For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಆರೋಗ್ಯ ಹೀಗೆ ನೋಡಿಕೊಳ್ಳಿ

By Hemanth Amin
|

ದೀಪಾವಳಿ ಬಳಿಕ ಅಕ್ಟೋಬರ್ ನ ಉಷ್ಣತೆ ಕಡಿಮೆಯಾಗಿ ಶೀತ ಗಾಳಿ ಬೀಸಲು ಆರಂಭವಾಗಿದ್ದು, ಚಳಿಗಾಲ ಹತ್ತಿರ ಬರುತ್ತಿದೆ ಎನ್ನುವ ಸೂಚನೆಯಾಗಿದೆ. ಈ ಸಮಯದಲ್ಲಿ ಚರ್ಮ ಒಣಗುತ್ತದೆ ಮತ್ತು ಕೂದಲು ಜಿಡ್ಡುಕಟ್ಟುತ್ತದೆ ಮತ್ತು ದಿನನಿತ್ಯ ನಿಮ್ಮ ದೇಹದಲ್ಲಿ ಕೆಲವು ಬದಲಾವಣೆಗಳಾಗುತ್ತದೆ.
ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಸ್ವಲ್ಪ ಹೆಚ್ಚು ಮತ್ತು ಹೆಚ್ಚಿನ ಕಾಳಜಿ ವಹಿಸಬೇಕಾಗಿರುವುದು ತುಂಬಾ ಮುಖ್ಯ. ಯಾಕೆಂದರೆ ಶೀತ ಗಾಳಿ ಆರೋಗ್ಯಕ್ಕೆ ಯಾವತ್ತೂ ಒಳ್ಳೆಯದಲ್ಲ. ಅನಾರೋಗ್ಯಕ್ಕೆ ಒಳಗಾಗುವುದನ್ನು ಮತ್ತು ನಿಮ್ಮ ದೇಹ ಹಾಗೂ ಆರೋಗ್ಯಕ್ಕೆ ತೊಂದರೆ ಉಂಟಾಗುವುದನ್ನು ತಡೆಯಲು ಚಳಿಗಾಲದಲ್ಲಿನ ಪ್ರಭಾವವನ್ನು ಕಡಿಮೆ ಮಾಡಲು ಕೆಲವೊಂದು ವಿಷಯಗಳನ್ನು ಪಾಲಿಸಬೇಕು.

ಚಳಿಗಾಲದಲ್ಲಿ ಆರೋಗ್ಯವಾಗಿರಲು ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.

1. ಆರೋಗ್ಯಕರ ಆಹಾರವಿರಲಿ

1. ಆರೋಗ್ಯಕರ ಆಹಾರವಿರಲಿ

ಶೀತ ಮತ್ತು ಕಫವಾಗುವಂತಹ ಆಹಾರಗಳನ್ನು ಚಳಿಗಾಲದಲ್ಲಿ ತಿನ್ನಲೇ ಬಾರದು. ಐಸ್ ಕ್ರೀಂ, ತಂಪುಪಾನೀಯಗಳು ಮತ್ತು ನಿಮ್ಮ ದೇಹದ ಉಷ್ಣತೆಗಿಂತ ಕಡಿಮೆ ಉಷ್ಣತೆಯಿರುವ ಆಹಾರಗಳನ್ನು ತಿನ್ನಬಾರದು.

2. ಲಘು ಆಹಾರ ಸೇವಿಸಿ

2. ಲಘು ಆಹಾರ ಸೇವಿಸಿ

ಚಳಿಗಾಲದಲ್ಲಿ ಹಸಿವಾಗುವುದು ಹೆಚ್ಚು. ಆದರೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಸೇವಿಸಿ. ಇದರಿಂದ ಅಜೀರ್ಣ ಸಮಸ್ಯೆ ಕಾಡದು. ನಿಮ್ಮ ದೇಹದ ಉಷ್ಣತೆ ಸರಿಯಾದ ಪ್ರಮಾಣದಲ್ಲಿ ಕಾಪಾಡುವಂತಹ ಆಹಾರ ತಿನ್ನಿ.

