For Quick Alerts
ALLOW NOTIFICATIONS  
For Daily Alerts

ಸ್ತನಕ್ಕೆ ಬರುವ ಕ್ಯಾನ್ಸರ್ ಸಾಧ್ಯತೆಗಳನ್ನು ಕಡಿಮೆಮಾಡುವ ಉಪಯುಕ್ತ 7 ಸಲಹೆಗಳು

By Super
|

ಕಳೆದ ಎರಡು ದಶಕಗಳಿಂದ ನಮ್ಮ ಭಾರತದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚುಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಇದರಿಂದ ಕ್ಯಾನ್ಸರ್ ಖಾಯಿಲೆಗಳಲ್ಲಿ ಸ್ತನಕ್ಕೆ ತಗಲುವ ಖಾಯಿಲೆಗಳೇ ಅಧಿಕವಾಗಿದ್ದು, ಸ್ತ್ರೀ ಮರಣಗಳ ಪ್ರಮಾಣ ಬಹಳಷ್ಟು ಹೆಚ್ಚಾಗಿದೆಯೆಂದು ಮಾಹಿತಿಗಳ ಪ್ರಕಾರ ತಿಳಿದುಬಂದಿದೆ.

ಇತ್ತೀಚಿನ ಅಧ್ಯಯನದ ಪ್ರಕಾರ ಪ್ರತಿ 28 ಮಹಿಳೆಯರಲ್ಲಿ ಓರ್ವ ಮಹಿಳೆ ಸ್ತನ ಕ್ಯಾನ್ಸರಿನಿಂದ ಬಳಲುತ್ತಾರೆ. ನಗರಗಳಲ್ಲಿ ಈ ರೀತಿಯಿದ್ದರೆ ಗ್ರಾಮೀಣಪ್ರದೇಶಗಳಲ್ಲಿ ಪ್ರತಿ 60 ಮಹಿಳೆಯರಲ್ಲಿ ಓರ್ವ ಮಹಿಳೆ ಸ್ತನ ಕ್ಯಾನ್ಸರಿನಿಂದ ಬಳಲುತ್ತಾರೆ.

ಆದರೆ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿರಲು ಯಾವ ನಿರ್ದಿಷ್ಟ ಕಾರಣವಿಲ್ಲ. ಬಹುಶಃ ನಮ್ಮ ಈಗಿನ ಜೀವವನ ಶೈಲಿ ಹಾಗೂ ಅನುವಂಶಿಕತೆ ಇವುಗಳಿಂದ ಮಾತ್ರ ಈ ಮಾರಣಾಂತ್ರಿಕ ರೋಗ ಬರಲು ಸಾಧ್ಯವಿದೆ. ಈ ಸ್ತನ ಕ್ಯಾನ್ಸರಿನ ಅಪಾಯವನ್ನು ಕಡಿಮೆಮಾಡಲು ಕೆಲವು ಸಲಹೆಗಳು ಇಲ್ಲಿವೆ.

ಕೀಮೋಥೆರಪಿ ಮಾಡಿಸಿದವರಿಗೆ ಉತ್ತಮವಾದ 10 ಆಹಾರ

ನಿಯಮಿತವಾಗಿ ವ್ಯಾಯಾಮ ಮಾಡಿ:

ನಿಯಮಿತವಾಗಿ ವ್ಯಾಯಾಮ ಮಾಡಿ:

ನಿಯಮಿತವಾಗಿ ಕ್ರಮಬದ್ಧವಾಗಿ ವ್ಯಾಯಾಮದಲ್ಲಿ ತೊಡಗಿಸಿಕೊಂಡಿದ್ದಲ್ಲಿ ಸ್ತನ ಕ್ಯಾನ್ಸರನ್ನು ತಡೆಗಟ್ಟುವಲ್ಲಿ ಪ್ರಯೋಜನಕಾರಿಯಾಗಿರುತ್ತದೆ. ಹಾಗೂ ಮನೆಯಲ್ಲಿನ ಕ್ರಮಬದ್ಧವಾಗಿ ಮಾಡುವುದು ಅತ್ಯಗತ್ಯ. ಶಾರೀರಿಕ ಚಟುವಟಿಕೆಗಳಿಂದ ಈಸ್ಟ್ರೋಜೆನ್ ಮತ್ತು ಟೆಸ್ಟೊಸ್ಟೆರಾನ್ ನಂತಹ ಹಾರ್ಮೋನುಗಳು ಬಿಡುಗಡೆಯಾಗಿ ಶರೀರದಲ್ಲಿರುವ ಕೊಬ್ಬಿನ ಅಂಶದ ಪ್ರಮಾಣವನ್ನು ಕಡಿಮೆಮಾಡುತ್ತವೆ. ಈ ಕೊಬ್ಬಿನ ಅಂಶದಿಂದಲೇ ಕ್ಯಾನ್ಸರ್ ಉಂಟುಮಾಡುವ ಗೆಡ್ಡೆಗಳು ಅಥವಾ ಉಂಡೆಗಳ ಬೆಳವಣಿಗೆ ಹೆಚ್ಚಾಗುವುದು. ಆದ್ದರಿಂದ ಇವತ್ತಿನಿಂದಲೇ ಕೇವಲ 20-ನಿಮಿಷಗಳ ವ್ಯಾಯಾಮಾಡಿ ಈ ಭೀಕರ ಮತ್ತು ಭಯಂಕರ ಖಾಯಿಲೆಯಿಂದ ದೂರವಿರಿ.

