For Quick Alerts
ALLOW NOTIFICATIONS  
For Daily Alerts

ಋತುಚಕ್ರದ ಸಮಯದಲ್ಲಿ ರಾಷಸ್ ತಡೆಯುವ 5 ಟಿಪ್ಸ್

By Poornima Heggade
|

ಋತುಚಕ್ರದ ಅವಧಿ ಅನೇಕ ಮಹಿಳೆಯರಿಗೆ ಬಹಳ ಸೂಕ್ಷ್ಮವಾದ ಸಮಯ. ಋತುಚಕ್ರದ ಸಮಯದಲ್ಲಿ ಮಹಿಳೆಯರಲ್ಲಿ ದೇಹದಲ್ಲಿ ನೋವು, ಅಪಾರ ಹೊಟ್ಟೆ ನೋವು ಮತ್ತು ಹೊಟ್ಟೆಯ ಕೆಳ ಭಾಗಕ್ಕೆ ನೋವು ಕಾಣಿಸಿಕೊಳ್ಳುವುದು ಸಹಜ. ಕೆಲವೊಮ್ಮೆ ಆರ್ದ್ರತೆಯ ಮತ್ತು ಅತಿಯಾದ ರಕ್ತಸ್ರಾವದಿಂದಾಗಿ, ತೊಡೆಗಳು ಮತ್ತು ಯೋನಿ ಪ್ರದೇಶಗಳಲ್ಲಿ ದೈಹಿಕವಾಗಿ ರಾಷಸ್/ ಕೆಂಪು ಗುಳ್ಳೆಗಳು ಉಂಟಾಗುತ್ತವೆ. ಈ ರಾಷಸ್ ಗಳು ಕೆಂಪು ಬಣ್ಣದಲ್ಲಿದ್ದು ಸುತ್ತಲಿನ ಪ್ರದೇಶಗಳಿಗೂ ಹರಡಬಹುದು. ಹಾಗೆಯೇ ಈ ಕೆಂಪು ಗುಳ್ಳೆಗಳ ಕಾರಣದಿಂದ ಸಾಕಷ್ಟು ನೋವು ಕೂಡ ಕಾಣಿಸಿಕೊಳ್ಳಬಹುದು.

ಈ ಕೆಂಪು ಗುಳ್ಳೆಗಳಿಂದಾಗಿ ನವೆ ಕೂಡ ಉಂಟಾಗುತ್ತದೆ. ಇದರಿಂದಾಗಿ ನಿಮಗೆ ಅಹಿತಕರ ಅನುಭವ ಜೊತೆಗೆ ವಿಶ್ರಾಂತಿ ರಹಿತವಾದ ಭಾವನೆ ಉಂಟಾಗುತ್ತದೆ. ಇಂತಹ ಕೆಂಪು ಗುಳ್ಳೆಗಳು (ರಾಷಸ್), ನೀವು ಬಳಸುವ ಪ್ಯಾಡ್ ಉತ್ತಮ ಗುಣಮಟ್ಟದ ಹಾಗೂ ಒಳ್ಳೆಯ ಕಂಪನಿಯದಾಗದಿದ್ದರೂ ಕಾಣಿಸಿಕೊಳ್ಳುತ್ತದೆ. ಮತ್ತು ನೀವು ಒಂದೇ ಬಟ್ಟೆಯನ್ನು ತುಂಬಾ ಸಮಯದವರೆಗೆ ಬಳಸಿದರೂ ಸಹ ರಾಷಸ್ ಉಂಟಾಗುತ್ತದೆ. ಋತುಚಕ್ರ ಮಹಿಳೆಯರಲ್ಲಿ ಪ್ರತಿ ತಿಂಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ. ಈ ಕೆಂಪುಗುಳ್ಳೆಗಳು ಉಂಟಾದಾಗ ಸರಿಯಾದ ಗಮನವಹಿಸದಿದ್ದರೆ ತಿಂಗಳ ಪೂರ್ತಿ ಈ ಸಮಸ್ಯೆಯಿಂದ ನರಳಬೇಕಾಗುತ್ತದೆ! ರಾಷಸ್ ಮುಕ್ತ ಋತುಚಕ್ರಕ್ಕೆ ಇಲ್ಲಿದೆ ಕೆಲವು ಸಲಹೆಗಳು : -

