For Quick Alerts
ALLOW NOTIFICATIONS  
For Daily Alerts

ಆತಂಕ ಅಥವಾ ಉದ್ವಿಗ್ನತೆಯನ್ನು ನಿಯಂತ್ರಿಸುವುದು ಹೇಗೆ?

By Super
|

ಸಾಮಾನ್ಯವಾಗಿ ಅಲ್ಪ ಕಾಲಕ್ಕೆ ಒಳಗಾಗುವ ಅತಿಯಾದ ಭಯ ಮತ್ತು ಅವಿಶ್ರಾಂತ ಮನಸ್ಥಿತಿಗೆ ಆತಂಕ ಎಂದು ಕರೆಯುತ್ತಾರೆ. ಇದು ಉದ್ವಿಗ್ನತೆ ಎಂಬ ಹೆಸರಿನಿಂದಲೂ ಜನಪ್ರಿಯವಾಗಿದೆ. ಈ ಆತಂಕ ಎನ್ನುವುದು ಅನಿರೀಕ್ಷಿತವಾಗಿ ಉಂಟಾಗುತ್ತದೆ. ಆದರೂ ಕೂಡ ಈ ಆತಂಕಕ್ಕೆ ಮುಂದೆ ನಡೆಯಲಿರುವ ಅಥವಾ ನಡೆಯಬಹುದಾದ ಯಾವುದೋ ಒಂದು ಅಹಿತಕರ ಘಟನೆಯ ಕುರಿತಾದ ಕಲ್ಪನೆಯೇ ಕಾರಣವಾಗಿರುತ್ತದೆ.

ಆದುದರಿಂದ, ಈ ಆತಂಕವು ಯಾವುದೇ ಸಂದರ್ಭದಲ್ಲಿಯೂ ಉಂಟಾಗಬುಹುದಾದ್ದರಿಂದ, ಅದನ್ನು ಎದುರಿಸಲು ತಯಾರಾಗಿರುವುದು ಅತೀ ಮುಖ್ಯವಾಗಿರುತ್ತದೆ. ಆತಂಕವನ್ನು ಎದುರಿಸಲು ಕೆಲವೊಂದು ಮಾರ್ಗೋಪಾಯಗಳನ್ನು ಈ ಕೆಳಗೆ ಸೂಚಿಸಲಾಗಿದೆ.

1. ಅಲ್ಪ ವಿರಾಮ

1. ಅಲ್ಪ ವಿರಾಮ

ನಿಮಗೆ ಸಂಬಧಿಸಿದಂತೆ ಇರಬಹುದಾದ ನೇತ್ಯಾತ್ಮಕ ವಿಷಯಗಳ ಕುರಿತು ಯೋಚಿಸಲು, ಬಿಡುವಿಲ್ಲದ ನಿಮ್ಮ ಕೆಲಸಗಳ ನಡುವೆ ಸ್ವಲ್ಪ ಸಮಯವನ್ನು ಹೊಂದಿಸಿಕೊಳ್ಳಿ ಹಾಗೂ ಅವುಗಳ ಬಗ್ಗೆ ಯೋಚಿಸಿರಿ. ಕಾರಣವೇಂದರೆ, ನೇತ್ಯಾತ್ಮಕ ವಿಷಯಗಳನ್ನು ಅರಿತು, ಅವುಗಳನ್ನು ಸ್ವೀಕರಿಸುವುದರಿಂದ, ಅವುಗಳೊಂದಿಗೆ ಹೊಂದಿಕೊಂಡು ಬಾಳಲು ಸಹಕಾರಿಯಾಗುತ್ತದೆ. ಇಲ್ಲಿರುವ ಸ್ಪಷ್ಟ ಸಂದೇಶವೇನೆoದರೆ ಪರಿಸ್ಥಿತಿಯಿಂದ ವಿಮುಖರಾಗದೆ, ಅದನ್ನು ಎದುರಿಸುವುದು.

2. ಅಹಿತಕರ ಘಟನೆಗಳು ಸಂಭವನೀಯ

2. ಅಹಿತಕರ ಘಟನೆಗಳು ಸಂಭವನೀಯ

ಜೀವನದಲ್ಲಿ ಅಶಾವಾದಿಯಾಗಿರುವುದು ಉತ್ತಮ. ಅಂತೆಯೇ, ಅಹಿತಕರ ಸಂದರ್ಭಗಳನ್ನು ಎದುರಿಸಲು ತಯಾರಾಗಿರುವುದು ಕೂಡ ಅಷ್ಟೇ ಒಳ್ಳೆಯದು. ಇದರರ್ಥ, ಅಹಿತಕರ ಸಂದರ್ಭಗಳನ್ನೇ ಯೋಚಿಸುತ್ತಾ ಖಿನ್ನರಾಗುವುದು ಎಂದಲ್ಲ. ಬದಲಾಗಿ, ಅಹಿತಕರ ಘಟನೆಯನ್ನು ಪೂರ್ವನಿರ್ಧಾರಿತ ರೀತಿಯಲ್ಲಿ ಸಹಜವೆಂಬಂತೆ ಸ್ವೀಕರಿಸುವುದಾಗಿದೆ.

