For Quick Alerts
ALLOW NOTIFICATIONS  
For Daily Alerts

ಸರಣಿ ಧೂಮಪಾನಿಗಳ ಕೆಲವೊಂದು ಪ್ರಮುಖ ಲಕ್ಷಣಗಳು

|

ಬಹುತೇಕ ಧೂಮಪಾನಿಗಳ ಇತಿಹಾಸವನ್ನು ಬಗೆದು ನೋಡಿದಾಗ, ಅದರ ಮೂಲ ಅವರ ತಾರುಣ್ಯದ ದಿನಗಳಲ್ಲಿ ಹೋಗಿ ನಿಲ್ಲುತ್ತದೆ. ಮೊದ ಮೊದಲು ಸ್ನೇಹಿತರ ಮುಂದೆ ಶೋಕಿಗಾಗಿ ಅಥವಾ ನಾನೇನು ಕಮ್ಮಿ ಅಲ್ಲ ಎಂದು ತೋರಿಸಲು ಆರಂಭವಾಗುವ ಈ ಅಭ್ಯಾಸ ಮುಂದೆ ಬಿಡಲಾರದ ಚಟವಾಗಿ ಅಂಟಿಕೊಂಡು ಬಿಡುತ್ತದೆ. ಅದರಲ್ಲೂ ಒಂದರ ಹಿಂದೆ ಒಂದರಂತೆ ಧೂಮಪಾನ ಮಾಡುವ ಸರಣಿ ಧೂಮಪಾನಿಗಳು (ಚೈನ್ ಸ್ಮೋಕರ್‌) ಪರಿಸ್ಥಿತಿಯಂತು ಶೋಚನೀಯ.

ಇವರು ಧೂಮಪಾನಕ್ಕೆ ಸಂಬಂಧಿಸಿದ ಹಲವಾರು ರೋಗರುಜಿನಗಳಿಂದ ಬಳಲುತ್ತಿರುತ್ತಾರೆ. ಅಷ್ಟೇ ಅಲ್ಲದೆ ಇವರ ವಯಸ್ಸು ಸಹ ಕಡಿಮೆ. ಹೀಗೆ ಈ ದುರಭ್ಯಾಸವು ಹಲವಾರು ಗಂಭೀರ ಸಮಸ್ಯೆಗಳನ್ನು ತನ್ನಲ್ಲಿ ಒಳಗೊಂಡಿದೆ. ಒಂದು ಅಧ್ಯಯನದ ಪ್ರಕಾರ ದಿನಕ್ಕೆ 20 ಅಥವಾ ಅದಕ್ಕಿಂತ ಹೆಚ್ಚು ಸಿಗರೇಟುಗಳನ್ನು ದಿನಕ್ಕೆ ಸೇದುವುದು ಅಥವಾ ವರ್ಷವೊಂದಕ್ಕೆ 20 ಪ್ಯಾಕ್‍ಗಳನ್ನು ಸೇದುವವರನ್ನು ಚೈನ್‍ಸ್ಮೋಕರ್ ಎಂದು ಕರೆಯಬಹುದು. ನೀವು ನಿಜಕ್ಕು ಧೂಮಪಾನಿಯಾಗಿದ್ದಲ್ಲಿ, ನಾವು ನಿಮಗೆ ಕೆಲವೊಂದು ಲಕ್ಷಣಗಳನ್ನು ಹೇಳುತ್ತೇವೆ, ಈ ಲಕ್ಷಣಗಳು ನಿಮ್ಮಲ್ಲಿ ಸಹ ಇದ್ದಲ್ಲಿ ನೀವು ಒಬ್ಬ ಚೈನ್ ಸ್ಮೋಕರ್ ಎಂದು ಖಾತ್ರಿಪಡಿಸಿಕೊಳ್ಳಿ.