Tips to have a rash-free periods

1. ನಿಯಮಿತ ಸ್ವಚ್ಛತೆ - ನಿಮ್ಮ ಋತುಚಕ್ರ ಸಮಯದಲ್ಲಿ ಉಂಟಾಗುವ ರಾಷಸ್ ಹೋಗಲಾಡಿಸಲು ಉತ್ತಮವಾಗ ಆರೋಗ್ಯಕರ ಸಲಹೆಯೆಂದರೆ, ನಿಯಮಿತವಾಗಿ ಯೋನಿ ಪ್ರದೇಶವನ್ನು ಸ್ವಚ್ಛಗೊಳಿಸುತ್ತಿರುವುದು.ಹಾಗೆಯೇ ಯೋನಿಯ ಸುತ್ತಲಿನ ಭಾಗಗಳನ್ನು ಸಹ ಸ್ವಚ್ಛಗೊಳಿಸುವುದು ಅತ್ಯಂತ ಪ್ರಮುಖವಾದುದು. ಸರಿಯಾಗಿ ನೀರನ್ನು ಬಳಸಿ, ಸಂಪೂರ್ಣ ಭಾಗವನ್ನು ತೊಳೆದು ಸ್ವಚ್ಛಗೊಳಿಸಿ. ಇದರಿಂದ ನೀವು ದದ್ದುಗಳು/ ಕೆಂಪು ಗುಳ್ಳೆಗಳು ಮತ್ತು ಸೋಂಕುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯ ಮತ್ತು ಸೂಕ್ಷ್ಮಜೀವಿಗಳಿಂದ ದೂರವುಳಿಯಲು ಸಾಧ್ಯ. ಯಾವಾಗಲೂ ನಿಮ್ಮ ಋತುಚಕ್ರದ ಅವಧಿಗಳಲ್ಲಿ ನಿಮ್ಮ ಯೋನಿ ಭಾಗಗಳನ್ನು ಸ್ವಚ್ಛವಾಗಿರಿಸಿಕೊಳ್ಳಲು ಆರೋಗ್ಯಕರವಾದ ಕ್ರಮಗಳನ್ನು ತೆಗೆದುಕೊಳ್ಳವುದು ಉಚಿತ.

2. ನಿಯಮಿತವಾಗಿ ಪ್ಯಾಡ್ ಬದಲಾಯಿಸಿ – ನೀವು ನಿಯಮಿತವಾಗಿ ನಿಮ್ಮ ಋತುಚಕ್ರದ ಅವಧಿಗಳಲ್ಲಿ ಬಳಸುತ್ತಿರುವ ಪ್ಯಾಡ್ ಅಥವಾ ಬಟ್ಟೆಯನ್ನು ಬದಲಿಸಿ. ನಿರಂತರವಾಗಿ 8-9 ಗಂಟೆಗಳ ಕಾಲ ಒಂದೇ ಸ್ಯಾನಿಟರಿ ಪ್ಯಾಡ್ ಅಥವಾ ಬಟ್ಟೆಯನ್ನು ಬಳಸಿದರೆ ಅನಾರೋಗ್ಯಕಕ್ಕೆ ಕಾರಣವಾಗುತ್ತದೆ. ಸುದೀರ್ಘ ಅವಧಿಗೆ ಪ್ಯಾಡ್ ಬಳಸಿದರೆ ಸೋಂಕುಗಳು ಅಥವಾ ರಾಷಸ್ ಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಯಾವಾಗಲೂ ಋತುಚಕ್ರದ ಅವಧಿಗಳಲ್ಲಿ ರಾಷಸ್ ನ್ನು ತಪ್ಪಿಸಲು ನಿಮ್ಮ ಸ್ಯಾನಿಟರಿ ಪ್ಯಾಡ್ ಗಳನ್ನು ಸರಿಯಾದ ಸಮಯಕ್ಕೆ ಬದಲಾಯಿಸುವುದು ಅತ್ಯಂತ ಅಗತ್ಯ!

