For Quick Alerts
ALLOW NOTIFICATIONS  
For Daily Alerts

ಒತ್ತಡ ನಿವಾರಣೆಗಾಗಿ ಇಲ್ಲಿದೆ 10 ಯೋಗಾಸನಗಳು!

By Super
|

ಒತ್ತಡವು ನಮ್ಮ ಜೀವನದ ಅನುಕ್ಷಣವನ್ನು ನುಂಗಿ ಹಾಕುತ್ತದೆ. ಜೀವನದಲ್ಲಿ ನಾವು ಒಂದಲ್ಲ ಒಂದು ಕಾರಣಕ್ಕಾಗಿ ಒತ್ತಡಕ್ಕೆ ಒಳಗಾಗಿರುತ್ತೇವೆ. ಇದು ನಮ್ಮ ಆರೋಗ್ಯವನ್ನು ಸಹ ಹಾಳು ಮಾಡುತ್ತದೆ. ನಾವು ಸದಾ ಉದ್ವೇಗದಿಂದ ಇರುವ ಕಾರಣ ಸರಿಯಾಗಿ ನಿದ್ದೆಯನ್ನು ಸಹ ಮಾಡಲು ನಮ್ಮಿಂದ ಆಗುವುದಿಲ್ಲ.

ಕೆಲವೊಂದು ಯೋಗಾಸನಗಳು ನಮಗೆ ಉತ್ತಮ ನಿದ್ದೆಯನ್ನು ಮಾಡಲು ಸಹಾಯ ಮಾಡುತ್ತವೆ. ಯೋಗಾಸನಗಳು ಒತ್ತಡವನ್ನು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ದೂರ ಮಾಡುವುದರ ಜೊತೆಗೆ ನಮಗೆ ಒಳ್ಳೆಯ ನಿದ್ದೆಯನ್ನು ಮಾಡಲು ಸಹ ನೆರವಾಗುತ್ತದೆ. ಉದ್ವೇಗ ಮತ್ತು ಒತ್ತಡಗಳು ಇಂದು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಹಾಗೆಂದು ಇವೆರಡು ನಮ್ಮನ್ನು ಆಳಲು ನಾವು ಬಿಡಬಾರದು. ನೀವು ಒತ್ತಡಕ್ಕೆ ಒಳಗಾದಾಗ ನಿಮ್ಮ ದೇಹದಲ್ಲಿ ಕೊರ್ಟಿಸೊಲ್ ಎಂಬ ಹಾರ್ಮೊನ್ ಬಿಡುಗಡೆಯಾಗಿ ರಕ್ತದೊಂದಿಗೆ ಸೇರಿಹೋಗುತ್ತದೆ.

ಸುಖ ನಿದ್ರೆಗೆ ಮಾಡಬೇಕಾದ ಯೋಗಾಸನಗಳು

ಈ ಹಾರ್ಮೋನ್ ನಿಮ್ಮ ದೇಹಕ್ಕೆ ವಿಪರೀತವಾದ ಹಾನಿಯನ್ನುಂಟು ಮಾಡುತ್ತದೆ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ ಮತ್ತು ರಕ್ತದ ಒತ್ತಡವನ್ನು ಹೆಚ್ಚುಗೊಳಿಸುವ ಮೂಲಕ ಹೃದಯದ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಯೋಗಾಸನಗಳನ್ನು ಮಾಡುವ ಮೂಲಕ ಈ ಒತ್ತಡವನ್ನು ಉಂಟು ಮಾಡುವ ಹಾರ್ಮೋನ್ ಅನ್ನು ಹತೋಟಿಯಲ್ಲಿಡಬಹುದು.

