For Quick Alerts
ALLOW NOTIFICATIONS  
For Daily Alerts

ನವೆಯ ಸಮಸ್ಯೆಯೇ? ಇಲ್ಲಿದೆ ಮನೆಮದ್ದು !

By Super
|

ಬೇಸಿಗೆ ಕಾಲ ಆರಂಭವಾದರೆ ಸಾಕು ದೇಹದಲ್ಲಿ ಸಹಿಸಲಾಗದಷ್ಟು ಸಮಸ್ಯೆಗಳು ಉದ್ಭವಿಸುತ್ತವೆ. ಮಕ್ಕಳ ಸೂಕ್ಷ್ಮವಾದ ತ್ವಚೆಗಳ ಮೇಲಂತೂ ಅಧಿಕ ಶಾಖ ಅತ್ಯಂತ ವೇಗವಾಗಿ ಪರಿಣಾಮಬೀರುತ್ತದೆ. ಇಂತಹ ಸಮಸ್ಯೆಗಳಲ್ಲಿ ನವೆ ಅಥವಾ ಕೆಂಪು ಗುಳ್ಳೆಗಳೂ ಒಂದು.

ಅತೀಯಾದ ಸೆಳೆ ಅಥವಾ ಉಷ್ಣದಿಂದಾಗಿ ತ್ವಚೆಯನ್ನು ಕಾಯ್ದುಕೊಳ್ಳುವುದೇ ಕಷ್ಟ! ಏಕೆಂದರೆ ಈ ಸಂದರ್ಭದಲ್ಲಿ ಮೈಯಲ್ಲಿ ಗುಳ್ಳೆಗಳು(ಸೆಖೆ ಬೊಕ್ಕೆಗಳು) ಕಾಣಿಸಿಕೊಳ್ಳುತ್ತವೆ. ಇದು ಅತ್ಯಂತ ಸಣ್ಣದಾದ ಕೆಂಪು ಬಣ್ಣದಲ್ಲಿದ್ದು ದೇಹದ ಹಲವಾರು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಪ್ರತಿದಿನ ತುರಿಕೆ ಅಥವಾ ನೋವನ್ನು ಅನುಭವಿಸಬೇಕಾಗುತ್ತದೆ. ಸಾಮಾನ್ಯವಾಗಿ ಈ ಗುಳ್ಳೆಗಳು ಮುಖ, ಕುತ್ತಿಗೆ, ದೇಹದ ಹಿಂಭಾಗ, ಎದೆ ಹಾಗೂ ತೊಡೆಗಳ ಮೇಲೆ ಕಾಣಿಸಿಕೊಳ್ಳುವುದು ಹೆಚ್ಚು.

ಕೆಂಪು ಗುಳ್ಳೆಗಳಲ್ಲಿನ ವಿಧಗಳು:

ಚರ್ಮದಲ್ಲಿ ಕಂಡುಬರುವ ವೈಪರಿತ್ಯಗಳ ವಿಭಿನ್ನತೆಗಳ ಆಧಾರದ ಮೇಲೆ, ಇದನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು:

ಮಿಲೈರಿಯಾ ಸ್ಪಟಿಕ (Miliaria crystalline) : ಚರ್ಮದ ಮೇಲ್ಭಾಗದಲ್ಲಿ ಉಂಟಾಗುವುದು.

ಗುಣಲಕ್ಷಣಗಳು: ಸಣ್ಣ ಗುಳ್ಳೆಯಾಗಿದ್ದು ಗಾತ್ರ 1-2 ನೀರಿನ ಹನಿಗಳಷ್ಟು. ಸ್ಪಷ್ಟ ನೀರನ್ನು ಹೊಂದಿರುವ ಗುಳ್ಳೆಗಳಂತೆ ಕಾಣುತ್ತವೆ. ಆದರೆ ಚರ್ಮವು ಕೆಂಪು ಬಣ್ಣವನ್ನು ಪಡೆದುಕೊಳ್ಳುವುದಿಲ್ಲ.