3. ಆಂಟಿಸೆಪ್ಟಿಕ್/ ಸೋಂಕುನಿವಾರಕ ಬಳಸಿ - ರಾಷಸ್ ಗಳನ್ನು ಶಮನಗೊಳಿಸಲು, ಆಂಟಿ ಸೆಪ್ಟಿಕ್ ಕ್ರೀಮ್ ಮತ್ತು ಜೆಲ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಋತುಚಕ್ರ ಸಮಯದ ಯಾವುದೇ ರಾಷಸ್ ನ್ನು ನಿವಾರಿಸಲು ಈ ಕ್ರೀಮ್ ಗಳನ್ನು ಬಳಸಬಹುದು. ನಿಮ್ಮ ಪ್ಯಾಡ್ ಅಥವಾ ಬಟ್ಟೆಯನ್ನು ಬದಲಾಯಿಸುವ ಸಂದರ್ಭದಲ್ಲಿ ಈ ಕ್ರೀಮ್ ಗಳನ್ನು ಅನ್ವಯಿಸಿ. ಯಾವುದೇ ಕ್ರೀಮ್ ಅಥವಾ ಜೆಲ್ ಬಳಸುವುದಕ್ಕಿಂತ ಮೊದಲು ವೈದ್ಯರನ್ನು ಸಂಪರ್ಕಿಸಿ. ಸೂಕ್ಷ್ಮ ಪ್ರದೇಶಗಳಲ್ಲಿ ಕ್ರೀಮ್ ಬಳಸುವಾಗ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಸೂಕ್ಷ್ಮ ಪ್ರದೇಶಗಳಲ್ಲಿ, ಕ್ರೀಮ್ ಅಥವಾ ಜೆಲ್ ಬಳಸುವುದರಿಂದ ಸುಟ್ಟ ಅನುಭವವಾದರೆ ತಕ್ಷಣ ಆ ಪ್ರದೇಶವನ್ನು ತೊಳೆಯಿರಿ. ಮತ್ತು ಮತ್ತೆ ಆ ಕ್ರೀಮ್ ಅಥವಾ ಜೆಲ್ ನ್ನು ಬಳಸಬೇಡಿ.

4. ಉತ್ತಮ ಗುಣಮಟ್ಟದ ಪ್ಯಾಡ್ ಗಳನ್ನು ಬಳಸಿ – ಹಿಂದಿನ ಮಹಿಳೆಯರಿಗೆ ಹೋಲಿಸಿದರೆ ಈಗಿನ ಮಹಿಳೆಯರು ಇಂದಿನ ದಿನಗಳಲ್ಲಿ ಹೆಚ್ಚು ಕಾರ್ಯನಿರತವಾಗಿರುತ್ತಾರೆ. ಆದ್ದರಿಂದ, ಋತುಚಕ್ರದ ಅವಧಿಗಳಲ್ಲಿ ಬಟ್ಟೆ ಅಥವಾ ನ್ಯಾಪ್ ಕಿನ್ ಬಳಸುವುದನ್ನು ನಿಲ್ಲಿಸಿ. ತೊಡೆಯ ಮತ್ತು ಯೋನಿಯ ಇತರ ಪ್ರದೇಶದಲ್ಲಿ ಬಟ್ಟೆ ಉಜ್ಜುವುದರಿಂದ ದದ್ದುಗಳು ಮತ್ತು ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ, ಮೃದು ಮತ್ತು ಲಘುವಾದ ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸಿ. ಉತ್ತಮ ಗುಣಮಟ್ಟದ ಪ್ಯಾಡ್ ನಿಮ್ಮಲ್ಲಿ ಉಂಟಾಗುವ ರಾಷಸನ್ನು ತಡೆಯುತ್ತದೆ.

5. ಪೌಡರ್ ಬಳಸಿ - ಸ್ಯಾನಿಟರಿ ಪ್ಯಾಡ್ ಧರಿಸುವ ಮೊದಲು ಪೌಡರನ್ನು ಬಳಸಿ. ಇದು ಯೋನಿ ಪ್ರದೇಶವನ್ನು ಶುಷ್ಕವಾಗಿಡಲು ಸಹಾಯ ಮಾಡುತ್ತದೆ. ತೊಡೆಯ ಮತ್ತು ಯೋನಿ ಭಾಗದಲ್ಲಿ ಶುಷ್ಕ ಮತ್ತು ಸ್ವಚ್ಛವಾಗಿರಿಸಿಕೊಂಡರೆ ರಾಷಸ್ ಆಗುವುದು ಕಡಿಮೆ. ಕಾಸ್ಮೆಟಿಕ್ ಆಧಾರಿತ ಪೌಡರ್ ಬದಲು ಆಂಟಿ ಸೆಪ್ಟಿಕ್ ಪೌಡರ್ ಬಳಸುವುದು ಉತ್ತಮ. ಪೌಡರನ್ನು ತುಸು ಜಾಸ್ತಿಯೇ ಬಳಸಿ. ನೀವು ಋತುಚಕ್ರದ ಅವಧಿಯಲ್ಲಿ ಕ್ರೀಮ್ ಅಥವಾ ಜೆಲ್ ಮೇಲೆ ಪೌಡರನ್ನು ಬಳಸಬಹುದು.

English summary

Tips to have a rash-free periods

Periods are a very sensitive time for many women. Women have to got through body pain, immense stomach pain and lower abdomen pain. Sometimes due to the wetness and blood flow, there can be physical rashes on the thighs and vaginal areas.
X
Desktop Bottom Promotion