For Quick Alerts
ALLOW NOTIFICATIONS  
For Daily Alerts

ಬೆಚ್ಚನೆ ನೀರಿನ ಜೊತೆ ಲಿಂಬೆ ಮತ್ತು ಜೇನು ಸೇವನೆ ಏಕೆ ಮಹತ್ವಪೂರ್ಣ

By Lekhaka
|

ಕುವೆಂಪುರವರ ಆತ್ಮಕಥನದಲ್ಲಿ ಅವರ ಆರೋಗ್ಯಕ್ಕಾಗಿ ಬೆಳಿಗೆದ್ದ ಕೂಡಲೇ ಒಂದು ಲೋಟ ಬೆಚ್ಚನಿಯ ನೀರಿನಲ್ಲಿ ಲಿಂಬೆ ಮತ್ತು ಜೇನುತುಪ್ಪ ಕದಡಿ ಕುಡಿಯಬೇಕೆಂದು ಆಯುರ್ವೇದ ಪಂಡಿತರು ಹೇಳಿದ ಪ್ರಕಾರ ಅವರು ಸೇವಿಸುತ್ತಿದ್ದರೆಂದು ಹೇಳಿಕೊಂಡಿದ್ದಾರೆ.

ಈ ವಿಧಾನವೇ ಅವರ ದೀರ್ಘ ಆಯಸ್ಸಿಗೆ ಕಾರಣವೂ ಆಗಿರಬಹುದು. ಏಕೆಂದರೆ ಆಯುರ್ವೇದದಲ್ಲಿ ಅಂದು ಹೇಳಲಾದ, ಇಂದು ಸಂಶೋಧನೆಗಳ ಮೂಲಕ ಧೃಢಪಟ್ಟಿರುವ ವಿಷಯಗಳಲ್ಲಿ ಬೆಳಿಗೆದ್ದು ಪ್ರಥವಾಗಿ ಸೇವಿಸುವ ಈ ಅಮೃತಪೇಯ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಬಗ್ಗೆ ಹತ್ತು ವಿಷಯಗಳನ್ನು ವಿವರಿಸಲಾಗಿದೆ. ದೇಹದಲ್ಲಿನ ಅಧಿಕ ಕೊಲೆಸ್ಟ್ರಾಲ್‌‌ಗೆ ಸೂಕ್ತ ಸಲಹೆಗಳು

ಜೀರ್ಣಕ್ರಿಯೆ ಉತ್ತಮಗೊಳ್ಳುವುದು

ಜೀರ್ಣಕ್ರಿಯೆ ಉತ್ತಮಗೊಳ್ಳುವುದು

ನಮ್ಮ ದೇಹದಲ್ಲಿ ಹಲವು ಅನೈಚ್ಛಿಕ ಕಾರ್ಯಗಳು ನಾವು ಪವಡಿಸಿದ ಬಳಿಕ ಆಗುತ್ತವೆ. ಅದರಲ್ಲಿ ಜೀರ್ಣಕ್ರಿಯೆಯ ಅಂತಿಮಭಾಗವೂ ಒಂದು. ಜಠರ ಸಂಪೂರ್ಣವಾಗಿ ಖಾಲಿಯಾಗಿ ಜಠರಾಮ್ಲದ ಹೊಸ ದಾಸ್ತಾನು ಆಗಮಿಸಿ ಮುಂದಿನ ಆಹಾರದ ನಿರೀಕ್ಷೆಯಲ್ಲಿರುತ್ತದೆ.

ಜೀರ್ಣಕ್ರಿಯೆ ಉತ್ತಮಗೊಳ್ಳುವುದು

ಜೀರ್ಣಕ್ರಿಯೆ ಉತ್ತಮಗೊಳ್ಳುವುದು

ಈಗ ಪ್ರಥಮವಾಗಿ ಈ ಪೇಯವನ್ನು ಕುಡಿಯುವುದರಿಂದ ಜೇನಿನ ಮತ್ತು ಲಿಂಬೆಯ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುತ್ತವೆ. ಜೇನಿನಲ್ಲಿರುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಪೋಷಕಾಂಶಗಳು ದೇಹದಲ್ಲಿ ಉಳಿದಿರುವ ಕೀಟಾಣುಗಳನ್ನು ಮತ್ತು ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ನಿರ್ಮೂಲನೆ ಮಾಡುತ್ತದೆ.

