For Quick Alerts
ALLOW NOTIFICATIONS  
For Daily Alerts

ಕಾಂಟ್ಯಾಕ್ಟ್ ಲೆನ್ಸ್ ಶುಚಿಗೊಳಿಸುವ ಮೊದಲು...

By Super
|

ಕಾಂಟ್ಯಾಕ್ಟ್ ಲೆನ್ಸ್ ತುಂಬಾ ಕಾಳಜಿ ಮತ್ತು ನೈರ್ಮಲ್ಯದಿಂದ ಬಳಸಬೇಕಾದ ಪರಿಕರಗಳಲ್ಲಿ ಒಂದಾಗಿದೆ. ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಬಾಹ್ಯ ಹಾಗೂ ಆಂತರಿಕವಾಗಿ ಕಣ್ಣಿಗೆ ಹಾನಿಯಾಗುವ ಸಾಧ್ಯತೆ ಅಧಿಕ. ಅಸಮರ್ಪಕವಾಗಿ ಕಾಂಟ್ಯಾಕ್ಟ್ ಲೆನ್ಸ್ ನ್ನು ಅಳವಡಿಸುವುದರಿಂದ ಕಣ್ಣಿನಲ್ಲಿ ಗೀರುಗಳು ಉಂಟಾಗಿ ಕಣ್ಣೀರು ಬರಬಹುದು. ಅಶುಚಿಯಾದ ಜೋಡಿ ಕಾಂಟ್ಯಾಕ್ಟ್ ಲೆನ್ಸ್ ನ ಅಳವಡಿಕೆ ಮತ್ತು ಸರಿಯಾಗಿ ಸ್ವಚ್ಛಗೊಳಿಸದೆ ಇದ್ದರೆ ಬ್ಯಾಕ್ಟೀರಿಯಾದಿಂದ ಸೋಂಕುಗಳು ಉಂಟಾಗಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ದೃಷ್ಟಿಯ ಮೇಲೆ ಪರಿಣಾಮ ಬೀಳಬಹುದು. ಉತ್ಪಾದಕರು ಮತ್ತು ವೈದ್ಯರು ನೀಡಿರುವ ಸಲಹೆಗಯಂತೆ ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ನಿಯಮಿತವಾಗಿ ಶುಚಿಗೊಳಿಸುವುದು ಅತ್ಯಗತ್ಯ. ಕಾಂಟ್ಯಾಕ್ಟ್ ಲೆನ್ಸ್ ನ್ನು ನೀರಿನಲ್ಲಿ ತೊಳೆಯುವಾಗ ಕೂಡ ಜಾಗ್ರತೆ ವಹಿಸಬೇಕಾಗುತ್ತದೆ. ನೀರಿನಲ್ಲಿರುವ ಸೂಕ್ಷ್ಮಣು ಮತ್ತು ಪರಾವಲಂಬಿ ಜೀವಿಗಳು ಕಣ್ಣಿಗೆ ಸೋಂಕನ್ನು ಉಂಟು ಮಾಡಬಹುದು.

ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್ ಗಳ ಕಾಂಟ್ಯಾಕ್ಟ್ ಲೆನ್ಸ್ ಗಳು ಲಭ್ಯವಿದೆ ಮತ್ತು ಇದಕ್ಕೆ ಬೇಕಾಗಿರುವ ಸ್ವಚ್ಛತೆಯ ಸಾಮಗ್ರಿಗಳು ಕೂಡ ಸಿಗುತ್ತದೆ. ಪ್ರತಿಯೊಂದು ಉತ್ಪನ್ನ ಮತ್ತು ಸ್ವಚ್ಛಗೊಳಿಸಲು ಸಿಗುವ ದ್ರಾವಣಗಳು ತಮ್ಮದೇ ಆದ ವಿಧಾನ ಮತ್ತು ಸೂಚನೆಗಳನ್ನು ಒಳಗೊಂಡಿದ್ದು, ಇದನ್ನು ಪಾಲಿಸಿದರೆ ಅತ್ಯುತ್ತಮ ಫಲಿತಾಂಶವನ್ನು ಪಡೆಯಬಹುದು.
ಲೆನ್ಸ್ ನ್ನು ಸ್ವಚ್ಛಗೊಳಿಸಲು ಎಷ್ಟು ಸಮಯ ಉಜ್ಜಬೇಕು, ಎಷ್ಟು ಕಾಲ ಅದನ್ನು ನೆನೆಸಿಡಬೇಕು ಮತ್ತು ಎಷ್ಟು ದೀರ್ಘ ಕಾಲ ತೊಳೆಯಬೇಕು ಎನ್ನುವುದು ದ್ರಾವಣಗಳನ್ನು ಅವಲಂಬಿಸಿರುತ್ತದೆ. ಕೆಲವು ಸಲ ಲೆನ್ಸ್ ನ್ನು ಉಜ್ಜಬಾರದೆಂಬ ಸೂಚನೆ ನೀಡಿರಬಹುದು. ಉಗುಳನ್ನು ಬಳಸಿ ಕಾಂಟ್ಯಾಕ್ಟ್ ಲೆನ್ಸ್ ನ್ನು ಯಾವತ್ತೂ ಶುಚಿಗೊಳಿಸಬಾರದು. ವ್ಯಕ್ತಿಯ ಉಗುಳಿನಲ್ಲಿರುವ ಸೂಕ್ಷ್ಮಣು ಜೀವಿಗಳು ಕಣ್ಣಿಗೆ ಸೋಂಕನ್ನು ಉಂಟುಮಾಡಬಹುದು. ಕಾಂಟ್ಯಾಕ್ಟ್ ಲೆನ್ಸ್ ನ್ನು ಯಾವಾಗಲೂ ತೇವಾಂಶದಿಂದ ಇಡಬೇಕು. ಕಾಂಟ್ಯಾಕ್ಟ್ ಲೆನ್ಸ್ ನ್ನು ಒಂದು ಮಿತಿಗಿಂತ ಹೆಚ್ಚಾಗಿ ಒಣಗಿಸುವ ಕಾರಕಗಳಿಂದ ಸ್ವಚ್ಛಗೊಳಿಸುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.

Steps To Clean Contact Lenses, ಕಾಂಟ್ಯಾಕ್ಟ್ ಲೆನ್ಸ್ ಶುಚಿಗೊಳಿಸುವ ಮೊದಲು...

ಕಾಂಟ್ಯಾಕ್ಟ್ ಲೆನ್ಸ್ ನ್ನು ಶುಚಿಗೊಳಿಸುವಾಗ ತೆಗೆದುಕೊಳ್ಳಬೇಕಾದ ಕೆಲವು ಕ್ರಮಗಳು....
1. ಕೈಯನ್ನು ಸರಿಯಾಗಿ ತೊಳೆಯಿರಿ
ಕಾಂಟ್ಯಾಕ್ಟ್ ಲೆನ್ಸ್ ನ್ನು ಸ್ವಚ್ಛಗೊಳಿಸುವ ಮೊದಲು ಈ ಕೆಲಸವನ್ನು ಮೊದಲು ಮತ್ತು ಅಗತ್ಯವಾಗಿ ಮಾಡಬೇಕು. ಆ್ಯಂಟಿ ಬ್ಯಾಕ್ಟೀರಿಯಾ ಸೋಪ್ ಅಥವಾ ಕಾರಕಗಳಿಂದ ಕೈಯನ್ನು ಸರಿಯಾಗಿ ತೊಳೆಯಬೇಕು. ಕೈ ತೊಳೆಯಲು ಸಾಧ್ಯವಾಗದಿದ್ದರೆ ಹ್ಯಾಂಡ್ ಸ್ಯಾನಿಟಿಸರ್ ನ್ನು ಬಳಸಿ. ಕೈಯಲ್ಲಿರುವ ಸೂಕ್ಷ್ಮಾಣು ಜೀವಿಗಳು ಮತ್ತು ಬ್ಯಾಕ್ಟೀರಿಯಾ ನಿಮ್ಮ ಕಣ್ಣಿನ ಒಳಗಡೆ ಹೋಗದಂತೆ ಎಚ್ಚರಿಕೆ ವಹಿಸಿ.

