For Quick Alerts
ALLOW NOTIFICATIONS  
For Daily Alerts

ದಾಸವಾಳದ ಎಲೆಗಳ ಆರೋಗ್ಯಕಾರಿ ಲಾಭಗಳು

By Hemanth P
|

ಹೂವಿನ ಗಿಡವಾಗಿರುವ ದಾಸವಾಳವನ್ನು ನಾವು ಉಷ್ಣವಲಯ ಹಾಗೂ ಉಪಉಷ್ಣವಲಯದ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ದಾಸವಾಳವನ್ನು "ಮಾರ್ಷ್ ಮ್ಯಾಲೋ" ಎಂದು ಕರೆಯಲಾಗುತ್ತದೆ. ದಾಸವಾಳದ ಎಲೆಗಳು ಭಾರತದಲ್ಲಿ ಸಾಮಾನ್ಯ ಹಾಗೂ ಇದನ್ನು ಹಲವಾರು ರೋಗಗಳಿಗೆ ಚಿಕಿತ್ಸೆಯಾಗಿ ಆಯುರ್ವೇದದಲ್ಲಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ.

ಜಗತ್ತಿನಾದ್ಯಂತ ಹೆಚ್ಚಿನ ಜನರು ದಾಸವಾಳದ ಎಲೆಗಳನ್ನು ಬಿಸಿ ಅಥವಾ ತಂಪು ಚಹಾದಲ್ಲಿ ಬಳಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಲಾಭಕಾರಿ. ದಾಸವಾಳದ ಎಲೆಗಳ ಇತರ ಆರೋಗ್ಯ ಲಾಭಗಳೆಂದರೆ ಈ ಎಲೆಗಳನ್ನು ರಕ್ತದೊತ್ತಡ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುವವರಿಗೆ ಚಿಕಿತ್ಸೆಗೆ ಬಳಸಬಹುದು.

ದಾಸವಾಳದ ಹೂವುಗಳನ್ನು ಆಹಾರಕ್ಕೆ ಬಣ್ಣಕ್ಕಾಗಿ ಉಪಯೋಗಿಸಲಾಗುತ್ತದೆ. ದಾಸವಾಳದ ಎಲೆಗಳ ಚಹಾವನ್ನು ವಿವಿಧ ರಾಷ್ಟ್ರಗಳಿಂದ ರಫ್ತು, ಆಮದು ಮಾಡಿಕೊಳ್ಳಲಾಗುತ್ತದೆ. ದಾಸವಾಳದ ಎಲೆಯ ಚಹಾ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ದಾಸವಾಳದಲ್ಲಿರುವ ಔಷಧೀಯ ಗುಣಗಳು

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ದಾಸವಾಳದ ಎಲೆಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿರುವ ಕಾರಣ ಈ ಎಲೆಗಳನ್ನು ಬಿಸಿ ನೀರಿನಲ್ಲಿ ಹಾಕಿ ಸೇವಿಸಬೇಕು. ಕ್ಯಾನ್ಸರ್ ನಿಂದ ಆಗಿರುವಂತಹ ಗಾಯಕ್ಕೆ ಇದರ ಪೇಸ್ಟ್ ಮಾಡಿ ಹಚ್ಚಬಹುದು.

ಶೀತ ಮತ್ತು ಕೆಮ್ಮಿಗೆ

ಶೀತ ಮತ್ತು ಕೆಮ್ಮಿಗೆ

ದಾಸವಾಳದ ಎಲೆಯಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. ಇದು ಕೆಮ್ಮು, ಶೀತ ಮತ್ತು ತಲೆನೋವು ನಿವಾರಿಸುತ್ತದೆ. ಇದು ದಾಸವಾಳದ ಎಲೆಗಳ ಆರೋಗ್ಯ ಲಾಭಗಳು.

