ಕಿವಿ ನೋವನ್ನು ತ್ವರಿತವಾಗಿ ಶಮನಗೊಳಿಸುವ ಮನೆಮದ್ದುಗಳು

Posted By: Super
Subscribe to Boldsky

ಕಿವಿ ನೋವು ಮಕ್ಕಳಿಗೆ ಮತ್ತು ದೊಡ್ಡವರಿಗೂ ಕೂಡ ನೋವಿನ ವಿಷಯ.ಇದು ಮಕ್ಕಳಲ್ಲಿ ಕೆಲವು ಸಾಮಾನ್ಯ ಕಾರಣಕ್ಕೆ ಬರುತ್ತದೆ ಎಂಬುದನ್ನು ವೈದ್ಯರು ತಿಳಿಸುತ್ತಾರೆ. ದೊಡ್ದವರಿಗಿಂತ ಮಕ್ಕಳಲ್ಲಿ ಕಿವಿ ನೋವು ಹೆಚ್ಚು ಕಾಣಿಸಿಕೊಳ್ಳುತ್ತವೆ. ಕಾರಣ ಅವರು ಬೇಗ ಕೀಟಾಣುಗಳಿಗೆ ತುತ್ತಾಗುತ್ತಾರೆ. ಕಿವಿ ನೋವು ಸ್ಥಿರವಾಗಿರಬಹುದು ಅಥವಾ ಅಧಿಕವಾಗಿ ಕೂಡ ಇರಬಹುದು. ಅದು ತೀವ್ರ ನೋವಾಗಿರಬಹುದು ಅಥವಾ ಮಂದವಾಗಿರಬಹುದು, ಕೆಲವೊಮ್ಮೆ ಕಿರಿಕಿರಿ ಉಂಟುಮಾಡಬಹುದು.

ಇಂತಹ ಸಮಯದಲ್ಲಿ ನೋವನ್ನು ನಿವಾರಿಸಬಲ್ಲ ಮನೆ ಮದ್ದುಗಳನ್ನು ಕಂಡು ಕೊಳ್ಳುವುದು ಸೂಕ್ತ. ನೀವು ವೈದ್ಯರನ್ನು ಕಾಣಲು ಹೋಗುವುದಾದರೂ ಕೂಡ ಅಲ್ಲಿಯವರೆಗೆ ನೋವನ್ನು ತಡೆಹಿಡಿಯಲು ಪರಿಣಾಮಕಾರಿಯಾದ ಮನೆ ಮದ್ದನ್ನು ಬಳಸುವುದು ಸೂಕ್ತ. ಸೋಂಕು, ಉರಿಯೂತ ಯಾವುದೇ ಇದ್ದರೂ ಕೂಡ ರೋಗವನ್ನು ನಿವಾರಿಸುವ ಮನೆಮದ್ದುಗಳಿವೆ. ಅವುಗಳನ್ನು ಬಳಸಿ ನೋವನ್ನು ಹತೋಟಿಗೆ ತರಬಹುದು.

20 ಹರೆಯದಲ್ಲಿಯೇ ಕೂದಲು ಉದುರಲು ಕಾರಣಗಳು

ಬೆಚ್ಚಗಿನ ಶಾಖ

ಬೆಚ್ಚಗಿನ ಶಾಖ

ಬೆಚ್ಚಗಿನ ಶಾಖ ನೀಡುವುದರಿಂದ ಸಾಮಾನ್ಯವಾದ ಕಿವಿ ನೋವು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ. ಬಿಸಿ ಶಾಖವು ನೋವನ್ನು ಕಡಿಮೆ ಮಾಡುತ್ತದೆ. ಕಿವಿಯಲ್ಲೇನಾದರೂ ಊತ ಕಾಣಿಸಿಕೊಂಡರೆ ಈ ಶಾಖದಿಂದಾಗಿ ಕುಗ್ಗುತ್ತದೆ. ಕೆಲವೊಮ್ಮೆ ತಂಡಿಯಿಂದ ಕಿವಿ ನೋವು ಕಾಣಿಸಿಕೊಳ್ಳುವುದುಂಟು ಆಗ ಈ ಶಾಖ ಕೊಡುವುದರಿಂದ ತಕ್ಷಣ ಕಡಿಮೆಯಾಗುತ್ತದೆ.