ಸ್ಥಳ: ಹಣೆಯ ಮೇಲೆ, ಕೈ ಬೆರಳ ನಡುವೆ, ಕುತ್ತಿಗೆ, ಬೆನ್ನು ಮತ್ತು ಎದೆಯ ಭಾಗ.

ಮಿಲೈರಿಯಾ ರುಬ್ರ (Miliaria rubra) ಚರ್ಮದ ಮಧ್ಯಮ ಪದರದಲ್ಲಿ ಕಂಡುಬರುತ್ತದೆ.

ಗುಣ ಲಕ್ಷಣಗಳು: ಸಣ್ಣ ಗುಳ್ಳೆಗಳು, 1-2 ಮಿಮೀಯಷ್ಟು ಗಾತ್ರದ್ದು ಮತ್ತು ಕೆಂಪು ಬಣ್ಣದ್ದು. ಗುಳ್ಳೆಗಳು ಸಾಮಾನ್ಯವಾಗಿ ಹರಡಿರುತ್ತದೆ. ಬೆವರು ಉಂಟಾದಾಗ ಬಹಳ ನವೆ ಮತ್ತು ನೋವಿನ ಅನುಭವವಾಗುತ್ತದೆ. ಇದು ಅತ್ಯಂತ ಸಾಮಾನ್ಯವಾಗಿ ಕಂಡುಬರುತ್ತದೆ.

ಸ್ಥಳ: ಬಟ್ಟೆ ಆವರಿಸಿಕೊಂಡಿರುವ ದೇಹ ಭಾಗಗಳು

ಮಿಲೈರಿಯಾ ಪ್ರೊಫುಂಡಾ (Miliaria profunda) ಚರ್ಮದ ಪದರದ ಒಳಗೆ ಸಂಭವಿಸುತ್ತದೆ.

ಗುಣಲಕ್ಷಣಗಳು: 1-3 ಮಿಮೀ ಅಳತೆಯ ಬಿಳಿ ಬಣ್ಣದ ಕೇಂದ್ರಗಳು. ತುರಿಕೆ ಉಂಟುಮಾಡುವುದಿಲ್ಲ. ಇದು ವಿರಳವಾಗಿರುವುದು.

ಸ್ಥಳ: ದೇಹ, ಕಂಕುಳ (arms) ಮತ್ತು ಕಾಲುಗಳು.

ಈ ರೀತಿ ಕೆಂಪು ಗುಳ್ಳೆಗಳು ಉಂಟಾಗಲು ಕಾರಣ ಮತ್ತು ಅದಕ್ಕೆ ಮನೆಮದ್ದನ್ನು ಈ ಕೆಳಗೆ ನೀಡಲಾಗಿದೆ ನೋಡಿ:

ಗುಳ್ಳೆಗಳಿಗೆ ಕಾರಣಗಳು:

ಗುಳ್ಳೆಗಳಿಗೆ ಕಾರಣಗಳು:

ಈ ಬೊಬ್ಬೆಗಳಿಗೆ (ಗುಳ್ಳೆಗಳಿಗೆ) ಮುಖ್ಯ ಕಾರಣ ಬೆವರು ಗ್ರಂಥಿಗಳಿಂದ ಉಂಟಾಗುವ ರಂಧ್ರಗಳು. ಬೇಸಿಗೆ ಕಾಲದಲ್ಲಿ ದೇಹವು ವಿಪರೀತವಾಗಿ ಬೆವರುತ್ತದೆ ಹಾಗೂ ಈ ಸಮಯದಲ್ಲಿ ಬೆವರು ಚರ್ಮದ ಮೇಲೆ ಅಂಟಿಕೊಂಡು ಸಣ್ಣ ಕೆಂಪು ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ.