3. ನಿಯಮಿತ ವ್ಯಾಯಾಮ

3. ನಿಯಮಿತ ವ್ಯಾಯಾಮ

ವ್ಯಾಯಾಮ ಮಾಡಲು ಬೆಳಿಗ್ಗೆ ಬೇಗನೆ ಎದ್ದೇಳಿ. ಚಳಿಗಾಲದಲ್ಲಿ ಸೂರ್ಯ ಮೂಡುವಾಗ ತಡವಾಗುತ್ತದೆ. ಇದರಿಂದ ಚಳಿಯಲ್ಲಿ ಬೆಚ್ಚಗಿನ ಹಾಸಿಗೆಯಿಂದ ಎದ್ದೇಳಲು ಆಗದು. ತಡವಾಗಿ ಎದ್ದು ದಿನದ ಉಳಿದ ಸಮಯವನ್ನೆಲ್ಲಾ ಆಲಸ್ಯದಿಂದ ಕಳೆಯುವ ಬದಲು ಬೇಗನೆ ಎದ್ದು ನಿಯಮಿತವಾಗಿ ವ್ಯಾಯಾಮ ಮಾಡಿ.

4. ಊಟದ ಬಳಿಕ ನಡೆಯಿರಿ

4. ಊಟದ ಬಳಿಕ ನಡೆಯಿರಿ

ಊಟ ಮಾಡಿದ ತಕ್ಷಣ ಮಲಗಬೇಡಿ, ಇದರಿಂದ ನಿಮ್ಮ ಆಲಸ್ಯ ಮತ್ತಷ್ಟು ಹೆಚ್ಚಾಗುತ್ತದೆ. ಇದರಿಂದ ಊಟದ ಬಳಿಕ ಅದರಲ್ಲೂ ರಾತ್ರಿಯ ಊಟದ ಬಳಿಕ ಸ್ವಲ್ಪ ನಡೆದಾಡಿ. ಇದರಿಂದ ನಿಮ್ಮ ಜೀರ್ಣಕ್ರಿಯೆ ಸರಗವಾಗಿ ಆಗಲು ಮತ್ತು ಬೊಜ್ಜು ಬರುವುದರಿಂದಲೂ ತಡೆಯುತ್ತದೆ.

5. ತೇವಾಂಶ

5. ತೇವಾಂಶ

ಚಳಿಗಾಲದಲ್ಲಿ ತ್ವಚೆ ತುಂಬಾ ಒಣಗುತ್ತದೆ. ಇದನ್ನು ತಡೆಯಲು ಹಾಲಿನಾಂಶ ಇರುವ ಮೊಶ್ಚಿರೈಸರ್ ಗಳನ್ನು ಉಪಯೋಗಿಸಿ. ದಿನದಲ್ಲಿ ಒಮ್ಮೆಯಾದರೂ ಸಂಪೂರ್ಣ ದೇಹದ ಮೇಲೆ ಮೊಶ್ಚಿರೈಸರ್ ನ್ನು ಹಚ್ಚಬೇಕು.

6. ಚಳಿಗಾಲದ ಬಟ್ಟೆ

6. ಚಳಿಗಾಲದ ಬಟ್ಟೆ

ಚಳಿಗಾಲದಲ್ಲಿ ದಪ್ಪಗಿನ ಬಟ್ಟೆಗಳಣ್ನು ಧರಿಸಿ ಮತ್ತು ಚಳಿಗಾಲದಲ್ಲಿ ಹೊರಗಡೆ ಹೋಗುವಾಗ ಕಿವಿ ಮತ್ತು ಪಾದಗಳನ್ನು ಮುಚ್ಚಿ. ಇದರಿಂದ ಶೀತ ಅಥವಾ ಚಳಿಗಾಲದಲ್ಲಿ ಬರುವ ರೋಗವನ್ನು ಕಡಿಮೆ ಮಾಡಲು ನೆರವಾಗುತ್ತದೆ.

