For Quick Alerts
ALLOW NOTIFICATIONS  
For Daily Alerts

ಹಸಿವನ್ನು ನಿಯಂತ್ರಿಸುವ 20 ಅತ್ಯುತ್ತಮ ಆಹಾರಗಳು.

By Deepak M
|

ಈಗ ಪ್ರತಿ ವ್ಯಕ್ತಿಗು ಸಹ ಇರುವ ತೂಕವನ್ನು ಕಡಿಮೆ ಮಾಡುವ, ಹೆಚ್ಚು ಮಾಡುವ ಅಥವಾ ಇರುವುದನ್ನೆ ಕಾಪಾಡಿಕೊಂಡು ಹೋಗುವ ಚಿಂತೆ ಇದ್ದೇ ಇರುತ್ತದೆ. ಬಿಡಿ ಇದು ಅಂತಹ ದೊಡ್ಡ ವಿಷಯವಲ್ಲ. ಇದಕ್ಕೆ ಉಪಾಯದಿಂದ ಪರಿಹಾರಗಳನ್ನು ಹುಡುಕಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ:ಆಹಾರ ಸೇವಿಸಿದ ಬಳಿಕವೂ ಹಸಿವಾಗಲು ಕಾರಣಗಳು

ಒಂದಲ್ಲ ಒಂದು ಕಾಲ ಘಟ್ಟದಲ್ಲಿ ನಾವೆಲ್ಲರು ಕಂಡಿದ್ದೆಲ್ಲವನ್ನು ತಿನ್ನುವ ಚಪಲಕ್ಕೆ ಇಳಿದು ಬಿಡುತ್ತೇವೆ. ಇದಕ್ಕೆ ನಮಗೆ ಗೊತ್ತೇ ಆಗದ ಅಥವಾ ವಿವರಿಸಲಾಗದ ಹಸಿವು ಕಾರಣವಿರಬಹುದು. ಇದರ ಪರಿಣಾಮವಾಗಿ ನಾವು ಹೆಚ್ಚು ಕ್ಯಾಲೋರಿ ಇರುವ ಸ್ನ್ಯಾಕ್‍ಗಳನ್ನು ಸೇವಿಸಲು ಆರಂಭಿಸಿ ತೂಕವನ್ನು ಹೆಚ್ಚಿಸಿಕೊಳ್ಳುತ್ತೇವೆ.

ಅದಕ್ಕೆ ಬದಲಾಗಿ ನಾವು ನಿಮಗಾಗಿ ನಿಮ್ಮ ಹೊಟ್ಟೆ ತುಂಬಿಸುವ, ತೂಕವನ್ನು ಹತೋಟಿಯಲ್ಲಿಡುವ ಜೊತೆಗೆ ಆರೋಗ್ಯವನ್ನು ಸಹ ಕಾಪಾಡುವ ಆಹಾರಗಳ ಪಟ್ಟಿಯನ್ನು ನೀಡಿದ್ದೇವೆ, ಓದಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಸಿವು ನೀಗಿಸಲು ಆರೋಗ್ಯಕರ ತಿಂಡಿಗಳು

ಸೇಬುಗಳು

ಸೇಬುಗಳು

ದಿನ ಒಂದು ಸೇಬನ್ನು ತಿನ್ನಿ ವೈಧ್ಯರನ್ನು ದೂರವಿಡಿ ಎಂಬ ನಾಣ್ಣುಡಿಯಿದೆ. ಸೇಬು ವೈಧ್ಯರನ್ನಷ್ಟೇ ಅಲ್ಲ ಹಸಿವನ್ನು ದೂರವಿಡುತ್ತದೆ. ಇದರಲ್ಲಿ ಕರಗುವ ಗುಣವುಳ್ಳ ನಾರಿನಂಶ ಮತ್ತು ಪೆಕ್ಟಿನ್‍ಗಳು ಯಥೇಚ್ಛವಾಗಿರುತ್ತವೆ. ಈ ನಾರುಗಳನ್ನು ಜಗಿಯಲು ಸಮಯ ಬೇಕಾಗುತ್ತದೆ. ಜೊತೆಗೆ ಇದನ್ನು ಜಗಿಯುವ ಸಮಯದಲ್ಲಿ ನಮ್ಮ ಮೆದುಳು ಹೊಟ್ಟೆ ತುಂಬಿದ ಸಂಕೇತವನ್ನು ಸ್ವೀಕರಿಸಿ, ನಾವು ಇನ್ನೂ ತಿನ್ನುವ ಚಪಲಕ್ಕೆ ತಡೆ ಹಾಕುತ್ತದೆ.