ಅತೀಯಾದ ಶಾಖ ಹಾಗೂ ಬೆವರುವುದರ ಹೊರತಾಗಿ, ಇಂಥ ಗುಳ್ಳೆಗಳು ಏಳುವುದಕ್ಕೆ ಇತರ ಕಾರಣಗಳೆಂದರೆ, ಅಧಿಕ ಕೆಲಸ ಕಾರ್ಯಗಳು, ಆಲ್ಕೊಹಾಲ್ ಸೇವನೆ, ಧೂಮಪಾನ, ಅನಾರೋಗ್ಯಕರ ಮತ್ತು ಒತ್ತಡದ ಜೀವನ, ಜಂಕ್ ಆಹಾರ ಮಿತಿಮೀರಿದ ಬಳಕೆ, ಅಕಾಲಿಕ ಆಹಾರ ಪದ್ಧತಿ, ಆಮ್ಲತೆ, ವಿಷಾಹಾರ ಮತ್ತು ಕೆಲವು ಅಡ್ಡ ಪರಿಣಾಮಗಳನ್ನು ಹೊಂದಿರುವ ಔಷಧ ಮೊದಲಾದವು.

ಕೆಂಪು ಗುಳ್ಳೆಗಳ ಲಕ್ಷಣಗಳು:

ಕೆಂಪು ಗುಳ್ಳೆಗಳ ಲಕ್ಷಣಗಳು:

ಬೆವರು ಗ್ರಂಥಿ ನಾಳದಿಂದ ಉಂಟಾದ ಬೆವರು ಚರ್ಮದ ಮೇಲೆ ಅಂಟಿಕೊಂಡು, ನಂತರ ದೇಹದಲ್ಲಿ ತುರಿಕೆ ಮತ್ತು ಉರಿಯೂತ ಉಂಟಾಗುತ್ತದೆ.

ಸಾಮಾನ್ಯವಾಗಿ ಚರ್ಮದ ಮೇಲೆ ಸಣ್ಣ ಕೆಂಪು ಉಬ್ಬುಗಳು ಎದ್ದು ಆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಇಲ್ಲಿ ಮನೆಯ ಮದ್ದುಗಳನ್ನು ಬಳಸಿ ಈ ಗುಳ್ಳೆಗಳನ್ನು ತೊಡೆದುಹಾಕಲು ಕೆಲವು ಸಲಹೆಗಳಿವೆ, ಮುಂದಿನ ಸ್ಲೈಡ್ ನೋಡಿ.

1. ಓಟ್ಸ್ ಹಿಟ್ಟು

1. ಓಟ್ಸ್ ಹಿಟ್ಟು

ಓಟ್ಸ್ ಕೆಂಪು ಗುಳ್ಳೆಗಳಿಗೆ ಪರಿಣಾಮಕಾರಿ ಮನೆ ಚಿಕಿತ್ಸೆಯಾಗಿದೆ. ಸ್ನಾನದ ಟಬ್ ಒಳಗೆ ಕೆಲವು ಸ್ಪೂನ್ ಗಳಷ್ಟು ಓಟ್ ಹಿಟ್ಟು ಸೇರಿಸಿ ಅದನ್ನು ಸರಿಯಾಗಿ ನೀರಿನಲ್ಲಿ ಮಿಶ್ರಣ ಮಾಡಿ. ಸ್ನಾನದ ಟಬ್ ಒಳಗೆ 15 ನಿಮಿಷಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಿ. ತ್ವಚೆಯ ಮೃದುತ್ವ ಮತ್ತು ಚರ್ಮದ ನವೆಯನ್ನು ಶಮನಗೊಳಿಸಲು ಈ ವಿಧಾನವನ್ನು ದಿನಕ್ಕೆ ಎರಡು ಬಾರಿ ಪುನರಾವರ್ತಿಸಿ.

2. ಮಂಜುಗಡ್ಡೆ (ಐಸ್)

2. ಮಂಜುಗಡ್ಡೆ (ಐಸ್)

ಐಸ್, ಬಿಸಿ ಮತ್ತು ಆರ್ದ್ರತೆಯ ತಾಪಮಾನದ ಕಾರಣದಿಂದಾಗಿ ಉಂಟಾದ ಗುಳ್ಳೆಗಳನ್ನು ಕಡಿಮೆ ಗೊಳಿಸಬಲ್ಲ ಮತ್ತೊಂದು ಮಹಾನ್ ಪರಿಹಾರವಾಗಿದೆ. ಉರಿಯೂತ ಕಡಿಮೆ ಮಾಡಲು ಸಣ್ಣ ಮಂಜುಗಡ್ಡೆಯ ತುಂಡನ್ನು ತೆಗೆದುಕೊಂಡು ರಾಶಸ್ / ಗುಳ್ಲೆಗಳ ಮೇಲೆ ನಿಧಾನವಾಗಿ ಉಜ್ಜಿ.

