For Quick Alerts
ALLOW NOTIFICATIONS  
For Daily Alerts

ತಾಮ್ರದ ಪಾತ್ರೆಯಲ್ಲಿರುವ ನೀರಿನ, ಆರೋಗ್ಯದ ಮಹಾತ್ಮೆ

By Deepak
|

ಮಾನವನ ಬದುಕಿಗೆ ಆಧಾರ ಸ್ತಂಭಗಳೆನೆಸಿರುವ ನೀರು, ಆಹಾರ, ಗಾಳಿ ಮೂಲಭೂತ ಅವಶ್ಯಕತೆಗಳು ಎಂದೆನಿಸಿವೆ. ನಮ್ಮ ಬದುಕು ಇವು ಮೂರನ್ನು ಆಧರಿಸಿಕೊಂಡಿದ್ದು ಇವುಗಳಲ್ಲಿ ಒಂದು ನಷ್ಟವಾದರೂ ನಾವು ಪರಿಪಾಟಲು ಪಡಬೇಕಾದೀತು. ಇದರಲ್ಲೂ ನೀರು ನಮ್ಮ ದೈನಂದಿನ ಚಟುವಟಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದಿನದ ಆರಂಭ ಮತ್ತು ಅಂತ್ಯವನ್ನು ನೀರಿನ ಸೇವೆನಯಿಂದಲೂ ನಾವು ಮಾಡುತ್ತಿದ್ದು ನೀರು ಪ್ರಮುಖ ಜೀವ ಜಲ ಎಂದೆನಿಸಿದೆ.

ನೀರನ್ನು ನೀವು ಸ್ಟೀಲ್ ಲೋಟ, ಜಗ್, ಪಾತ್ರೆಗಳಲ್ಲಿ ಕುಡಿಯುತ್ತಿರಬಹುದು ಆದರೆ ತಾಮ್ರದ ಪಾತ್ರೆಯಲ್ಲಿ ಕುಡಿಯುವ ನೀರಿನಿಂದ ಉಂಟಾಗುವ ಅದ್ಭುತ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ? ಹಿಂದಿನ ಕಾಲದಿಂದಲೂ ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯುವುದರ ಹಿಂದೆ ಒಂದು ನಂಬಿಕೆ ಇದ್ದು ಅದಕ್ಕಾಗಿಯೇ ಮನೆಯಲ್ಲಿರುವ ಹಿರಿಯರು ಇದರಲ್ಲೇ ನೀರು ಕುಡಿಯುತ್ತಿದ್ದರು. ಕಫ, ಪಿತ್ತ ಮತ್ತು ವಾತವನ್ನು ಸಮತೋಲನದಲ್ಲಿಡುವ ಗುಣವನ್ನು ತಾಮ್ರವು ಹೊಂದಿದ್ದು ದೇಹಕ್ಕೆ ಮಾರಕವಾಗಿರುವ ದೋಷಗಳನ್ನು ನಿಯಂತ್ರಣದಲ್ಲಿಡಲು ತಾಮ್ರದ ಪಾತ್ರೆಯಲ್ಲಿರುವ ನೀರನ್ನು ಕುಡಿಯಬೇಕು ಎಂಬುದಾಗಿ ವಿಜ್ಞಾನ ಲೋಕ ತಿಳಿಸಿದೆ.

ತಾಮ್ರದಲ್ಲಿರುವ ಎಲೆಕ್ಟ್ರೋಲೈಟ್‎ಗಳು ನೀರು ಹಾಳಾಗುವುದನ್ನು ತಡೆಗಟ್ಟುತ್ತವೆ. ಮತ್ತು ಇದರಲ್ಲಿಟ್ಟಿ ನೀರಿಗೆ ತಾಜಾತನ ಕೂಡ ಹೆಚ್ಚು. ತಾಮ್ರದಿಂದ ದೊರೆಯುವ ಇನ್ನಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ಕುರಿತು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದು ತಾಮ್ರದ ನೀರು ದೇಹಕ್ಕೆ ದಿವ್ಯಾಮೃತ ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

ತಾಮ್ರವು ನೀರನ್ನು ಶುದ್ಧೀಕರಿಸುವ ಗುಣಗಳನ್ನು ತನ್ನಲ್ಲಿ ಒಳಗೊಂಡಿದೆ. ಅದರಲ್ಲೂ ಬ್ಯಾಕ್ಟೀರಿಯಾ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದ್ದರಿಂದ ತಾಮ್ರದ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸುವುದರಿಂದ ನೈಸರ್ಗಿಕವಾಗಿ ನೀರು ಶುದ್ಧವಾಗುತ್ತದೆ ಹಾಗು ಬ್ಯಾಕ್ಟೀರಿಯಾಗಳಿಂದ ಮುಕ್ತವಾಗುತ್ತದೆ.

