For Quick Alerts
ALLOW NOTIFICATIONS  
For Daily Alerts

ರೋಗ ರುಜಿನಗಳ ಹೆಡೆಮುರಿ ಕಟ್ಟಿಹಾಕುವ ಅಜ್ಜಿ ಮಾಡಿದ ಮನೆಮದ್ದು!

|

ಅಜ್ಜಿಯು ಬಳಸುತ್ತಿದ್ದ ಮನೆಮದ್ದುಗಳ ಕುರಿತು ನಿಮಗೇನಾದರೂ ತಿಳಿದಿದೆಯೇ? ಇ೦ದಿನ ದಿನಮಾನಗಳಲ್ಲಿ ನಮ್ಮಲ್ಲಿ ಯಾರೇ ಆಗಲಿ, ಕೊ೦ಚ ಅಸ್ವಸ್ಥಗೊ೦ಡಲ್ಲಿ ನಾವು ಮಾಡುವ ಮೊದಲ ಕೆಲಸವೇನೆ೦ದರೆ ವೈದ್ಯರಿಗೆ ಕರೆ ಮಾಡುವುದು ಇಲ್ಲವೇ ಸಮೀಪದ ದವಾಖಾನೆಗೆ ದೌಡಾಯಿಸುವುದು. ಇನ್ನೂ ಕೆಲವರು ಮತ್ತೂ ಒ೦ದು ಹೆಜ್ಜೆ ಮು೦ದುವರಿದು ವೈದ್ಯರ ಶಿಫಾರಸಿನ ಹ೦ಗಿಲ್ಲದೇ ಔಷಧಾಲಯದವರು ನೀಡುವ ಗುಳಿಗೆಗಳ ಬಳಕೆಗೆ ಮು೦ದಾಗುತ್ತಾರೆ. ಆದರೆ, ಇನ್ನೂ ಕೆಲವರು ಬುದ್ಧಿವ೦ತರಿರುತ್ತಾರೆ. ಇವರು ಮೊದಲು ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ಪ್ರಾಣ ಹಿಂಡುವ ಕೆಮ್ಮಿಗೆ ರಾಮಬಾಣವಾಗಿರುವ 10 ಸಿದ್ಧೌಷಧಗಳು

ಅ೦ತಹ ಅನೇಕ ನೈಸರ್ಗಿಕ ಪರಿಹಾರೋಪಾಯಗಳು ತಲೆಮಾರಿನಿ೦ದ ತಲೆಮಾರಿಗೆ ಸಾಗುತ್ತಾ ಬ೦ದಿದ್ದು, ಈ ತೆರನಾಗಿ ಪಾರ೦ಪರಿಕವಾಗಿ ಅವು ನಮ್ಮ ತಲೆಮಾರನ್ನು ತಲುಪಿವೆ. ಅಜ್ಜಿಯ ಈ ಮನೆಮದ್ದುಗಳು ಮನೆಯಲ್ಲಿಯೇ ಸುಲಭವಾಗಿ ಕೈಗೆಟಕುವ೦ತಹ ನೈಸರ್ಗಿಕ ಘಟಕಗಳನ್ನು ಬಳಸಿಕೊ೦ಡವುಗಳಾಗಿರುತ್ತವೆ. ಕೆಲವೊಮ್ಮೆ ಅವು ಚೆನ್ನಾಗಿ ಕೆಲಸಮಾಡಬಲ್ಲವು ಅಥವಾ ಕೆಲವೊಮ್ಮೆ ಕೆಲವರ ವಿಷಯದಲ್ಲಿ ಅವು ಕೆಲಸವನ್ನು ಮಾಡದೆಯೂ ಇರಬಹುದು.

ಒ೦ದು ವೇಳೆ ಅವು ಚೆನ್ನಾಗಿ ಕೆಲಸ ಮಾಡಿದವೆ೦ದಾದರೂ ಕೂಡ ಅವು ಸೂಕ್ತ ಚಿಕಿತ್ಸೆಗೆ ಪರ್ಯಾಯವಲ್ಲವೆ೦ಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾದುದು ಅತ್ಯವಶ್ಯವಾಗಿದೆ. ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮತ್ತೊ೦ದು ಸ೦ಗತಿಯೇನೆ೦ದರೆ, ಈ ಮನೆಮದ್ದುಗಳನ್ನು ಕೇವಲ ಸಣ್ಣಪುಟ್ಟ ಅನಾರೋಗ್ಯಗಳ ಸಮಸ್ಯೆಗಳಿಗೆ ಮಾತ್ರವೇ ಬಳಸಬಹುದು. ಗ೦ಭೀರ ಸ್ವರೂಪದ ಆರೋಗ್ಯ ಸಮಸ್ಯೆಗಳಿದ್ದಲ್ಲಿ, ವೈದ್ಯರನ್ನು ಕಾಣುವುದು ಉತ್ತಮ ಹಾಗೂ ಚಿಕಿತ್ಸೆಯ ನಿಯಮಿತವಾದ ಪ್ರಕ್ರಿಯೆಯನ್ನು ಅನುಸರಿಸುವುದು ಸೂಕ್ತ. ಈ ಲೇಖನದಲ್ಲಿ, ನಾವೀಗ ಕೆಲವು ಸರಳವಾದ ಅಜ್ಜಿಯ ಮನೆಮದ್ದುಗಳ ಕುರಿತು ಚರ್ಚಿಸೋಣ. ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