ಮದ್ಯಪಾನ ಸೇವನೆ ಮಾಡಬೇಡಿ:

ಮದ್ಯಪಾನ ಸೇವನೆ ಮಾಡಬೇಡಿ:

ಹಲವಾರು ಸಂಶೋಧನೆಗಳ ಪ್ರಕಾರ ಮದ್ಯಪಾನಮಾಡುವುದರಿಂದ ಸ್ತನ ಕ್ಯಾನ್ಸರಿಗೆ ಒಂದು ಕಾರಣವೆಂದು ತಿಳಿದುಬಂದಿದೆ. ಆದ್ದರಿಂದ ನೀವು ಮದ್ಯಪಾನಮಾದುವುದನ್ನು ಕಡಿಮೆಮಾಡಿ ಇಲ್ಲ ಸಂಪೂರ್ಣವಾಗಿ ಬಿಟ್ಟುಬಿಡಿ. ಮದ್ಯಪಾನದಿಂದ ನಿಮಗೆ ಯಾವ ಶಕ್ತಿಯೂ ಬರುವುದಿಲ್ಲ ಮತ್ತು ಅದನ್ನು ಬಿಟ್ಟು ಇರುವುದಕ್ಕಾಗುವಿದಿಲ್ಲವೆಂದುಕೊಳ್ಳಬೇಡಿ. ಅದರ ಬದಲು, ಹಣ್ಣುರಸಗಳನ್ನು ಕುಡಿಯಿರಿ. ಅವುಗಳಿಂದ ನಿಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ ಮತ್ತು ಬಹಳ ಪ್ರಯೋಜನಕಾರಿಯಾಗಿರುತ್ತದೆ.

ಸ್ತನ್ಯಪಾನ:

ಸ್ತನ್ಯಪಾನ:

ಮಕ್ಕಳಿಗೆ ಸ್ತನ್ಯಪಾನ ಮಾಡಿಸುವ ಮಹಿಳೆಯರಿಗೆ ಇತರ ಸ್ತನ್ಯಪಾನ ಮಾಡಿಸದೇಇರುವ ಮಹಿಳೆಯರಿಗೆ ಹೋಲಿಸಿದರೆ ಶೇಖಡಾ ಐದರಷ್ಟು ಸ್ತನ ಕ್ಯಾನ್ಸರ್ ಬರುವುದಿಲ್ಲ. ಹಲವು ಅಧ್ಯಯನಗಳ ಪ್ರಕಾರ ಯಾವ ಮಹಿಳೆಯರು ಹೆಚ್ಚು ಕಾಲ ಸ್ತನ್ಯಪಾನಾ ಮಾಡುಸುತ್ತಾರೋ ಅಂತಯ ಮಹಿಳೆಯರಿಅಗೆ ಸ್ತನ ಕ್ಯಾನ್ಸರ್ ಬರುವ ಸಾದ್ಯತೆಗಳು ಕಡಿಮೆ. ಸ್ತನ್ಯಪಾನ ಮಾಡಿಸುವುದರಿಂದ ಸ್ತನ ಕ್ಯಾನ್ಸರಿಗೆ ಕಾರಣವಾದ ಈಸ್ಟ್ರೋಜೆನ್ ಹಾರ್ಮೋನ್ ಎಣಿಕೆ ಕಡಿಮೆಯಾಗುತ್ತದೆ.

ದೇಹವು ಸ್ಥೂಲದೇಹವಾಗುವುದನ್ನು ತಪ್ಪಿಸಿ:

ದೇಹವು ಸ್ಥೂಲದೇಹವಾಗುವುದನ್ನು ತಪ್ಪಿಸಿ:

ಅತಿಯಾದ ಸ್ತೂಲಕಾಯವಿರುವುದು ಅಥವ ಬೊಜ್ಜು ದೇಹ ಕೂಡ ಸ್ತನ ಕ್ಯಾನ್ಸರ್ ಬರುವುದಕ್ಕೆ ಒಂದು ಕಾರಣವಾಗಿದೆ. ಸ್ಥೂಲಕಾಯವಿರುವ ಮಹಿಳೆಯರಿಗೆ ಋತುಬಂಧನಂತರ ವಿಶೇಷವಾಗಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ತಡೆಯಲು ಶರೀರದ ತೂಕವನ್ನು ಹೆಚ್ಚಾಗಲು ಬಿಡಬೇಡಿ.

