For Quick Alerts
ALLOW NOTIFICATIONS  
For Daily Alerts

ನಿಮ್ಮ ವೃಷಣಗಳ ನೋವಿಗೆ ಕಾರಣವಾಗುವ 10 ಅಂಶಗಳು

By Deepak M
|

ತಮ್ಮ ಜನನಾಂಗ ಅಥವಾ ಗುಪ್ತಾಂಗಗಳ ವಿಚಾರದಲ್ಲಿ ಏನಾದರು ಸಮಸ್ಯೆ ಬಂದಾಗ ಗಂಡಸರು ವೈದ್ಯರ ಬಳಿಗೆ ಹೋಗಲು ಹೆಂಗಸರಿಗಿಂತ ಹೆಚ್ಚಿಗೆ ಸಂಕೋಚವನ್ನು ಪಡುತ್ತಾರೆ. ಸುಮಾರು ಜನರಿಗೆ ವೃಷಣಗಳ ನೋವು ಇರುತ್ತದೆ. ಆದರೆ ಅವರಿಗೆ ಈ ನೋವು ಬರಲು ಕಾರಣಗಳು ಮಾತ್ರ ತಿಳಿದಿರುವುದಿಲ್ಲ. ಸಾಮಾನ್ಯವಾಗಿ ಅವರಿಗೆ ಅಂಡಾಶಯದಲ್ಲಿ ನೋವು ಇರುತ್ತದೆ. ಆದರೆ ಇವರು ತಮಗೇನು ಆಗಲಿಲ್ಲ ಎಂದು ನಟಿಸುತ್ತಿರುತ್ತಾರೆ. ವೃಷಣಗಳಲ್ಲಿ ಉಂಟಾಗುವ ನೋವು ಸಾಮಾನ್ಯವಾಗಿ ಕೆಲವೊಂದು ಮುನ್ಸೂಚನೆಗಳನ್ನು ನೀಡುತ್ತದೆ.

ಸರಿಯಾದ ಸಮಯಕ್ಕೆ ಈ ಒಂದು ನೋವನ್ನು ಪರೀಕ್ಷಿಸಿಕೊಳ್ಳಲಿಲ್ಲವೆಂದರೆ, ಅದರಿಂದ ಮುಂದೆ ಭಯಾನಕವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ನೀವು ಒಂದು ಅಥವಾ ನಿಮ್ಮ ಎರಡೂ ವೃಷಣಗಳನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾದಂತಹ ಸಮಸ್ಯೆ ಎದುರಾಗಬಹುದು. ಆದ್ದರಿಂದಲೇ ನಿಮ್ಮ ವೃಷಣಗಳಲ್ಲಿ ನೋವುಂಟಾದರೆ ಅದನ್ನು ಕಡೆಗಣಿಸಬೇಡಿ. ಒಂದು ದಿನಕ್ಕಿಂತ ಹೆಚ್ಚಿಗೆ ನೋವು ಇದ್ದಲ್ಲಿ, ಮರೆಯದೆ ಅದನ್ನು ನಿಮ್ಮ ವೈದ್ಯರ ಗಮನಕ್ಕೆ ತನ್ನಿ.