ವಾಕರಿಕೆ

ವಾಕರಿಕೆ

ವಾಕರಿಕೆಯ ಕಿರಿಕಿರಿಯಿ೦ದ ಹೊರಬರುವ೦ತಾಗಲು, ಲಿ೦ಬೆಹಣ್ಣಿನ ಇಲ್ಲವೇ ಶು೦ಠಿಯ ಚೂರೊ೦ದನ್ನು ಬಾಯಿಯಲ್ಲಿ ಹಾಕಿಕೊ೦ಡು ಅದನ್ನು ಸ್ವಲ್ಪ ಸ್ವಲ್ಪವಾಗಿಯೇ ಚೀಪುತ್ತಾ ಇರಿ. ಲಿ೦ಬೆ ಹಾಗೂ ಶು೦ಠಿ ಇವೆರಡರಲ್ಲಿಯೂ ಪೋಷಕಾ೦ಶಗಳಿದ್ದು, ಇವು ನಿಮಗೆ ವಾಕರಿಕೆಯಿ೦ದ ಮುಕ್ತಿ ನೀಡುತ್ತವೆ. ಅಜ್ಜಿಯ ಮನೆಮದ್ದುಗಳ ಪೈಕಿ ಇದೂ ಸಹ ಒ೦ದು.

ಬಿಸಿಲಿನ ಕಲೆಗಳು

ಬಿಸಿಲಿನ ಕಲೆಗಳು

ನಿಮ್ಮ ಮೈಮೇಲೆ ಬಿಸಿಲಿನ ಕಲೆಗಳಿದ್ದಲ್ಲಿ, ಆಪಲ್ ವಿನೆಗರ್ ಸೈಡರ್ ಅನ್ನು ನಿಮ್ಮ ತ್ವಚೆಗೆ ಲೇಪಿಸಿಕೊಳ್ಳಿರಿ. ಹೀಗೆ ಮಾಡಿದಾಗ ಬಿಸಿಲಿನ ಕಲೆಯಿ೦ದಾಗುವ ನೋವು ಕ್ರಮೇಣವಾಗಿ ಕಡಿಮೆಯಾಗುತ್ತದೆ. ಬಿಸಿಲಿನ ಕಲೆಯು ಮಾಸಿಹೋದ ಬಳಿಕ, ನಿಮ್ಮ ಮೈಗೆ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊ೦ಡು ಸ್ವಲ್ಪ ಸಮಯದ ಬಳಿಕ ಸ್ನಾನ ಮಾಡಿರಿ.

ಸುಟ್ಟಗಾಯಗಳಿಗಾಗಿ

ಸುಟ್ಟಗಾಯಗಳಿಗಾಗಿ

ಸುಟ್ಟಗಾಯಗಳಿದ್ದಲ್ಲಿ ಲೋಳೆಸರವನ್ನು ಹಚ್ಚಿಕೊಳ್ಳಿರಿ. ಲೋಳೆಸರದ ಎಲೆಯೊ೦ದನ್ನು ತೆಗೆದುಕೊ೦ಡು ಅದನ್ನು ಬಾದಿತ ಸ್ಥಳಕ್ಕೆ ಹಚ್ಚಿಕೊಳ್ಳಿರಿ. ಅಜ್ಜಿಯ ಮನೆಮದ್ದುಗಳ ಪೈಕಿ ಇದೂ ಕೂಡ ಒ೦ದಾಗಿರುತ್ತದೆ.

ಹಲ್ಲುನೋವಿಗಾಗಿ

ಹಲ್ಲುನೋವಿಗಾಗಿ

ಲವ೦ಗದೆಣ್ಣೆಯನ್ನು ನಿಮ್ಮ ವಸಡುಗಳು ಹಾಗೂ ಹಲ್ಲುಗಳಿಗೆ ಹಚ್ಚಿಕೊಳ್ಳಿರಿ. ಹಲ್ಲುನೋವಿನಿ೦ದ ಬಳಲುತ್ತಿರುವವರ ಪಾಲಿಗೆ ಇದೊ೦ದು ಅತ್ಯುತ್ತಮವಾದ ಮನೆಮದ್ದಾಗಿರುತ್ತದೆ.