2. ಗುಣಮಟ್ಟದ ದ್ರಾವಣಗಳು
ಕಾಂಟ್ಯಾಕ್ಟ್ ಲೆನ್ಸ್ ನ್ನು ಶುಚಿಗೊಳಿಸಲು ಗುಣಮಟ್ಟದ ದ್ರಾವಣಗಳನ್ನು ಬಳಸಿ. ಹಣಕ್ಕಾಗಿ ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳಬೇಡಿ. ನಿಮಗೆ ನೀಡಿರುವ ದ್ರಾವಣವು ನಿಮ್ಮ ವೈದ್ಯರು ಅಥವಾ ಕಾಂಟ್ಯಾಕ್ಟ್ ಲೆನ್ಸ್ ಉತ್ಪಾದಕರು ಶಿಫಾರಸ್ಸು ಮಾಡಿದ್ದಾರೆಯಾ ಎಂದು ತಿಳಿದುಕೊಳ್ಳಿ. ಕೆಲವು ದ್ರಾವಣಗಳು ಕೆಲವೊಂದು ಕಾಂಟ್ಯಾಕ್ಟ್ ಲೆನ್ಸ್ ಗಳಿಗೆ ಹೊಂದಿಕೆಯಾಗುವುದಿಲ್ಲ.

3. ಲೆನ್ಸ್ ನ್ನು ಶುಚಿಗೊಳಿಸುವುದು.
ಕಣ್ಣಿನಿಂದ ಲೆನ್ಸ್ ನ್ನು ತೆಗೆಯಿರಿ ಮತ್ತು ನಿಮ್ಮ ಲೆನ್ಸ್ ಉತ್ಪಾದಕರು ಅಥವಾ ವೈದ್ಯರು ಶಿಫಾರಸ್ಸು ಮಾಡಿರುವ ದ್ರಾವಣದಿಂದ ಅದನ್ನು ಸ್ವಚ್ಛಗೊಳಿಸಿ. ಕಣ್ಣಿನ ನಿರ್ಮಾಣ ಶೇಷ, ಸೌಂದರ್ಯವರ್ಧಕಗಳು ಅಥವಾ ಇತರ ಕಸಗಳು ಲೆನ್ಸ್ ನ ಮೇಲೆ ನಿಂತು ಅದರ ಸಾಮರ್ಥ್ಯವನ್ನು ಕುಗ್ಗಿಸಬಹುದು. ಲೆನ್ಸ್ ನ್ನು ಶುಚಿಗೊಳಿಸುವುದರಿಂದ ಇದೆಲ್ಲವನ್ನು ತೆಗೆದುಹಾಕಬಹುದು. ಸ್ವಲ್ಪ ದ್ರಾವಣವನ್ನು ಹಾಕಿ ಕೈ ಬೆರಳಿನಿಂದ ಲೆನ್ಸ್ ನ್ನು ಉಜ್ಜಿ ಸ್ವಚ್ಛಗೊಳಿಸಬೇಕು.

4. ನೆನೆಸಿಡುವ ಸಮಯ
ಭಿನ್ನ ರೀತಿಯ ಕಾಂಟ್ಯಾಕ್ಟ್ ಲೆನ್ಸ್ ಗಳಿಗೆ ವಿವಿಧ ನೆನೆಯುವ ವಿಧಾನಗಳಿರುತ್ತದೆ. ಕಾಂಟ್ಯಾಕ್ಟ್ ಲೆನ್ಸ್ ನ್ನು ನೆನೆಸಿಡುವ ಬಗ್ಗೆ ಅದರ ಉತ್ಪಾದಕರಿಂದ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಬೇಕು. ಲೆನ್ಸ್ ನ್ನು ಶುಚಿಯಾದ ಲೆನ್ಸ್ ಕೇಸ್ ಅಥವಾ ಲೆನ್ಸ್ ಹೋಲ್ಡರ್ ನಲ್ಲಿಡಿ ಮತ್ತು ಅದಕ್ಕೆ ಹೊಸ ದ್ರಾವಣವನ್ನು ಹಾಕಿ. ನೀರು ಅಥವಾ ಉಗುಳಿನಿಂದ ಲೆನ್ಸ್ ನ್ನು ನೆನೆಸಿಟ್ಟು ಅದು ಒಣಗುವ ಅಥವಾ ನೊಣಗಳು ಮುತ್ತಿಕ್ಕುವಂತೆ ಯಾವತ್ತೂ ಮಾಡಬೇಡಿ.