ಯೋಗಾಸನವು ವ್ಯಾಯಾಮದಂತೆ. ಇದು ನಿಮ್ಮ ದೇಹವನ್ನು ಆಧ್ಯಾತ್ಮಿಕ ಮಟ್ಟದಲ್ಲಿ ಸುಧಾರಿಸುತ್ತದೆ. ಆದ್ದರಿಂದಲೇ ಯೋಗವು ನಿಮ್ಮ ಮನಸ್ಸನ್ನು ಪ್ರಸನ್ನಗೊಳಿಸಿ ಒತ್ತಡವನ್ನು ಮತ್ತು ಉದ್ವೇಗವನ್ನು ನಿಭಾಯಿಸುತ್ತದೆ. ಇದು ನಿಮ್ಮ ಆತ್ಮಕ್ಕು ಸಹ ವ್ಯಾಯಾಮವನ್ನು ಒದಗಿಸುತ್ತದೆ. ಒತ್ತಡವು ನಿಮ್ಮ ದೇಹದ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಯಾವುದೇ ಕಾರಣಕ್ಕು ತಪ್ಪಾಗಿ ಅಂದಾಜು ಮಾಡಬೇಡಿ. ಒಂದು ವೇಳೆ ನಿಮಗೂ ಸಹ ನಿದ್ದೆ ಮಾಡುವುದರಲ್ಲಿ ಯಾವುದೇ ತೊಂದರೆಗಳು ಇದ್ದಲ್ಲಿ, ಈ ಯೋಗಾಸನಗಳನ್ನು ಪ್ರಯತ್ನಿಸಿ, ಒತ್ತಡದಿಂದ ಬಿಡುಗಡೆಯನ್ನು ಹೊಂದಿ.

ಪ್ರಾಣಾಯಾಮದ 10 ಆರೋಗ್ಯಕಾರಿ ಲಾಭಗಳು

ಸುಖಾಸನ

ಸುಖಾಸನ

ಇದು ಯೋಗದ ಮೂಲ ಆಸನ. ಒತ್ತಡವನ್ನು ನಿವಾರಿಸಲು ಈ ಆಸನವು ತುಂಬಾ ಸಹಾಕಾರಿ. ಇದಕ್ಕಾಗಿ ನೀವು ಚಕ್ಕಳ ಮಕ್ಕಳ ಹಾಕಿಕೊಂಡು ಕೂರಬೇಕು. ನಂತರ ನಿಮ್ಮ ಮನಸ್ಸನ್ನು ಪ್ರಶಾಂತಗೊಳಿಸಿ. ಇದು ನಿಮ್ಮ ಮನಸ್ಸನ್ನು ಪ್ರಸನ್ನಗೊಳಿಸುತ್ತದೆ. ಜೊತೆಗೆ ನಿಮ್ಮ ಬೆನ್ನು ಮೂಳೆಗು ಸಹ ವಿಶ್ರಾಂತಿಯನ್ನು ನೀಡುತ್ತದೆ.

ಪ್ರಾಣಾಯಾಮ

ಪ್ರಾಣಾಯಾಮ

ನಾವು ಸರಿಯಾಗಿ ಉಸಿರಾಡದೆ ಇರುವುದು ಸಹ ಒತ್ತಡದ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಅದೇ ಉಸಿರಾಟವನ್ನು ಕ್ರಮಬದ್ಧಗೊಳಿಸುವ ಮೂಲಕ ಅಧಿಕ ಪ್ರಮಾಣದ ಆಮ್ಲಜನಕವನ್ನು ನಮ್ಮ ದೇಹಕ್ಕೆ ಒದಗಿಸುವ ಮೂಲಕ, ನಾವು ಪವಾಡ ಸದೃಶ್ಯ ಬೆಳವಣಿಗೆಗಳನ್ನು ಕಾಣಬಹುದು. ದೀರ್ಘವಾದ ಉಸಿರಾಟವು ನಮ್ಮ ಮನಸ್ಸಿನಲ್ಲಿರುವ ಚಿಂತೆಗಳನ್ನು ದೂರ ಮಾಡುತ್ತದೆ.

ಬಾಲಾಸನ

ಬಾಲಾಸನ

ಮಗುವಿನ ಆಸನವು ನಮ್ಮ ಮೆದುಳಿನ ಮೇಲೆ ಅಮೋಘವಾದ ಮನಃಶಾಸ್ತ್ರೀಯ ಪರಿಣಾಮವನ್ನು ಬೀರುತ್ತದೆ. ಇದಕ್ಕಾಗಿ ನೀವು ಭ್ರೂಣದಂತೆ ಕೂರಬೇಕಾಗುತ್ತದೆ. ನೀವು ಮಗುವಿನಂತೆ ಕೂರುವುದರಿಂದ ತಾಯಿಯ ಗರ್ಭದಲ್ಲಿರುವಂತಹ ಅನುಭವವನ್ನು ನಿಮ್ಮದಾಗಿಸಿಕೊಳ್ಳುವಿರಿ. ಇದರಿಂದ ನಿಮ್ಮ ಮನಸ್ಸಿಗೆ ಆರಾಮ ದೊರೆಯುವುದು.

