತ ಆಹಾರಗಳು

ಅತಿ ಹೆಚ್ಚು ಮಸಾಲೆಯುಕ್ತ ಆಹಾರಗಳು

ಸಾಮಾನ್ಯವಾಗಿ ಮಾಂಸಾಹಾರಿಗಳು ಖಾರವನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಖಾರ ನೀಡಲು ಉಪಯೋಗಿಸುವ ಮೆಣಸು ರಾತ್ರಿ ಹೊತ್ತು ತಿನ್ನಲೇಬಾರದ ಆಹಾರಗಳಲ್ಲಿ ಒಂದಾಗಿದೆ. ತಾರುಣ್ಯದಲ್ಲಿ ಈ ಮೆಣಸಿನ ಪ್ರಭಾವವನ್ನು ದೇಹ ತಾಳಿಕೊಳ್ಳಲು ಶಕ್ಯವಿರುವುದರಿಂದ ಹೆಚ್ಚಿನವರು ಈ ಬಗ್ಗೆ ತಲೆಬಿಸಿಮಾಡಿಕೊಳ್ಳದೇ ಸಾಕಷ್ಟು ಖಾರವನ್ನು ಸೇವಿಸುತ್ತಾರೆ. ಆದರೆ ನಲವತ್ತು ದಾಟಿದ ಬಳಿಕ ದೇಹದ ರಕ್ಷಣಾ ವ್ಯವಸ್ಥೆ ಕೊಂಚ ಶಿಥಿಲವಾಗುವುದರಿಂದ ನಿಧಾನಕ್ಕೆ ಖಾರದ ಪ್ರಭಾವ ಅರಿವಿಗೆ ಬರುತ್ತದೆ. ಅಜೀರ್ಣ, ಹೊಟ್ಟೆಯಲ್ಲಿ ಉರಿ, ಕರುಳು ಹುಣ್ಣು ಮೊದಲಾದ ತೊಂದರೆಗಳು ಎದುರಾಗುತ್ತವೆ. ಅಪರೂಪಕ್ಕೊಮ್ಮೆ ಖಾರ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದ ಬಳಿಕ ಕೊಂಚ ಮೊಸರು ಮತ್ತು ಮಜ್ಜಿಗೆಯನ್ನು ಸೇವಿಸುವುದರಿಂದ ಈ ತೊಂದರೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಬಹುದು.

ಮದ್ಯ

ಮದ್ಯ

ಮದ್ಯಪಾನ ದಿನದ ಯಾವುದೇ ಹೊತ್ತಿನಲ್ಲಿ ಸೇವಿಸಿದರೂ ಆರೋಗ್ಯಕ್ಕೆ ಮಾರಕವಾಗಿದೆ. ಮದ್ಯ ರಕ್ತಕ್ಕೆ ಸೇರಿದ ಬಳಿಕ ದೇಹದಲ್ಲಾಗುವ ಬದಲಾವಣೆಗಳು ವಿವಿಧ ನೇರ ಮತ್ತು ಪರೋಕ್ಷ ತೊಂದರೆಗಳನ್ನು ತಂದೊಡ್ಡಬಹುದು. ಮುಖ್ಯವಾಗಿ ಮೆದುಳಿನ ಕ್ಷಮತೆಯನ್ನು ಕುಗ್ಗಿಸುವುದು (ಯೋಚನಾ ಸಾಮರ್ಥ್ಯವನ್ನೇ ಬದಲಿಸಿಬಿಡುವುದು). ಯಾರೂ ಮಾಡಬಯಸದ ಕೆಲಸಗಳನ್ನು ಕೆಲವರಿಗೆ ಮದ್ಯ ಕುಡಿಸಿ ಕಡಿಮೆ ಹಣದಲ್ಲಿ ಮಾಡಿಕೊಳ್ಳುವುದು ಇದಕ್ಕೊಂದು ಉದಾಹರಣೆ. ಅದರಲ್ಲೂ ರಾತ್ರಿ ಸೇವಿಸಿದ ಮದ್ಯ ರಕ್ತ ಸೇರಿದ ಬಳಿಕ ರಾತ್ರಿಯ ಅನೈಚ್ಛಿಕ ಕಾರ್ಯಗಳಲ್ಲೆಲ್ಲಾ ತಡೆಯೊಡ್ಡಿ ವಿವಿಧ ತೊಂದರೆಗಳನ್ನು ಎದುರಿಸಬೇಕಾಗಬಹುದು. ನಮ್ಮ ದೇಹದ ರಕ್ಷಣಾ ವ್ಯವಸ್ಥೆ ದೇಹವನ್ನು ನಿದ್ರಾವಸ್ಥೆಗೆ ಬಲವಂತವಾಗಿ ದೂಡುತ್ತದೆ. ಇದನ್ನೇ ಹೆಚ್ಚಿನವರು ಮದ್ಯ ಕುಡಿದರೆ ಒಳ್ಳೆಯ ನಿದ್ದೆ ಬರುತ್ತದೆ ಎಂದು ತಪ್ಪು ತಿಳಿದುಕೊಂಡಿದ್ದಾರೆ. ಮದ್ಯ ಕುಡಿದ ಬಳಿಕ ವಾಹನ ಚಾಲನೆ ನಿಷೇಧಿಸಿರುವುದೂ ಇದೇ ಕಾರಣಕ್ಕೆ. ನಿಮ್ಮ ಮತ್ತು ನಿಮ್ಮ ಮನೆಯವರ (ಮತ್ತು ನಿಮ್ಮ ಕಾರಿಗೆ ಅಡ್ಡಬರುವವರ) ಪ್ರಾಣ ಉಳಿಸಲು ರಾತ್ರಿ ಮದ್ಯ ಸೇವಿಸಲೇ ಬೇಡಿ, ಇದಕ್ಕೂ ಉತ್ತಮವೆಂದರೆ ಮದ್ಯವನ್ನೇ ಸೇವಿಸದಿರಿ.