7. ಕೋಲ್ಡ್ ಸೋರ್ಸ್

7. ಕೋಲ್ಡ್ ಸೋರ್ಸ್

ನೀವು ಕೋಲ್ಡ್ ಸೋರ್ಸ್(ತಣ್ಣಗಿನ ನೋವು)ನ ಪ್ರವೃತ್ತಿಯವರಾಗಿದ್ದರೆ ಬೇರೆಯವರ ಸಂಪರ್ಕಕ್ಕೆ ಬರುವುದನ್ನು ತಡೆಯಿರಿ. ಆರೋಗ್ಯಕರ ಆಹಾರ ಕ್ರಮ, ಸರಿಯಾದ ವಿಶ್ರಾಂತಿ ಮತ್ತು ಕೋಲ್ಡ್ ಸೋರ್ಸ್ ಇರುವವರ ಸಂಪರ್ಕದಿಂದ ದೂರ ಉಳಿಯುವುದರಿಂದ ಇದನ್ನು ತಡೆಯಬಹುದು.

8. ಧ್ಯಾನ

8. ಧ್ಯಾನ

ಧ್ಯಾನದಿಂದ ಮನಸ್ಸನ್ನು ಪ್ರಶಾಂತ ಮತ್ತು ಬೆಚ್ಚಗಿರಿಸಬಹುದು. ಚಳಿಗಾಲ ಕೆಲವು ಸಲ ಕಿರಿಕಿರಿಯನ್ನುಂಟು ಮಾಡುತ್ತದೆ. ಧಾನ್ಯದಿಂದ ಚಳಿಗಾಲದಲ್ಲಿ ಕಿರಿಕಿರಿ ದೂರ ಮಾಡಿ ಬೆಚ್ಚಗಿರಬಹುದು.

9. ಬೆಚ್ಚಗಿನ ಪಾನೀಯಗಳು

9. ಬೆಚ್ಚಗಿನ ಪಾನೀಯಗಳು

ಸೂಪ್, ಟೀ ಇತ್ಯಾದಿಯಂತಹ ಬೆಚ್ಚಗಿನ ಪಾನೀಯಗಳನ್ನು ಸೇವಿಸಿ. ಇದು ಚಳಿಗಾಲದಲ್ಲಿ ತುಂಬಾ ಸಹಕಾರಿ. ಚಳಿಗಾಲದಲ್ಲಿ ಇಂತಹ ಬೆಚ್ಚಗಿನ ಪಾನೀಯಗಳನ್ನು ಹೆಚ್ಚಾಗಿ ಸೇವಿಸಬೇಕು.

10. ಖಾರ ಹೆಚ್ಚಿಸಿ

10. ಖಾರ ಹೆಚ್ಚಿಸಿ

ದೇಹವನ್ನು ಬೆಚ್ಚಗಿರಿಸಲು ಆಹಾರದಲ್ಲಿ ಹೆಚ್ಚಿನ ಮೆಣಸು ಮತ್ತು ಖಾರವನ್ನು ಬಳಸಿ. ಇದರಿಂದ ದೇಹದ ಉಷ್ಣತೆ ಸಾಮಾನ್ಯವಾಗಿಡಲು ಮತ್ತು ಶೀತ ದೂರವಿರಿಸಲು ನೆರವಾಗುತ್ತದೆ.