Signs That You Are A Chain Smoker

ಜನ ನಿಮ್ಮನ್ನು ಅಕ್ಷರಶಃ ವಾಸನೆಯಿಂದಲೆ ಕಂಡು ಹಿಡಿದು ಬಿಡುತ್ತಾರೆ
ಧೂಮಪಾನಿಗಳು ತಮ್ಮದೇ ಆದ ಪ್ರತ್ಯೇಕವಾದ ಬ್ರ್ಯಾಂಡ್ ವಾಸನೆಯನ್ನು ಹೊಂದಿರುತ್ತಾರೆ. ಇದು ಅವರ ಸುತ್ತ-ಮುತ್ತ ಹರಡಿಕೊಂಡಿರುತ್ತದೆ. ಇದರಿಂದ ನಿಮ್ಮ ಸ್ನೇಹಿತರು ನಿಮ್ಮನ್ನು ಎಂತಹ ಗುಂಪಿನಲ್ಲಿದ್ದರು, ಕಣ್ಣು ಮುಚ್ಚಿಕೊಂಡು ಆ ಸಿಗರೇಟ್ ವಾಸನೆಯಿಂದ ಕಂಡು ಹಿಡಿದುಬಿಡುತ್ತಾರೆ.

ನಿಮ್ಮ ಉಗುರಿನ ತುದಿಗಳು ಹಳದಿ ಬಣ್ಣದಲ್ಲಿರುತ್ತವೆ
ಹೆಂಗಸರ ಉಗುರಿನ ತುದಿಯು ಹಳದಿ ಬಣ್ಣದಲ್ಲಿದ್ದರೆ ಅದಕ್ಕೆ ಆಶ್ಚರ್ಯಪಡಬೇಕಾಗಿಲ್ಲ. ಇದಕ್ಕೆ ಅವರು ಬಳಸುವ ಅತಿಯಾದ ನೇಲ್ ಪಾಲಿಷ್ ಕಾರಣವಾಗಿರಬಹುದು. ಆದರೆ ಗಂಡಸರ ಉಗುರಿನ ತುದಿಯು ಹಳದಿ ಬಣ್ಣದಲ್ಲಿದ್ದರೆ ಅದಕ್ಕೆ ಬೇರೆಯದೆ ಅರ್ಥವಿರುತ್ತದೆ. ಹಳದಿ ಬಣ್ಣದ ಉಗುರಿನ ತುದಿಗಳು ಚೈನ್ ಸ್ಮೋಕರ್ ಆಗಿಲ್ಲದವರಲ್ಲಿ ಕ್ರೂರ ವಿಕೃತವಾಗಿ ಕಾಣಬಹುದು. ಇದಕ್ಕೆ ಕಾರಣ ನಾವು ಸೇವಿಸಿದ ನಿಕೋಟಿನ್ ನಮ್ಮ ಉಗುರಿನ ತುದಿಯಲ್ಲಿ ಶೇಖರಗೊಂಡಿರುತ್ತದೆ. ಸಿಗರೇಟ್ ಸೇದುವವರೇ ಮರೆಯದೆ ಇಲ್ಲಿ ನೋಡಿ

ನಿಮ್ಮ ಪ್ರಯಾಣಗಳಿಗಾಗಿ ವಿಮಾನವನ್ನು ಬಳಸಲು ನೀವು ಇಷ್ಟಪಡುವುದಿಲ್ಲ
ಬಹುಶಃ ನೀವು ನಿಮ್ಮ ವ್ಯಾಪಾರ ಮತ್ತು ವ್ಯವಹಾರದ ಸಲುವಾಗಿ ಎಲ್ಲಾ ನೀತಿ-ನಿಯಮಗಳನ್ನು ಪಾಲಿಸುತ್ತಿರುವಿರಿ ಎಂದುಕೊಳ್ಳೋಣ. ಆದರೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ನಿಮಗೇನಾದರು ವಿಮಾನ ಪ್ರಯಾಣವೇ ಗತಿ ಎಂದು ತಿಳಿದು ಬಂದರೆ ಅದಕ್ಕೆ ಖಂಡಿತ ನೀವು ಒಪ್ಪುವುದಿಲ್ಲ. ಕಾರಣ ಅಷ್ಟು ಹೊತ್ತು ನೀವು ನಿಮ್ಮ ಸಿಗರೇಟ್ ಪ್ಯಾಕ್ ತೆರೆಯದೆ ಕೂರಲು ಸಾಧ್ಯವಾಗುವುದಿಲ್ಲ.