ಜೀರ್ಣಕ್ರಿಯೆ ಉತ್ತಮಗೊಳ್ಳುವುದು

ಜೀರ್ಣಕ್ರಿಯೆ ಉತ್ತಮಗೊಳ್ಳುವುದು

ಲಿಂಬೆಯ ಪೋಷಕಾಂಷಗಳು ಯಕೃತ್ (liver) ನಿಂದ ಉತ್ಪತ್ತಿಯಾಗುವ ಪಿತ್ತರಸ (bile)ವನ್ನು ಹೆಚ್ಚಿಸಿ ಜೀರ್ಣಾಂಗಳ ಒಳಗೆ ಉಳಿದಿದ್ದ ವಿಷಕಾರಕ ವಸ್ತುಗಳನ್ನು ದೇಹದಿಂದ ಹೊರಹಾಕಲು ಸಹಕರಿಸುತ್ತದೆ. ಪರಿಣಾಮವಾಗಿ ನಮ್ಮ ಜೀರ್ಣಾಂಗಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಆರೋಗ್ಯ ವೃದ್ಧಿಗೊಳ್ಳುತ್ತದೆ.

ಜಠರವು ಸ್ವಚ್ಛವಾಗುತ್ತವೆ ಮತ್ತು ಕರುಳುಗಳ ಕೆಲಸವೂ ಸುಗಮವಾಗುತ್ತದೆ

ಜಠರವು ಸ್ವಚ್ಛವಾಗುತ್ತವೆ ಮತ್ತು ಕರುಳುಗಳ ಕೆಲಸವೂ ಸುಗಮವಾಗುತ್ತದೆ

ಆಯುರ್ವೇದದ ಪ್ರಕಾರ ನಮ್ಮ ಜಠರದಲ್ಲಿ ನಿನ್ನೆಯ ಊಟದ ಜೀರ್ಣವಾಗದೇ ಉಳಿದ ಭಾಗ, ಕರುಳಿನ ಕೆಲವು ಜೀವಕೋಶಗಳು ಕಳಚಿ ಬಿದ್ದು ಹಾಗೂ ಸತ್ತ ಬ್ಯಾಕ್ಟೀರಿಯಾಗಳ ಕೋಶಗಳು ಒಂದಾಗಿ ಒಂದು ಬಗೆಯ ಅಂಟುಅಂಟಾದ ದ್ರವ ಜಠರದ ಒಳಗೋಡೆಗಳಿಗೆ ಅಂಟಿಕೊಂಡಿರುತ್ತದೆ. ಜಠರರಸ ತಳಭಾಗದಲ್ಲಿರುವ ಕಾರಣ ಪಕ್ಕದ ಮತ್ತು ಮೇಲ್ಭಾಗದ ಭಾಗ ಈ ದ್ರವದಿಂದ ಮುಕ್ತವಾಗುವುದಿಲ್ಲ.

ಜಠರವು ಸ್ವಚ್ಛವಾಗುತ್ತವೆ ಮತ್ತು ಕರುಳುಗಳ ಕೆಲಸವೂ ಸುಗಮವಾಗುತ್ತದೆ

ಜಠರವು ಸ್ವಚ್ಛವಾಗುತ್ತವೆ ಮತ್ತು ಕರುಳುಗಳ ಕೆಲಸವೂ ಸುಗಮವಾಗುತ್ತದೆ

ಆಯುರ್ವೇದದಲ್ಲಿ ಈ ಪದಾರ್ಥಕ್ಕೆ 'ಆಮ' ಎಂದು ಕರೆಯಲಾಗುತ್ತದೆ. ಒಂದು ವೇಳೆ ಈ ದ್ರವ ಹಾಗೇ ಉಳಿದರೆ ಹಲವು ತೊಂದರೆಗಳು ಎದುರಾಗುತ್ತವೆ.