11. ಉತ್ಕರ್ಷಣ ನಿರೋಧಕಗಳು

11. ಉತ್ಕರ್ಷಣ ನಿರೋಧಕಗಳು

ಚಳಿಗಾಲದಲ್ಲಿ ಉತ್ಕರ್ಷಣ ನಿರೋಧಕಗಳನ್ನು ಸೇವಿಸಿ ದೇಹವನ್ನು ಬೆಚ್ಚಗಿರುವಂತೆ ಮಾಡಬೇಕು. ಉತ್ಕರ್ಷಣ ನಿರೋಧಕದ ಅಂಶ ಹೆಚ್ಚಾಗಿರುವ ಕುಂಬಳಕಾಯಿ ಮತ್ತು ಬಟಾಟೆ ಇತ್ಯಾದಿ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು.

12. ವಿಟಾಮಿನ್ ಡಿ

12. ವಿಟಾಮಿನ್ ಡಿ

ಚಳಿಗಾಲದಲ್ಲಿ ಸೂರ್ಯನ ಬೆಳಕಿನಲ್ಲಿ ವಿಟಾಮಿನ್ ಕಡಿಮೆಯಿರುತ್ತದೆ. ಇದರಿಂದ ವಿಟಾಮಿನ್ ಡಿ ಹೆಚ್ಚಾಗಿರುವ ಆಹಾರ ಸೇವಿಸಿ ವಿಟಾಮಿನ್ ಕೊರತೆ ನೀಗಿಸಬೇಕು.

13. ನೀರು

13. ನೀರು

ಚಳಿಗಾಲದಲ್ಲಿ ಹೆಚ್ಚಿನ ನೀರು ಕುಡಿಯಿರಿ. ಚಳಿಗಾಲದಲ್ಲಿ ತ್ವಚೆ ಮತ್ತು ದೇಹ ಒಣಗುತ್ತದೆ. ದೇಹದಲ್ಲಿ ನೀರಿನಾಂಶವನ್ನು ಸಮಪ್ರಮಾಣದಲ್ಲಿರಿಸಲು ಹೆಚ್ಚು ಹೆಚ್ಚು ನೀರನ್ನು ಸೇವಿಸಿ.

14. ಸನ್ ಸ್ಕ್ರೀನ್

14. ಸನ್ ಸ್ಕ್ರೀನ್

ಚಳಿಗಾಲದಲ್ಲಿ ಸೂರ್ಯನ ಕಿರಣಗಳ ತೀವ್ರತೆ ಕಡಿಮೆಯಿರುತ್ತದೆ. ಆದರೆ ಮುನ್ನೆಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ಸನ್ ಸ್ಕ್ರೀನ್ ನ್ನು ಪ್ರತಿನಿತ್ಯ ಬಳಸಿ ಸೂರ್ಯನ ಕಿರಣದಿಂದ ತ್ವಚೆ ಸುಡುವುದನ್ನು ತಪ್ಪಿಸಿ.

15. ಶಕ್ತಿ ವರ್ಧಿಸಿ

15. ಶಕ್ತಿ ವರ್ಧಿಸಿ

ಯಾವಾಗಲೂ ನಿಮ್ಮ ಮನಸ್ಥಿತಿ ಮತ್ತು ಶಕ್ತಿಯನ್ನು ಉನ್ನತ ಮಟ್ಟದಲ್ಲಿರಿಸಿ. ಚಳಿಗಾಲದಲ್ಲಿ ವಾತಾವರಣ ತುಂಬಾ ಕಳೆಗುಂದಿರುತ್ತದೆ. ಆದರೆ ನಿಮ್ಮ ಶಕ್ತಿ ಕುಂದಿಸಲು ಬಿಡಬೇಡಿ.

ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಇವು ಕೆಲವೊಂದು ಆರೋಗ್ಯ ಕ್ರಮಗಳು.

English summary

Healthy habits to follow this winter

Winter is near, the October heat has drastically reduced after Diwali and cold chills have started blowing. This is the time when your skin will start drying up, your hair will get frizzy and there will be a few changes in your body routine.
Story first published: Tuesday, November 26, 2013, 16:19 [IST]
X
Desktop Bottom Promotion