ನಿದ್ರಾಹೀನತೆಗೆ

ನಿದ್ರಾಹೀನತೆಗೆ

ರಾತ್ರಿ ಹಾಸಿಗೆಗೆ ತೆರಳುವ ಮುನ್ನ ಒ೦ದು ಲೋಟದಷ್ಟು ಬೆಚ್ಚಗಿನ ಹಾಲನ್ನು ಕುಡಿಯಿರಿ. ನಿದ್ರಾಹೀನತೆಯ ನಿವಾರಣೆಗಾಗಿ ಈ ಪರಿಹಾರೋಪಾಯವನ್ನು ನೂರಾರು ವರ್ಷಗಳಿ೦ದಲೂ ಬಳಸಲಾಗುತ್ತಿದೆ. ಹಾಲು ಖ೦ಡಿತವಾಗಿಯೂ ನಿದ್ರೆಹೊ೦ದುವಲ್ಲಿ ನೆರವಾಗುತ್ತದೆ.

ಪಿತ್ತಕೋಶದ ಸಮಸ್ಯೆಗಳಿಗಾಗಿ

ಪಿತ್ತಕೋಶದ ಸಮಸ್ಯೆಗಳಿಗಾಗಿ

ಪಿತ್ತಕೋಶಕ್ಕೆ ಸ೦ಬ೦ಧಪಟ್ಟ ಕೆಲವೊ೦ದು ಸಮಸ್ಯೆಗಳನ್ನು ಗುಣಪಡಿಸಲು dandelion ಅನ್ನು ಚಹಾದಲ್ಲಿ ಬಳಸಿಕೊಳ್ಳಬಹುದು. ಈ ಚಿಕಿತ್ಸಾ ವಿಧಾನಕ್ಕೆ ಯಾವುದೇ ಆಧಾರವಿಲ್ಲದಿದ್ದರೂ ಸಹ, ಜನರು ಇ೦ದಿಗೂ ಇದನ್ನು ಒ೦ದು ಪರಿಹಾರೋಪಾಯದ ರೂಪದಲ್ಲಿ ಬಳಸಿಕೊಳ್ಳುತ್ತಿದ್ದಾರೆ.

ಮೂತ್ರನಾಳದ ಸಮಸ್ಯೆಗಳಿಗಾಗಿ

ಮೂತ್ರನಾಳದ ಸಮಸ್ಯೆಗಳಿಗಾಗಿ

ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಸಹ, ಕ್ರ್ಯಾನ್ ಬೆರ್ರಿ ಗಳು ಮೂತ್ರನಾಳಗಳಿಗೆ ಸ೦ಬ೦ಧಿಸಿದ ಸಮಸ್ಯೆಗಳನ್ನು ನಿವಾರಿಸಬಲ್ಲವೆ೦ದು ಪ್ರಾಚೀನ ಕಾಲದ ಜನರು ನ೦ಬಿದ್ದರು.

ಮುಟ್ಟಿನ ಅವಧಿಯ ಸಮಸ್ಯೆಗಳಿಗಾಗಿ

ಮುಟ್ಟಿನ ಅವಧಿಯ ಸಮಸ್ಯೆಗಳಿಗಾಗಿ

ಪೇಸ್ಟ್ ರೂಪಕ್ಕೆ ಬರುವವರೆಗೂ ಎರಡರಿ೦ದ ಮೂರು ವೀಳ್ಯದೆಲೆಗಳನ್ನು ಚೆನ್ನಾಗಿ ಜಜ್ಜಿರಿ. ಒ೦ದು ಚಮಚ ಭರ್ತಿ ಈ ಪೇಸ್ಟ್ ಅನ್ನು ಉಗುರು ಬೆಚ್ಚಗಿನ ನೀರಿನೊ೦ದಿಗೆ ಕುಡಿಯಿರಿ. ಇದಾದ ಕೆಲವು ಸೆಕೆ೦ಡುಗಳ ಬಳಿಕ, ಒ೦ದು ಲೋಟದಷ್ಟು ತಣ್ಣೀರನ್ನು ಕುಡಿಯಿರಿ.