ಬಾರ್ ಅಥವಾ ಪಬ್‍ಗೆ ಹೋದರೆ ಫ್ರೀ ಲಾಂಜ್ ಏರಿಯಾಗಿಂತ ಮೊದಲು ಸ್ಮೋಕಿಂಗ್ ರೂಮನ್ನು ಹುಡುಕುತ್ತೀರಿ
ಹೌದು ಒಂದು ವೇಳೆ ನೀವು ಸ್ಮೋಕಿಂಗ್ ರೂಮನ್ನು ಮೊದಲು ಹುಡುಕಲು ಶುರು ಮಾಡಿದರೆ, ಅದಕ್ಕೆ ಕಾರಣ ನಿಮ್ಮ ಚಟಕ್ಕೆ ನೀವು ಕೊಡುತ್ತಿರುವ ಆಧ್ಯತೆಯೆ ಆಗಿರುತ್ತದೆ. ಒಂದು ವೇಳೆ ನೀವು ಸ್ಮೋಕಿಂಗ್ ರೂಮಿನಲ್ಲಿ ಕುಳಿತು ಧೂಮಪಾನ ಮಾಡುತ್ತಿದ್ದರೆ ಯಾರು ನಿಮ್ಮನ್ನು ಬಂದು ಅಲ್ಲಿಂದ ಓಡಿಸುವುದಿಲ್ಲ. ಧೂಮಪಾನ; ಮಹಿಳಿಯರಿಗಿಂತ ಪುರುಷರ ಸಂಖ್ಯೆ ಜಾಸ್ತಿ ಏಕೆ?

ಜನರು ನಿಮ್ಮನ್ನು ಹಿಂಡಿ ಹಿಪ್ಪೆ ಮಾಡುತ್ತಾರೆ
ಒಂದು ವೇಳೆ ನೀವು ಚೈನ್ ಸ್ಮೋಕರ್ ಆಗಿದ್ದಲ್ಲಿ, ಪ್ರತಿ ಬಾರಿಗೂ ನೀವು ಧೂಮಪಾನ ಮಾಡಲೆಂದು ಹೊರಗೆ ಹೋಗುತ್ತಿರುತ್ತೀರಿ. ಇದನ್ನು ಸರಿಯಾಗಿ ತಿಳಿದಿರುವ ನಿಮ್ಮ ಸ್ನೇಹಿತರು ನಿಮ್ಮ ಬಳಿ ಬಂದು ಒಂದು ಸಿಗರೇಟ್ ಕೇಳುತ್ತಾರೆ. ಇದಕ್ಕೆ ನೀವು ಇಲ್ಲ ಎಂದು ಹೇಳಲು ಆಗುವುದೇ ಇಲ್ಲ. ಕಾರಣ ಅವರ ಮುಂದೆ ಇನ್ನು ಸ್ವಲ್ಪ ಹೊತ್ತಿಗೆ ನೀವು ಧೂಮಪಾನ ಮಾಡಲೇ ಬೇಕಾಗಿರುತ್ತದೆ.

ನಿಮ್ಮ ದಂತ ವೈದ್ಯರು ನಿಮ್ಮನ್ನು ಖಂಡಿತ ಗುರುತಿಸುತ್ತಾರೆ
ನಿಮ್ಮ ಚಟದ ಕಾರಣದಿಂದ ನೀವು ಧೂಮಪಾನಿಗಳಲ್ಲದ ಸ್ನೇಹಿತರನ್ನು ಹೆಚ್ಚಾಗಿ ಹೊಂದಿರುವುದಿಲ್ಲ. ಆದರೆ ದಂತ ವೈದ್ಯರನ್ನು ಮಾತ್ರ ಹೊಂದಿರುತ್ತಾರೆ. ಏಕೆಂದರೆ ಸಿಗರೇಟ್ ಮಾರುವ ಅಂಗಡಿಯ ಜೊತೆಗೆ, ನಿಮ್ಮ ದಂತ ವೈದ್ಯರು ಸಹ ನಿಮ್ಮಿಂದ ಸಾಕಷ್ಟು ದುಡ್ಡನ್ನು ತಿನ್ನುತ್ತಾರೆ. ನಿಮ್ಮ ಹಲ್ಲುಗಳನ್ನು ಸ್ವಚ್ಛ ಮಾಡಲು ನೀವು ಪ್ರತಿ ಬಾರಿ ಅವರ ಬಳಿಗೆ ಹೋಗುತ್ತಿರುತ್ತೀರಿ.

English summary

Signs That You Are A Chain Smoker

Most smokers have a history of smoking that dates back to their adolescent days. Smoking starts as an activity to look cooler in front of the peers, but it gradually becomes a habit that is hard to quit.
X
Desktop Bottom Promotion