For Quick Alerts
ALLOW NOTIFICATIONS  
For Daily Alerts

ನಿಮ್ಮ ಬುದ್ಧಿವಂತಿಕೆಯನ್ನು ಕೆಡಿಸುವ 10 ಕೆಟ್ಟ ಅಭ್ಯಾಸಗಳು

By manu
|

ನಮ್ಮಲ್ಲಿ ಬಹುತೇಕರಿಗೆ ತಿಳಿದೇ ಇರುವುದಿಲ್ಲ. ನಾವು ಅಳವಡಿಸಿಕೊಳ್ಳುವ ಜೀವನಶೈಲಿಗಳು ಹಾಗು ಅಭ್ಯಾಸಗಳು ನಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತವೆಯೆಂಬುದನ್ನು. ನಮ್ಮ ದೇಹದಲ್ಲಿರುವ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ಮಾಡುವಂತೆ ಮಾಡಲು, ಮಾನಸಿಕ ಆರೋಗ್ಯವೇ ಅತ್ಯಂತ ಪ್ರಮುಖವಾದ ಅಂಶವಾಗಿರುತ್ತದೆ. ನಮಗೆಲ್ಲ ತಿಳಿದಿರುವಂತೆ, ನಮ್ಮ ಹಿಮ್ಮೆದುಳು ಇಡೀ ದೇಹದ ಕಾರ್ಯ ವ್ಯವಸ್ಥೆಯ ಮೇಲೆ ನಿಯಂತ್ರಣದ ಜವಾಬ್ದಾರಿಯನ್ನು ಹೊಂದಿರುತ್ತದೆ.

ಆದ್ದರಿಂದ ಆರೋಗ್ಯಕರ ಜೀವನ ಶೈಲಿಯನ್ನು ಹೊಂದಿದ್ದರೆ, ಒಳ್ಳೆಯ ಮಾನಸಿಕ ಆರೋಗ್ಯವು ಇರುತ್ತದೆ. ಈ ಮಾನಸಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಕೆಲವೊಂದು ಅಂಶಗಳತ್ತ ಗಮನ ಹರಿಸುತ್ತೇವೆ. ಅದರಲ್ಲೂ ಮಾನಸಿಕ ಆರೋಗ್ಯವನ್ನು ಹಾಳು ಮಾಡುವ ಅಭ್ಯಾಸಗಳತ್ತ ನಮ್ಮ ಗಮನವನ್ನು ಹರಿಸುತ್ತೇವೆ. ಮೆದುಳು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಲು 12 ಯೋಗಾಸನಗಳು

ಅಧಿಕ ನಿದ್ದೆ

ಅಧಿಕ ನಿದ್ದೆ

ವೈದ್ಯಕೀಯ ಅಧ್ಯಯನಗಳ ಪ್ರಕಾರ ತಿಳಿದು ಬಂದಿರುವ ಅಂಶವೆಂದರೆ, ಅಧಿಕ ನಿದ್ದೆಯು ಖಿನ್ನತೆಯನ್ನು ತರುತ್ತದೆ. ಅಧಿಕ ನಿದ್ದೆಯು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವುದಷ್ಟೇ ಅಲ್ಲದೆ, ಮಧುಮೇಹದಂತಹ ಕಾಯಿಲೆ ಸಹ ಬರಲು ಕಾರಣವಾಗುತ್ತದೆ. ಅಧಿಕ ನಿದ್ದೆ ಎಂದರೆ ಪ್ರತಿನಿತ್ಯ 6-9 ಗಂಟೆಗಳಿಗು ಅಧಿಕ ಕಾಲ ನಿದ್ದೆ ಮಾಡುವುದು ಎಂದರ್ಥ.

ಆಲ್ಕೋಹಾಲ್

ಆಲ್ಕೋಹಾಲ್

ಆಲ್ಕೋಹಾಲ್ ಸೇವನೆಯಿಂದ ಹಲವಾರು ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗುತ್ತೇವೆ ಎಂಬುದು ತಿಳಿದಿರುವ ವಿಚಾರವೇ. ಆದರೂ ಅಧಿಕ ಆಲ್ಕೋಹಾಲ್ ಸೇವನೆಯು ಮಾನಸಿಕ ಆರೋಗ್ಯದ ಮೇಲೆ ವಿಪರೀತವಾದ ದುಷ್ಪರಿಣಾಮವನ್ನು ಬೀರುತ್ತದೆ. ಮಧ್ಯಪಾನ ಚಟವು ಮಾನಸಿಕ ಆರೋಗ್ಯವನ್ನು ನಾಶಮಾಡುತ್ತದೆ. ಇದು ನೆನಪಿನ ಶಕ್ತಿಯನ್ನು ಹಾಳು ಮಾಡುತ್ತದೆ, ಉದ್ವೇಗ ಮತ್ತು ಖಿನ್ನತೆಯನ್ನು ಸಹ ತರುತ್ತದೆ.