ವೃಷಣಗಳಲ್ಲಿ ಉಂಟಾಗುವ ನೋವುಗಳಲ್ಲಿ ನಾನಾ ಬಗೆಗಳಿವೆ. ಇವುಗಳು ವಿವಿಧ ಕಾರಣಗಳಿಗಾಗಿ ಕಂಡು ಬರುತ್ತವೆ. ಕೆಲವೊಮ್ಮೆ, ನಿಮಗೆ ಕೆಮ್ಮು ಇದ್ದಾಗ ವೃಷಣಗಳಲ್ಲಿ ನೋವು ಕಂಡು ಬರಬಹುದು. ಇದು ಬಹುತೇಕ ಸಂದರ್ಭಗಳಲ್ಲಿ ಹರ್ನಿಯಾದ (ಅಂಡವಾಯು) ಸಮಸ್ಯೆಯನ್ನು ಸೂಚಿಸಬಹುದು. ಕೆಲವು ವೇಳೆ ನಿಮ್ಮ ತೊಡೆ ಸಂದುಗಳ ತಾಕಾಟದಿಂದಾಗಿ, ನೀವು ನಿಂತಾಗ ಅದರ ಮೇಲೆ ಒತ್ತಡ ಉಂಟಾಗಿ ನೋವು ಕಂಡು ಬರಬಹುದು. ಬಹುಶಃ ಇದು ರಕ್ತನಾಳಗಳು ಊದಿಕೊಂಡಿರುವ ಮುನ್ಸೂಚನೆಯನ್ನು ನಿಮಗೆ ನೀಡಬಹುದು. ಇಲ್ಲಿ ನಾವು ನಿಮಗಾಗಿ ಕೆಲವೊಂದು ಬಗೆಯ ವೃಷಣಗಳ ನೋವನ್ನು ವಿವರಿಸಿದ್ದೇವೆ. ಈ ಬಗೆಯ ನೋವುಗಳು ನಿಮಗೆ ಕಂಡು ಬಂದಲ್ಲಿ ಯಾವುದೇ ಕಾರಣಕ್ಕು ಉದಾಸೀನ ಮಾಡಬೇಡಿ. ಏಕೆಂದರೆ ಇವುಗಳೆಲ್ಲವೂ ಅಪಾಯಕಾರಿ ನೋವುಗಳಾಗಿರುತ್ತವೆ.

ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ವರಿಕೊಸೀಲ್

ವರಿಕೊಸೀಲ್

ನಿಮಗೆ ಎಂದಾದರು ನಿಮ್ಮ ವೃಷಣಗಳು ಒಂದು ಬ್ಯಾಗ್ ಪೂರ್ತಿ ತುಂಬಿದ ನೂಡಲ್‍ಗಳ ರೀತಿಯಾಗಿ ಕಂಡು ಬಂದಿವೆಯೇ? ಅಂದರೆ ನೀವು ನಿಂತಾಗ ನಿಮ್ಮ ವೃಷಣಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ, ಕುಳಿತಾಗ ಮಾತ್ರ ಸಮಸ್ಯೆ ಕಂಡು ಬರುತ್ತಿವೆಯೇ? ಇದು ನಿಮ್ಮ ವೃಷಣಗಳಲ್ಲಿ ಉಂಟಾಗಿರುವ ವರಿಕೊಸೀಲ್ ಸಮಸ್ಯೆಯನ್ನು ಸೂಚಿಸುತ್ತದೆ. ಈ ಸಮಸ್ಯೆ ಉಂಟಾಗಲು ಕಾರಣ, ನಿಮ್ಮ ಅಂಡಾಶಯದಲ್ಲಿನ ರಕ್ತನಾಳಗಳು ಗಂಟು ಕಟ್ಟಿಕೊಂಡು ಊದಿಕೊಳ್ಳುತ್ತವೆ. ಈ ಕಾರಣದಿಂದಾಗಿ ನಿಮ್ಮ ವೃಷಣಗಳು ಮತ್ತು ಅದಕ್ಕೆ ಸಂಬಂಧಿಸಿದ ನಾಳಗಳಲ್ಲಿ ನೋವು ಕಂಡು ಬರುತ್ತದೆ.