ಗರುಡಾಸಾನ

ಗರುಡಾಸಾನ

"ಗರುಡ" ಶಕ್ತಿಯ ಸಂಕೇತ. ಗರುಡನಂತೆ ನಿಲ್ಲುವ ಭಂಗಿಯು ಒತ್ತಡವನ್ನು ನಮ್ಮಿಂದ ದೂರವಿಡುವುದರ ಜೊತೆಗೆ ನಮ್ಮ ದೇಹದಲ್ಲಿ ಆಂತರಿಕ ಸಮತೋಲನವನ್ನು ಕಾಯ್ದುಕೊಳ್ಳುವುದರ ಜೊತೆಗೆ, ಏಕಾಗ್ರತೆಯನ್ನು ಸಹ ಹೆಚ್ಚಿಸುತ್ತದೆ. ಈ ಭಂಗಿಯು ನಿಮ್ಮ ಮಾನಸಿಕ ತಳಮಳಗಳ ವಿರುದ್ಧ ಸಮರ್ಥವಾಗಿ ಹೋರಾಡಲು ಸಹಕರಿಸುತ್ತದೆ.

ಮಾರ್ಜರ್ಯಾಸನ

ಮಾರ್ಜರ್ಯಾಸನ

ಬೆಕ್ಕಿನಂತೆ ಕೂರುವ ಈ ಭಂಗಿಯು ಒತ್ತಡದ ತಲೆನೋವಿನಿಂದ ನರಳುತ್ತಿರುವವರಿಗೆ ತುಂಬಾ ಸಹಕಾರಿ. ಬೆನ್ನು ಹುರಿಯ ಕೆಳಗಡೆ ತಲೆಯನ್ನು ಇಡುವುದರಿಂದ ನಿಮ್ಮ ಒತ್ತಡ ಮತ್ತು ಉದ್ವೇಗಗಳು ಕಡಿಮೆಯಾಗಿ ದೂರವಾಗುತ್ತವೆ.

ಬಿಟಿಲಾಸನ

ಬಿಟಿಲಾಸನ

ಹಸುವಿನಂತೆ ಕೂರುವ ಈ ಭಂಗಿಯು ಬೆಕ್ಕಿನ ಭಂಗಿಯಂತೆಯೇ ಒತ್ತಡವನ್ನು ನಿವಾರಿಸುತ್ತದೆ. ಇದು ಸಹ ಬೆನ್ನು ಹುರಿಗೆ ಹೇಳಿ ಮಾಡಿಸಿದ ಆಸನವಾಗಿದೆ. ಇದು ನಿಮ್ಮ ಮನಸ್ಸಿನಲ್ಲಿರುವ ಒತ್ತಡವನ್ನು ಸಂಪೂರ್ಣವಾಗಿ ನಿವಾರಿಸುವ ಶಕ್ತಿಯನ್ನು ಹೊಂದಿದೆ.

ಉತ್ತಾನ ಶಿಶೋಸನ

ಉತ್ತಾನ ಶಿಶೋಸನ

ನಾಯಿ ಮರಿಯಂತೆ ತಲೆಯನ್ನು ಮುಂದೆ ಬಾಗಿ ಕೂರುವ ಈ ಭಂಗಿಯು ಮಗುವಿನ ಭಂಗಿಯಿಂದ ಉತ್ಪತ್ತಿಯಾದ ಭಂಗಿಯಾಗಿದೆ. ಈ ಭಂಗಿಯು ನೀವು ಒತ್ತಡಕ್ಕೆ ಒಳಗಾದಾಗ ಉದ್ವೇಗಗೊಳ್ಳುವುದನ್ನು ತಡೆಯುತ್ತದೆ. ಇದು ನಿಮ್ಮ ಮೆದುಳಿಗೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ.