ವ್ಯಾಯಾಮದ ಕೊರತೆ

ವ್ಯಾಯಾಮದ ಕೊರತೆ

ಪ್ರತಿ ನಿತ್ಯ ವ್ಯಾಯಾಮ ಮಾಡುತ್ತ ಇದ್ದರೆ, ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂಬುದು ನಮಗೆಲ್ಲರಿಗು ಗೊತ್ತಿರುವ ವಿಚಾರವೇ ಆಗಿದೆ. ಆದರೂ, ವ್ಯಾಯಾಮದ ಕೊರತೆಯು ಜನರಲ್ಲಿ ಒತ್ತಡವನ್ನು ತರುತ್ತದೆ. ಜೊತೆಗೆ ಮಾನಸಿಕ ಆರೋಗ್ಯದಲ್ಲಿ ಏರು ಪೇರನ್ನು ಉಂಟು ಮಾಡುತ್ತದೆ.

ಒತ್ತಡ

ಒತ್ತಡ

ಒತ್ತಡವನ್ನು ನಿಭಾಯಿಸುವ ಕಲೆಯು ನಿಮ್ಮ ಮಟ್ಟಿಗೆ ನಿಮಗೆ ಮಾತ್ರ ಗೊತ್ತಿರುತ್ತದೆ. ಮಾನಸಿಕ ಆರೋಗ್ಯದ ನಿಟ್ಟಿನಲ್ಲಿ ಮಾತನಾಡಬೇಕೆಂದರೆ, ಒತ್ತಡವು ಸಹ ಒಂದು ಅಭ್ಯಾಸ. ನಾವು ಅಸೌಕರ್ಯದಿಂದ ಕೂಡಿದ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದರೆ, ಅದರಿಂದ ಒತ್ತಡವು ಬರುತ್ತದೆ. ಒತ್ತಡವು ಮನುಷ್ಯನಲ್ಲಿ ಉದ್ವೇಗ ಮತ್ತು ಖಿನ್ನತೆಗಳನ್ನು ಉಂಟು ಮಾಡುತ್ತದೆ.

ಧೂಮಪಾನ

ಧೂಮಪಾನ

ಧೂಮಪಾನವು ಸಹ ಕೆಟ್ಟ ಮಾನಸಿಕ ಆರೋಗ್ಯಕ್ಕೆ ದಾರಿ ಮಾಡಿಕೊಡುವ ಚಟವಾಗಿದೆ. ಅದರಲ್ಲೂ ಅಧಿಕ ಧೂಮಪಾನ ಮಾಡುವವರಲ್ಲಿ, ಮೆದುಳಿನ ಕೋಶಗಳ ಕಾರ್ಯ ವೈಖರಿಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ. ಜೊತೆಗೆ ಇದರಿಂದ ಧೀರ್ಘ ಕಾಲದಲ್ಲಿ ನೆನಪಿನ ಶಕ್ತಿ ಮತ್ತು ಚಿತ್ತ ಚಾಂಚಲ್ಯವುಂಟಾಗುತ್ತದೆ.

ಔಷಧಿಗಳು

ಔಷಧಿಗಳು

ಔಷಧಿಗಳು ಸಹ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ, ಪ್ರತಿಕೂಲ ಪರಿಣಾಮ ಬೀರುವ ಅಂಶಗಳಾಗಿವೆ. ಅದರಲ್ಲೂ ಅಧಿಕ ಔಷಧ ಸೇವನೆಯು ಉದ್ವೇಗ ಮತ್ತು ಖಿನ್ನತೆಯಷ್ಟೇ ಅಲ್ಲದೆ ತೀವ್ರ ಸ್ವರೂಪದ ಮಾನಸಿಕ ಕಾಯಿಲೆಗಳನ್ನು ಕೊಡುಗೆಯಾಗಿ ನೀಡುತ್ತದೆ.

ನಿದ್ದೆಯ ಕೊರತೆ

ನಿದ್ದೆಯ ಕೊರತೆ

ಅಧಿಕ ನಿದ್ದೆಯಂತೆ, ನಿದ್ದೆಯ ಕೊರತೆಯು ಸಹ ಮಾನಸಿಕ ಆರೋಗ್ಯದ ಸಮತೋಲನವನ್ನು ತಪ್ಪಿಸುತ್ತದೆ. ಮನಿದ್ದೆಯ ಕೊರತೆಯು ಮನುಷ್ಯನಲ್ಲಿ ಉದ್ವೇಗವನ್ನು ಹೆಚ್ಚಿಸುತ್ತದೆ.