ಸೋಡಾ

ಸೋಡಾ

ಪ್ರಾಥಮಿಕ ಶಾಲೆಯ ಪಾಠವೊಂದನ್ನು ಕೊಂಚ ಅವಲೋಕನ ಮಾಡೋಣ. " ನಾವು ಉಸಿರಿನ ಮೂಲಕ ಆಮ್ಲಜನಕವನ್ನು ಒಳಗೆಳೆದುಕೊಂಡು ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹೊರಬಿಡುತ್ತೇವೆ".ಇದು ಪಾಠವೊಂದರ ವಾಕ್ಯ, ಅಪ್ಪಟ ಸತ್ಯ. ಅಂದರೆ ಇಂಗಾಲದ ಡೈ ಆಕ್ಸೈಡ್ ನಮಗೆ ಅಗತ್ಯವಿಲ್ಲದ ಅನಿಲ ಎಂದಾಯ್ತು. ಹಾಗಾದರೆ ಈ ಅನಿಲವನ್ನು ಬಲವಂತವಾಗಿ ನೀರಿನಲ್ಲಿ ಕರಗಿಸಿ ಕುಡಿಸಿದಾಗ ನಾವೇಕೆ ಒಪ್ಪುತ್ತೇವೆ? ಉತ್ತರ ಯಾರಿಗೂ ಗೊತ್ತಿಲ್ಲ. ಆದರೆ ಮಾರುಕಟ್ಟೆಯಲ್ಲಿ ಇದೆ, ಎಲ್ಲರೂ ಸೇವಿಸುತ್ತಾರೆ ಎಂದು ನಾವೂ ಸೇವಿಸುತ್ತಿದ್ದೇವೆ. ಸೋಡಾ ಕುಡಿಯುವುದರಿಂದ, ಅದರಲ್ಲೂ ರಾತ್ರಿ ಕುಡಿಯುವುದರಿಂದ ಅಧಿಕ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸಡ್ ದೇಹಕ್ಕೆ ಲಭ್ಯವಾಗಿ ನರ ಮತ್ತು ಕವಾಟಗಳನ್ನು ಹಾನಿಗೊಳಿಸುತ್ತದೆ. ಆದ್ದರಿಂದ ರಾತ್ರಿ ಹೊತ್ತು ಸೋಡಾ ಬೇಡವೇ ಬೇಡ.