ಜೇನು ಮತ್ತು ಲಿಂಬೆಯ ರಸದ ಪೇಯ ಕುಡಿಯುವುದರಿಂದ ಈ ಆಮ ಕರಗಿ ಕರುಳುಗಳಿಗೆ ರವಾನೆಯಾಗುತ್ತದೆ. ಇದೇ ದ್ರವ ಮುಂದೆ ಕರುಳುಗಳ ಮೂಲಕ ಸಾಗಿದಾಗ, ಅಲ್ಲೂ ಉಳಿದಿರಬಹುದಾಗ ಉಳಿದ ಕಲ್ಮಶಗಳು ದೊಡ್ಡಕರುಳಿಗೆ ರವಾನೆಯಾಗಿ ದೇಹದಿಂದ ವಿಸರ್ಜಿಸಲ್ಪಡುತ್ತದೆ.

ಮಲಬದ್ಧತೆಯಿಂದ ಮುಕ್ತಿ ದೊರಕುತ್ತದೆ

ಮಲಬದ್ಧತೆಯಿಂದ ಮುಕ್ತಿ ದೊರಕುತ್ತದೆ

ಸಾಧಾರಣವಾಗಿ ನಾರು ಇಲ್ಲದ ಆಹಾರವನ್ನು ಸೇವಿಸುವ ಮೂಲಕ ಮಲಬದ್ಧತೆ ಉಂಟಾಗುತ್ತದೆ. ಮೈದಾ ಮೂಲದ ಆಹಾರ ಇದಕ್ಕೆ ಪ್ರಮುಖ ಕಾರಣ. ನಾರು ಇಲ್ಲದಿರುವ ಕಾರಣ ತ್ಯಾಜ್ಯದ ನೀರನ್ನು ದೊಡ್ಡಕರುಳು ಸಂಪೂರ್ಣವಾಗಿ ಹೀರಿ ಗಟ್ಟಿಯಾಗಿಸುತ್ತದೆ. ಈಗ ವಿಸರ್ಜನೆಗೆ ಹೆಚ್ಚಿನ ಬಲಪ್ರಯೋಗದ ಅಗತ್ಯವಿದೆ. ಈ ಬಲದ ಕಾರಣ ದೊಡ್ಡಕರುಳಿನ ಒಳಗೋಡೆಗಳನ್ನು ಉಜ್ಜಿದಂತಾಗಿ ಕರುಳಿನ ಒಳಭಾಗದ ವಿಲ್ಲೈ ಎಂಬ ಸೂಕ್ಷ್ಮ ಅಂಗಗಳು ಘಾಸಿಗೊಳ್ಳುತ್ತವೆ.

ಮಲಬದ್ಧತೆಯಿಂದ ಮುಕ್ತಿ ದೊರಕುತ್ತದೆ

ಮಲಬದ್ಧತೆಯಿಂದ ಮುಕ್ತಿ ದೊರಕುತ್ತದೆ

ಬೆಳಿಗ್ಗೆದ್ದ ಕೂಡಲೇ ಲಿಂಬೆ ಮತ್ತು ಜೇನಿನ ಪೇಯವನ್ನು ಕುಡಿಯುವುದರಿಂದ ಕರುಳಿನ ಒಳಭಾಗಗಳಿಗೆ ಪ್ರಚೋದನೆ ದೊರೆತು ಶೀಘ್ರ ವಿಸರ್ಜನೆಗೆ ನೆರವಾಗುತ್ತದೆ. ಕರುಳಿನಲ್ಲಿರುವ ತ್ಯಾಜ್ಯಕ್ಕೆ ಕೊಂಚ ತೈಲದ ಲೇಪನ ದೊರೆತಂತಾಗಿ ಒಳಗೋಡೆಗಳಿಗೆ ಉಜ್ಜುವ ಭರ ಕಡಿಮೆಯಾಗುತ್ತದೆ ಹಾಗೂ ವಿಸರ್ಜನಾ ಕಾರ್ಯ ಸುಲಭವಾಗುತ್ತದೆ.

