For Quick Alerts
ALLOW NOTIFICATIONS  
For Daily Alerts

ಅಪೆಂಡಿಕ್ಸ್‌ನ ಲಕ್ಷಣಗಳು ನಿಮಗೆ ತಿಳಿದಿದೆಯೇ?

By Arpitha Rao
|

ದೊಡ್ಡ ಕರುಳಿನ ಬುಡದಲ್ಲಿರುವ ಚೀಲದಲ್ಲಿ ಉರಿಯೂತ ಕಂಡು ಬಂದಾಗ ಅಪೆಂಡಿಟೈಟಿಸ್ ಸಂಭವಿಸುತ್ತದೆ. ಇದು ತುಂಬಾ ನೋವನ್ನು ಉಂಟುಮಾಡಬಹುದು ಮತ್ತು ಇದಕ್ಕೆ ಸರ್ಜರಿಯ ಅಗತ್ಯವಿರಬಹುದು.
ಅಪೆಂಡಿಕ್ಸ್ ಎಂಬುದು ಒಂದು ಗಡ್ಡೆ. ಸರ್ಜರಿ ಮೂಲಕ ಇದನ್ನು ತೆಗೆಯುವುದರ ಮೂಲಕ ನೋವನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು. ಅಪೆಂಡಿಕ್ಸ್ ಒಂದು ಸಾಮನ್ಯ ಕಾಯಿಲೆಯಾಗಿದ್ದು ಇದು ಸಂಭವಿಸಿದಾಗ ಯಾತನೆ ನೀಡುವಂತಹ ನೋವು ಕಾಣಿಸಿಕೊಳ್ಳುತ್ತದೆ.

ಈ ಅಪೆಂಡಿಕ್ಸ್ ಗಡ್ಡೆ ಒಡೆದರೆ ಮಾರಣಾಂತಿಕವೂ ಹೌದು, ಆದರೆ ವೈದ್ಯರು ಇದನ್ನು ಇದು ಒಡೆಯುವ ಮೊದಲೇ ಸರ್ಜರಿ ಮೂಲಕ ತೆಗೆದುಹಾಕುತ್ತಾರೆ. ಅಪೆಂಡಿಕ್ಸ್ ಆಗಿರುವುದರ ಮೊದಲ ಲಕ್ಷಣ ಎಂದರೆ ಹೊಟ್ಟೆಯ ಕೆಳಭಾಗದಲ್ಲಿ ತೀವ್ರ ನೋವು ಸಂಭವಿಸುತ್ತದೆ, ಇದಲ್ಲದೇ ಬೇರೆ ಲಕ್ಷಣಗಳು ಕೂಡ ಕಂಡು ಬರುತ್ತವೆ. ಈ ಕೆಳಗೆ ಕೊಟ್ಟಿರುವ ಲಕ್ಷಣಗಳ ಬಗ್ಗೆ ಓದಿ ಮತ್ತು ಇಂತಹ ಚಿನ್ಹೆಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿ ನೀಡಿ.

ಹೊಟ್ಟೆ ನೋವನ್ನು ಶಮನಗೊಳಿಸುವ ಮದ್ದು ಇಲ್ಲಿದೆ ನೋಡಿ!

ಹೊಕ್ಕಳು ನೋವು:

ಹೊಕ್ಕಳು ನೋವು:

ಅಪೆಂಡಿಕ್ಸ್ ಆಗಿರುವುದರ ಅತಿ ಮೊದಲ ಚಿನ್ಹೆ ಎಂದರೆ ಹೊಕ್ಕುಳಿನಲ್ಲಿ ನೋವು ಅಥವಾ ಅಸ್ವಸ್ಥತೆ ಕಂಡು ಬರುವುದು.ನಂತರ ಇದು ನಿಧಾನವಾಗಿ ಕೆಳಹೊಟ್ಟೆಗೆ ಹರಡುತ್ತದೆ.

ಯಾತನಾಮಯವಾದ ನೋವು ಹೆಚ್ಚಳ:

ಯಾತನಾಮಯವಾದ ನೋವು ಹೆಚ್ಚಳ:

ಮೊದಲು ಸ್ವಲ್ಪ ಅಥವಾ ಸಾಮಾನ್ಯ ನೋವಿನಿಂದ ಪ್ರಾರಂಭವಾಗಿ ನಂತರ ತೀವ್ರ ಮತ್ತು ಯಾತನಾಮಯವಾಗಿ ಪರಿಣಮಿಸುತ್ತದೆ.ಈ ರೀತಿ ಕೇವಲ ಕೆಲವೇ ಗಂಟೆಗಳಲ್ಲಿ ಆಗಬಹುದು.ಈ ಯಾತನಾಮಯ ನೋವು ಯಾವುದೇ ವ್ಯಕ್ತಿಯನ್ನು ಕೆಲಸ ಮಾಡಲಾಗದಂತೆ ಮಾಡಿಬಿಡುತ್ತದೆ.

ಜ್ವರ:

ಜ್ವರ:

ಅಪೆಂಡಿಕ್ಸ್ ಲಕ್ಷಣವೆಂದರೆ ಹೊಟ್ಟೆ ನೋವಿನ ಜೊತೆ ಸಣ್ಣ ಪ್ರಮಾಣದ ಜ್ವರ ಕೂಡ ಕಾಣಿಸಿಕೊಳ್ಳಬಹುದು.ನೋವು ತೀವ್ರವಾದಂತೆ ಜ್ವರ ಕೂಡ ಹೆಚ್ಚುತ್ತದೆ.