ಥೈರಾಯ್ದ್ ಕಾರ್ಯ ವೈಖರಿಯನ್ನು ಸುಗಮಗೊಳಿಸುತ್ತದೆ

ಥೈರಾಯ್ದ್ ಕಾರ್ಯ ವೈಖರಿಯನ್ನು ಸುಗಮಗೊಳಿಸುತ್ತದೆ

ತಾಮ್ರವು ಥೈರಾಯ್ಡ್ ಗ್ರಂಥಿಯು ಸುಗಮವಾಗಿ ಕಾರ್ಯ ನಿರ್ವಹಿಸಲು ಅತ್ಯಗತ್ಯವಾಗಿ ಬೇಕಾಗುತ್ತದೆ. ಬಹುತೇಕ ಸಂದರ್ಭಗಳಲ್ಲಿ ತಾಮ್ರದ ಕೊರತೆಯು ಥೈರಾಯ್ಡ್ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕುಡಿಯುವ ನೀರನ್ನು ತಾಮ್ರದ ಪಾತ್ರೆಯಲ್ಲಿ ಇಟ್ಟು ಕುಡಿಯುವುದರಿಂದ ಈ ಆರೋಗ್ಯದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

ಅರ್ಥರಿಟಿಸ್ ನೋವನ್ನು ಪರಿಹರಿಸುತ್ತದೆ

ಅರ್ಥರಿಟಿಸ್ ನೋವನ್ನು ಪರಿಹರಿಸುತ್ತದೆ

ಉರಿಯೂತದಂತಹ ಸಮಸ್ಯೆಗಳಿಗೆ ತಾಮ್ರವು ಒಳ್ಳೆಯ ಪರಿಹಾರವಾಗಿದೆ. ಇದರಲ್ಲಿ ಉರಿಯೂತದ ವಿರುದ್ಧ ಹೋರಾಡುವ ಗುಣಗಳು ಇವೆ. ಇದು ಕೀಲುಗಳಲ್ಲಿ ರಿಯುಮಟೊಯ್ಡ್ ಅರ್ಥರಿಟಿಸ್‍ನಿಂದ ಉಂಟಾಗುವ ನೋವನ್ನು ನಿವಾರಿಸುತ್ತದೆ.

ಗಾಯಗಳನ್ನು ಶೀಘ್ರ ಗುಣಪಡಿಸುತ್ತದೆ

ಗಾಯಗಳನ್ನು ಶೀಘ್ರ ಗುಣಪಡಿಸುತ್ತದೆ

ತಾಮ್ರವು ಹೊಸ ಜೀವಕೋಶಗಳನ್ನು ಬೆಳೆಯಲು ಮತ್ತು ಗಾಯಗಳನ್ನು ಶೀಘ್ರವಾಗಿ ಗುಣಪಡಿಸುವ ಗುಣಗಳನ್ನು ತನ್ನಲ್ಲಿ ಒಳಗೊಂಡಿದೆ. ಇದರಲ್ಲಿ ಆಂಟಿ-ವೈರಲ್ ಮತ್ತು ಆಂಟಿ-ಬ್ಯಾಕ್ಟೀರಿಯಾ ಗುಣಗಳಿದ್ದು, ಇನ್‍ಫೆಕ್ಷನ್ ಹೆಚ್ಚಾಗದಂತೆ ಇವುಗಳು ನೋಡಿಕೊಳ್ಳುತ್ತವೆ.

ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ

ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ

ತಾಮ್ರವು ತನ್ನಲ್ಲಿ ಜೀರ್ಣ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುವ, ನಿಧಾನ ಸಂಕೋಚನ ಮತ್ತು ಜಠರಕ್ಕೆ ವಿಶ್ರಾಂತಿಯನ್ನು ಒದಗಿಸುವ ಅಪರೂಪದ ಅಂಶಗಳನ್ನು ಹೊಂದಿದೆ. ಆದ್ದರಿಂದಲೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಇಟ್ಟು ಕುಡಿಯುವುದರಿಂದ ಜೀರ್ಣ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಅನಿಮಿಯಾವನ್ನು ನಿವಾರಿಸುತ್ತದೆ

ಅನಿಮಿಯಾವನ್ನು ನಿವಾರಿಸುತ್ತದೆ

ತಾಮ್ರವು ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಕರಿಸುತ್ತದೆ. ದೇಹದಲ್ಲಿ ರಕ್ತ ಕೊರತೆ ಎಂದರೆ ಅನಿಮಿಯಾವನ್ನು ನಿವಾರಿಸಲು ಕಬ್ಬಿಣಾಂಶವು ಪ್ರಮುಖವಾಗಿ ಬೇಕಾಗುತ್ತದೆ. ಆದರೆ ತಾಮ್ರವು ಸಹ ಈ ಪ್ರಕ್ರಿಯೆಗೆ ಸ್ವಲ್ಪ ಪ್ರಮಾಣದಲ್ಲಿ ಬೇಕಾಗುತ್ತದೆ. ಇದನ್ನು ಯಾವ ಖನಿಜವು ಪೂರೈಸಲು ಸಾಧ್ಯವಾಗುವುದಿಲ್ಲ.

