For Quick Alerts
ALLOW NOTIFICATIONS  
For Daily Alerts

ಮಲಗುವ ಮುನ್ನ ಈ ಆಹಾರ ತಿಂದರೆ ಆರೋಗ್ಯ ಜೋಕೆ!

|

ರಾತ್ರಿಯಲ್ಲಿ ಲಘು ಆಹಾರ ತಿಂದರೆ ಒಳ್ಳೆಯದೆಂದು ಹೇಳುವುದನ್ನು ಕೇಳಿರಬಹುದು. ಏಕೆಂದರೆ ತುಂಬಾ ತಿಂದು ಮಲಗಿದರೆ ದೇಹಕ್ಕೆ ಹಚ್ಚು ವ್ಯಾಯಾಮವಿಲ್ಲದಿರುವುದರಿಂದ ಜೀರ್ಣಕ್ರಿಯೆಗೆ ಕಷ್ವವಾಗುತ್ತದೆ ಹಾಗೂ ಮೈ ತೂಕವನ್ನು ಹೆಚ್ಚಿಸುತ್ತದೆ.

ಆರೋಗ್ಯದ ದೃಷ್ಟಿಯಿಂದ ಘನವಾದ ಆಹಾರ ಮಾತ್ರವಲ್ಲ ಈ ಕೆಳಗೆ ನೀಡಿದಂತಹ ಆಹಾರಗಳನ್ನು ತಿನ್ನುವುದು ಕೂಡ ಒಳ್ಳೆಯದಲ್ಲ. ಇಲ್ಲಿ ನೀಡಿರುವ ಆಹಾರಗಳನ್ನು ತಿಂದರೆ ಅದು ನಿಮ್ಮ ಸುಖ ನಿದ್ದೆಗೆ ಭಂಗ ತರುತ್ತದೆ, ಆಗಾಗ ರೆಸ್ಟ್ ರೂಮ್ ಗೆ ಹೋಗ ಬೇಕಾಗುತ್ತದೆ.

ರಾತ್ರಿಯಲ್ಲಿ ಕೊಬ್ಬಿನಂಶದ ಆಹಾರಗಳು ಮಾತ್ರವಲ್ಲ, ಅಧಿಕ ಪ್ರೊಟೀನ್ ಇರುವ ಆಹಾರಗಳನ್ನು ಕೂಡ ತಿನ್ನಬಾರದು. ಅದರಲ್ಲೂ ಈ ಕೆಳಗಿನ ಆಹಾರ ವಸ್ತುಗಳನ್ನು ಮಲಗುವ ಮೊದಲು ಮುಟ್ಟಲು ಹೋಗಲೇಬೇಡಿ:

ಕೊಬ್ಬಿನಂಶವಿರುವ ಆಹಾರಗಳು

ಕೊಬ್ಬಿನಂಶವಿರುವ ಆಹಾರಗಳು

ಐಸ್ ಕ್ರೀಮ್. ಕೇಕ್ ಈ ರೀತಿ ಅಧಿಕ ಕೊಬ್ಬಿನಂಶವಿರುವ ಆಹಾರ ತಿಂದರೆ ಹೊಟ್ಟೆಗೆ ಅಧಿಕ ಒತ್ತಡ ಬಿದ್ದು ಸುಸ್ತು ಅನಿಸಲಾರಂಭಿಸುತ್ತದೆ. ಇದು ದೇಹದ ತೂಕವನ್ನು ಕೂಡ ಹೆಚ್ಚಿಸುತ್ತದೆ.

ಬರ್ಗರ್

ಬರ್ಗರ್

ಬರ್ಗರ್ , ಫಿಂಗರ್ ಚಿಪ್ಸ್ ಇಂತಹ ತಿಂಡಿಗಳನ್ನು ಮಲಗುವ ಮುಂಚೆ ತಿನ್ನಬೇಡಿ. ಇವುಗಳನ್ನು ಏನಿದ್ದರೂ ಮಧ್ಯಾಹ್ನ ಅಥವಾ ಸಂಜೆ ಹೊತ್ತು ತಿನ್ನಿ. ಇದರಲ್ಲಿ ಟ್ರಾನ್ಸ್ ಫ್ಯಾಟ್ ಗಳು ಅಧಿಕವಿದ್ದು ಈ ಆಹಾರಗಳು ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆಗಳನ್ನು ತರುತ್ತದೆ.

ಅಧಿಕ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯಂಶದ ಆಹಾರ

ಅಧಿಕ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯಂಶದ ಆಹಾರ

ಸಿಹಿ ತಿಂಡಿಯನ್ನು ಅಥವಾ ಚಾಕಲೇಟ್ ಅನ್ನು ಮಿತಿಯಾಗಿ ತಿನ್ನಬಹುದು, ಆದರೆ ಮಿತಿ ಮೀರಿ ತಿಂದರೆ ನಿದ್ದೆಗೆ ಭಂಗ ತರುತ್ತದೆ ಮತ್ತು ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಅಸಮತೋಲನದಲ್ಲಿಡುತ್ತದೆ.