3. ಆತಂಕದ ಸಂಭವನೀಯ ಜಾಡನ್ನು ಗುರುತಿಸಿರಿ

3. ಆತಂಕದ ಸಂಭವನೀಯ ಜಾಡನ್ನು ಗುರುತಿಸಿರಿ

ಉದ್ವೇಗವನ್ನು ನಿಭಾಯಿಸುವ ಮತ್ತೊಂದು ಮಾರ್ಗವೆಂದರೆ ಅಂತಹ ಸನ್ನಿವೇಶ, ಸಂದರ್ಭಗಳನ್ನು ದಾಖಲಿಸುವುದು. ನೀವು ಉದ್ವೇಗಕ್ಕೆ ಒಳಗಾದ ಸಮಯ ಮತ್ತು ನಿಮ್ಮ ಉದ್ವೇಗದ ಕಾರಣವನ್ನು ದಾಖಲಿಸಲು ಅನುಕೂಲವಾಗುವ ರೀತಿಯಲ್ಲಿ ಒಂದು ದಿನಚರಿ ಪುಸ್ತಕ ಜೊತೆಗೆ ಒಂದು ಪೆನ್ಸಿಲ್ ಅಥವಾ ಪೆನ್ನನ್ನು ಇಟ್ಟುಕೊಳ್ಳುವುದು ಉತ್ತಮ. ಇಲ್ಲಿ ಗಮನಿಸಬಹುದಾದ ಅಂಶವೇನೆoದರೆ, ದಾಖಲಾತಿ, ಬರವಣಿಗೆಯಂತಹ ಚಟುವಟಿಕೆಗಳಿಗೆ ಮನಸ್ಸು ಕೇಂದ್ರಿಕೃತವಾಗಿರುವುದು ಮುಖ್ಯ ಹಾಗೂ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವಾಗ, ಆತಂಕದ ಯೋಚನೆಯು ಸುಳಿಯುದು ಬಹುಮಟ್ಟಿಗೆ ಕಡಿಮೆಯಾಗುತ್ತದೆ. ಇದರಿಂದಾಗಿ ವ್ಯಕ್ತಿಯು ಮುಂದೆ ಒದಗಬಹುದಾದ ಉದ್ವಿಗ್ನತೆಯಿಂದ ಮುಕ್ತನಾಗುತ್ತಾನೆ.

4. ಸರಿಯಾಗಿ ಆಹಾರ ಸೇವಿಸಿರಿ

4. ಸರಿಯಾಗಿ ಆಹಾರ ಸೇವಿಸಿರಿ

ಜಾಗತಿಕ ನಿಯಮದಂತೆ, ಬೆಳಗಿನ ಉಪಹಾರವು ಸಮೃದ್ದವಾಗಿರಬೇಕು ಹಾಗೂ ಹೊಟ್ಟೆ ತುಂಬಾ ಸೇವಿಸಬೇಕು. ಎರಡು ಆಹಾರಗಳ ನಡುವೆ ಅಲ್ಪಪ್ರಮಾಣದಲ್ಲಿ ಮನಸ್ಸಿಗೆ ಸಂತಸ ನೀಡುವ ತಿಂಡಿಯನ್ನು ತಿನ್ನಬಹುದು. ಇದರಿಂದಾಗಿ, ರಕ್ತದಲ್ಲಿರುವ ಸಕ್ಕರೆಯ ಅಂಶವು ಏಕಪ್ರಕಾರವಾಗಿರುತ್ತದೆ ಹಾಗೂ ಇದರಿಂದ ನಿಮ್ಮ ಮನಸ್ಥಿತಿಯೂ ಸಹ ಉಲ್ಲಾಸವಾಗಿರುತ್ತದೆ.

5. ಚೆನ್ನಾಗಿ ನಿದ್ರೆ ಮಾಡಿರಿ

5. ಚೆನ್ನಾಗಿ ನಿದ್ರೆ ಮಾಡಿರಿ

ದಿನಕ್ಕೆ ಕನಿಷ್ಟ ಪಕ್ಷ 8 ರಿಂದ 9 ಘಂಟೆಗಳ ಕಾಲ ನಿದ್ರೆ ಮಾಡಲೇಬೇಕು. ಇಲ್ಲವಾದಲ್ಲಿ, ಅನಾವಶ್ಯಕವಾಗಿ ಆತಂಕಕ್ಕೆ ಒಳಗಾಗುವುದು ಹೆಚ್ಚುತ್ತದೆ.

