For Quick Alerts
ALLOW NOTIFICATIONS  
For Daily Alerts

ಮೆಹಂದಿ ಎಲೆಗಳ ಆರೋಗ್ಯಯುತ ಪ್ರಯೋಜನಗಳು

By Super
|

ಮೆಹಂದಿ ಅಥವಾ ಹೆನ್ನಾ ಎಂದೆ ಪ್ರಸಿದ್ಧಿಯನ್ನು ಪಡೆದಿರುವ ಈ ಗಿಡ ಮೂಲಿಕೆಯು ಆಯುರ್ವೇದದಲ್ಲಿ ಸಾಮಾನ್ಯವಾಗಿ ಬಳಕೆಯಾಗುತ್ತಿರುತ್ತದೆ. ಇದನ್ನು ಕೈ ಮತ್ತು ಕಾಲುಗಳ ಮೇಲೆ ಚಿತ್ತಾರ ಬರೆದುಕೊಳ್ಳಲು ಹೆಂಗಳೆಯರು ಹೆಚ್ಚಾಗಿ ಬಳಸುವುದರಿಂದಾಗಿ ಇದರ ಬಗ್ಗೆ ಎಲ್ಲರಿಗು ತಿಳಿದಿರುತ್ತದೆ. ಮದುವೆ ಮತ್ತು ಹಬ್ಬಗಳು ಮೆಹಂದಿ ಇಲ್ಲದೆ ನಡೆಯುವುದೇ ಇಲ್ಲ ಎಂಬಷ್ಟರ ಮಟ್ಟಿಗೆ ಭಾರತದಲ್ಲಿ ಇದರ ಜನಪ್ರಿಯತೆ ಹರಡಿದೆ. ಅಲ್ಲದೆ ಇದು ಕೆಲವು ಹಬ್ಬ ಹರಿದಿನಗಳಲ್ಲಿ ಅವಿಭಾಜ್ಯ ಅಂಗವಾಗಿ ಸ್ಥಾನ ಪಡೆದಿದೆ. ಮಹಿಳೆಯರಿಗೆ ಮಾಡುವ " ಸಪ್ತ ಶೃಂಗಾರ"ಗಳಲ್ಲಿ ಮೆಹಂದಿಗು ಸಹ ಸ್ಥಾನವಿದೆ.

ಮೆಹಂದಿಯಲ್ಲಿ ಕಪ್ಪು ಅಥವಾ ಕಂದು ಬಣ್ಣದ ಒಂದು ಅಂಶವಿದ್ದು, ಇದನ್ನು ಎಲ್ಲಿ ಲೇಪಿಸುತ್ತೇವೆಯೋ ಅಲ್ಲಿ ಕೆಂಪು ಅಥವಾ ಕಂದು ಬಣ್ಣದ ಕಲೆ ಮೂಡುತ್ತದೆ. ಹಾಗಾಗಿ ಇದನ್ನು ಸೌಂದರ್ಯ ಪ್ರಸಾದನ ಸಾಮಾಗ್ರಿಗಳಲ್ಲಿ ಬಳಸುತ್ತಾರೆ.ಹೆಚ್ಚಾಗಿ ಇದನ್ನು ಕೈಗಳಿಗೆ ಅಥವಾ ಚರ್ಮದ ಮೇಲೆ ವಿನ್ಯಾಸಗಳನ್ನು ರೂಪಿಸಲು ಹಾಗು ಕೂದಲಿಗೆ ಬಣ್ಣವನ್ನು ತರಲು ಬಳಸುತ್ತಾರೆ. ಇದರ ಜೊತೆಗೆ ಮೆಹಂದಿಯಲ್ಲಿ ಹಲವಾರು ಆರೋಗ್ಯಯುತ ಪ್ರಯೋಜನಗಳು ಇವೆಯೆಂದು ತಿಳಿದು ಬಂದಿದೆ.

ಮೆಹಂದಿಯ ಎಲೆಗಳು ತುಂಬಾ ಪ್ರಯೋಜನಕಾರಿ. ಮೆಹಂದಿಯ ಎಲೆಗಳನ್ನು ಪುಡಿ ಮಾಡಿ ಅಥವಾ ಪೇಸ್ಟ್ ರೀತಿ ಮಾಡಿ ಬಳಸುತ್ತಾರೆ. ಇದರಿಂದ ಪ್ರಯೋಜನಗಳ ಪಟ್ಟಿಯನ್ನು ಇಲ್ಲಿ ನಿಮಗಾಗಿ ನೀಡಿದ್ದೇವೆ ಓದಿ ಅದರ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ.

