For Quick Alerts
ALLOW NOTIFICATIONS  
For Daily Alerts

ದೇಹದ ಲಿವರ್ ಹಾನಿಯ ಚಿಹ್ನೆಗಳನ್ನು ಪತ್ತೆ ಹಚ್ಚುವುದು ಹೇಗೆ?

|

ದೇಹದ ಅರೋಗ್ಯ ಪ್ರತಿಯೊಬ್ಬರಿಗೂ ಮುಖ್ಯ. ದೇಹದ ಪ್ರತಿಯೊಂದು ಭಾಗಗಳೂ ಕೂಡ ಬಹಳ ಮುಖ್ಯ. ಲಿವರ್(ಪಿತ್ತಜನಕಾಂಗ) ಕೂಡ ದೇಹದ ಬಹು ಮುಖ್ಯ ಅಂಗ. ಲಿವರ್ ಸರಿಯಾಗಿ ಕೆಲಸ ಮಾಡುತ್ತಿರಬೇಕು ಎಂದರೆ ಅದರ ಕಾಳಜಿ ಕೂಡ ಅಷ್ಟೇ ಪ್ರಾಮುಖ್ಯತೆ ಪಡೆಯುತ್ತದೆ. ಅರೋಗ್ಯ ಕಾಪಾಡಲು ಸಾಕಷ್ಟು ಮುಂಜಾಗ್ರತೆ ವಹಿಸಬೇಕಾಗುತ್ತದೆ. ಹಾಗೆ ಲಿವರ್ ಅರೋಗ್ಯ ಕಾಪಾಡಲು ಮಧ್ಯಪಾನ,ಧೂಮಪಾನ ಇವುಗಳಿಂದ ದೂರವಿರುವುದು ತುಂಬಾ ಅಗತ್ಯ.

ಶಂಕುವಿನಾಕೃತಿ, ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿ, ಕಿಬ್ಬೊಟ್ಟೆಯ ಕುಹರದ ಮೇಲ್ಭಾಗದಲ್ಲಿರುವ ಅಂಗಾಂಗವು ಮಾನದ ದೇಹದ ಅತ್ಯಂತ ಪ್ರಾಮುಖ್ಯ ಅಂಗವಾಗಿದೆ. ಲಿವರ್(ಪಿತ್ತಜನಕಾಂಗ) ದೇಹದಲ್ಲಿ ಸುಮಾರು 500 ಕ್ರಿಯೆಗಳನ್ನು ನೆರವೇರಿಸುತ್ತದೆ.

ಪಿತ್ತಜನಕಾಂಗ ದೇಹದ ಅತೀ ಮುಖ್ಯ ಅಂಗವಾಗಿರುವ ಕಾರಣದಿಂದ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕಾಮಾಲೆರೋಗ, ಅಧಿಕ ಕೊಲೆಸ್ಟ್ರಾಲ್, ಪಿತ್ತಜನಕಾಂಗ ಊದಿಕೊಳ್ಳುವುದು ಹಾಗೂ ವೈಫಲ್ಯದಂತಹ ಕೆಲವೊಂದು ಸಮಸ್ಯೆಗಳು ಪಿತ್ತಜನಕಾಂಗಕ್ಕೆ ಆಗಬಹುದು. ಇಂತಹ ರೋಗಗಳು ಅನಾರೋಗ್ಯಕರ ಆಹಾರ ಪದ್ಧತಿ, ಅತಿಯಾದ ಆಲ್ಕೋಹಾಲ್ ಸೇವನೆ ಮತ್ತು ಅತಿಯಾದ ಪಿತ್ತರಸ ಸ್ರವಿಸುವಿಕೆಗೆ ಕಾರಣವಾಗುತ್ತದೆ.

Symptoms of liver damage

ಪಿತ್ತಜನಕಾಂಗದ ರೋಗ ಅಥವಾ ಪಿತ್ತಜನಕಾಂಗಕ್ಕೆ ಹಾನಿಯಾಗಿರುವುದನ್ನು ವೈದ್ಯರು ರೋಗಿಯನ್ನು ದೈಹಿಕವಾಗಿ ಪರೀಕ್ಷಿಸಿದ ಬಳಿಕ ಪತ್ತೆಹಚ್ಚುತ್ತಾರೆ. ಪಿತ್ತಜನಕಾಂಗದ ಕೆಲವೊಂದು ಚಿಹ್ನೆಗಳನ್ನು ಇಲ್ಲಿ ಪರಿಶೀಲಿಸಲಾಗಿದೆ. ಈ ಲೇಖನದಲ್ಲಿ ಪಿತ್ತಜನಕಾಂಗ ಹಾನಿಯಾಗುವುದರಿಂದ ಕಂಡುಬರುವ ಕೆಲವೊಂದು ಚಿಹ್ನೆಗಳನ್ನು ಇಲ್ಲಿ ನೀಡಲಾಗಿದೆ ಮತ್ತು ಇದನ್ನು ಕಡೆಗಣಿಸಬಾರದು. ಈ ಚಿಹ್ನೆಗಳು ಪಿತ್ತಜನಕಾಂಗದ ಕ್ರಿಯೆಯ ವೈಫಲ್ಯದಿಂದ ಕಂಡುಬರುತ್ತದೆ. ಪಿತ್ತಜನಕಾಂಗದ ಹಾನಿಯ ಯಾವುದಾದರು ಚಿಹ್ನೆಗಳು ಕಂಡುಬಂದರೆ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಿ ಪರೀಕ್ಷಿಸಿಕೊಳ್ಳಿ.