ದುಗ್ಧರಸ ಪೂರೈಕೆಯ ವ್ಯವಸ್ಥೆಯನ್ನು ಶುದ್ದಿಗೊಳಿಸುತ್ತದೆ

ದುಗ್ಧರಸ ಪೂರೈಕೆಯ ವ್ಯವಸ್ಥೆಯನ್ನು ಶುದ್ದಿಗೊಳಿಸುತ್ತದೆ

ರಕ್ತದಂತೆಯೇ ನಮ್ಮ ಶರೀರದಲ್ಲಿ ನೀರಿನಂತಹ ದುಗ್ಧರಸ ಹರಿದಾಡುತ್ತಿರುತ್ತದೆ. ದೇಹದ ಹಲವೆಡೆ ದುಗ್ಧಗ್ರಂಥಿಗಳಿವೆ. ಆರೋಗ್ಯ ಏರುಪೇರಾದಾಗ ಈ ರಸದ ಪ್ರಮಾಣ ಮತ್ತು ಹರಿವಿನಲ್ಲಿಯೂ ವ್ಯತ್ಯಾಸವಾಗುತ್ತದೆ. ಪರಿಣಾಮವಾಗಿ ಸುಸ್ತು, ಮಲಬದ್ಧತೆ, ಅನಿಯಮಿತ ನಿದ್ದೆ, ಹೃದಯದೊತ್ತಡ ಅತಿಹೆಚ್ಚು ಅಥವಾ ಅತಿಕಡಿಮೆಯಾಗುವುದು, ಏಕಾಗ್ರತೆ ಪಡೆಯಲು ತೊಂದರೆಯಾಗುವುದು, ಮಾನಸಿಕ ಒತ್ತಡ ಮೊದಲಾದ ತೊಂದರೆಗಳು ಪ್ರಾರಂಭವಗುತ್ತವೆ.

ದುಗ್ಧರಸ ಪೂರೈಕೆಯ ವ್ಯವಸ್ಥೆಯನ್ನು ಶುದ್ದಿಗೊಳಿಸುತ್ತದೆ

ದುಗ್ಧರಸ ಪೂರೈಕೆಯ ವ್ಯವಸ್ಥೆಯನ್ನು ಶುದ್ದಿಗೊಳಿಸುತ್ತದೆ

ಬೆಳಿಗ್ಗೆ ಮೊದಲು ಲಿಂಬೆ ಮತ್ತು ಜೇನಿನ ನೀರನ್ನು ಕುಡಿಯುವ ಮೂಲಕ ದುಗ್ಧರಸದಲ್ಲಿ ಎಂದಿಗೂ ದ್ರವ ಕಡಿಮೆಯಾಗಲಾರದು. ತನ್ಮೂಲಕ ಬರಬಹುದಾಗಿದ್ದ ಎಲ್ಲಾ ತೊಂದರೆಗಳಿಂದ ತಪ್ಪಿಸಿಕೊಂಡಂತಾಗುತ್ತದೆ. ಪರಿಣಾಮವಾಗಿ ಆರೋಗ್ಯವೂ ಉತ್ತಮಗೊಳ್ಳುತ್ತದೆ ಹಾಗೂ ದೇಹದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಶೀಘ್ರವಾಗಿ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ನೀಡುತ್ತದೆ

ಶೀಘ್ರವಾಗಿ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ನೀಡುತ್ತದೆ

ಬೆಳಿಗ್ಗೆದ್ದ ಕೂಡಲೇ ಈ ಪೇಯ ಕುಡಿದು ದಿನದ ವ್ಯಾಯಾಮ ಹಾಗೂ ಇತರ ಚಟುವಟಿಕೆಗಳನ್ನು ನಡೆಸುವಾಗ ಮುಂಚಿನಷ್ಟು ಸುಸ್ತಾಗುವುದಿಲ್ಲ. ಏಕೆಂದರೆ ಈ ಪೇಯದಲ್ಲಿರುವ ಪೋಷಕಾಂಶಗಳು ತಕ್ಷಣವೇ ರಕ್ತಕ್ಕೆ ಪೂರೈಕೆಯಾಗಿ ಪ್ರತಿ ಜೀವಕೋಶ ಪೂರ್ಣವಾಗಿ ಕೆಲಸ ಮಾಡುವ ಸಾಮರ್ಥ್ಯ ಪಡೆಯುತ್ತದೆ. ಬೆಳಗ್ಗಿನ ಈ ಚಟುವಟಿಕೆಯ ಕಾರಣ ಮನಸ್ಸು ಇಡಿಯ ದಿನ ಪ್ರಫುಲ್ಲವಾಗಿರುತ್ತದೆ.