ಗಾಯ ಮತ್ತು ಹೆಮೊರ್ರೇಜ್

ಗಾಯ ಮತ್ತು ಹೆಮೊರ್ರೇಜ್

ನಿಮ್ಮ ವೃಷಣಗಳಿಗೆ ಎಂದಾದರು ತೀವ್ರವಾದ ಒದೆ ತಿಂದಿದ್ದೀರಾ? ಒಂದು ವೇಳೆ ಈ ರೀತಿ ಒದೆ ಬಿದ್ದಾಗ ನಿಮ್ಮ ಉಸಿರನ್ನು ಉಸ್ಸ್ ಎಂದು ಹೊರ ಬಿಟ್ಟು, ಆ ನಂತರ ಮೆಲ್ಲಗೆ ಸುಧಾರಿಕೊಂಡಿರುತ್ತೀರಿ. ಕೆಲವೊಮ್ಮೆ ಗಾಯಗಳಿಂದಾಗಿ ನಿಮ್ಮ ವೃಷಣದಲ್ಲಿ ಅಥವಾ ಅಂಡಾಶಯದಲ್ಲಿ ರಕ್ತವು ಸೋರುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕೆ ಕೆಲವು ದಿನದ ಮಟ್ಟಿಗೆ ಹಾಸಿಗೆಯಲ್ಲಿ ವಿಶ್ರಾಂತಿಯನ್ನು ಪಡೆಯುವ ಮೂಲಕ ನೀವು ಸುಧಾರಿಸಿಕೊಳ್ಳಬಹುದು ಅಥವಾ ಸಣ್ಣ ಶಸ್ತ್ರ ಚಿಕಿತ್ಸೆಯ ಮೂಲಕ ಸಹ ಇದನ್ನು ಸರಿಪಡಿಸಿಕೊಳ್ಳಬಹುದು.

ತೊಡೆ ಸಂದಿನ ಹರ್ನಿಯಾ

ತೊಡೆ ಸಂದಿನ ಹರ್ನಿಯಾ

ಹರ್ನಿಯಾ ಎಂಬುದು ಕೊಬ್ಬಿನ ಕೋಶಗಳ ಹೊರಗೆ ಬೆಳೆಯುವ ಒಂದು ದೊಡ್ಡ ಗಾತ್ರದ ಕೋಶಗಳಾಗಿರುತ್ತದೆ. ತೊಡೆ ಸಂದಿನ ಹರ್ನಿಯಾವು ವೃಷಣಗಳು ನಿಮ್ಮ ದೇಹಕ್ಕೆ ಅಂಟಿಕೊಂಡಿರುವ ಭಾಗದಲ್ಲಿ ಕಂಡುಬರುತ್ತದೆ. ಇದನ್ನು ಹೋಗಲಾಡಿಸಲು ಶಸ್ತ್ರ ಚಿಕಿತ್ಸೆಯ ಅಗತ್ಯವಿರುತ್ತದೆ. ಯಾವುದೇ ಕಾರಣಕ್ಕು ಈ ಶಸ್ತ್ರ ಚಿಕಿತ್ಸೆಯನ್ನು ಮುಂದೂಡಲು ಹೋಗಬೇಡಿ.

ಮೂತ್ರಪಿಂಡದಲ್ಲಿ ಕಲ್ಲುಗಳು

ಮೂತ್ರಪಿಂಡದಲ್ಲಿ ಕಲ್ಲುಗಳು

ನಿಮ್ಮ ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ಹೊರಕ್ಕೆ ಎಳೆದಾಗ, ಅದರಿಂದ ನಿಮ್ಮ ವೃಷಣಗಳಲ್ಲಿ ಸಹಿಸಲಸಾಧ್ಯವಾದ ನೋವು ಕಂಡು ಬರಬಹುದು. ಆದರೆ ಅಧಿಕ ಜನ ಗಂಡಸರು ಆ ಮೂತ್ರ ಪಿಂಡದಲ್ಲಿರುವ ಕಲ್ಲುಗಳಿಂದಾಗಿಯೇ ತಮಗೆ ನೋವು ಇತ್ತು ಎಂದು ಭಾವಿಸುತ್ತಾರೆ. ಆ ಕಲ್ಲುಗಳ ಜೊತೆಗೆ ಈ ನೋವು ಸಹ ಹೋಗುತ್ತದೆ ಎಂದು ನಿಟ್ಟುಸಿರು ಬಿಡುತ್ತಾರೆ.