3. ಶ್ರೀಗಂಧದ ಪುಡಿ (Sandalwood powder )

3. ಶ್ರೀಗಂಧದ ಪುಡಿ (Sandalwood powder )

ಎರಡು ಟೀ- ಚಮಚ ಶ್ರೀಗಂಧದ ಪುಡಿ ಮತ್ತು ಕೊತ್ತಂಬರಿ ಪುಡಿಯನ್ನು ತೆಗೆದುಕೊಳ್ಳಿ. ಇದಕ್ಕೆ 2-3 ಟೀ-ಚಮಚದಷ್ಟು ರೋಸ್ ವಾಟರ್ ನ್ನು ಸೇರಿಸಿ. ಮತ್ತು ಮೃದುವಾದ ಪೇಸ್ಟ್ ನಂತೆ ಮಿಶ್ರಣಮಾಡಿ. ಗುಳ್ಳೆಗಳು ಉಂಟಾದ ಸ್ಥಳಕ್ಕೆ ಚೆನ್ನಾಗಿ ಈ ಪೇಸ್ಟ್ ನ್ನು ಲೇಪಿಸಿ ಅದು ಹಾಗೆಯೇ ಒಣಗಲು ಬಿಡಿ. ನಂತರ ತಣ್ಣೀರಿನಲ್ಲಿ ತೊಳೆಯಿರಿ.

4. ಮುಲ್ತಾನಿ ಮಿಟಿ (Fuller's earth )

4. ಮುಲ್ತಾನಿ ಮಿಟಿ (Fuller's earth )

ಫುಲ್ಲರ್ಸ್ ಅರ್ಥ್ ಅಥವಾ ಮುಲ್ತಾನಿ ಮಿಟಿ ಇನ್ನೊಂದು ಉತ್ತಮವಾದ ಮನೆ ಮದ್ದು. ಒಂದು ದಪ್ಪನೇಯ ಪೇಸ್ಟ್ ರೂಪಿಸಲು 4-5 ಟೀ ಚಮಚ ಮುಲ್ತಾನಿ ಮಿಟಿ 2-3 ಟೀ- ಚಮಚ ರೋಸ್ ವಾಟರ್ ಮತ್ತು ತಣ್ಣನೇಯ ನೀರು ಮಿಶ್ರಣ ಮಾಡಿ. ಕೆಂಪು ಗುಳ್ಳೆಗಳು ಬಂದ ಜಾಗದಲ್ಲಿ ಚೆನ್ನಾಗಿ ಲೇಪಿಸಿ ದು 2-3 ಘಂಟೆಗಳ ಕಾಲ ಒಣಗಲು ಬಿಡಿ. ನಂತರ ತಣ್ಣೀರಿನಲ್ಲಿ ತೊಳೆಯಿರಿ.

5. ತಣ್ಣನೆಯ ನೀರು

5. ತಣ್ಣನೆಯ ನೀರು

ಒಂದು ಹತ್ತಿ ಬಟ್ಟೆ ಅಥವಾ ಮೆದು ಸ್ಪಾಂಜ್ ನ್ನು ತಣ್ಣೀರಿನಲ್ಲಿ ನೆನೆಸಿ. ನಂತರ ಆ ಸ್ಪಾಂಜಿನ ಎಲ್ಲಾ ನೀರನ್ನು ದೇಹ ಹೀರಿಕೊಳ್ಳುವವರೆಗೆ ಮಸಾಜ್ ಮಾಡಿ ಹೀಗೆ 2 ರಿಂದ 3 ಬಾರಿ ಪುನರಾವರ್ತಿಸಿ. ಇದರಿಂದ ಉರಿಯೂತದಿಂದ ನೀವು ತ್ವರಿತ ಪರಿಹಾರ ಕಂಡುಕೊಳ್ಳಬಹುದು.

