For Quick Alerts
ALLOW NOTIFICATIONS  
For Daily Alerts

ಮಧುಮೇಹಿಗಳು ತಿನ್ನಬಹುದಾದ 18 ಸಿಹಿ ಹಣ್ಣುಗಳು!

|

ಮಧುಮೇಹ ಬಂದರೆ ಗುಣ ಪಡಿಸಲು ಸಾಧ್ಯವಿಲ್ಲ, ಆದರೆ ಅದರಿಂದ ಯಾವುದೇ ಅಪಾಯ ಉಂಟಾಗದಂತೆ ನಿಯಂತ್ರಣದಲ್ಲಿಡಬಹುದು. ಮಧುಮೇಹಿಗಳು ಸಿಹಿ ಆಹಾರಗಳನ್ನು ಮುಟ್ಟಲೇಬಾರದು. ಸಿಹಿ ತಿನ್ನಬೇಕೆಂದು ಅನಿಸಿ ಒಂದು ವೇಳೆ ತಿಂದರೆ ಆರೋಗ್ಯ ಹಾಳಾಗುತ್ತದೆ. ತಿನ್ನಬೇಕೆನಿಸಿದ ತಿಂಡಿಗಳನ್ನು ತಿನ್ನಲು ಸಾಧ್ಯವಿಲ್ಲ, ದಿನಾ ಪಥ್ಯದ ಊಟ ಈ ರೀತಿ ಇದ್ದರೆ ಒಂಥರಾ ಜಿಗುಪ್ಸೆ ಮೂಡುವುದು ಸಹಜ.

ಮಧುಮೇಹಿಗಳಿಗೆ ಸಿಹಿ ತಿನ್ನಬೇಕೆಂದು ಅನಿಸಿದಾಗ ಸಿಹಿ ಹಣ್ಣುಗಳನ್ನು ತಿನ್ನಬಹುದು. ಹಾಗಂತ ಎಲ್ಲಾ ಬಗೆಯ ಹಣ್ಣುಗಳನ್ನು ತಿನ್ನಲು ಸಾಧ್ಯವಿಲ್ಲ. ಉದಾಹರಣೆಗೆ ಮಧುಮೇಹ ಇರುವವರು ಬಾಳೆ ಹಣ್ಣು ತಿನ್ನಬಾರದು. ಆದರೆ ಈ ಕೆಳಗಿನ ಹಣ್ಣುಗಳನ್ನು ತಿಂದು ಸಂತೋಷಪಡಬಹುದು ಹಾಗೂ ಈ ಹಣ್ಣುಗಳು ಮಧುಮೇಹಿಗಳ ಆರೋಗ್ಯಕ್ಕೂ ಒಳ್ಳೆಯದು.

1. ಕಿವಿ ಹಣ್ಣು

1. ಕಿವಿ ಹಣ್ಣು

ಕಿವಿ ಹಣ್ಣು ತಿಂದರೆ ದೇಹದಲ್ಲಿ ಸಕ್ಕರೆಯಂಶ ಕಡಿಮೆಯಾಗುತ್ತದೆ ಎಂದು ಸಂಶೋಧನೆಯಿಂದ ಕೂಡ ದೃಢಪಟ್ಟಿದೆ.

2. ಕಪ್ಪು ಜಾಮೂನು

2. ಕಪ್ಪು ಜಾಮೂನು

ಇದು ಮಧುಮೇಹಿಗಳಿಗೆ ಬೆಸ್ಟ್ ಫುಡ್. ಇದು ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣ ಮಾಡಿ, ರಕ್ತ ಕಣಗಳನ್ನು ಹೆಚ್ಚು ಮಾಡುತ್ತದೆ. ಇದರ ಬೀಜವನ್ನು ಪುಡಿ ಮಾಡಿಟ್ಟು ಪ್ರತಿದಿನ ತಿಂದರೆ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಬಹುದು.

3. ಬಿಳಿ ಜಾಮೂನು

3. ಬಿಳಿ ಜಾಮೂನು

ಜಾಮೂನು ಹಣ್ಣನ್ನು ಮಧುಮೇಹಿಗಳು ತಿನ್ನಬಹುದಾಗಿದ್ದು ಇದರಲ್ಲಿ ನಾರಿನಂಶ ಅಧಿಕವಿದೆ.

4. ನಕ್ಷತ್ರ ಹಣ್ಣು

4. ನಕ್ಷತ್ರ ಹಣ್ಣು

ಇದು ಕೂಡ ಜಾಮೂನು ಹಣ್ಣಿನಂತೆ ಮಧುಮೇಹಿಗಳಿಗೆ ಉತ್ತಮವಾದ ಆಹಾರವಾಗಿದೆ. ಎಚ್ಚರಿಕೆ: ಇದನ್ನು ತಿಂದ ನಂತರ ಮಧುಮೇಹಿಗಳು ಸ್ವಲ್ಪ ವ್ಯಾಯಾಮ ಮಾಡಬೇಕು.

5. ಸೀಬೆ ಕಾಯಿ

5. ಸೀಬೆ ಕಾಯಿ

ಸೀಬೆಕಾಯಿ ಕೂಡ ದೇಹದಲ್ಲಿ ಸಕ್ಕರೆಯಂಶವನ್ನು ಹೆಚ್ಚಿಸುವುದಿಲ್ಲ ಮತ್ತು ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

6. ಚೆರ್ರಿ

6. ಚೆರ್ರಿ

ಇದರ GL (glycemic index) 20. ಇದನ್ನು ಮಧುಮೇಹಿಗಳು ದಿನದ ಯಾವ ಸಮಯದಲ್ಲಿ ಬೇಕಾದರೂ ತಿನ್ನಬಹುದು.