ವೃಷಣದ ತಿರುಚಿವಿಕೆ

ವೃಷಣದ ತಿರುಚಿವಿಕೆ

ಯಾತನಮಯವಾಗಿರುವ ಈ ನೋವಿನ ಬಗೆಯು, ನಿಜಕ್ಕೂ ಅತೀವ ನೋವನ್ನು ಕೊಡುತ್ತದೆ. ಕೆಲವೊಮ್ಮೆ ವೀರ್ಯಗಳು ಪರಿಚಲನೆಗೊಳ್ಳುವ ನಾಳವು ಗಂಟು ಕಟ್ಟಿಕೊಳ್ಳುತ್ತದೆ ಮತ್ತು ಅಂಡಾಶಯಕ್ಕೆ ರಕ್ತ ಪರಿಚಲನೆಯನ್ನು ನಿಲ್ಲಿಸಿಬಿಡುತ್ತದೆ. ಇದರಿಂದಾಗಿ ಹೊಟ್ಟೆಯಲ್ಲಿ ಸಂಕಟವುಂಟಾಗಿ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಿಬಿಡುತ್ತದೆ. ಯಾವುದೇ ಕಾರಣಕ್ಕು ಇದನ್ನು ವೈದ್ಯರಿಗೆ ತೋರಿಸಲು ತಡ ಮಾಡಬೇಡಿ, ಇಲ್ಲವಾದಲ್ಲಿ ನಿಮ್ಮ ವೃಷಣಗಳಲ್ಲಿ ಒಂದನ್ನು ನೀವು ಕಳೆದುಕೊಳ್ಳಬೇಕಾಗುತ್ತದೆ.

ಎಪಿಡಿಡಿಮಿಟಿಸ್

ಎಪಿಡಿಡಿಮಿಟಿಸ್

ನಿಮ್ಮ ವೃಷಣಗಳು ಏನಾದರು ಮೆತ್ತಗೆ ಊದಿಕೊಂಡಂತೆ ಭಾಸವಾಗುತ್ತಿವೆಯೇ? ಬಹುಶಃ ಇದು ನಿಮ್ಮ ವೃಷಣದಲ್ಲಿರುವ ಎಪಿಡಿಡಿಮಿಸ್ ನಾಳವು ಬ್ಯಾಕ್ಟೀರಿಯಾ ಮತ್ತು ವೈರಸ್ ಸಮಸ್ಯೆಗೆ ಈಡಾಗಿರುವುದುರಿಂದಾಗಿ ಈ ಸಮಸ್ಯೆ ಉಂಟಾಗುತ್ತಿದೆ. ಇದು ಸಾಮಾನ್ಯವಾಗಿ ಮೂತ್ರನಾಳದ ಇನ್‍ಫೆಕ್ಷನ್ ಅಥವಾ ಲೈಂಗಿಕ ರೋಗಗಳ ಕಾರಣದಿಂದಾಗಿ ಕಂಡು ಬರುತ್ತದೆ.

ವೃಷಣಗಳು ಛಿದ್ರಗೊಳ್ಳುವುದು

ವೃಷಣಗಳು ಛಿದ್ರಗೊಳ್ಳುವುದು

ಹೌದು, ಇದು ನಿಜಕ್ಕು ನಿಮ್ಮ ವೃಷಣಗಳು ಛಿದ್ರಗೊಳ್ಳುವ ಕಾರಣದಿಂದಾಗಿ ಸಂಭವಿಸುತ್ತದೆ. ಇದು ಸಾಮಾನ್ಯವಾಗಿ ಯಾವುದಾದರು ಅಪಘಾತ ಮತ್ತು ಕ್ರೀಡೆಯಲ್ಲಿ ಸಂಭವಿಸುವ ಆಕಸ್ಮಿಕ ಘಟನೆಗಳ ಪರಿಣಾಮವಾಗಿ ಕಂಡು ಬರುತ್ತದೆ. ಬಲವಾದ ಹೊಡೆತವು ವೃಷಣಗಳನ್ನು ಛಿದ್ರ ಮಾಡುವುದೇ ಈ ಸಮಸ್ಯೆಯ ಕಾರಣ.