6. ಆಲದ ಮರದ ತೊಗಟೆ

6. ಆಲದ ಮರದ ತೊಗಟೆ

ದೇಹದಲ್ಲಾದ ಗುಳ್ಲೆಗಳನ್ನು ನಿವಾರಿಸುವಲ್ಲಿ ಇದು ಸಹಾಯ ಮಾಡುತ್ತದೆ. ಆಲದ ಮರದ ಒಣ ತೊಗಟೆ ಅಥವಾ ಚೆಕ್ಕೆಯನ್ನು ತಂದು ಚೆನ್ನಾಗಿ ಪುಡಿ ಮಾಡಿ. ಈ ಪುಡಿಯನ್ನು ನಿಮ್ಮ ಗಿಳ್ಲೆಗಳಿರುವ ಪ್ರದೇಶಕ್ಕೆ ಹಚ್ಚಿ. ಹೀಗೆ ಮಾಡುವುದರಿಂದ ಅತ್ಯಂತ ವೇಗದಲ್ಲಿ ಉಪಶಮನವಾಗುವುದನ್ನು ನೀವೇ ಕಂಡುಕೊಳ್ಳುವಿರಿ.

7. ಬೇವಿನ ಎಲೆಗಳು

7. ಬೇವಿನ ಎಲೆಗಳು

ಕೆಲವು ಬೇವಿನ ಎಲೆಗಳನ್ನು ತಂದು ನೀರಿನೊಂದಿಗೆ ಬೆರಿಸಿ ನುಣುಪಾದ ಪೇಸ್ಟ್ ತಯಾರಿಸಿ. ಇದನ್ನು ಗುಳ್ಳೆ ಪೀಡಿತ ಪ್ರದೇಶಗಳಲ್ಲಿ ಹಚ್ಚಿ. ಮತ್ತು ಈ ಪೇಸ್ಟ್ ಸಂಪೂರ್ಣವಾಗಿ ಒಣಗುವವರೆಗೆ ಹಾಗೆಯೇ ಚರ್ಮದ ಮೇಲೆ ಬಿಡಿ. ಬೇವಿನ ಎಲೆಗಳು ಸೂಕ್ಷ್ಮಜೀವಿಗಳನ್ನು ಕೊಲ್ಲುವ ಮತ್ತು ಇತರ ಚರ್ಮದ ಕಾಯಿಲೆಗಳನ್ನು ಕೂಡಲೇ ಪರಿಹಾರ ಒದಗಿಸುವ ದಿವ್ಯೌಷಧಿಯಾಗಿದೆ.

8. ಅಡುಗೆ ಸೋಡಾ

8. ಅಡುಗೆ ಸೋಡಾ

ಒಂದು ಕಪ್ ತಣ್ಣೀರಿನಲ್ಲಿ ಒಂದು ಟೀ ಚಮಚ ಅಡಿಗೆ ಸೋಡಾ ಹಾಕಿ ಕರಗಿಸಿ. ಒಂದು ಬಟ್ಟೆಯನ್ನು ಇದರಲ್ಲಿ ಅದ್ದಿ ಅದನ್ನು ದೇಹದ ಗುಳ್ಳೆಗಳ ಭಾಗಕ್ಕೆ ನಿಧಾನವಾಗಿ ಉಜ್ಜಿ. ಉಜ್ಜಿದ ನೀರಿನ ಅಂಶ ದೇಹದ ಮೇಲೆ ಕಡಿಮೆಯಾಗುತ್ತ ಬಂದಹಾಗೆ ಅಡಿಗೆ ಸೋಡಾ ತುರಿಕೆ ಮತ್ತು ನವೆಗೆ ಸರಾಗವಾಗಿ ಕಡಿಮೆ ಮಾಡುತ್ತದೆ. ಅತ್ಯುತ್ತಮ ಫಲಿತಾಂಶಗಳಿಗಾಗಿ ದಿನವೂ 4 ರಿಂದ 5 ಬಾರಿ ಈ ವಿಧಾನವನ್ನು ಪುನರಾವರ್ತಿಸಿ.