ಶುಂಠಿ

ಶುಂಠಿ

ಶುಂಠಿಯು ಹಸಿವನ್ನು ನಿಯಂತ್ರಣದಲ್ಲಿಡುತ್ತದೆ. ಅಂದರೆ ಇದು ನಿಮ್ಮ ತಿನ್ನುವ ಚಪಲವನ್ನು ಕಡಿಮೆ ಮಾಡಿ, ಹಸಿವನ್ನು ನಿಯಂತ್ರಿಸುತ್ತದೆ. ಇದೊಂದು ಉತ್ತೇಜಕವಾಗಿ ಸಹ ವರ್ತಿಸುತ್ತದೆ. ಜೊತೆಗೆ ಇದು ಜೀರ್ಣ ಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸಿ,ರಕ್ತ ಪರಿಚಲನೆಯನ್ನು ಸಕ್ರಿಯಗೊಳಿಸುತ್ತದೆ.

 ಓಟ್ ಬ್ರಾನ್

ಓಟ್ ಬ್ರಾನ್

ಓಟ್ ಬ್ರಾನ್‍ನಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಸ್ಯಾಟಿಯೇಟಿನ್ ನಾರುಗಳು ಇರುತ್ತವೆ. ಇವುಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ ಮತ್ತು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗೆ ಇದು ಹೊಟ್ಟೆ ತುಂಬಿದ ಅನುಭವವನ್ನು ನಮಗೆ ನೀಡುತ್ತದೆ.

ಯೋಗರ್ಟ್

ಯೋಗರ್ಟ್

ಒಂದು ಸಣ್ಣ ಬಟ್ಟಲು ಯೋಗರ್ಟ್‍ನಲ್ಲಿರುವ ಥಿಯಮೈನ್ ನಿಮ್ಮ ಹಸಿವನ್ನು ಹದ್ದುಬಸ್ತಿನಲ್ಲಿಡುವ ಕೆಲಸವನ್ನು ಮಾಡುತ್ತದೆ. ಜೊತೆಗೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಗಳ ವಿರುದ್ಧ ಹೋರಾಡುತ್ತದೆ ಮತ್ತು ತೂಕವನ್ನು ಹತೋಟಿಯಲ್ಲಿಡುತ್ತದೆ.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಗಳು ಹಸಿವನ್ನು ಹೆಚ್ಚು ಮಾಡುವ ಗ್ರೇಲಿನ್ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ಹಾಗಾಗಿ ಇದು ಹಸಿವನ್ನು ಸಹ ಹದ್ದು ಬಸ್ತಿನಲ್ಲಿಡುತ್ತದೆ. ಜೊತೆಗೆ ಮೊಟ್ಟೆಯಲ್ಲಿರುವ ಯಥೇಚ್ಛ ಪ್ರೋಟಿನ್‍ಗಳು ಹಸಿವನ್ನು ದೂರವಿಡುತ್ತವೆ.

ಮಸಾಲೆಗಳು

ಮಸಾಲೆಗಳು

ಮೆಣಸು ನಮ್ಮ ಆಹಾರಕ್ಕೆ ರುಚಿಯನ್ನಷ್ಟೆ ಅಲ್ಲದೆ ಹಸಿವನ್ನು ಹತೋಟಿಯಲ್ಲಿಟ್ಟು ಆರೋಗ್ಯವನ್ನು ಸಹ ನೀಡುತ್ತದೆ.

ಕಾಳುಗಳು

ಕಾಳುಗಳು

ಕಾಳುಗಳು ಮತ್ತು ಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‍ಗಳು ಇರುತ್ತವೆ. ಇವು ಪಿಷ್ಟ ಮತ್ತು ಒಲಿಗೊಸ್ಯಾಕ್ರೈಡ್‍ಗಳನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಮತ್ತು ಜೀರ್ಣಶಕ್ತಿಯನ್ನು ನಿಧಾನಗೊಳಿಸುತ್ತವೆ. ಜೊತೆಗೆ ಪ್ರೋಟಿನ್ ಮತ್ತು ಕಾರ್ಬೋಹೈಡ್ರೇಟ್‍ಗಳೆರಡು ಸೇರಿ ಹೊಟ್ಟೆ ಖಾಲಿಯಾದ ಭಾವ ಬರದಂತೆ ತಡೆಯುತ್ತವೆ. ಈಗಾಗಿ ನಾವು ತಡವಾಗಿ ಊಟ ಮಾಡುತ್ತೇವೆ.

ಅವೊಕ್ಯಾಡೊ

ಅವೊಕ್ಯಾಡೊ

ಅವೊಕ್ಯಾಡೊಗಳಲ್ಲಿ ಕೊಬ್ಬಿನ ಆಮ್ಲಗಳು ಮತ್ತು ನಾರಿನಂಶಗಳು ಯಥೇಚ್ಛವಾಗಿರುತ್ತವೆ. ಈ ಮೋನೊಸ್ಯಾಚುರೇಟೇಡ್ ಕೊಬ್ಬಿನ ಆಮ್ಲಗಳು ಜೀರ್ಣಗೊಳ್ಳಲು ಹೆಚ್ಚಿನ ಅವಧಿಯನ್ನು ತೆಗೆದುಕೊಳ್ಳುತ್ತವೆ. ಈಗಾಗಿ ನಾವು ಮತ್ತೆ ಆಹಾರ ಸೇವಿಸಲು ನಿಧಾನವಾಗುತ್ತದೆ.