ಶಕ್ತಿ ಮತ್ತು ಪ್ರತಿರಕ್ಷಣಾ ಮಟ್ಟ ಹೆಚ್ಚಳ

ಶಕ್ತಿ ಮತ್ತು ಪ್ರತಿರಕ್ಷಣಾ ಮಟ್ಟ ಹೆಚ್ಚಳ

ಇದು ನಿಮ್ಮ ದೇಹದ ಶಕ್ತಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸುತ್ತದೆ. ಮಹಿಳೆಯರಲ್ಲಿ ಋತುಚಕ್ರದ ವೇಳೆ ಉಂಟಾಗುವ ಹಾಟ್ ಫ್ಯ್ಲಾಷಸ್ ನಿವಾರಿಸುವುದು ದಾಸವಾಳದ ಎಲೆಗಳ ಆರೋಗ್ಯ ಲಾಭಗಳಲ್ಲಿ ಒಂದಾಗಿದೆ.

 ಮೊಡವೆ ಮತ್ತು ವಯಸ್ಸಾಗುವುದಕ್ಕೆ ಪರಿಹಾರ

ಮೊಡವೆ ಮತ್ತು ವಯಸ್ಸಾಗುವುದಕ್ಕೆ ಪರಿಹಾರ

ದಾಸವಾಳದ ಎಲೆಗಳ ಆರೋಗ್ಯ ಲಾಭಗಳೆಂದರೆ ಅದು ಮೊಡವೆ ಮತ್ತು ವಯಸ್ಸಾಗುವುದನ್ನು ತಡೆಯುತ್ತದೆ.

ಚಯಾಪಚಯಾ ಕ್ರಿಯೆ ವೃದ್ಧಿಸುತ್ತದೆ

ಚಯಾಪಚಯಾ ಕ್ರಿಯೆ ವೃದ್ಧಿಸುತ್ತದೆ

ದಾಸವಾಳದ ಎಲೆಗಳ ಆರೋಗ್ಯ ಲಾಭಗಳಲ್ಲಿ ಒಂದೆಂದರೆ ಅದು ಚಯಾಪಚಯಾ ಕ್ರಿಯೆ ವೃದ್ಧಿಸುತ್ತದೆ ಮತ್ತು ನಿಮ್ಮ ದೇಹದಲ್ಲಿನ ನೀರಿನಾಂಶದ ಸಮತೋಲನವನ್ನು ನಿರ್ವಹಿಸುತ್ತದೆ.

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ದಾಸವಾಳದ ಎಲೆಗಳ ಅತ್ಯಂತ ಪ್ರಮುಖ ಆರೋಗ್ಯ ಲಾಭಗಳೆಂದರೆ ಇದು ಕೊಲೆಸ್ಟ್ರಾಲ್ ಮಟ್ಟ ಕಡಿಮೆಗೊಳಿಸುತ್ತದೆ ಮತ್ತು ದೇಹದ ಉಷ್ಣತೆ ಕಾಪಾಡುತ್ತದೆ.

ಕೂದಲು ಉದುರುವಿಕೆ ತಡೆಯುತ್ತದೆ

ಕೂದಲು ಉದುರುವಿಕೆ ತಡೆಯುತ್ತದೆ

ದಾಸವಾಳದ ಎಲೆಗಳ ಅತೀ ಮುಖ್ಯ ಆರೋಗ್ಯ ಲಾಭವೆಂದರೆ ಅದು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ದಾಸವಾಳದ ಎಲೆಗಳ ಪೇಸ್ಟ್ ಮಾಡಿ ಅದನ್ನು ಶಾಂಪೂ ಹಾಕಿದ ಬಳಿಕ ಹಚ್ಚಬೇಕು. ಇದು ನಿಮ್ಮ ಕೂದಲಿಗೆ ಕಂಡೀಷನರ್ ಆಗಿ ಕೆಲಸ ಮಾಡಿ ಕೂದಲು ಉದುರುವಿಕೆ ತಡೆಯುತ್ತದೆ.