ವಾಕರಿಕೆ ಮತ್ತು ವಾಂತಿ:

ವಾಕರಿಕೆ ಮತ್ತು ವಾಂತಿ:

ಅಪೆಂಡಿಕ್ಸ್ ನ ಇನ್ನೊಂದು ಲಕ್ಷಣದಲ್ಲಿ ವಾಕರಿಕೆ ಅಥವಾ ವಾಂತಿ ಕೂಡ ಒಂದು.ಇದು ಸಾಮಾನ್ಯ ಹೊಟ್ಟೆ ದೋಷದಂತೆ ಮೊದಲು ಕಂಡು ಬಂದರೂ ನಂತರದಲ್ಲಿ ತೀವ್ರವಾಗಿ ಹೆಚ್ಚುತ್ತದೆ.

ಅತಿಸಾರ :

ಅತಿಸಾರ :

ಕೆಲವೊಮ್ಮೆ ಅಪೆಂಡಿಕ್ಸ್ ಇರುವಾಗ ಸ್ವಲ್ಪ ಪ್ರಮಾಣದಲ್ಲಿ ಅತಿಸಾರ ಸಂಭವಿಸಬಹುದು ಕೆಲವೊಮ್ಮೆ ಹೆಚ್ಚು ಕಾಣಿಸಿಕೊಳ್ಳಬಹುದು.ತಕ್ಷಣ ವೈದ್ಯರನ್ನು ಭೇಟಿಯಾಗುವುದರ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಿ.

ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್:

ಹೊಟ್ಟೆ ಉಬ್ಬುವುದು ಮತ್ತು ಗ್ಯಾಸ್:

ಗ್ಯಾಸ್ ಮತ್ತು ಹೊಟ್ಟೆ ಉಬ್ಬುವುದು ಸಾಮಾನ್ಯವಾದುದು ಆದರೆ ಇದರ ಜೊತೆ ಕೆಳ ಹೊಟ್ಟೆಯಲ್ಲಿ ನೋವು ಕೂಡ ಕಾಣಿಸಿಕೊಂಡಲ್ಲಿ ವೈದ್ಯರನ್ನು ಕಾಣುವುದು ಸೂಕ್ತ.

ಹೊಟ್ಟೆ ಮೃದುವಾಗುವುದು :

ಹೊಟ್ಟೆ ಮೃದುವಾಗುವುದು :

ನಿಮಗೆ ಅಪೆಂಡಿಕ್ಸ್ ನ ಸಮಸ್ಯೆ ಬಂದಿದೆಯೇ ಎಂಬುದನ್ನು ತಿಳಿಯಲು ಕೆಳ ಹೊಟ್ಟೆಯ ಬಲಭಾಗದಲ್ಲಿ ಒತ್ತಿ ಹಿಡಿಯಿರಿ ನಂತರ ನಿದಾನವಾಗಿ ಬಿಡಿ.ಈಗ ನಿಮಗೆ ನೋವು ಕಾಣಿಸಿಕೊಂಡಲ್ಲಿ ಇದು ಅಪೆಂಡಿಕ್ಸ್ ಸಮಸ್ಯೆಯಿಂದ ಎಂದರ್ಥ.ವೈದ್ಯರನ್ನು ಕಂಡು ಖಚಿತಪಡಿಸಿಕೊಳ್ಳಿ.

ಉರಿಮೂತ್ರ:

ಉರಿಮೂತ್ರ:

ಕೆಲವರು ಅಪೆಂಡಿಕ್ಸ್ ಇರುವಾಗ ಉರಿಮೂತ್ರ ಅನುಭವಿಸುತ್ತಾರೆ.ಕೆಳಹೊಟ್ಟೆಯ ಅತಿಯಾದ ಒತ್ತಡವೇ ಇದಕ್ಕೆ ಕಾರಣ ಎನ್ನಲಾಗುತ್ತದೆ.

ದೇಹದಲ್ಲಿ ನೋವು:

ದೇಹದಲ್ಲಿ ನೋವು:

ಸಾಮನ್ಯವಾದ ಅಥವಾ ತೀವ್ರವಾದ ಹೊಟ್ಟೆ ಅಥವಾ ಬೆನ್ನು ನೋವು ಕಾಣಿಸಿಕೊಳ್ಳಬಹುದು.

ಮಲಬದ್ಧತೆ:

ಮಲಬದ್ಧತೆ:

ಮಲಬದ್ಧತೆ ಅಪೆಂಡಿಟೈಟಿಸ್ ನ ಕಾರಣವಲ್ಲ ಆದರೂ ಕೂಡ ಕೆಲವು ರೋಗಿಗಳಿಗೆ ಈ ಸಮಸ್ಯೆಯೂ ಕೂಡ ಕಂಡು ಬರುತ್ತದೆ.

English summary

Pain management: Early signs of appendicitis

Appendicitis occurs when your appendix, a worm-shaped pouch attached to the large intestine, becomes inflamed. Appendicitis can be very painful and may require surgery.
Story first published: Monday, May 5, 2014, 14:30 [IST]
X
Desktop Bottom Promotion