ಶೀಘ್ರವಾಗಿ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ನೀಡುತ್ತದೆ

ಶೀಘ್ರವಾಗಿ ದೇಹಕ್ಕೆ ಶಕ್ತಿ ಮತ್ತು ಚೈತನ್ಯ ನೀಡುತ್ತದೆ

ಇದಕ್ಕೆ ಕಾರಣ ಲಿಂಬೆಯಲ್ಲಿರುವ ಸೆಲೆನಿಯಂ ಎಂಬ ಪೋಷಕಾಂಶವಾಗಿದೆ. ಇದು ಹೊಟ್ಟೆಯಲ್ಲಿ ಉಳಿದಿರುವ ಆಹಾರದಲ್ಲಿ ಋಣಾತ್ಮಕವಾಗಿ ಕಾಂತತ್ವ ಪಡೆದ ಅಣುಗಳೊಂದಿಗೆ ಸಂಯೋಜನೆಗೊಂಡು ತಟಸ್ಥವಾಗಿ ಯಾವುದೇ ಅಪಾಯವಿಲ್ಲದೇ ಕರುಳುಗಳಿಗೆ ರವಾನಿಸುತ್ತದೆ. ಅದೂ ಅಲ್ಲದೇ ಲಿಂಬೆಯ ಪರಿಮಳವೂ ದಿನವಿಡೀ ಉತ್ತಮ ಮನಃಸ್ಥಿತಿಯನ್ನು ಹೊಂದಿರಲು ಸಹಕರಿಸುತ್ತದೆ.

ಮೂತ್ರದಲ್ಲಿ ದ್ರವದ ಅಂಶವನ್ನು ಹೆಚ್ಚಿಸುತ್ತದೆ

ಮೂತ್ರದಲ್ಲಿ ದ್ರವದ ಅಂಶವನ್ನು ಹೆಚ್ಚಿಸುತ್ತದೆ

ನಮ್ಮ ಮೂತ್ರಪಿಂಡಗಳು ಸತತವಾಗಿ ದೇಹದ ವಿಷಕಾರಕ ವಸ್ತುಗಳನ್ನು ಮೂತ್ರದ ರೂಪದಲ್ಲಿ ಮೂತ್ರಕೋಶದಲ್ಲಿ ಸಂಗ್ರಹಿಸುತ್ತಾ ಇರುತ್ತದೆ ಹಾಗೂ ಆಗಾಗ ಮೂತ್ರವಿಸರ್ಜನೆಯ ಮೂಲಕ ದೇಹದಿಂದ ವಿಸರ್ಜಿಸಲ್ಪಡುತ್ತವೆ. ಒಂದು ವೇಳೆ ಸೇವಿಸಿದ ನೀರಿನ ಪ್ರಮಾಣ ಕಡಿಮೆಯಾದರೆ ಮೂತ್ರಕೋಶದ ಈ ದ್ರವ ಹೆಚ್ಚು ವಿಷಕಾರಿಯಾಗಿದ್ದು ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆಗ ಮೂತ್ರದಲ್ಲಿ ಉರಿ, ಮೂತ್ರಕೋಶಗಳ ಕಾರ್ಯದಲ್ಲಿ ತೊಡಕು ಉಂಟಾಗುತ್ತದೆ. ಬೆಳಗ್ಗಿನ ಲಿಂಬೆ ಮತ್ತು ಜೇನಿನ ಪೇಯ ಜೀವಿರೋಧಿ (antibacterial agent) ಯಂತೆ ಕಾರ್ಯನಿರ್ವಹಿಸುತ್ತದೆ.

ಮೂತ್ರದಲ್ಲಿ ದ್ರವದ ಅಂಶವನ್ನು ಹೆಚ್ಚಿಸುತ್ತದೆ

ಮೂತ್ರದಲ್ಲಿ ದ್ರವದ ಅಂಶವನ್ನು ಹೆಚ್ಚಿಸುತ್ತದೆ

ಮೂತ್ರದಲ್ಲಿ ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡಿ ವಿಷಕಾರಕ ವಸ್ತುಗಳ ಪ್ರಖರತೆಯನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ ಮೂತ್ರದ ಬಣ್ಣ ಹೆಚ್ಚು ಹಳದಿ ಇದ್ದದ್ದು ಈಗ ತಿಳಿ ಹಳದಿಯಾಗಿರುತ್ತದೆ.

