For Quick Alerts
ALLOW NOTIFICATIONS  
For Daily Alerts

ಕತ್ತು ನೋವಿಗೆ ಯೋಗಾಭ್ಯಾಸ ಪರಿಹಾರಕೊಡುತ್ತದೆ

By Viswanath S
|

ನಮ್ಮ ಶರೀರದಲ್ಲಿ ಕತ್ತು ಒಂದು ಮುಖ್ಯವಾದ ಭಾಗವಾಗಿದ್ದು, ಆ ಭಾಗವನ್ನು ಪದೇ ಪದೇ ಉಪಯೋಗಿಸುವುದರಿಂದ ಬಹಳಷ್ಟು ಒತ್ತಡ ಮತ್ತು ಕಿರುಗಾಯಗಳುಂಟಾಗುವುದು. ಇದನ್ನು ನಾವು ಸಾಮಾನ್ಯವಾಗಿ ಗಮನಿಸದೇ ಕೂಡ ಇರಬಹುದು. ಕತ್ತಿನ ಹಿಂದೆ ಅಥವ ಹಿಂಭಾಗದ ಕುತ್ತಿಗೆ ನೋವು ಸಾಮಾನ್ಯವಾಗಿ ಕಾಣಿಸುವ ನೋವು. ಈ ಭಾಗವು ತಲೆಯ ಬೆಂಬಲಕ್ಕೆ ಮತ್ತು ಚಲನೆಗಳಿಗೆ ಹೊಣೆಯಾಗಿದೆ.

ಕತ್ತಿನ ಭಾಗವು ಕ್ಲಿಷ್ಟಕರವಾದ ಜೈವಿಕ ಯಂತ್ರ ಶಾಸ್ತ್ರಗಳನ್ನೊಳಗೊಂಡಿದೆ (Biomechanics). ಅದು ತಲೆಗೆ ಬೆಂಬಲಕೊಡುತ್ತದೆ, ತಲೆಯನ್ನು ವಿವಿಧ ಸಮತಲದಲ್ಲಿ ಚಲಿಸಲು ಅವಕಾಶಮಾಡುತ್ತದೆ. ಹಾಗೂ ಕತ್ತಿನ ಮೂಲಕ ಬೆನ್ನು ಹುರಿ, ಬೆನ್ನು ನರಗಳು ಮೆದುಳಿನಿಂದ ಪ್ರಷ್ಠಭಾಗಕ್ಕೆ (Lumbosacral region) ಹಾದುಹೋಗುವುವು.

Yoga Poses to Treat Neck Pain

ಈ ಪ್ರಷ್ಠಭಾಗದಲ್ಲಿ ಪೊರೆಯ ರಕ್ಷಣೆಯಲ್ಲಿರುವ ಬೆನ್ನೆಲುಬಿನ ನಾಳಗಳು, ಗರ್ಭಕಂಠದ (Cervical), ಪಕ್ಕೆಗೂಡುಗಳ (Thoracic), ಸೊಂಟದ ಮತ್ತು ಮುಖ್ಯವಾದ (Sacral) ನರಗಳು ಇರುತ್ತವೆ.

ಹೊಳೆಯುವ ತ್ವಚೆಗಾಗಿ 9 ಯೋಗಾಸನಗಳು

ಕತ್ತಿನ ಹಿಂಬಾಗದಲ್ಲಿ ಕಾಣುವ ನೋವಿಗೆ ಕಾರಣಗಳು:

1. ಸರಿಯಲ್ಲದ ಅಥವಾ ಸೊಟ್ಟವಾಗಿ ನಿಲ್ಲುವುದು ಮತ್ತು ಕುಳಿತುಕೊಳ್ಳುವುದು.

2. ಸೊಟ್ಟವಾಗಿ ಅಥವಾ ತಪ್ಪಾಗಿ ಮಲಗುವುದು.

3. ಕತ್ತನ್ನು ಸರಕ್ಕನೆ ಜಗ್ಗುವುದರಿಂದ ಆಗುವ ಗಾಯ.

4. ತೀವ್ರವಾದ ಗಾಯಗಳು.

5. ತೂಕವಿರುವ ಹೆಲ್ಮೆಟ್ ಧರಿಸಿ ಬೈಕ್ ಓಡಿಸುವಾಗ ಆಗುವ ಧೀರ್ಗಕಾಲದ ಗಾಯಗಳು.

ಸಾಮಾನ್ಯ 9 ಯೋಗ ಮುದ್ರಾಗಳು ಮತ್ತು ಅದರ ಆರೋಗ್ಯಕಾರಿ ಲಾಭಗಳು

6. ಉರಿಯೂತದ (Inflammation) ಪರಿಸ್ಥಿತಿಗಳು.

7. ಸಂಧಿವಾತ (Rheumatoid arthritis)

ಯೋಗಾಭ್ಯಾಸದಿಂದ ಕತ್ತುನೋವಿಗೆ ಪರಿಹಾರಗಳು:

1. ಬಾಲಾಸನ ಅಥವ ಮಗುವಿನ ಆಸನ.

2. ನಟರಾಜ ಆಸನ ಅಥವ ಒಂದು ಕಾಲನ್ನು ಮಡಿಸಿ ಮತ್ತೊಂದು ಕಾಲಿನ ಮೆಲೆ ನಿಲ್ಲುವುದು.

3. ಬಿಟಿಲಾಸನ ಅಥವ ಹಸುವಿನ ಆಸನ.

4. ಮಾರ್ಜಾರ್ಯಾಸನ ಅಥವ ಬೆಕ್ಕು ಮೈಮುರಿಯುವ ಆಸನ.

5. ವಿಪರೀತಕರಣಿ ಆಸನ ಅಥವ ಗೋಡೆಅಂಚಿನ ಸಹಾಯಪಡೆದು ಕಾಲುಗಳನ್ನು ಮೆಲಕ್ಕೆತ್ತಿ ಮಲಗುವುದು.

6. ಉತ್ತಿತ ಅಥವ ವಿಸ್ತೃತ ತ್ರಿಕೋಣ ಆಸನ.

7. ಶವಾಸನ ಅಥವ ಶವದ ಹಾಗೆ ಮಲಗುವ ಆಸನ.

English summary

Yoga Poses to Treat Neck Pain

Neck is the one part of the body that is subjected to a lot of repeated stress and minor injuries which one doesn’t keep a track of. The most common form of neck pain is posterior neck pain or pain in the back of the neck. This region is responsible for the support and movement of the head.
Story first published: Wednesday, July 9, 2014, 14:39 [IST]
X
Desktop Bottom Promotion