1. ತಂಪು ತಂಪು ಕೂಲ್ ಕೂಲ್

1. ತಂಪು ತಂಪು ಕೂಲ್ ಕೂಲ್

ಮೆಹಂದಿಯಲ್ಲಿ ತಂಪನ್ನುಂಟು ಮಾಡುವ ಅಂಶಗಳು ಅಡಕಗೊಂಡಿವೆ. ಇದೊಂದು ಪರಿಣಾಮಕಾರಿ ಮೊಡವೆ ನಿರೋಧಕ ಮೂಲಿಕೆಯಾಗಿದೆ. ಏಕೆಂದರೆ ಇದು ಮೊಡವೆಗಳ ಕಾರಕಗಳನ್ನು ನಾಶ ಮಾಡಿ ಮೊಡವೆಗಳುಂಟಾಗದಂತೆ ತಡೆಯುತ್ತದೆ. ಮೆಹಂದಿಯನ್ನು ಹಚ್ಚಿಕೊಂಡರೆ ದೇಹದಲ್ಲಿರುವ ಉಷ್ಣವು ಇಳಿದು ಹೋಗುತ್ತದೆ. ಮೆಹಂದಿಯನ್ನು ಕಾಲಿಗೆ ಹಚ್ಚಿಕೊಂಡರೆ ಅದು ರಾತ್ರೋ ರಾತ್ರಿ ದೇಹಕ್ಕೆ ಅಗತ್ಯವಾದ ತಂಪನ್ನು ನೀಡುತ್ತದೆ. ಈ ಪ್ರಯೋಜನವನ್ನು ಹಲವಾರು ಅಧ್ಯಯನಗಳು ಪುಷ್ಠೀಕರಿಸಿವೆ.

2. ಕೂದಲಿನ ರಕ್ಷಕ

2. ಕೂದಲಿನ ರಕ್ಷಕ

ಮೆಹಂದಿ ಎಲೆಗಳನ್ನು ಪುಡಿ ಮಾಡಿ ಅಥವಾ ಪೇಸ್ಟ್ ರೀತಿ ಮಾಡಿ ಕೂದಲಿಗೆ ಹಚ್ಚುತ್ತಾರೆ. ಇದು ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಮೆಹಂದಿಯ ಪೇಸ್ಟನ್ನು ವಾರಕ್ಕೊಮ್ಮೆಯಾದರು ಕೂದಲಿಗೆ ಲೇಪಿಸುವುದರಿಂದ ಡ್ಯಾಂಡ್ರಫನ್ನು ನಿವಾರಿಸಬಹುದು, ಜೊತೆಗೆ ಕೂದಲಿಗೆ ಹೊಳಪು ಬರುತ್ತದೆ ಮತ್ತು ಕೂದಲಿನ ಆಯಸ್ಸು ಹೆಚ್ಚುತ್ತದೆ. ಇದರ ಜೊತೆಗೆ ಬಿಳಿಕೂದಲನ್ನು ಕಂದು ಕೂದಲಾಗಿ ಪರಿವರ್ತಿಸಲು ಮೆಹಂದಿ ಉಪಯೋಗಕ್ಕೆ ಬರುತ್ತದೆ. ಈಗಾಗಿ ಕೂದಲಿನ ಆರೋಗ್ಯದ ವಿಷಯದಲ್ಲಿ ಮೆಹಂದಿಗೆ ಪ್ರಮುಖ ಸ್ಥಾನವಿದೆ. ಇದಕ್ಕಾಗಿ ನಿಮ್ಮ ಬಳಿ ಯಾವಾಗಲು ಮೆಹಂದಿಯ ಪುಡಿ ಇರಲಿ ಹಾಗು ಅದರ ಹೇರ್ ಪ್ಯಾಕನ್ನು ನಿರಂತರವಾಗಿ ಬಳಸಿ.

3. ಸುಟ್ಟ ಗಾಯಗಳಿಗೆ ರಾಮ ಬಾಣ

3. ಸುಟ್ಟ ಗಾಯಗಳಿಗೆ ರಾಮ ಬಾಣ

ಮೆಹಂದಿಯು ಸುಟ್ಟಗಾಯಗಳಿಗೆ ಅತ್ಯುತ್ತಮವಾದ ಔಷಧಿಯಾಗಿರುತ್ತದೆ. ಏಕೆಂದರೆ ಈ ಮೊದಲೇ ತಿಳಿಸಿದಂತೆ ಮೆಹಂದಿಯು ಅತ್ಯುತ್ತಮವಾದ ತಂಪುಕಾರಕ ಗುಣಗಳನ್ನು ಒಳಗೊಂಡಿದೆ. ಆದ್ದರಿಂದ ಮೆಹಂದಿ ಎಲೆಗಳನ್ನು ಸುಟ್ಟಗಾಯಗಳ ಮೇಲೆ ಉಜ್ಜಿದರೆ ನೋವು ತಕ್ಷಣ ಉಪಶಮನಗೊಳ್ಳುತ್ತದೆ.