9. ನಿಂಬೆ ರಸ

9. ನಿಂಬೆ ರಸ

ಅಧಿಕವಾಗಿ ನಿಂಬೆ ರಸ ಕುಡಿಯುವುದು ನವೆಗೆ ಅತ್ಯುತ್ತಮ ಚಿಕಿತ್ಸೆ. ದಿನವೂ 3 ರಿಂದ 4 ಲೋಟ ನಿಂಬೆ ರಸ ಕುಡಿಯಿರಿ ಇದರಿಂದ ತ್ವರಿತ ಆರಾಮ ಕಾಣಬಲ್ಲಿರಿ.

10. ಜೋಳದ ಗಂಜಿ

10. ಜೋಳದ ಗಂಜಿ

ನೀರಿನೊಂದಿಗೆ ಮೆಕ್ಕೆಜೋಳ ಅಥವಾ ಹಿಟ್ಟನ್ನು ಬೆರೆಸಿ ನಯವಾದ ಪೇಸ್ಟ್ ತಯಾರಿಸಿ. ನಂತರ ಪೀಡಿತ ಪ್ರದೇಶಗಳಲ್ಲಿ ಈ ಪೇಸ್ಟ್ ನ್ನು ಲೇಪಿಸಿ ಸುಮಾರು ಅರ್ಧ ಗಂಟೆಗಳ ಕಾಲ ಒಣಗಲು ಬಿಡಿ. ನಂತರ, ತಣ್ಣೀರಿನ ಸ್ನಾನವನ್ನು ಮಾಡಿ. ಇದರಿಂದ ದೇಹಕ್ಕೆ ಸಾಕಷ್ಟು ಆರಾಮದಾಯಕವೆನಿಸುವುದು.

11. ಲೋಳೆಸರ

11. ಲೋಳೆಸರ

ನಿಮ್ಮ ಮನೆಯಲ್ಲಿ ಒಂದು ಅಲೋ ವೆರಾ ಸಸ್ಯವಿದ್ದರೆ ಅದು ನಿಮ್ಮ ಅದೃಷ್ಟ ಎಂದೇ ಯೋಚಿಸಿ. ಏಕೆಂದರೆ ಇದು ಅತ್ಯುತ್ತಮವಾದ ರೋಗನಿವಾರಕ ಸಸ್ಯ. ಗುಳ್ಳೆಗಳುಳ್ಳ ಸ್ಥಳಕ್ಕೆ ಅಲೋ ವೆರಾ ಎಲೆಗಳ ರಸ (ಜೆಲ್) ಹಚ್ಚಿ. ಕೆಲವು ಸಮಯದ ನಂತರ ತಣ್ಣೀರಿನ ಸ್ನಾನ ಮಾಡಿ.

ಕೆಂಪು ಗುಳ್ಳೆಗಳನ್ನು ತೂಡೆದುಹಾಕಲು ಔಷಧಿ

ಕೆಂಪು ಗುಳ್ಳೆಗಳನ್ನು ತೂಡೆದುಹಾಕಲು ಔಷಧಿ

ಕೆಲಮೈನ್ (calamine) ಲೋಶನ್ ಬಳಸುವುದರಿಂದ ಚರ್ಮದ ಮೇಲಿನ ಗುಳ್ಳೆಗಳಿಂದ ಉಪಶಮನ ಕಾಣಿಸುತ್ತದೆ. ಅಲ್ಲದೇ ನಿಮ್ಮ ಚರ್ಮದ ವಿಶೇಷವಾಗಿ ನೋಯುತ್ತಿರುವ ಮತ್ತು ನವೆ ಇರುವಾಗ ಹೈಡ್ರೊಕೊರ್ಟಿಸೊನ್ (hydrocortisone) ಕ್ರೀಮ್ ನ್ನು ಬಳಸಬಹುದು.

ಕೆಂಪು ಗುಳ್ಳೆಗಳನ್ನು ತಡೆಗಟ್ಟುವುದು ಹೇಗೆ?

ಕೆಂಪು ಗುಳ್ಳೆಗಳನ್ನು ತಡೆಗಟ್ಟುವುದು ಹೇಗೆ?