ಸಂಸ್ಕರಿಸಿದ ಚೀಸ್

ಸಂಸ್ಕರಿಸಿದ ಚೀಸ್

ಮನೆಯಲ್ಲಿಯೇ ತಯಾರಿಸಿದ ಬೆಣ್ಣೆ ಆರೋಗ್ಯಕ್ಕೆ ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸಂಸ್ಕರಿಸಿದ ಚೀಸ್ ನಲ್ಲಿ ಹಲವು ರಾಸಾಯನಿಕಗಳನ್ನು ಸೇರಿಸಲಾಗಿದೆ. ಇದು ದೇಹದಲ್ಲಿ ಅಧಿಕ ಪ್ರಮಾಣದ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ. ಅದರಲ್ಲೂ ರಾತ್ರಿ ಹೊತ್ತು ಸೇವಿಸಿದಾಗ ದೇಹಕ್ಕೆ ಹೆಚ್ಚಿನ ಕೊಬ್ಬು ಲಭ್ಯವಾಗುತ್ತದೆ ಮತ್ತು ದೈಹಿಕ ಚಟುವಟಿಕೆ ಇಲ್ಲದಿರುವುದರಿಂದ ಇದು ಕರಗದೇ ಸಂಗ್ರಹವಾಗುತ್ತದೆ. ಇದರಿಂದ ತೂಕ ಶೀಘ್ರವಾಗಿ ಏರುತ್ತದೆ. ಸ್ಥೂಲಕಾಯ ಹೆಚ್ಚುವ ಮೂಲಕ ಎದುರಾಗಬಹುದಾದ ಎಲ್ಲಾ ತೊಂದರೆಗಳಿಗೂ ನಾವೇ ಬಾಗಿಲು ತೆರೆದು ರತ್ನಗಂಬಳಿ ಹಾಸಿ ಚಾಮರ ಬೀಸಿ ಆಹ್ವಾನಿಸಿದಂತಾಗುತ್ತದೆ.

ಕಾಫಿ

ಕಾಫಿ

ಕಾಫಿ ಬೆಳಿಗ್ಗೆ ಕುಡಿದಾಗ ಎಷ್ಟು ಆರೋಗ್ಯಕರವೋ, ರಾತ್ರಿ ಕುಡಿದಾಗ ಅಷ್ಟೇ ಅನಾರೋಗ್ಯಕರವಾಗಿದೆ. ಏಕೆಂದರೆ ಕಾಫಿಯಲ್ಲಿರುವ ಕೆಫೀನ್ ರಕ್ತದಲ್ಲಿ ಬೆರೆತು ಹಲವು ತೊಂದರೆಗಳಿಗೆ ಆಹ್ವಾನ ನೀಡುತ್ತದೆ.

ಎಣ್ಣೆ ಮತ್ತು ಎಣ್ಣೆಯಲ್ಲಿ ಕರಿದ ತಿಂಡಿಗಳು

ಎಣ್ಣೆ ಮತ್ತು ಎಣ್ಣೆಯಲ್ಲಿ ಕರಿದ ತಿಂಡಿಗಳು

ನಾವು ನಂಬಿಕೊಂಡು ಬಂದ ಪೂರ್ವಾಗ್ರಹದಂತೆ ಉತ್ತಮ ರುಚಿಗೆ ಹೆಚ್ಚು ಎಣ್ಣೆ ಹಾಕಿದ ತಿಂಡಿಗಳು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲುದು. ಏಕೆಂದರೆ ಹೆಚ್ಚಿನ ಎಣ್ಣೆ ಜಿಡ್ಡು ಇರುವ ಆಹಾರಗಳ ಮೂಲಕ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚುತ್ತದೆ. ಇದರಿಂದಾಗಿ ಆಹಾರ ಪೂರ್ಣವಾಗಿ ಜೀರ್ಣವಾಗದೇ ಪರೋಕ್ಷವಾಗಿ ವಿವಿಧ ತೊಂದರೆಗಳನ್ನು ಎದುರಿಸಬೇಕಾಗಬಹುದು.