ಡಾರ್ಕ್ ಚಾಕೊಲೇಟ್

ಡಾರ್ಕ್ ಚಾಕೊಲೇಟ್

ಶೇ.70% ಡಾರ್ಕ್ ಚಾಕೊಲೇಟಿನ ತುಣುಕುಗಳನ್ನು ಸೇವಿಸುವುದರಿಂದ ನಿಮ್ಮ ಜೀರ್ಣ ಕ್ರಿಯೆಯನ್ನು ನಿಧಾನ ಮಾಡಬಹುದು. ಜೊತೆಗೆ ಇವು ನಿಮಗೆ " ಉತ್ಸಾಹ" ತುಂಬುವ ಹಾರ್ಮೋನುಗಳನ್ನು ಸಕ್ರಿಯಗೊಳಿಸುತ್ತದೆ. ಇನ್ನೇಕೆ ತಡ ಸಂತೃಪ್ತಿ ಮತ್ತು ಸಂತೋಷಕ್ಕಾಗಿ ಡಾರ್ಕ್ ಚಾಕೊಲೇಟ್ ಸೇವಿಸಿ.

 ಸಾಲ್ಮನ್

ಸಾಲ್ಮನ್

ಸಾಲ್ಮನ್ ಮೀನಿನಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಮತ್ತು ಪ್ರೊಟಿನ್‍ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಈ ಪಾಲಿಅನ್‍ಸ್ಯಾಚುರೇಟೆಡ್ ಕೊಬ್ಬಿನ ಆಮ್ಲಗಳು ಹಸಿವನ್ನು ಉದ್ದೀಪಿಸುವ ಹಾರ್ಮೋನುಗಳ ಬದಲಾವಣೆಯನ್ನು ನಿಯಂತ್ರಣದಲ್ಲಿಡುತ್ತವೆ.

ಚ್ಯೂಯಿಂಗ್ ಗಮ್

ಚ್ಯೂಯಿಂಗ್ ಗಮ್

ಚ್ಯೂಯಿಂಗ್ ಗಮ್ ನಿಮ್ಮ ಉಸಿರಿನ ದುರ್ವಾಸನೆಯನ್ನು ತಡೆಯುವುದರ ಜೊತೆಗೆ ನಿಮ್ಮ ಹಸಿವನ್ನು ಸಹ ತಡೆಯುವ ಗುಣಗಳನ್ನು ಹೊಂದಿದೆ. ಜೊತೆಗೆ ಇದು ನಿಮ್ಮ ತೂಕವನ್ನು ಸಹ ಹತೋಟಿಯಲ್ಲಿಡುತ್ತದೆ.

ನಾರಿನ ಬೀಜಗಳು ( ಫ್ಲಾಕ್ಸ್ ಸೀಡ್ಸ್)

ನಾರಿನ ಬೀಜಗಳು ( ಫ್ಲಾಕ್ಸ್ ಸೀಡ್ಸ್)

ನಾರಿನ ಬೀಜಗಳಲ್ಲಿ ಸಮೃದ್ಧವಾದ ನಾರು, ಒಮೆಗಾ - 3 ಕೊಬ್ಬಿನ ಆಮ್ಲಗಳು ಮತ್ತು ಪ್ರೊಟೀನ್‍ಗಳು ಇರುತ್ತವೆ. ಈ ಪುಟ್ಟ ಬೀಜಗಳು ನಮ್ಮ ಹೊಟ್ಟೆಯಲ್ಲಿ ಕಡಿಮೆ ಪ್ರಮಾಣದ ಸ್ಥಳವನ್ನು ಆಕ್ರಮಿಸುತ್ತವೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಹಸಿವನ್ನು ನಿಯಂತ್ರಿಸುತ್ತವೆ.

ಗ್ರೀನ್ ಟೀ

ಗ್ರೀನ್ ಟೀ

ಗ್ರೀನ್ ಟೀಯು ಹಸಿವನ್ನು ಹತೋಟಿಯಲ್ಲಿಡುವ ಜೊತೆಗೆ ಕ್ಯಾಟೇಚೊಲಮೈನ್‍ ಇರುವ ಘಟಕಗಳ ಕಾರ್ಯ ವೈಖರಿಯ ಮೇಲು ಸಹ ಪ್ರಭಾವವನ್ನು ಬೀರುತ್ತದೆ. ಇದರಲ್ಲಿರುವ ಪಾಲಿಫೆನೊಲ್‍ಗಳು ಥರ್ಮೊ ಜೆನೆಸಿಸ್‍ಗಳನ್ನು ವೃದ್ಧಿಸಿ ಕೊಬ್ಬನ್ನು ಕರಗಿಸುತ್ತದೆ.