7. ಪೀಚ್

7. ಪೀಚ್

ಇದರಲ್ಲಿ ಕೂಡ GL ತುಂಬಾ ಕಡಿಮೆ ಇರುವುದರಿಂದ ಈ ಹಣ್ಣನ್ನು ತಿನ್ನಬಹುದೆ? ಬೇಡ್ವೆ? ಎಂದು ಯೋಚನೆ ಮಾಡಬೇಕಾಗಿಲ್ಲ.

8. ಬೆರ್ರಿ

8. ಬೆರ್ರಿ

ಬೆರ್ರಿ ಹಣ್ಣುಗಳನ್ನು ಕೂಡ ತಿನ್ನಬಹುದು. ಸಿಹಿ ತಿನ್ನಬೇಕೆಂದು ಅನಿಸುವಾಗ ಈ ಬೆರ್ರಿ ಹಣ್ಣುಗಳನ್ನು ಟೇಸ್ಟ್ ಮಾಡಬಹುದು.

9. ಸೇಬು

9. ಸೇಬು

ಸೇಬಿನಲ್ಲಿ antioxidants ಇದ್ದು ಇದು ಕೊಲೆಸ್ಟ್ರಾಲ್ ಕಡಮೆ ಮಾಡಿ ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ಮಾಡುತ್ತದೆ. ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

10. ಪೈನಾಪಲ್

10. ಪೈನಾಪಲ್

ಪೈನಾಪಲ್ ಸೋಂಕಾಣುಗಳನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ತಿನ್ನುವುದರಿಂದ ಬಾಯಿಗೆ ಸಿಹಿ ಆರೋಗ್ಯಕ್ಕೂ ಒಳ್ಳೆಯುದು.

11. ಪಪ್ಪಾಯಿ

11. ಪಪ್ಪಾಯಿ

ಇದರಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಅಧಿಕವಿರುವುದರಿಂದ ಮಧುಮೇಹಿಗಳು ಇದನ್ನು ಪ್ರತಿದಿನ ಕೂಡ ತಿನ್ನಬಹುದು.

12. ಅಂಜೂರ

12. ಅಂಜೂರ

ಅಂಜೂರ ಮಧುಮೇಹಿಗಳ ಶರೀರದಲ್ಲಿ ಇನ್ಸುಲಿನ್ ಪ್ರಮಾಣ ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ.

13. ಕಿತ್ತಳೆ

13. ಕಿತ್ತಳೆ

ಕಿತ್ತಳೆ ಹಣ್ಣನ್ನು ಪ್ರತಿದಿನ ತಿನ್ನಬಹುದು. ಇದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿ

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣಿನಲ್ಲಿ GI ಅಧಿಕವಿದ್ದರೂ ಗ್ಲೈಸೆಮಿಕ್ ಲೋಡ್ ಕಡಿಮೆ ಇದ್ದು , ಈ ಹಣ್ಣನ್ನು ಅಪರೂಪಕ್ಕೆ ಮಿತವಾಗಿ ತಿನ್ನಬಹುದು.

15. ದ್ರಾಕ್ಷಿ

15. ದ್ರಾಕ್ಷಿ

ದ್ರಾಕ್ಷಿ ದೇಹದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಮಧುಮೇಹಿಗಳು ಇದನ್ನು ತಿಂದರೆ ಉತ್ತಮ ಪ್ರಯೋಜನ ಪಡೆಯಬಹುದು.

16. ದಾಳಿಂಬೆ

16. ದಾಳಿಂಬೆ

ದಾಳಿಂಬೆ ಕೂಡ ಮಧುಮೇಹಿಗಳ ರಕ್ತದಲ್ಲಿ ಸಕ್ಕರೆಯಂಶ ಸರಿಯಾದ ಪ್ರಮಾಣದಲ್ಲಿರುವಂತೆ ನೋಡಿಕೊಳ್ಳುತ್ತದೆ.

17. ಹಲಸಿನ ಹಣ್ಣು

17. ಹಲಸಿನ ಹಣ್ಣು

ಹಲಸಿನ ಹಣ್ಣು ಸಿಹಿಯಾದ ಹಣ್ಣಾದರೂ ಯಾವುದೇ ಭಯವಿಲ್ಲದೆ ಇದನ್ನು ತಿನ್ನಬಹುದು. ಇದು ಇನ್ಸುಲಿನ್ ಹೆಚ್ಚಾಗಿಸಿ ಪ್ರತಿರೋಧ ಶಕ್ತಿಯನ್ನು ವೃದ್ಧಿಸುತ್ತದೆ.

18. ಆಮ್ಲ

18. ಆಮ್ಲ

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಇದ್ದು ಮಧುಮೇಹದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ.

English summary

Top 18 Fruits for Diabetics | Tips For Health | ಮಧುಮೇಹಿಗಳು ತಿನ್ನಬಹುದಾದ 18 ಸಿಹಿ ಹಣ್ಣುಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Diabetics can have fruits, provided the sugar level of the patient is in control, but these fruits must be consumed in a limited quantity. Diabetics need an equivalent serving of fruits on a day to day basis.
X
Desktop Bottom Promotion