 ಮೆಕ್ಸಿಕನ್ ಅಥವಾ ಥಾಯ್ಲಾಂಡಿನ ಆಹಾರಗಳು

ಮೆಕ್ಸಿಕನ್ ಅಥವಾ ಥಾಯ್ಲಾಂಡಿನ ಆಹಾರಗಳು

ರುಚಿಯಲ್ಲಿ ಅದ್ವಿತೀಯವಾಗಿರುವ ಈ ತಿನಿಸುಗಳು ಆರೋಗ್ಯವನ್ನು ಕೆಡಿಸುವಲ್ಲಿಯೂ ಅದ್ವಿತೀಯವಾಗಿವೆ. ಈ ಆಹಾರಗಳಲ್ಲಿ ಪ್ರಮುಖವಾಗಿ ಅಜಿನೊಮೋಟೋ (monosodium glutamate) ಎಂಬ ರಾಸಾಯನಿಕವಿದ್ದು ಆರೋಗ್ಯಕ್ಕೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಲ್ಲದೇ ಈ ಆಹಾರಗಳಲ್ಲಿ ರುಚಿಗಾಗಿ ಇನ್ನೂ ಹಲವು ರಾಸಾಯನಿಕಗಳನ್ನು ಸೇರಿಸಲಾಗಿದ್ದು ಆರೋಗ್ಯಕ್ಕೆ ಮಾರಕವಾಗಿದೆ. ಇಂದು ಮಾರುಕಟ್ಟೆಯಲ್ಲಿ ಸಿಗುವ ಪೊಟಾಟೋ ಚಿಪ್ಸ್ ನಲ್ಲಿಯೂ ಈ ಅಜಿನೋಮೋಟೋ ಇದೆ. ಆದರೆ ಇದರ ಮಾರಾಟಗಾರರು ಈ ಪ್ರಮಾಣ ಕಡಿಮೆ ಇದೆ ಎನ್ನುತ್ತಾರೆ. ಅಂದರೆ ನಿಮಗೆ ದೊಡ್ಡ ಕತ್ತಿಯಿಂದ ಗಾಯ ಮಾಡುತ್ತಿಲ್ಲ, ಚಿಕ್ಕ ಕತ್ತಿಯಿಂದ ಮಾತ್ರ ಗಾಯ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಇದು ನಿಮಗೆ ಸಲ್ಲುವುದೇ ಯೋಚಿಸಿ.

ಪಿಜ್ಜಾದಂತಹ ಸಿದ್ಧ ಆಹಾರಗಳು

ಪಿಜ್ಜಾದಂತಹ ಸಿದ್ಧ ಆಹಾರಗಳು

ಅಮೇರಿಕಾದಿಂದ ಆಗಮಿಸಿದ ಬಹುರಾಷ್ಟ್ರೀಯ ಸಂಸ್ಥೆಗಳು ಭಾರತದ ಜನತೆಯನ್ನು ಆಕರ್ಷಿಸಿ ತಮ್ಮ ಬೊಕ್ಕಸ ತುಂಬಿಸಿಕೊಳ್ಳಲು ಉಪಯೋಗಿಸುವ ಗಾಳದಲ್ಲಿ ಪಿಜ್ಜಾ ಸಹಾ ಒಂದು. ನೋಡಲು ತುಂಬಾ ಸುಂದರವಾಗಿರುವ ಈ ವೃತ್ತಾಕಾರದ ತಿಂಡಿ ರಾತ್ರಿ ಹೊತ್ತು ತಿಂದ ಬಳಿಕ ಹಲವು ತೊಂದರೆಗಳಿಗೆ ಆಹ್ವಾನ ನೀಡುತ್ತದೆ. ಪಿಜ್ಜಾ ಸಹಿತ ಇನ್ನೂ ಹಲವು ಸಿದ್ದ ಆಹಾರಗಳು ರಾತ್ರಿ ಸೇವಿಸಿದ ಬಳಿಕ ಹಲವು ಅಡ್ಡಪರಿಣಾಮಗಳನ್ನು ಉಂಟುಮಾಡುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವಿರಾದರೆ ಈ ಸಿದ್ದ ಆಹಾರಗಳಿಗೆ ಶುಭವಿದಾಯ ತಿಳಿಸಿ.

English summary

12 Worst Foods Not To Eat At Night

Growing health concerns has made people more aware about their food habits. People are looking into the food habits that are good or bad for them during any part of the day. They are even taking advice of the doctors and dietitians who have an authority about the best food habits.
Story first published: Wednesday, April 29, 2015, 17:13 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more