4. ನೋವು ನಿವಾರಕ

4. ನೋವು ನಿವಾರಕ

ಮೆಹಂದಿಯಲ್ಲಿರುವ " ತಂಪುಕಾರಕ" ಗುಣಗಳ ಪರಿಣಾಮವಾಗಿ ತಲೆನೋವನ್ನು ನಿವಾರಿಸುವ ಅತ್ಯುತ್ತಮ ಔಷಧಿಯಾಗಿದೆ. ಮೆಹಂದಿ ಎಲೆಗಳು ಅಥವಾ ಮೆಹಂದಿಯನ್ನು ಹಣೆಗೆ ಹಚ್ಚಿಕೊಂಡರೆ ವಿಪರೀತವಾದ ತಲೆನೋವಿನಿಂದ ಮುಕ್ತಿ ಪಡೆಯಬಹುದು. ಈ ಮೆಹಂದಿಯನ್ನು ಪ್ರತಿನಿತ್ಯ ಬಳಸುವುದರಿಂದ ಮೈಗ್ರೇನ್‍ನಂತಹ ತಲೆನೋವನ್ನು ನಿವಾರಿಸಿಕೊಳ್ಳಬಹುದು. ಮೆಹಂದಿಯು ಅಸ್ಪಿರಿನ್ ಮಾತ್ರೆಗೆ ಅತ್ಯುತ್ತಮವಾದ ಬದಲಿ ಔಷಧಿಯಾಗಿರುತ್ತದೆ.

5. ಕರುಳಿಗೆ ಹಿತ

5. ಕರುಳಿಗೆ ಹಿತ

ಮೆಹಂದಿಯು ಕರುಳಿನ ಸಮಸ್ಯೆಗಳನ್ನು ಮತ್ತು ಕಾಮಾಲೆ ರೋಗವನ್ನು ಸಹ ನಿವಾರಿಸುವ ಗುಣಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಕೆಲವೊಮ್ಮೆ ಹಳದಿ ಜ್ವರವು ವಾಸಿಮಾಡಲು ಸಹ ಕಷ್ಟವೆನಿಸುವಷ್ಟು ಅಪಾಯಕಾರಿಯಾಗಿರುತ್ತದೆ. ಮೆಹಂದಿಯು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಕಾಮಾಲೆಯನ್ನು ನಿವಾರಿಸುವ ಗುಣವನ್ನು ಹೊಂದಿದೆ.

6. ಆಂಟಿ ಟಿ.ಬಿ

6. ಆಂಟಿ ಟಿ.ಬಿ

ಮೆಹಂದಿಯಲ್ಲಿ ಕ್ಷಯವನ್ನು ಸಹ ನಿವಾರಿಸುವ ಗುಣಗಳು ಇವೆ. ಇದು ಟುಬೆರ್ ಕ್ಯುಲೊಸಿಸ್ ಅಥವ ಟಿ,ಬಿ ಬರದಂತೆ ಕಾಪಾಡುತ್ತದೆ. ಮೆಹಂದಿಯು ಈ ಟಿ.ಬಿ ಮೇಲೆ ಉತ್ತಮವಾಗಿ ಕೆಲಸ ಮಾಡುತ್ತದೆ. ಆದರೆ ಇದನ್ನು ಬಳಸುವ ಮೊದಲು ವೈಧ್ಯರ ಬಳಿ ಚರ್ಚಿಸುವುದು ಉತ್ತಮ.

ಹೀಗೆ ಮೆಹಂದಿಯು ಅಂಟಿ ಬ್ಯಾಕ್ಟೀರಿಯಾ ಅಥವಾ ಆಂಟಿ - ಫಂಗಲ್ ಪೇಸ್ಟ್ ಆಗಿ ಉಪಯೋಗಕ್ಕೆ ಬರುತ್ತದೆ. ಇದನ್ನು ಕೂದಲ ಬೆಳವಣಿಗೆಗು ಸಹ ಬಳಸುತ್ತಾರೆ. ಜೊತೆಗೆ ಇದು ಉತ್ತಮವಾದ ಪರಿಮಳವನ್ನು ಸಹ ಹೊಂದಿದೆ.

ಮೆಹಂದಿಯ ತೊಗಟೆಯು ಸಹ ಉತ್ತಮ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ. ಇವೆಲ್ಲದರ ಜೊತೆಗೆ ಇದು ಧಾರ್ಮಿಕವಾಗಿ ಸಹ ಮಹತ್ವದ ಸ್ಥಾನಮಾನವನ್ನು ಹೊಂದಿದೆ. ಇಂತಹ ಆಯುರ್ವೇದಿಕ್ ಗುಣಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡಿರುವ ಈ ಸಸ್ಯವು ನಮ್ಮ ಸ್ತ್ರೀಯರ ಕೈಗಳನ್ನು ಅಲಂಕಾರ ಮಾಡುವುದು ನಿಜಕ್ಕೂ ಚಮತ್ಕಾರವಲ್ಲವೇ?

English summary

Health Benefits Of Henna Leaves

Henna leaves are very much beneficial. Henna leaves extracts in the form of leaves, powder and paste are used for a lot of reasons.Some of these are as listed here.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more