ಮೂತ್ರದಲ್ಲಿ ದ್ರವದ ಅಂಶವನ್ನು ಹೆಚ್ಚಿಸುತ್ತದೆ

ಮೂತ್ರದಲ್ಲಿ ದ್ರವದ ಅಂಶವನ್ನು ಹೆಚ್ಚಿಸುತ್ತದೆ

ವಿಶೇಷವಾಗಿ ಈ ತೊಂದರೆಯಿಂದ (UTI-urinary tract infection) ಬಳಲುತ್ತಿರುವ ಮಹಿಳೆಯರಿಗೆ ಈ ಪೇಯ ಒಂದು ವರದಾನವಾಗಿದೆ. ಸಾಧಾರಣವಾಗಿ ಸಂಕೋಚದ ಕಾರಣ ಮೂತ್ರವಿಸರ್ಜನೆಯನ್ನು ತುಂಬಾ ಮುಂದೆ ಹಾಕುವ ಮಹಿಳೆಯರಲ್ಲಿ ಈ ತೊಂದರೆ ಹೆಚ್ಚು ಕಂಡುಬಂದಿದೆ.

ಬಾಯಿಯ ಒಳಭಾಗದ ಆರೋಗ್ಯ ವೃದ್ಧಿಸುತ್ತದೆ

ಬಾಯಿಯ ಒಳಭಾಗದ ಆರೋಗ್ಯ ವೃದ್ಧಿಸುತ್ತದೆ

ರಾತ್ರಿ ಮಲಗುವ ಮುನ್ನ ಹಲ್ಲುಜ್ಜಿಕೊಂಡು ಮಲಗಿದ್ದರೂ ಬೆಳಿಗ್ಗೆ ಎದ್ದಾಗ ಕೊಂಚವಾದರೂ ಬಾಯಿ ದುರ್ವಾಸನೆ ಸೂಸುತ್ತದೆ. ಇದಕ್ಕೆ ಕಾರಣ ನಮ್ಮ ಶ್ವಾಸದ ಮೂಲಕ ದೇಹಕ್ಕೆ ಆಗಮಿಸಿದ ಬ್ಯಾಕ್ಟೀರಿಯಾಗಳು. ಅವುಗಳಿಗೆ ಬಾಯಿಯ ಒಳಭಾಗ ಮೆತ್ತನೆಯ ಹಾಸಿಗೆಯಂತಿರುತ್ತದೆ.

ಬಾಯಿಯ ಒಳಭಾಗದ ಆರೋಗ್ಯ ವೃದ್ಧಿಸುತ್ತದೆ

ಬಾಯಿಯ ಒಳಭಾಗದ ಆರೋಗ್ಯ ವೃದ್ಧಿಸುತ್ತದೆ

ಲಿಂಬೆ ಮತ್ತು ಜೇನಿನ ಪೇಯವನ್ನು ಸೇವಿಸುವ ಮೂಲಕ ಅಷ್ಟೂ ಬ್ಯಾಕ್ಟೀರಿಯಾಗಳು ಹಾಸಿಗೆ ಸಮೇತ ಹೊಟ್ಟೆಯ ಪಾತಾಳಕ್ಕೆ ಸೇರುತ್ತವೆ. ಬ್ಯಾಕ್ಟೀರಿಯಾಗಳೇ ಇಲ್ಲದಿದ್ದ ಮೇಲೆ ಅದರಿಂದಾಗುವ ದುರ್ವಾಸನೆ ಎಲ್ಲಿಂದ?