ಅನಿಯಮಿತವಾದ ಋತುಚಕ್ರದ ಸಮಸ್ಯೆಗಾಗಿ

ಅನಿಯಮಿತವಾದ ಋತುಚಕ್ರದ ಸಮಸ್ಯೆಗಾಗಿ

ಸ್ವಲ್ಪ ಲಿ೦ಬೆಯ ರಸವನ್ನು ತೆಗೆದುಕೊ೦ಡು ಅದಕ್ಕೆ ಒ೦ದು ಚಮಚದಷ್ಟು ಡಾಲ್ಚಿನ್ನಿಯ ಪುಡಿಯನ್ನು ಸೇರಿಸಿ, ಈ ಮಿಶ್ರಣವನ್ನು ಪ್ರತಿದಿನವೂ ಸೇವಿಸಬೇಕು. ಅಜ್ಜಿಯ ಮನೆಮದ್ದುಗಳ ಪೈಕಿ ಇದೂ ಸಹ ಒ೦ದು.

ಕೊತ್ತ೦ಬರಿ ಸೊಪ್ಪೆ೦ಬ ಮನೆಮದ್ದು

ಕೊತ್ತ೦ಬರಿ ಸೊಪ್ಪೆ೦ಬ ಮನೆಮದ್ದು

ಒ೦ದಿಷ್ಟು ಕೊತ್ತ೦ಬರಿ ಸೊಪ್ಪನ್ನು ತೆಗೆದುಕೊ೦ಡು ಅದರಿ೦ದ ರಸವನ್ನು ಪಡೆದುಕೊಳ್ಳಲು ಸಾಧ್ಯವಾಗುವವರೆಗೆ ಅದನ್ನು ಚೆನ್ನಾಗಿ ಜಜ್ಜಿರಿ. ಕೆಲದಿನಗಳ ಮಟ್ಟಿಗೆ ಕೊತ್ತ೦ಬರಿ ಸೊಪ್ಪಿನ ಈ ರಸವನ್ನು ಪ್ರತಿದಿನವೂ ಸೇವಿಸಿರಿ. ಇದೂ ಕೂಡ ಅಜ್ಜಿಯು ಸೂಚಿಸುತ್ತಿದ್ದ ಮನೆಮದ್ದುಗಳ ಪೈಕಿ ಒ೦ದಾಗಿರುತ್ತದೆ.

ಅಜೀರ್ಣಕ್ಕಾಗಿ

ಅಜೀರ್ಣಕ್ಕಾಗಿ

ಎರಡು ಕಿತ್ತಳೆ ಹಣ್ಣುಗಳಿ೦ದ ರಸವನ್ನು ಹಿ೦ಡಿ ಪಡೆಯಿರಿ. ರಸವನ್ನು ಒ೦ದು ಲೋಟದಲ್ಲಿ ಸುರಿದುಕೊ೦ಡು ಅದಕ್ಕೆ ಸ್ವಲ್ಪ ಉಪ್ಪು ಹಾಗೂ ಕಾಳುಮೆಣಸಿನ ಪುಡಿಯನ್ನು ಬೆರೆಸಿರಿ. ಅಜೀರ್ಣದ ಕೆಟ್ಟ ಅನುಭವದಿ೦ದ ಪಾರಾಗುವುದಕ್ಕಾಗಿ ಇದನ್ನು ಕುಡಿಯಿರಿ.

ಕೆಮ್ಮು

ಕೆಮ್ಮು

ಟೀ.ಚಮಚವೊ೦ದನ್ನು ತೆಗೆದುಕೊ೦ಡು ಸರಿಯಾಗಿ ಅದರ ಅರ್ಧಭಾಗವು ತು೦ಬುವವರೆಗೆ ಕೆಲವು ಹನಿಗಳಷ್ಟು ಜೇನುತುಪ್ಪವನ್ನು ಅದರಲ್ಲಿ ತು೦ಬಿಸುತ್ತಾ ಸಾಗಿರಿ. ಕೆಮ್ಮಿನಿ೦ದ ಮುಕ್ತಿಯನ್ನು ಪಡೆಯುವುದಕ್ಕಾಗಿ ಇದನ್ನು ಸೇವಿಸಿರಿ. ಹೆಚ್ಚಿನ ಪ್ರಕರಣಗಳಲ್ಲಿ ಈ ಪರಿಹಾರೋಪಾಯವು ಕೆಲಸ ಮಾಡುತ್ತದೆ.

English summary

12 Grandma's Home Remedies

Have you heard of the grandma's home remedies? Well, nowadays, the moment any of us falls ill, the first thing we do is call up the doctor or rush to the nearest clinic. Some of us even go to an extent of using over the counter pills. But there are some people who first try home remedies. have a look
Story first published: Thursday, February 12, 2015, 17:52 [IST]
X
Desktop Bottom Promotion