ಮನೆಯಲ್ಲಿ ಲಭ್ಯವಿರುವ ನೋವಿನ ಔಷಧಿ ಬಳಸಬಹುದು

ಮನೆಯಲ್ಲಿ ಲಭ್ಯವಿರುವ ನೋವಿನ ಔಷಧಿ ಬಳಸಬಹುದು

ನೋವು ಅಧಿಕವಾಗಿದ್ದು ವೈದ್ಯರು ತಕ್ಷಣ ಸಿಗದಿದ್ದಲ್ಲಿ ಈ ರೀತಿ ಮಾಡಿ

*ಐಬುಪ್ರೊಫೇನ್ ಬಳಸಿ

*ಆಸ್ಪಿರಿನ್ ತೆಗೆದುಕೊಳ್ಳಿ

ಆದಾಗ್ಯೂ ಕೂಡ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಈ ರೀತಿ ಮಾತ್ರೆ ಕೊಡುವುದು ಸೂಕ್ತವಲ್ಲ. ಮಕ್ಕಳಿಗೆ ಯಾವುದೇ ರೀತಿಯ ಔಷಧಿ ನೀಡುವ ಮೊದಲು ವೈದ್ಯರ ಸಲಹೆ ಅಗತ್ಯ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಬೆಚ್ಚಗಿನ ಆಲೀವ್ ಎಣ್ಣೆ ಕಿವಿ ನೋವನ್ನು ಹೋಗಲಾಡಿಸುತ್ತದೆ ಎನ್ನುತ್ತಾರೆ.

*ಕೆಲವು ಹನಿ ಆಲೀವ್ ಎಣ್ಣೆ ಬಿಸಿ ಮಾಡಿ.

*ಅದನ್ನು ಒಂದು ಸ್ವಚ್ಛ ಬಾಟಲಿಗೆ ಹಾಕಿಡಿ.

*ನೋವಿರುವ ಕಿವಿಗೆ ಒಂದು ಹನಿ ಈ ಎಣ್ಣೆಯನ್ನು ಹಾಕಿ.

*ಈ ಎಣ್ಣೆ ಕಿವಿಯ ಹೊರಬರದಂತೆ ನೋಡಿಕೊಳ್ಳಿ. ಇದು ಕಿವಿಯ ಒಳಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಮೂಗು ಶುಚಿಗೊಳಿಸಿ

ಮೂಗು ಶುಚಿಗೊಳಿಸಿ

ಮೂಗು ಕಟ್ಟುವುದರ ಜೊತೆಗೆ ಕಿವಿ ನೋವು ಕಾಣಿಸಿಕೊಂಡಲ್ಲಿ ಅದು ತಂಡಿಯಿಂದ ಕೂಡ ಆಗಿರಬಹುದು ಆಗ ಮೂಗನ್ನು ಕೂಡ ಸ್ವಚ್ಚ ಮಾಡಿಕೊಳ್ಳಿ.

*ಗಾಳಿ ಹೊರಹೋಗಲು ಸರಿಯಾದ ಜಾಗ ಸಿಕ್ಕಾಗ ನೋವು ಕಡಿಮೆ ಆಗುತ್ತದೆ.

*ಇದರಿಂದ ಕಿವಿ ನೋವು ಸ್ವಲ್ಪ ಕಡಿಮೆಯಾಗಬಹುದು.

ಈರುಳ್ಳಿಯನ್ನು ಬಳಸಿ

ಈರುಳ್ಳಿಯನ್ನು ಬಳಸಿ

ಈರುಳ್ಳಿ ಪೇಸ್ಟ್ ಆನ್ನು ನೋವು ನಿವಾರಕವಾಗಿ ಬಳಸಬಹುದು. ಊತದಿಂದ ಕಿವಿ ನೋವು ಬಂದಿದ್ದರೆ

*ಈರುಳ್ಳಿ ಪುಡಿ ಮತ್ತು ನೀರನ್ನು ಮಿಶ್ರ ಮಾಡಿ.

*ಕಿವಿಯ ಹೊರಭಾಗದಲ್ಲಿ ಇದನ್ನು ಹಚ್ಚಿ. ಇದರಿಂದ ನೋವು ಗುಣಮುಖವಾಗುತ್ತದೆ.