ಸ್ಪರ್ಮಟೋಸೀಲ್

ಸ್ಪರ್ಮಟೋಸೀಲ್

ಸ್ಪರ್ಮಟೋಸೀಲ್ ಎಂಬುದು ಮೂಲತಃ ವೀರ್ಯಾಣುಗಳು ಬೆಳೆಯುವ ಚೀಲವಾಗಿದೆ. ಇದರಲ್ಲಿ ವೀರ್ಯಾಣುಗಳ ಸಂಗ್ರಹ ಹೆಚ್ಚಾದ ಹಾಗೆ, ವೀರ್ಯ ಚೀಲವು ದೊಡ್ಡದಾಗುತ್ತ ಹೋಗುತ್ತದೆ. ಇದರಿಂದ ನಮಗೆ ನೋವು ಕಾಡುತ್ತದೆ. ಇದನ್ನೆ ಸ್ಪರ್ಮಟೋಸೀಲ್ ಎನ್ನುತ್ತಾರೆ.

ವೃಷಣಗಳ ಕ್ಯಾನ್ಸರ್

ವೃಷಣಗಳ ಕ್ಯಾನ್ಸರ್

ಅಚ್ಚರಿಯ ವಿಚಾರ ಏನಪ್ಪ ಎಂದರೆ ಕೆಲವೇ ಕೆಲವು ಗಂಡಸರು ಮಾತ್ರ ವೃಷಣಗಳ ಕ್ಯಾನ್ಸರ್ ಇದ್ದಾಗ ನೋವನ್ನು ಅನುಭವಿಸುತ್ತಾರೆ. ಸಾಮಾನ್ಯವಾಗಿ ವೃಷಣಗಳಲ್ಲಿ ಗಡ್ಡೆ ಕಂಡು ಬಂದಾಗ ಮಾತ್ರ ಕ್ಯಾನ್ಸರನ್ನು ಪತ್ತೆ ಹಚ್ಚಲಾಗುತ್ತದೆ. ಆದರೆ ನಿಮ್ಮ ಕ್ಯಾನ್ಸರ್ ಇನ್ನೂ ಟ್ಯೂಮರ್ ಹಂತದಲ್ಲಿದ್ದರೆ, ಆಗ ನಿಮಗೆ ವೃಷಣಗಳಲ್ಲಿ ಸ್ವಲ್ಪ ನೋವು ಮತ್ತು ಸಂಕಟ ಉಂಟಾಗುತ್ತದೆ.

ಪುಡೆಂಡಲ್ ನರವು ಹಾನಿಗೊಳಗಾಗುವುದು

ಪುಡೆಂಡಲ್ ನರವು ಹಾನಿಗೊಳಗಾಗುವುದು

ಇಂತಹ ಸಮಸ್ಯೆಯು ವೃಷಣಗಳ ಮೇಲೆ ನಿರಂತರವಾಗಿ ಬೀಳುವ ಅಧಿಕ ಒತ್ತಡದ ಕಾರಣದಿಂದಾಗಿ ಕಂಡು ಬರುತ್ತದೆ. ಉದಾಹರಣೆಗ ಬೈಸಿಕಲ್ ಓಡಿಸುವವರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ. ಈ ನೋವು ನಿಜಕ್ಕು ತುಂಬಾ ಯಾತನೆಯನ್ನು ನೀಡುತ್ತದೆ. ಇದು " ಸೈಕ್ಲಿಸ್ಟ್‌ಗಳ ಸಿಂಡ್ರೋಮ್" ಎಂದೇ ಪರಿಗಣಿಸಲ್ಪಟ್ಟಿದೆ.

English summary

10 Alarming Reasons Your Testicles Pain

There are different types of pain in the testicles that happen due to varied reasons. Sometimes, your testicles hurt when you cough. This is indicative of a hernia in most cases. At other times, your groin might feel heavy and knotted only when you stand. This is usually a sign of varicose veins in the testicles. Here are some of the commonest reasons for pain in the testicles.
X
Desktop Bottom Promotion