ಲಿವರ್ ನ ಆರೋಗ್ಯಕ್ಕಾಗಿ ಸೂಪರ್ ಟಿಪ್ಸ್

ಹಳದಿ
ಪಿತ್ತಜನಕಾಂಗ ಹಾನಿಯಾಗುವ ಅತ್ಯಂತ ಮುಖ್ಯ ಚಿಹ್ನೆಯೆಂದರೆ ಕಣ್ಣುಗಳು, ಚರ್ಮ ಮತ್ತು ಉಗುರು ಹಳದಿ ಬಣ್ಣಕ್ಕೆ ತಿರುಗುವುದು. ಅದರಲ್ಲು ಮೂತ್ರ ಹಳದಿಯಾಗಿರುತ್ತದೆ. ಪಿತ್ತರಸ ಅತಿಯಾಗಿ ಸ್ರವಿಸುವುದರಿಂದ ಹಳದಿ ಬಣ್ಣ ಬರುತ್ತದೆ. ಉರಿಯೂತ, ಪಿತ್ತಜನಕಾಂಗದ ಕೋಶಗಳ ಕ್ರಿಯೆಯಲ್ಲಿ ಅಸಹಜತೆ ಮತ್ತು ಪಿತ್ತರಸ ನಾಳಗಳಲ್ಲಿ ಸಮಸ್ಯೆ ಪಿತ್ತರಸದ ಅತಿಯಾದ ಉತ್ಪಾದನೆಗೆ ಕಾರಣವಾಗುತ್ತದೆ. ನಿಮ್ಮ ದೇಹ, ಕಣ್ಣುಗಳು ಅಥವಾ ಮೂತ್ರದಲ್ಲಿ ಹಳದಿ ಬಣ್ಣ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.

ವಾಕರಿಕೆ
ಪಿತ್ತಜನಕಾಂಗ ಹಾನಿಯಾಗಿರುವ ಮತ್ತೊಂದು ಚಿಹ್ನೆಯೆಂದರೆ ಯಾವಾಗಲೂ ವಾಕರಿಕೆಯ ಭಾವನೆ ಮತ್ತು ವಾಂತಿಯಾಗುವುದು. ಪಿತ್ತಜನಕಾಂಗದ ಹಾನಿಯಿಂದಾಗಿ ಅತಿಯಾದ ಪಿತ್ತರಸ ಸ್ರವಿಸುವುದು ಅಥವಾ ಪಿತ್ತಜನಕಾಂಗದ ವೈಫಲ್ಯದಿಂದಾಗಿ ವಾಕರಿಕೆಯ ಭಾವನೆಯಾಗಬಹುದು. ಈ ವಾಕರಿಕೆ ಮತ್ತು ವಾಂತಿ ಪದೇ ಪದೇ ಆಗುತ್ತಿರುತ್ತದೆ. ಕೆಲವೊಂದು ಸಲ ತುಂಬಾ ಅಪರೂಪದ ಪ್ರಕರಣದಲ್ಲಿ ವಾಂತಿಯೊಂದಿಗೆ ರಕ್ತ ಬರಬಹುದು. ಇಂತಹ ಯಾವುದೇ ಅನಾರೋಗ್ಯ ನಿಮ್ಮನ್ನು ಕಾಡುತ್ತಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಪಿತ್ತಜನಕಾಂಗ ಹಾನಿಯಾಗುವುದು ಗಂಭೀರ ಸಮಸ್ಯೆ ಮತ್ತು ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ಹೊಟ್ಟೆ ಊದುವುದು
ಹೊಟ್ಟೆ ಊದುವುದು ಪಿತ್ತಜನಕಾಂಗ ಹಾನಿಯಾಗಿರುವುದರ ಒಂದು ಚಿಹ್ನೆ. ಇದನ್ನು ಕಡೆಗಣಿಸಬಾರದು. ಪಿತ್ತಜನಕಾಂಗದ ಕ್ರಿಯೆಗೆ ಅಡಚಣೆಯಾಗುವ ಪರಿಣಾಮ ಹೊಟ್ಟೆ ಊದಿಕೊಳ್ಳುತ್ತದೆ. ಹೊಟ್ಟೆ ತುಂಬಾ ಗಡುಸು ಮತ್ತು ಉಬ್ಬರಿಸುತ್ತದೆ. ಪಿತ್ತಜನಕಾಂಗದ ಕ್ರಿಯೆಯಲ್ಲಿ ದೊಡ್ಡ ಮಟ್ಟದ ಅಡಚಣೆಯಾದಾಗ ಇಂತಹ ಚಿಹ್ನೆ ಕಂಡುಬರುತ್ತದೆ. ಈ ಪರಿಸ್ಥಿತಿಯಲ್ಲಿ ರೋಗಿ ಗಂಭೀರ ಸ್ಥಿತಿಯಲ್ಲಿರುವ ಕಾರಣ ಇದನ್ನು ಕಡೆಗಣಿಸಬಾರದು.