ಬಾಯಿಯ ಒಳಭಾಗದ ಆರೋಗ್ಯ ವೃದ್ಧಿಸುತ್ತದೆ

ಬಾಯಿಯ ಒಳಭಾಗದ ಆರೋಗ್ಯ ವೃದ್ಧಿಸುತ್ತದೆ

ಇನ್ನೊಂದು ತೊಂದರೆಯೆಂದರೆ ನಾಲಿಗೆಯ ಮೇಲೆ (ವಿಶೇಷವಾಗಿ ಹಿಂಭಾಗದಲ್ಲಿ-ನಾಲಿಗೆಯನ್ನು ಮುಂಚಾಚಿದಾಗ ಮಾತ್ರ ಗೋಚರಿಸುತ್ತದೆ) ಲೇಪನವಾಗಿರುವ ಬಿಳಿಯ ಪೇಸ್ಟ್ ನಂತಹ ವಸ್ತು. ಇದು ಸಹಾ ಶ್ವಾಸದ ಮೂಲಕ ಒಳಬಂದ ಬ್ಯಾಕ್ಟೀರಿಯಾಗಳು ನಾಲಿಗೆಯ ಮೇಲೆ ಉಳಿದಿದ್ದ ನಿನ್ನೆಯ ಊಟದ ತುಣುಕುಗಳನ್ನೇ ಹಾಸಿಗೆ ಮಾಡಿಕೊಂಡು ಮನೆ ಕಟ್ಟಿಕೂಂಡಿದ್ದ ವಸ್ತು. ಲಿಂಬೆ-ಜೇನಿನ ಪೇಯ ಈ ವಸ್ತುವನ್ನು ಸಡಿಲಗೊಳಿಸಿ ಸುಲಭವಾಗಿ ಹೊರಹಾಕಲು ನೆರವಾಗುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕಕ್ಕೆ ಪ್ರಮುಖ ಕಾರಣ ನಾವು ಅಗತ್ಯಕ್ಕಿಂತಲೂ ಹೆಚ್ಚು ಆಹಾರವನ್ನು ಸೇವಿಸುವುದು. ಆಹಾರದ ಚಿತ್ರವನ್ನು ನೋಡಿದರೇ ಬಾಯಿಯಲ್ಲಿ ನೀರೋರುವ ನಮ್ಮ ದೇಹ ನಿಜ ಆಹಾರವನ್ನು ನೋಡಿದಾಗ ಚಪ್ಪರಿಸದೆ ಬಿಟ್ಟೀತೇ? ಇದಕ್ಕೆ ಕಡಿವಾಣ ಹಾಕಲು ಪೆಕ್ಟಿನ್ (pectin) ಎಂಬ ಪೋಷಕಾಂಶದ ಅಗತ್ಯವಿದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ಇದು ಆಹಾರವನ್ನು ನೋಡಿದಾಗ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣವನ್ನು ಸೇವಿಸುವುದಕ್ಕೆ ಮೆದುಳಿಗೆ ಸೂಚನೆಗಳನ್ನು ನೀಡದಿರಲು ಸಹಕರಿಸುತ್ತದೆ. ಲಿಂಬೆಯಲ್ಲಿರುವ ಈ ಪೋಷಕಾಂಶ ಹೆಚ್ಚಿನ ಪ್ರಮಾಣದ ಆಹಾರ ಸೇವನೆಗೆ ತಡೆಯೊಡ್ಡಿ ಸ್ವಾಭಾವಿಕವಾಗಿ ಹಾಗೂ ಶೀಘ್ರವಾಗಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ.

ಚರ್ಮದ ಕಾಂತಿ ಹೆಚ್ಚುತ್ತದೆ

ಚರ್ಮದ ಕಾಂತಿ ಹೆಚ್ಚುತ್ತದೆ

ಲಿಂಬೆ ಹಾಗೂ ಜೇನಿನಲ್ಲಿ ರಕ್ತಶುದ್ಧಿಗೊಳಿಸಲು ಪ್ರತ್ಯೇಕವಾಗಿ ಹಲವು ಪೋಷಕಾಂಶಗಳಿವೆ. ಇವೆರಡರ ಸಮ್ಮಿಲನದಿಂದ ರಕ್ತ ಶುದ್ದೀಕರಣ ಭರದಿಂದ ಸಾಗುತ್ತದೆ ಹಾಗೂ ಹೊಸ ರಕ್ತಕಣಗಳು ಉತ್ಪತ್ತಿಯಾಗುತ್ತದೆ. ಈ ಹೊಸರಕ್ತ ದೇಹದಲ್ಲಿರುವ ಸತ್ತ ಜೀವಕೋಶಗಳನ್ನು ರವಾನಿಸಿ ಹೊಸ ಜೀವಕೋಶಗಳು ಬೆಳೆಯುವಂತೆ ಮಾಡುತ್ತದೆ.