ಆರೋಗ್ಯಕರ ಆಹಾರವನ್ನೇ ಸೇವಿಸಿ:

ಆರೋಗ್ಯಕರ ಆಹಾರವನ್ನೇ ಸೇವಿಸಿ:

ಆದಷ್ಟೂ ನಿಮ್ಮ ಆಹಾರದಲ್ಲಿ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ ಮತ್ತು ಕೊಬ್ಬು ಹಾಗೂ ಕಾರ್ಬೋಹೈದ್ರೇಟ್ ಇರ್ವುಅ ಆಹಾರಗಳನ್ನು ನಿಷೇಧಿಸಿ. ಕೊಬ್ಬು ಅಂಶವಿರುವ ಆಹಾರಗಳನ್ನು ಸೇವಿಸುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚು.

ಸಿದ್ಧಪಡಿಸಿದ ಅಹಾರಗಳ ಮತ್ತು ಪಾನೀಯಗಳ ಸೇವನೆಯನ್ನು ತಪ್ಪಿಸಿ:

ಸಿದ್ಧಪಡಿಸಿದ ಅಹಾರಗಳ ಮತ್ತು ಪಾನೀಯಗಳ ಸೇವನೆಯನ್ನು ತಪ್ಪಿಸಿ:

ಸಿದ್ಧಪಡಿಸಿದ ಅಹಾರಗಳು ಮತ್ತು ಪಾನೀಯಗಳಲ್ಲಿ ಕೆಲವು ರಾಸಾಯನಿಕ ಸಂಯುಕ್ತಗಳಿದ್ದು ಅವುಗಳು ಈಸ್ಟ್ರೋಜೆನ್ ತರಹ ಕೆಲಸಮಾಡುವ ಸಾಧ್ಯತೆಗಳು ಇರುವುದರಿಂದ ಅಂತಹ ಆಹಾರಗಳನ್ನು ಆದಷ್ಟೂ ಕಡಿಮೆ ಸೇವಿಸಿ ಅಥವಾ ಸಂಪೂರ್ಣವಾಗಿ ನಿಷೇಧಿಸಿ. ಹಾಗೆ ಮಾಡುವುದರಿಂದ ಸ್ತನ ಕ್ಯಾನ್ಸರ್ ಬರುವುದನ್ನು ತಡೆಯಬಹುದು. ಆಹರಗಳನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದರೂ ಕೂಡ ಈ ರೋಗವು ಬರುವ ಸಾಧ್ಯತೆಗಳು ಹೆಚ್ಚು. ಆಹಾರಗಳನ್ನು ಹೆಚ್ಚಿನ ತಾಪಮಾನದಲ್ಲಿ ಹುರಿಯುವಾಗ ಅಥವಾ ಕರೆಯುವಾಗ ಕೂಡ ಅಕ್ರಿಲ್ ಅಮೈಡ್ ಎಂಬ ಕ್ಯಾನ್ಸರ್ ರೋಗಬರುವ ರಾಸಾಯನ ಉತ್ಪತ್ತಿಯಾಗುತ್ತದೆ.

ಸೂರ್ಯನ ಕಿರಣ ಶರೀರಕ್ಕೆ ಒಳ್ಳೆಯದು:

ಸೂರ್ಯನ ಕಿರಣ ಶರೀರಕ್ಕೆ ಒಳ್ಳೆಯದು:

ಕೆಲವು ಅಧ್ಯಯನಗಳ ಪ್ರಕಾರ ಸೂರ್ಯನ ಬೆಳಕಿನಿಂದ ಉತ್ಪತ್ತಿಯಾಗುವ ವಿಟಮಿನ್ ಡಿ ದೇಹದಲ್ಲಿರುವ ವಿರೋಧಿ ಕ್ಯಾನ್ಸರ್ ಹಾರ್ಮೋನ್ ಅನ್ನು ಪ್ರಚೋದಿಸುತ್ತದೆ ಎಂದು ತಿಳಿಸಿವೆ. ಆದ್ದರಿಂದ ಬಿಸಿಲಿರುವಾಗ ಇಂದಿನಿಂದ ಹೊರಗೆ ಹೋಗಲು ಹಿಂಜರಿಯಬೇಡಿ. ಹಾಗೂ, ಅತಿ ಹೆಚ್ಚಿನಸಮಯವನ್ನು ಬಿಸಿಲಿನಲ್ಲಿ ಕಳೆಯಬೇಡಿ, ಯಾಕೆಂದರೆ ಅತಿ ಹೆಚ್ಚಿನ ಒಡ್ಡುವಿಕೆಯಿಂದ ಚರ್ಮ ಕ್ಯಾನ್ಸರ್ ಬರುವ ಸಾಧ್ಯತೆಗಳಿರುತ್ತದೆ.

English summary

7 Really Helpful Tips to Reduce the Chances of Breast Cancer

Breast cancer cases in India have accelerated since past two decades. Currently, it has become the most common cancer among all types of cancers, thereby, raising the female mortality rate of the country.
Story first published: Saturday, June 7, 2014, 14:48 [IST]
X
Desktop Bottom Promotion