ನಿದ್ರಿಸುವುದು
ಪಿತ್ತಜನಕಾಂಗದ ವೈಫಲ್ಯ ಅಥವಾ ಅದರ ಕ್ರಿಯೆಯಲ್ಲಿನ ಅಡಚಣೆಯ ಪರಿಣಾಮ ರೋಗಿಗಳು ನಿದ್ರೆಯಲ್ಲೇ ಇರಬಹುದು. ರೋಗಿಗಳು ಸರಿಯಾಗಿ ಪ್ರತಿಕ್ರಿಯಿಸದಿರಬಹುದು ಹಾಗೂ ಯಾವಾಗಲೂ ಆಲಸ್ಯದಿಂದ ಇರಬಹುದು. ಈ ಚಿಹ್ನೆ ಮತ್ತು ಮೇಲೆ ಹೇಳಿರುವ ಕೆಲವೊಂದು ಚಿಹ್ನೆಗಳು ಪಿತ್ತಜನಕಾಂಗದ ಹಾನಿಯನ್ನು ದೃಢಪಡಿಸುತ್ತದೆ. ಪಿತ್ತಜನಕಾಂಗದ ಈ ಹಾನಿಯನ್ನು ಲಘುವಾಗಿ ಪರಿಗಣಿಸಬೇಡಿ. ಪಿತ್ತಿಜನಕಾಂಗ ಹಾನಿಯಾದ ವ್ಯಕ್ತಿ ಯಾವಾಗಲೂ ನಿದ್ರೆಯಲ್ಲೇ ಇರುತ್ತಾನೆ.

ನೀವು ನಿರ್ಲಕ್ಷಿಸಬಾರದ ಆರು ಲಿವರ್ (ಯಕೃತ್ತು)ಕಾಯಿಲೆಯ ಲಕ್ಷಣಗಳು

ಮಾನಸಿಕ ಅಸ್ವಸ್ಥತೆ
ಪಿತ್ತಜನಕಾಂಗಕ್ಕೆ ಅತಿಯಾದ ಹಾನಿಯಾದಾಗ ಈ ಚಿಹ್ನೆ ಕಂಡುಬರುತ್ತದೆ. ಪಿತ್ತಜನಕಾಂಗದ ಅನಾರೋಗ್ಯದ ಪರಿಣಾಮ ಮೆದುಳಿನ ಕ್ರಿಯೆಯ ಮೇಲಾಗುತ್ತದೆ. ಮೆದುಳು ಕ್ಷಿಪ್ರವಾಗಿ ಪ್ರತಿಕ್ರಿಯಿಸುವುದಿಲ್ಲ ಮತ್ತು ರೋಗಿ ಯಾವಾಗಲೂ ಗೊಂದಲದಲ್ಲಿರುತ್ತಾನೆ. ಇದು ಪಿತ್ತಜನಕಾಂಗದ ಹಾನಿಯ ಒಂದು ಪ್ರಮುಖ ಲಕ್ಷಣ. ಮಾನಸಿಕ ಅಸ್ವಸ್ಥತೆ ಆರಂಭವಾದ ತಕ್ಷಣ ರೋಗಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು. ಈ ಚಿಹ್ನೆ ಕಡೆಗಣಿಸಿದರೆ ರೋಗಿಗೆ ಮಾರಕವಾಗಬಹುದು.

ಕೋಮಾ
ಪಿತ್ತಜನಕಾಂಗ ಹಾನಿಯ ಕೊನೆಯ ಹಾಗೂ ಅತ್ಯಂತ ಕೆಟ್ಟ ಲಕ್ಷಣವೆಂದರೆ ಅದು ಕೋಮಾ. ಮೇಲಿನ ಲಕ್ಷಣಗಳನ್ನು ಕಡೆಗಣಿಸಿದರೆ ಅಥವಾ ನಿರ್ಲಕ್ಷಿಸಿದರೆ ರೋಗಿ ಕೋಮಾಗೆ ಹೋಗಬಹುದು.

English summary

Symptoms of liver damage

Liver is a vital organ which should be cared for. Liver can get infected by diseased like jaundice, high cholesterol, liver enlargement and liver failure. In this article we will go through a few symptoms of liver damage that should not be avoided.
Story first published: Wednesday, June 25, 2014, 15:44 [IST]
X
Desktop Bottom Promotion