6. ಮಾದಕ ಪದಾರ್ಥಗಳನ್ನು ವರ್ಜಿಸಿರಿ

6. ಮಾದಕ ಪದಾರ್ಥಗಳನ್ನು ವರ್ಜಿಸಿರಿ

ಅತಿಯಾದ ಮಾದಕ ಪದಾರ್ಥ (ಇದಿಲ್ಲದೇ ವ್ಯಕ್ತಿ ಎನೂ ಮಾಡಲು ಸಾಧ್ಯವಿಲ್ಲ) ಸೇವನೆಯಿಂದ ಉದ್ವಿಗ್ನಕ್ಕೆ ಒಳಗಾಗುವ ಸಾಧ್ಯತೆಯು ಅತಿ ಹೆಚ್ಚಾಗಿರುತ್ತದೆ. ಆದುದರಿಂದ ಆಲ್ಕೋಹಾಲ್, ತಂಬಾಕು, ಸಿಗರೇಟು, ಮತ್ತು ನಿಕೋಟಿನ್ ಗಳನ್ನು ಕಡಿಮೆ ಮಾಡಬೇಕು.

7. ಯೋಗಾಭ್ಯಾಸವನ್ನು ಮಾಡಿರಿ

7. ಯೋಗಾಭ್ಯಾಸವನ್ನು ಮಾಡಿರಿ

ಪದೇ ಪದೇ ಆತಂಕಕ್ಕೆ ಒಳಗಾಗುವವರು ವ್ಯಾಯಾಮ/ಯೋಗವನ್ನು ಮಾಡಲೇಬೇಕು. ಯೋಗವು ವ್ಯಾಯಾಮದ ಒಂದು ಉತ್ತಮ ಪ್ರಕಾರವಾಗಿದೆ. ಇದು ಸುಲಭವಾಗಿದೆ ಹಾಗೂ ಇದಕ್ಕೆ ಯಾವುದೇ ಸಾಧನ, ಸಲಕರಣೆಯ ಅಗತ್ಯವಿರುವುದಿಲ್ಲ.

ವಿಶ್ರಾಂತ ಸ್ಥಿತಿಗೆ ಇತರೆ ಕೆಲವು ಸರಳ ವಿಧಾನಗಳು.

ಆತಂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಇತರೆ ಕೆಲವು ಮಾರ್ಗೋಪಾಯಗಳಿವೆ. ನೀವು ಸರಳವಾದ, ಸ್ನಾಯುಗಳನ್ನ ಸಡಿಲಗೊಳಿಸುವ ತಂತ್ರಗಳನ್ನು ಅನುಸರಿಸಬಹುದು ಹಾಗೆಯೇ, ಆಳವಾದ ಉಸಿರಾಟವನ್ನು ಮಾಡಬಹುದು. ಇದರಿಂದ ಮನಸ್ಸು ಹಗುರವಾದಂತಹ ಅನುಭವವಾಗುತ್ತದೆ.

ಮೇಲಿನ ಕೆಲವೊಂದು ಸಲಹೆಗಳನ್ನು ಅನುಸರಿಸಿದಲ್ಲಿ, ನೀವು ಯಾವಾಗಲೂ ಖಿನ್ನತೆಗೆ ಒಳಗಾಗುವುದನ್ನು ತಪ್ಪಿಸಬಹುದು. ಈ ವಿಧಾನಗಳು ಆಯಾ ಸಂದರ್ಭದ ಆತಂಕವನ್ನು ಎದುರಿಸಲು ಸಹಕಾರಿಯಾಗಬಹುದಾದರೂ ಕೂಡ, ಇವುಗಳನ್ನು ಧೀರ್ಘಕಾಲೀನ ಪರಿಹಾರೋಪಾಯವಾಗಿ, ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಅಭ್ಯಸಿಸಬೇಕು.

8. ಉತ್ತಮ ಹವ್ಯಾಸಗಳಲ್ಲಿ ತೊಡಗಿಕೊಳ್ಳಿರಿ

8. ಉತ್ತಮ ಹವ್ಯಾಸಗಳಲ್ಲಿ ತೊಡಗಿಕೊಳ್ಳಿರಿ

ಆತಂಕವನ್ನು ಎದುರಿಸಲು ಉತ್ತಮ ಹವ್ಯಾಸವು ಅತ್ಯುತ್ತಮ ಮಾರ್ಗವಾಗಿದೆ. ಅದು ಸಂಗೀತವಾಗಿರಬಹುದು ಅಥವಾ ಪುಸ್ತಕವನ್ನು ಓದುವುದಾಗಿರಬಹುದು ಅಥವಾ ಪ್ರವಾಸವಾಗಿರಬಹುದು, ಅದನ್ನು ನಿಮ್ಮದಾಗಿಸಿಕೊಳ್ಳಿ. ಈ ಹವ್ಯಾಸವು ನಿಮ್ಮನ್ನು ಉದ್ವಿಗ್ನತೆಯಿಂದ ದೂರವಿರಿಸುತ್ತದೆ.

English summary

How To Control Anxiety Attacks

Anxiety attacks, also popularly known as panic attacks, are brief phases of extreme fear and restlessness. Some of the suggested ways of tempering anxiety attacks.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more