ಕೆಂಪು ಗುಳ್ಳೆಗಳಿಂದ ನಿಮ್ಮನ್ನು ಅಥವಾ ನಿಮ್ಮ ಮಗುವಿನ ರಕ್ಷಿಸಲು ಸಹಾಯ ಮಾಡುವ ಅಂಶಗಳು:

1.

ಕೆಂಪು ಗುಳ್ಳೆಗಳನ್ನು ತಡೆಗಟ್ಟುವುದು ಹೇಗೆ?

ಕೆಂಪು ಗುಳ್ಳೆಗಳನ್ನು ತಡೆಗಟ್ಟುವುದು ಹೇಗೆ?

2. ಯಾವಾಗ ಶಾಖದ ಅನಿಭವವಾಗುತ್ತದೆಯೋ ಆಗ ತಂಪಾದ ಗಾಳಿಯ ಪ್ರಸರಣವಿರುವ ಕಡೆ, ನೆರಳಿನಲ್ಲಿ ಅಥವಾ ಹವಾನಿಯಂತ್ರಿತ ಪ್ರದೇಶದಲ್ಲಿ ವಿರಮಿಸಿ.

ಕೆಂಪು ಗುಳ್ಳೆಗಳನ್ನು ತಡೆಗಟ್ಟುವುದು ಹೇಗೆ?

ಕೆಂಪು ಗುಳ್ಳೆಗಳನ್ನು ತಡೆಗಟ್ಟುವುದು ಹೇಗೆ?

3. ನಿಮ್ಮ ಮಲಗುವ ಪ್ರದೇಶ ತಂಪಾದ ಮತ್ತು ಗಾಳಿ ಮುಕ್ತ ಸ್ಥಳವಾಗಿರಲಿ.

ಕೆಂಪು ಗುಳ್ಳೆಗಳನ್ನು ತಡೆಗಟ್ಟುವುದು ಹೇಗೆ?

ಕೆಂಪು ಗುಳ್ಳೆಗಳನ್ನು ತಡೆಗಟ್ಟುವುದು ಹೇಗೆ?

4. ಯಾವುದೇ ಸುಗಂಧ ಅಥವಾ ವರ್ಣಗಳಿಲ್ಲದ ಸೋಪ್ ಬಳಸಿ ತಣ್ಣೀರಿನಲ್ಲಿ ಸ್ನಾನ ಮಾಡಿ.

ಕೆಂಪು ಗುಳ್ಳೆಗಳನ್ನು ತಡೆಗಟ್ಟುವುದು ಹೇಗೆ?

ಕೆಂಪು ಗುಳ್ಳೆಗಳನ್ನು ತಡೆಗಟ್ಟುವುದು ಹೇಗೆ?

5. ಕ್ರೀಮ್ ಅಥವಾ ಎಣ್ಣೆಗಳನ್ನು ಬಳಸಬೇಡಿ - ಇದರಿಂದ ಗುಳ್ಳೆಗಳನ್ನು ತಡೆಯಲು ಸಾಧ್ಯವಿಲ್ಲ ಮತ್ತು ತ್ವಚೆಯಲ್ಲಿ ರಂಧ್ರಗಳನ್ನು ಅಧಿಕವಾಗಿಸುತ್ತವೆ.

ಈ ಮೇಲಿನ ಎಲ್ಲಾ ವಿಧಾನಗಳು ಅತ್ಯಂತ ಸುಲಭವಾಗಿ ಮಾಡಬಹುದಾಗಿದ್ದು ತ್ವರಿತ ಉಪಶಮನವನ್ನೂ ನೀಡುತ್ತವೆ.

English summary

How To Get Rid Of Prickly Heat With Home Remedies | ಬೇಸಿಗೆಯಲ್ಲಿ ನವೆಯ ಭಯವೇ? ಇಲ್ಲಿದೆ ಮನೆಮದ್ದು !

Prickly heat is also known as miliary, an itchy rash, small red spots arise that cause stinging or puncture of the skin. The rash can develop anywhere on the body, but most commonly occurs on the face, neck, back, chest and thighs.
X
Desktop Bottom Promotion