ದಾಸವಾಳದ ಎಲೆಗಳ ಪೌಷ್ಠಿಕಾಂಶದ ಲಾಭಗಳು

ದಾಸವಾಳದ ಎಲೆಗಳ ಪೌಷ್ಠಿಕಾಂಶದ ಲಾಭಗಳು

1. ದಾಸವಾಳದ ಎಲೆಗಳ ಪೌಷ್ಠಿಕಾಂಶದ ಲಾಭಗಳಲ್ಲಿ ಒಂದೆಂದರೆ ಅದರ ಟೀ ನಮ್ಮ ಆಹಾರ ಕ್ರಮಕ್ಕೆ ತುಂಬಾ ಆರೋಗ್ಯಕಾರಿ. ಆದರೆ ಟೀ ಕುಡಿಯುವ ಮೊದಲು ಎಚ್ಚರಿಕೆ ವಹಿಸಿ, ಇದು ಸಾವಯವವೇ, ಯಾವುದೇ ಸಂರಕ್ಷಗಳನ್ನು ಬೆರೆಸಿಲ್ಲವೇ ಮತ್ತು ಉನ್ನತ ಗುಣಮಟ್ಟದಲ್ಲಿ ಸಂಸ್ಕರಿಸಲಾಗಿದೆಯಾ ಎಂದು ತಿಳಿಯಿರಿ. ಕಿಡ್ನಿಯ ತೊಂದರೆ, ಜೀರ್ಣಾಂಗ ಸಮಸ್ಯೆ, ಮೂತ್ರಕೋಶದ ಸೋಂಕು ಮತ್ತು ರಕ್ತದೊತ್ತಡ ಕಡಿಮೆ ಮಾಡಲು ಇತ್ಯಾದಿಗಳಿಗೆ ದಾಸವಾಳದ ಎಲೆಯ ಚಹಾ ನೆರವಾಗುತ್ತದೆ.

2. ದಾಸವಾಳದ ಎಲೆಗಳ ಮತ್ತೊಂದು ಪೌಷ್ಠಿಕಾಂಶದ ಲಾಭವೆಂದರೆ ನಾವು ಕೆಲವು ದಾಸವಾಳದ ಎಲೆಗಳನ್ನು ಜಗಿದರೆ ಅದರಲ್ಲೂ ಮಹಿಳೆಯರು ಮುಟ್ಟಿನ ವೇಳೆ ಜಗಿದರೆ ಆ ಸಮಯದಲ್ಲಿ ಆಗುವ ಸ್ನಾಯು ಸೆಳೆತ ಕಡಿಮೆ ಮಾಡುತ್ತದೆ. ಇದು ಜೀರ್ಣಕ್ರಿಯೆ ಮತ್ತು ತೂಕ ಇಳಿಸಲು ಸಹಕಾರಿ.

3. ಇದರ ಅತ್ಯಂತ ಲಾಭಕಾರಿ ಪೌಷ್ಠಿಕಾಂಶ ಗುಣಗಳೆಂದರೆ ಇದನ್ನು ಆಹಾರ ಉತ್ಪನ್ನಗಳ ಬಣ್ಣ ಮತ್ತು ಬೇಕಿಂಗ್ ಗೆ ಬಳಸಲಾಗುತ್ತದೆ.

4. ದಾಸವಾಳದ ಎಲೆಗಳ ಪೌಷ್ಠಿಕಾಂಶ ಗುಣಗಳೆಂದರೆ ಬೆಳಗ್ಗೆ ಕೆಲವು ದಾಸವಾಳದ ಎಲೆಗಳನ್ನು ಜಗಿಯಿರಿ, ಇದು ನಿಮ್ಮನ್ನು ಎಲ್ಲಾ ರೋಗಗಳಿಂದ ದೂರವಿಡುತ್ತದೆ.


English summary

Health benefits of hibiscus leaves

Hibiscus is a flowering plant which is mostly found in tropical & subtropical regions around the world.Hibiscus is also known by other name as "marsh mallow".
Story first published: Saturday, June 7, 2014, 15:55 [IST]
X
Desktop Bottom Promotion