ಗರ್ಭಿಣಿಯಾಗಿರುವಾಗ

ಗರ್ಭಿಣಿಯಾಗಿರುವಾಗ

ನಿಮ್ಮ ರೋಗ ನಿರೋಧಕ ಶಕ್ತಿಯು ಗರ್ಭಿಣಿಯಾಗಿರುವಾಗ ಹಲವಾರು ಸವಾಲುಗಳಿಗೆ ಒಳಪಡುತ್ತದೆ. ಆಗ ನಿಮ್ಮನ್ನು ಹಾಗು ನಿಮ್ಮ ಮಗುವನ್ನು ರೋಗಗಳಿಂದ ಮತ್ತು ಇನ್‍ಫೆಕ್ಷನ್‍ನಿಂದ ಕಾಪಾಡಿಕೊಳ್ಳಲು ತಾಮ್ರದ ಪಾತ್ರೆಯಲ್ಲಿ ನೀರನ್ನು ಇಟ್ಟು ಕುಡಿಯಿರಿ.

ಕ್ಯಾನ್ಸರ್ ವಿರುದ್ಧ ರಕ್ಷಣೆಯನ್ನು ನೀಡುತ್ತದೆ

ಕ್ಯಾನ್ಸರ್ ವಿರುದ್ಧ ರಕ್ಷಣೆಯನ್ನು ನೀಡುತ್ತದೆ

ತಾಮ್ರದಲ್ಲಿ ಅದ್ಬುತವಾದ ಆಂಟಿ ಆಕ್ಸಿಡೆಂಟ್‍ ಗುಣಗಳು ಇವೆ. ಆದ್ದರಿಂದ ಇದು ಕ್ಯಾನ್ಸರ್ ಕೋಶಗಳು ಬೆಳವಣಿಗೆಯಾಗುವುದನ್ನು ತಡೆಯುತ್ತದೆ. ದೇಹದಲ್ಲಿ ಫ್ರೀ ರಾಡಿಕಲ್‍ಗಳಿಂದ ಆಗುವ ಹಾನಿಯನ್ನು ಇದು ಸರಿಪಡಿಸುತ್ತದೆ.

ವಯಸ್ಸಾದಂತೆ ಕಾಣುವುದನ್ನು ನಿಧಾನಗೊಳಿಸುತ್ತದೆ

ವಯಸ್ಸಾದಂತೆ ಕಾಣುವುದನ್ನು ನಿಧಾನಗೊಳಿಸುತ್ತದೆ

ತಾಮ್ರದಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಮುಖದ ಮೇಲೆ ಕಾಣುವ ಸುಕ್ಕುಗಳು, ಗೆರೆಗಳು ಮತ್ತು ಕಲೆಗಳನ್ನು ನಿವಾರಿಸುತ್ತದೆ. ತಾಮ್ರದಿಂದ ನಿಮ್ಮ ತ್ವಚೆ ಮತ್ತು ಕೂದಲುಗಳಿಗೆ ಸ್ವಾಭಾವಿಕವಾಗಿ ಶಕ್ತಿಯು ದೊರೆಯುತ್ತದೆ.

ಚರ್ಮದ ಆರೋಗ್ಯ

ಚರ್ಮದ ಆರೋಗ್ಯ

ಆಯುರ್ವೇದ ತಜ್ಞರು ಹೇಳುವ ಪ್ರಕಾರ ತಾಮ್ರದ ಪಾತ್ರೆಯಲ್ಲಿ ಹಾಕಿರುವ ನೀರನ್ನು ನಿಯಮಿತವಾಗಿ ಬೆಳಗಿನ ಜಾವ ಕುಡಿಯುದರಿಂದ ಮೊಡವೆ ಮುಕ್ತ ಮತ್ತು ಸುಂದರ ತ್ವಚೆ ಪಡೆಯಬಹುದು.

ರಕ್ತಹೀನತೆ ತಡೆಯುತ್ತದೆ

ರಕ್ತಹೀನತೆ ತಡೆಯುತ್ತದೆ

ನಮ್ಮ ದೇಹದಲ್ಲಿ ನಡೆಯುವ ಹೆಚ್ಚಿನ ಕಾರ್ಯಗಳಿಗೆ ತಾಮ್ರವು ಬೇಕಾಗುತ್ತದೆ ಎನ್ನುವುದು ಅತ್ಯಂತ ಮಹತ್ವದ ವಿಚಾರ. ಜೀವಕೋಶ ನಿರ್ಮಾಣದಿಂದ ಹಿಡಿದು, ಕಬ್ಬಿಣ ಹೀರುವಿಕೆ ಸಹಿತ ನಿಮ್ಮ ದೇಹಕ್ಕೆ ತಾಮ್ರವು ಪ್ರಮುಖ ಖನಿಜಾಂಶವಾಗಿದೆ. ಈ ಕಾರಣದಿಂದಾಗಿ ರಕ್ತಹೀನತೆ ಬರದಂತೆ ತಡೆಯುತ್ತದೆ.

English summary

Benefits Of Drinking Water From Copper Vessel

The Indian tradition of drinking water from a copper vessel is based on Ayurveda. So water stored in a copper vessel remains fresh for days at a stretch. The following are the various health benefits of drinking water from a copper vessel.
X
Desktop Bottom Promotion