ಬೆಳ್ಳುಳ್ಳಿ ಮತ್ತು ವೆಲ್ವೆಟ್ ಹೂವು

ಬೆಳ್ಳುಳ್ಳಿ ಮತ್ತು ವೆಲ್ವೆಟ್ ಹೂವು

ಮನೆಯಲ್ಲಿ ಆಲೀವ್ ಎಣ್ಣೆ ಇಲ್ಲದಿದ್ದರೆ ಈ ರೀತಿ ಮಾಡಬಹುದು.

*ಬೆಳ್ಳುಳ್ಳಿ ಎಣ್ಣೆ ಮತ್ತು ವೆಲ್ವೆಟ್ ಹೂವಿನ ಎಣ್ಣೆ ಮಿಶ್ರಣ ಮಾಡಿ.

*ಇದು ನೋವನ್ನು ಕಡಿಮೆ ಮಾಡಿ ಸೂಕ್ಷ್ಮ ಜೀವಿಗಳ ವಿರುದ್ಧ ಹೋರಾಡುತ್ತದೆ.

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ

ಕಿವಿ ನೋವಿನಿಂದ ನಿಮಗೆ ಕಿರಿಕಿರಿಯಾಗುತ್ತಿದ್ದರೆ ಈ ರೀತಿ ಮಾಡಬಹುದು.

*ಕಿವಿಯ ಹೊರಭಾಗದಲ್ಲಿ ಲ್ಯಾವೆಂಡರ್ ಎಣ್ಣೆ ಹಚ್ಚಿ. ನಿಧಾನವಾಗಿ ತಿಕ್ಕಿ.

*ಇದು ಕಿವಿಯನ್ನು ಮೃದುವಾಗಿಸಲು ಸಹಾಯ ಮಾಡುತ್ತದೆ ಮತ್ತು ದಿನದಲ್ಲಿ ಯಾವಾಗ ಬೇಕಾದರೂ ಹಚ್ಚಬಹುದು.

ಕಿವಿ ತಿರುಗಿಸುವುದು ಅಥವಾ ಅಲ್ಲಾಡಿಸುವುದು

ಕಿವಿ ತಿರುಗಿಸುವುದು ಅಥವಾ ಅಲ್ಲಾಡಿಸುವುದು

ಮಕ್ಕಳಿಗೆ ಕಿವಿ ನೋವು ಹೋಗಲಾಡಿಸಲು ಕಿವಿಯನ್ನು ಈ ರೀತಿ ಮಾಡಿ ನೋಡಿ

*ಆಕಳಿಸುವುದು ಅಥವಾ ನಿಧಾನವಾಗಿ ಕಿವಿ ತಿರುಗಿಸುವುದರಿಂದ ನೋವು ಕಡಿಮೆಯಾಗುತ್ತದೆ.

*ಈ ರೀತಿ ಮಾಡುವುದರಿಂದ ಕಿವಿಯಲ್ಲಿ ನೀರು ಸಿಕ್ಕಿ ಹಾಕಿಕೊಂಡಿದ್ದರೆ ಹೊರಬರುತ್ತದೆ.

ಹಬೆ ಮತ್ತು ನೀಲಗಿರಿ ಎಣ್ಣೆ ಪ್ರಯತ್ನಿಸಿ

ಹಬೆ ಮತ್ತು ನೀಲಗಿರಿ ಎಣ್ಣೆ ಪ್ರಯತ್ನಿಸಿ

ಮೂಗಿನ ಭಾಗದಲ್ಲಿ ನೀರು ಸೇರಿಕೊಂಡಿದ್ದರೆ ಅದನ್ನು ಕ್ಲಿಯರ್ ಮಾಡಲು ಈ ರೀತಿ ಮಾಡಬಹುದು.

*ನೀಲಗಿರಿ ಎಣ್ಣೆಯನ್ನು ಬೆರೆಸಿದ ಹಬೆ ತಯಾರಿಸಿಕೊಳ್ಳಿ.

*ಈ ಹಬೆಯನ್ನು ತೆಗೆದುಕೊಳ್ಳುವುದರಿಂದ ಕಟ್ಟಿಕೊಂಡಿರುವ ಭಾಗ ಬಿಡುಗಡೆ ಪಡೆಯುತ್ತದೆ.

English summary

Home Remedies To Get Rid Of Painful Ear Ache

Ear ache can be a painful condition for children as well as for adults. It is found to be a common reason for which the children are brought in to the doctors to be diagnosed. here are simple home ingredients that can be used to control such symptoms.
Story first published: Monday, September 15, 2014, 16:16 [IST]