ಚರ್ಮದ ಕಾಂತಿ ಹೆಚ್ಚುತ್ತದೆ

ಚರ್ಮದ ಕಾಂತಿ ಹೆಚ್ಚುತ್ತದೆ

ಅಂಗಾಂಶಗಳು ಪರಸ್ಪರ ಒಂದಕ್ಕೊಂದು ಅಂಟಿಕೊಂಡಿರಲು ಅಗತ್ಯವಾದ ಕೊಲಾಜೆನ್ (collagen) ಎಂಬ ವಸ್ತುವನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ದೇಹದ ಪ್ರತಿ ಜೀವಕೋಶ ಹೊಸಕಳೆಯನ್ನು ಸೂಸುತ್ತದೆ. ಕಣ್ಣಿಗೆ ಕಾಣುವ ಚರ್ಮ ಹೆಚ್ಚಿನ ಕಾಂತಿಯನ್ನು ಪಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಕೊಲೆಸ್ಟ್ರಾಲ್ ಅನ್ನು ದೂರವಿರುಸುತ್ತದೆ

ಕೊಲೆಸ್ಟ್ರಾಲ್ ಅನ್ನು ದೂರವಿರುಸುತ್ತದೆ

ಕೊಲೆಸ್ಟ್ರಾಲ್ ಅನ್ನು ದೇಹದಿಂದ ಹೊರಹಾಕುವಲ್ಲಿ ಸಹಕಾರಿ. ದೇಹದಿಂದ ಹಾನಿಕಾರಿ ವೈರಸ್‌ಗಳನ್ನು ಹೊರದಬ್ಬಿ ರಕ್ತವನ್ನು ಕರುಳನ್ನು ಸ್ವಚ್ಛಮಾಡುವಲ್ಲಿ ಸಹಕಾರಿಯಾಗಿದೆ.

ಧೂಮಪಾನದಿಂದ ತುಟಿ ಕಪ್ಪಾಗಿದ್ದರೆ

ಧೂಮಪಾನದಿಂದ ತುಟಿ ಕಪ್ಪಾಗಿದ್ದರೆ

ತುಟಿಯ ಕಪ್ಪು ಕಲೆಯನ್ನು ಹೋಗಲಾಡಿಸುವಲ್ಲಿ ನಿಂಬೆರಸ ತುಂಬಾ ಪ್ರಯೋಜನಕಾರಿ. ನಿಂಬೆ ಹಣ್ಣನ್ನು ಕತ್ತರಿಸಿ ಅದರ ತುಂಡನ್ನು ತುಟಿಗೆ 3-4 ನಿಮಿಷ ಉಜ್ಜಬೇಕು. ನಂತರ ತಣ್ಣೀರಿನಿಂದ ತುಟಿಯನ್ನು ತೊಳೆದು ಲಿಪ್ ಬಾಮ್ ಹಚ್ಚ ಬೇಕು.

ಬೆಳಗಿನ ಅಸ್ವಸ್ಥತೆಯನ್ನು ಉಪಚರಿಸುತ್ತದೆ

ಬೆಳಗಿನ ಅಸ್ವಸ್ಥತೆಯನ್ನು ಉಪಚರಿಸುತ್ತದೆ

ಗರ್ಭಿಣಿ ಸ್ತ್ರೀಯರು ಬೆಳ್ಳಂಬೆಳಗ್ಗೆ ಲಿಂಬೆ ನೀರನ್ನು ಸೇವಿಸುವುದು ವಾಕರಿಕೆ ಮತ್ತು ಬೆಳಗಿನ ಅಸ್ವಸ್ಥತೆಯನ್ನು ನಿವಾರಿಸುತ್ತದೆ.

English summary

10 reasons to drink warm water with lemon and honey in the morning

We all have heard that drinking a glass of warm water with honey and lemon early in the morning is good for health. If you are one of those people who are skeptical of most things, here are 10 reasons why drinking warm water with lemon and honey is great for your health.
X
Desktop Bottom Promotion