 ಸೋಯಾ ಮೊಸರು ( ಟೊಪು)

ಸೋಯಾ ಮೊಸರು ( ಟೊಪು)

ಸೋಯಾಬೀನ್ ಹಾಲಿನಿಂದ ತಯಾರಿಸಿದ ಮೊಸರಿನಲ್ಲಿ ಪ್ರೊಟೀನ್, ವಿಟಮಿನ್ ಇ, ಐಸೊಫ್ಲಾವೊನ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಶೂನ್ಯ ಪ್ರಮಾಣದ ಕೊಲೆಸ್ಟ್ರಾಲ್‍ಗಳು ಇರುತ್ತವೆ. ಈ ಎಲ್ಲಾ ಅಂಶಗಳು ಸೇರಿ ನಮ್ಮ ಹಸಿವನ್ನು ಹದ್ದು ಬಸ್ತಿನಲ್ಲಿಡುತ್ತವೆ.

 ಬಾದಾಮಿ

ಬಾದಾಮಿ

ಒಂದೆರಡು ಬಾದಾಮಿ ಬೀಜಗಳು ನಮ್ಮ ಹಸಿವನ್ನು ಹೋಗಲಾಡಿಸುವುದರ ಜೊತೆಗೆ ಅನಾರೋಗ್ಯಕಾರಿ ಸ್ನ್ಯಾಕ್‍ಗಳಿಂದಲು ಸಹ ನಮ್ಮನ್ನು ದೂರವಿಡುತ್ತವೆ.

ಪುದಿನಾ

ಪುದಿನಾ

ಪುದಿನಾ ಎಲೆಗಳು ಹಸಿವನ್ನು ನಿಯಂತ್ರಿಸುವ ರಾಮಬಾಣಗಳು. ಇದನ್ನು ಊಟದಲ್ಲಿ ಅಥವಾ ಟೀ ಮಾಡಿಕೊಂಡು ಸೇವಿಸಿ ಹಸಿವನ್ನು ನಿಯಂತ್ರಿಸಬಹುದು.

 ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳಲ್ಲಿ ನಾರು ಮತ್ತು ನೀರಿನಂಶಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವುಗಳು ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡಿ, ಹಸಿವಾಗುವುದನ್ನು ತಡೆಯುತ್ತವೆ.

 ಚಿಯಾ ಬೀಜಗಳು

ಚಿಯಾ ಬೀಜಗಳು

ಈ ಸಣ್ಣ ಬೀಜಗಳಲ್ಲಿ ಒಮೆಗಾ- 3 ಕೊಬ್ಬಿನ ಆಮ್ಲಗಳು,ಪ್ರೊಟೀನ್ ಮತ್ತು ನಾರು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ಎಲ್ಲಾ ಅಂಶಗಳು ಹಸಿವನ್ನು ಹತೋಟಿಯಲ್ಲಿಡಲು ಸಹಕರಿಸುತ್ತವೆ.

ನೀರು

ನೀರು

ನಿಜ, ಒಂದು ಲೋಟ ನೀರು ನಿಮ್ಮ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಹಾಗಾಗಿ ಬಿಡುವು ಸಿಕ್ಕಾಗಲೆಲ್ಲ ಸ್ವಲ್ಪ ನೀರನ್ನು ಕುಡಿಯುತ್ತ ಇರಿ. ಇದರಿಂದ ನಿಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇರ್ಪಡೆಯಾಗುವುದರ ಜೊತೆಗೆ, ನಿಮ್ಮ ದೇಹದಲ್ಲಿರುವ ಕಲ್ಮಶಗಳು ಹೊರಗೆ ಹೋಗಿ ಆರೋಗ್ಯಯುತವಾಗುತ್ತೀರಿ.

 ಬೀನ್ಸ್

ಬೀನ್ಸ್

ಅವರೆ ಕಾಯಿ, ಅಲಸಂದೆ ಮತ್ತು ಹುರುಳಿಯಂತಹ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರು ಮತ್ತು ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಜೊತೆಗೆ ಇವುಗಳಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಇರುತ್ತವೆ. ಈ ತರಕಾರಿಗಳನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆ ತುಂಬಿದ ಅನುಭವ ಹೊಂದಿ, ಆಹಾರವನ್ನು ಕಡಿಮೆ ಸೇವಿಸುತ್ತೀರಿ.

English summary

Top 20 natural foods to suppress hunger

Trying to lose weight, gain weight or maintain your current weight? It can be a tricky affair with pronounced consequences.
X
Desktop Bottom Promotion