ಶಿರ್ಸಾಸನ

ಶಿರ್ಸಾಸನ

ತಲೆಯನ್ನು ಕೆಳಗೆ ಮಾಡಿ ಕಾಲನ್ನು ಮೇಲೆ ಮಾಡುವ ಈ ಭಂಗಿಯು ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದ ಭಂಗಿಯಾಗಿದೆ. ಆದರೆ ಈ ಆಸನವು ನೋಡುವಷ್ಟು ಸುಲಭವಲ್ಲ ಮಾಡುವುದು. ಆದರೆ ಒಮ್ಮೆ ಇದನ್ನು ಮಾಡುವುದನ್ನು ಪರಿಪೂರ್ಣವಾಗಿ ಕಲಿತಿರೆಂದರೆ ನಿಮ್ಮ ಒತ್ತಡವನ್ನು ನಿವಾರಿಸಿಕೊಳ್ಳಲು ಈ ಆಸನ ತುಂಬಾ ಸಹಕರಿಸುತ್ತದೆ. ಈ ಭಂಗಿಯು ಮೆದುಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

ಸೇತು ಬಂಧ ಸರ್ವಾಂಗಾಸನ

ಸೇತು ಬಂಧ ಸರ್ವಾಂಗಾಸನ

ಯಾವಾಗ ನಿಮಗೆ ಒತ್ತಡವು ಕಾಡುತ್ತದೆಯೋ, ಆಗ ಅದು ನಿಮ್ಮ ಬೆನ್ನು ಮತ್ತು ಕುತ್ತಿಗೆಗಳ ಸ್ನಾಯುಗಳನ್ನು ಗಂಟು ಹಾಕುತ್ತದೆ. ಅದಕ್ಕಾಗಿ ಈ ಸೇತುವೆಯಂತಹ ಭಂಗಿಯನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಒತ್ತಡವನ್ನು ಮತ್ತು ಉದ್ವೇಗವನ್ನು ನಿವಾರಿಸಿಕೊಳ್ಳುವುದರ ಜೊತೆಗೆ ಬೆನ್ನು ನೋವಿನಿಂದಲೂ ಮುಕ್ತಿಯನ್ನು ಪಡೆಯಬಹುದು. ನೆಲದ ಮೇಲೆ ಆಕಾಶ ನೋಡುತ್ತ ಮಲಗಿ, ಕುತ್ತಿಗೆಯನ್ನು ನೆಲದ ಮೇಲೆ ಹಾಗೆಯೇ ಇಟ್ಟು ಇಡೀ ದೇಹವನ್ನು ಸೇತುವೆಯಂತೆ ಕಮಾನಿನಾಕಾರಕ್ಕೆ ತನ್ನಿ ಅಷ್ಟೇ ಅದೇ ಸೇತು ಬಂಧ ಸರ್ವಾಂಗಾಸನ.

ಶವಾಸನ

ಶವಾಸನ

ಶವದಂತೆ ಮಲಗುವ ಈ ಆಸನವು ಯೋಗಾಸನದಲ್ಲಿ ವಿಶ್ರಾಂತಿಯನ್ನು ಪಡೆಯಲು ಬಳಸುವ ಸಾಧನವಾಗಿದೆ. ನಿಮ್ಮ ಕಾಲು, ಕೈಗಳನ್ನು ಚಾಚಿಕೊಂಡು ಶವದಂತೆ ಮಲಗಿಕೊಳ್ಳಿ. ಯಾವಾಗ ನಿಮ್ಮ ದೇಹವನ್ನು ಶವದಂತೆ ವಿಶ್ರಾಂತಿಗೆ ತಳ್ಳುತ್ತೀರೋ, ಆಗ ಒತ್ತಡವು ಸಹ ಹೇಳದೆ ಕೇಳದೆ ಮಾಯವಾಗುತ್ತದೆ.

English summary

10 Yoga Poses For Stress Relief

Yoga is much more than just exercise. It works on your body at the spiritual level. It is an exercise for your soul. If you have been having trouble sleeping, try these yoga poses for stress relief.
X
Desktop Bottom Promotion