5. ಹೋಲ್ಡರ್ ಕೇಸ್ ನ್ನು ಶುಚಿಗೊಳಿಸಿ
ಲೆನ್ಸ್ ನ್ನು ನೆನೆಸಿಡುವ ವೇಲೆ ನಿಮ್ಮ ಕೈಗೆ ಏನೂ ತಾಗದಂತೆ ನೋಡಿಕೊಳ್ಳಿ. ನಿಮ್ಮ ಕೈಗೆ ಏನಾದರೂ ತಾಗಿದ್ದರೆ ಲೆನ್ಸ್ ನ್ನು ಕಣ್ಣಿಗೆ ಇಡುವ ಮೊದಲು ಒಂದನೇ ಕ್ರಮವನ್ನು ಮತ್ತೆ ಪಾಲಿಸಿ. ಲೆನ್ಸ್ ನ್ನು ಕಣ್ಣಿಗೆ ಇಟ್ಟ ಬಳಿಕ ಅದರ ಕೇಸ್ ನ್ನು ಹೊಸ ದ್ರಾವಣದೊಂದಿಗೆ ಶುಚಿಗೊಳಿಸಿ ಒಣಗುವಂತೆ ನೋಡಿಕೊಳ್ಳಿ. ಹಿಂದಿನ ದ್ರಾವಣ ಒಣಗದಂತೆ ನೋಡಿಕೊಳ್ಳಿ ಮತ್ತು ನೀರಿನಲ್ಲಿ ತೊಳೆಯಬೇಡಿ.

ಈ ಎಲ್ಲಾ ಕ್ರಮಗಳನ್ನು ಪಾಲಿಸುವ ಕೆಳಗಿನವುಗಳನ್ನು ಗಮನಿಸಿ
1. ಲೆನ್ಸ್ ಮೇಲೆ ದ್ರಾವಣವನ್ನು ಉಜ್ಜುವಾಗ ದೃಢವಾಗಿ ನೇರಕ್ಕೆ ಹಿಂದೆ ಮತ್ತು ಮುಂದಕ್ಕೆ ಉಜ್ಜುವಂತೆ ನೋಡಿಕೊಳ್ಳಿ.
2. ಕೈಬೆರಳಿನ ಉಗುರು ಸಣ್ಣದಾಗಿರಲಿ ಮತ್ತು ಸ್ವಚ್ಛವಾಗಿರಲಿ.
3. ಲೆನ್ಸ್ ಇಡುವ ದ್ರಾವಣವನ್ನು ದಿನನಿತ್ಯ ಬದಲಾಯಿಸಿ.
4. ವೈದ್ಯರು ಅಥವಾ ಲೆನ್ಸ್ ತಯಾರಕರ ಅನುಮತಿ ಪಡೆಯದೆ ಲೆನ್ಸ್ ಶುಚಿಗೊಳಿಸುವ ದ್ರಾವಣದ ಬ್ರಾಂಡ್ ನ್ನು ಬದಲಾಯಿಸಬೇಡಿ.

English summary

Steps To Clean Contact Lenses, ಕಾಂಟ್ಯಾಕ್ಟ್ ಲೆನ್ಸ್ ಶುಚಿಗೊಳಿಸುವ ಮೊದಲು...

It is very important to clean contact lens on regular basis as instructed by the manufacturer and recommended by your doctor. Care must be taken not to clean contact lens with water. Bugs and parasites present in normal water can cause severe infection to the eye.
X
Desktop Bottom Promotion