ಮಾಂಸಾಹಾರ

ಮಾಂಸಾಹಾರ

ರಾತ್ರಿಯಲ್ಲಿ ಮಾಂಸಾಹಾರವನ್ನು ಸ್ವಲ್ಪ ಪ್ರಮಾಣದಲ್ಲಿ ತಿನ್ನಿ. ಮಾಂಸಾಹಾರವ ತಿಂದ ನಂತರ ಒಂದು ಲೋಟ ಬಿಸಿ ನೀರು ಕುಡಿಯಿರಿ. ರಾತ್ರಿ ಊಟದಲ್ಲಿ ಮಿತಿ ಮೀರಿ ತಿಂದರೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುವುದು.

ಖಾರವಿರುವ ಆಹಾರ

ಖಾರವಿರುವ ಆಹಾರ

ರಾತ್ರಿಯಲ್ಲಿ ತುಂಬಾ ಖಾರವಿರುವ ಆಹಾರವನ್ನು ತಿನ್ನಬೇಡಿ. ಖಾರ ಆಹಾರಗಳು ಹೊಟ್ಟೆ ಉರಿ ಉಂಟು ಮಾಡುತ್ತದೆ, ನಿದ್ದೆ ಬರದೆ ಹೊರಳಾಡುವಂತೆ ಮಾಡುತ್ತದೆ. ಆದ್ದರಿಂದ ರಾತ್ರಿಯಲ್ಲಿ ಖಾರದ ಅಡುಗೆಗಳನ್ನು ತಿನ್ನಲು ಹೋಗಬೇಡಿ.

ಕಾಫಿ, ಟೀ

ಕಾಫಿ, ಟೀ

ಮಲಗುವ ಮುಂಚೆ ಕಾಫಿ, ಟೀ ಮುಟ್ಟಬೇಡಿಕೆಲವರಿಗೆ ಮಲಗುವ ಮುನ್ನ ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸವಿರುತ್ತದೆ. ಈ ಅಭ್ಯಾಸ ಒಳ್ಳೆಯದಲ್ಲ. ನಿದ್ದೆ ಮಾಡುವ 6 ಗಂಟೆ ಮುಂಚೆ ಟೀ ಅಥವಾ ಕಾಫಿಯನ್ನು ಮುಟ್ಟಬೇಡಿ.

ಘನ ಆಹಾರ

ಘನ ಆಹಾರ

ಮೊದಲೇ ಹೇಳಿದಂತೆ ಮಲಗುವ ಮುಂಚೆ ಘನ ಆಹಾರವನ್ನು ತಿನ್ನಬೇಡಿ. ಪಾರ್ಟಿಗಳಿಗೆ ಹೋದಾಗ ಸ್ವಲ್ಪ ಅಧಿಕ ತಿನ್ನುತ್ತೇವೆ. ಆಗ ಊಟದ ನಂತರ ನಿಮ್ಮ ಮಲಗುವ ಸಮಯಕ್ಕೆ 4 ಗಂಟೆ ಅಂತರವಿರಲಿ. ರಾತ್ರಿ ಒಂದು ಅಥವಾ ಎರಡು ಚಪಾತಿ ಓಕೆ 5-6 ಚಪಾತಿ ನಾಟ್ ಓಕೆ.

 ಅಧಿಕ ನೀರಿನಂಶವಿರುವ ಆಹಾರಗಳು

ಅಧಿಕ ನೀರಿನಂಶವಿರುವ ಆಹಾರಗಳು

ಹಗಲಿನಲ್ಲಿ ನೀರಿನಂಶ ಅಧಿಕ ಇರುವ ಆಹಾರ ತಿನ್ನಿ. ಆದರೆ ರಾತ್ರಿ ಊಟಕ್ಕೆ ನೀರಿನಂಶ ಕಡಿಮೆ ಇರುವ ಆಹಾರ ತಿನ್ನುವುದು ಒಳ್ಳೆಯದು. ಇಲ್ಲದಿದ್ದರೆ ಆಗಾಗ ರೆಸ್ಟ್ ರೂಮ್ ಗೆ ಹೋಗಬೇಕಾಗುತ್ತದೆ.

English summary

Foods You Should Avoid Before Sleep | Tips For Health | ಮಲಗುವ ಮುನ್ನಬಾರದ ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Many researches show that eating late has negative effects on your health. One of the most serious consequences is gaining weight. Another important reason why you may want to avoid this bad habit is due to its negative effects on your sleep.
X
Desktop Bottom Promotion