ಹೊಸದಾಗಿ ಏನನ್ನು ಕಲಿಯಲು ಇಷ್ಟಪಡದಿರುವುದು

ಹೊಸದಾಗಿ ಏನನ್ನು ಕಲಿಯಲು ಇಷ್ಟಪಡದಿರುವುದು

ಹೊಸತು ಎಂಬ ವಿಚಾರವು ಸಹ ಮಾನಸಿಕ ಆರೋಗ್ಯದ ವಿಚಾರದಲ್ಲಿ ತುಂಬಾ ಕೆಲಸಗಳನ್ನು ಮಾಡುತ್ತದೆ. ಹೊಸ ವಿಚಾರಗಳು ಮೆದುಳಿನ ಆರೋಗ್ಯದಲ್ಲಿ ಚುರುಕುತನವನ್ನು ನೀಡುತ್ತದೆ. ಹಾಗಾಗಿ ಹೊಸತನ್ನು ಕಲಿಯದಿದ್ದರೆ, ಚುರುಕುತನ ಬರದೆ ಮಂಕುತನ ಆವರಿಸುತ್ತದೆ. ಮನಸ್ಸು ಒಂದೇ ವಿಚಾರದಲ್ಲಿ ಕೊಳೆಯಲು ಆರಂಭಿಸುತ್ತದೆ. ಹಾಗಾಗಿ ಒಂದೇ ವಿಚಾರದಲ್ಲಿ ಕೊಳೆಯುವ ಬದಲು, ನಿಮ್ಮ ಮೆದುಳಿಗೆ ಹೊಸ ಹೊಸ ವಿಚಾರಗಳ ಆಹಾರವನ್ನು ನೀಡಿ. ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

ಸರಿಯಾಗಿ ಆಹಾರ ಸೇವಿಸದಿರುವುದು

ಸರಿಯಾಗಿ ಆಹಾರ ಸೇವಿಸದಿರುವುದು

ಯಾವಾಗಲು ಕರಿದ ತಿಂಡಿಗಳನ್ನು ಸೇವಿಸುವುದು, ಜಂಕ್ ಫುಡ್ ಮತ್ತು ಇನ್ನಿತರ ಅನಾರೋಗ್ಯಕಾರಿ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ನಾವು ನಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೇವೆ. ಅನಾರೋಗ್ಯಕಾರಿ ಆಹಾರಗಳು ನಿಮ್ಮ ಮೆದುಳಿನ ಕಾರ್ಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ. ಜೊತೆಗೆ ಹಲವಾರು ಮಾನಸಿಕ ಸಮಸ್ಯೆಗಳಿಗೆ ಗುರಿಯನ್ನಾಗಿಸುತ್ತದೆ.

ಕೆಟ್ಟ ಸಾಮಾಜಿಕ ಜೀವನ

ಕೆಟ್ಟ ಸಾಮಾಜಿಕ ಜೀವನ

ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ ಎಂದು ಹೇಳಿದ್ದಾರೆ ಬಸವಣ್ಣ. ಹಾಗಿರಬೇಕು ನಮ್ಮ ಸಹವಾಸಗಳು. ಅದನ್ನು ಬಿಟ್ಟು, ದುರ್ಜನರ ಸಹವಾಸ ಮಾಡಿದರೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ನಾವು ಅನಾರೋಗ್ಯವನ್ನು ಅನುಭವಿಸುತ್ತೇವೆ. ಅಧ್ಯಯನಗಳ ಪ್ರಕಾರ ತಿಳಿದು ಬಂದಿರುವ ವಿಚಾರವೇನೆಂದರೆ, ನಮ್ಮ ಮೆದುಳು ಶಾಲೆಗೆ ಹೋಗುವ ಸಮಯದಿಂದಲು ನಾವು ಒಡನಾಡುವ ಜನರ ಪ್ರಚೋದನೆಗಳಿಗೆ ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತ ಇರುತ್ತದೆ. ನಮ್ಮ ಒಡನಾಡಿಗಳು ಒಳ್ಳೆಯ ರೀತಿಯಲ್ಲಿ ಪ್ರಚೋದನೆ ನೀಡಿದರೆ, ನಮ್ಮ ಮೆದುಳು ಅದಕ್ಕೆ ಸ್ಪಂದಿಸುತ್ತದೆ. ಅದೇ ಅವರು ನಕಾರಾತ್ಮಕವಾಗಿ ಪ್ರಚೋದನೆ ನೀಡಿದರೆ ನಮ್ಮ ಮೆದುಳು ಸಹ ಹಾಗೆಯೇ ಸ್ಪಂದಿಸುತ್ತದೆ. ಆದ್ದರಿಂದ ನೋಡಿ ಮಾಡಿ ಒಡನಾಡಿ!.

English summary

10 Worst Habits That Kill Intelligence

We often don't realize that our habits and the lifestyles we adopt have massive capabilities to influence our mental health. Mental health is paramount to ensuring healthy functioning of almost every organ in the body. We all know of the fact that our cerebellum is responsible for coordinating the action of several internal body systems.
X
Desktop Bottom Promotion