For Quick Alerts
ALLOW NOTIFICATIONS  
For Daily Alerts

ಮೈ ತುಂಬಾ ಬೆವರುವುದನ್ನು ತಡೆಯಲು ಟಿಪ್ಸ್

|

ಬೇಸಿಗೆಯಲ್ಲಿ ಬೆವರುವುದು ಸಹಜ. ಬೆವರಿದರೆ ದೇಹದಲ್ಲಿರುವ ಕಲ್ಮಶಗಳನ್ನು ಹೊರಗೆ ಹಾಕುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಆದರೆ ತುಂಬಾ ಬೆವರಿದರೆ ದೇಹದಿಂದ ದುರ್ಗಂಧ ಬೀರುತ್ತದೆ. ನಮ್ಮ ದೇಹದಲ್ಲಿ ಎರಡು ರೀತಿಯ ಬೆವರಿನ ಗ್ರಂಥಿಗಳಿರುತ್ತದೆ. ಒಂದು ಬೆವರಿನ ಗ್ರಂಥಿ ದೇಹದ ಎಲ್ಲಾ ಭಾಗಗಳಿದ್ದರೆ ಮತ್ತೊಂದು ಬೆವರಿನ ಗ್ರಂಥಿ ದೇಹದಲ್ಲಿ ಕೂದಲಿರುವ ಕಡೆಗಳಲ್ಲಿ ಇರುತ್ತದೆ.

ದೈಹಿಕ ಶ್ರಮದಿಂದ, ತಕ್ಷಣ ಒತ್ತಡಕ್ಕೆ ಒಳಗಾದಾಗ ಬೆವರು ಬರುತ್ತದೆ. ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಹಣೆ, ಪಾದ, ತಲೆ, ಕೈಗಳಲ್ಲಿ ಹೆಚ್ಷಾಗಿ ಬೆವರು ಕಂಡು ಬರುತ್ತದೆ. ತುಂಬಾ ಬೆವರಿದರೆ , ಕೆಟ್ಟ ವಾಸನೆ ಬೀರುವುದು. ಇದರಿಂದ ನಮಗೆ ಮಾತ್ರವಲ್ಲ, ನಮ್ಮ ಪಕ್ಕ ನಿಂತವರಿಗೂ ಮುಜುಗರ ಉಂಟಾಗುತ್ತದೆ.

ಮೈ ತುಂಬಾ ಬೆವರುವುದನ್ನು ತಡೆಯಲು ಈ ಕೆಳಗಿನ ಟಿಪ್ಸ್ ಪರಿಣಾಮಕಾರಿಯಾಗಿವೆ:

ನೀರು

ನೀರು

ಬೇಸಿಗೆ ಕಾಲದಲ್ಲಿ ಉಳಿದ ಎರಡು ಕಾಲದಲ್ಲಿ ಕುಡಿಯುವುದಕ್ಕಿಂತ ಸ್ವಲ್ಪ ಅಧಿಕವೇ ನೀರು ಕುಡಿಯಬೇಕು. ನೀರು ಅಧಿಕ ಕುಡಿದರೆ ಹೆಚ್ಚು ಬೆವರುವುದಿಲ್ಲ, ಬೆವರಿನ ದುರ್ನಾತವೂ ಕಡಿಮೆಯಾಗುವುದು.

ಮೊಸರು, ಮಜ್ಜಿಗೆ

ಮೊಸರು, ಮಜ್ಜಿಗೆ

ಮೊಸರು ಅಥವಾ ಮಜ್ಜಿಗೆ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಇದರಿಂದ ಮೈ ಹೆಚ್ಚಾಗಿ ಬೆವರುವುದಿಲ್ಲ.

ಓಟ್ ಮೀಲ್ಸ್

ಓಟ್ ಮೀಲ್ಸ್

ಅಧಿಕ ಕೊಬ್ಬಿನಂಶವಿರುವ ಆಹಾರಗಳನ್ನು ತಿಂದರೆ ಹೆಚ್ಚು ಬೆವರು ಬರುತ್ತದೆ. ಆದ್ದರಿಂದ ಓಟ್ಸ್ ನಂತಹ ಕೊಬ್ಬಿನಂಶ ಕಡಿಮೆ ಇರುವ, ಅಧಿಕ ನಾರಿನಂಶವಿರುವ ಆಹಾರಗಳನ್ನು ತಿನ್ನಬೇಕು.

 ಪುದೀನಾ

ಪುದೀನಾ

ಪುದೀನಾ ಜ್ಯೂಸ್ ದೇಹವನ್ನು ತಂಪಾಗಿಡುತ್ತದೆ. ತುಂಬಾ ಬೆವರುವವರು ದಿನಾ ಒಂದು ಪುದೀನಾ ಎಲೆ ತಿನ್ನುವುದು ಒಳ್ಳೆಯದು.

 ಟೊಮೆಟೊ

ಟೊಮೆಟೊ

ಹೆಚ್ಚು ಬೆವರುವುದಾದರೆ ದಿನಾ ಒಂದು ಗ್ಲಾಸ್ ಟೊಮೆಟೊ ಜ್ಯೂಸ್ ಕುಡಿದರೆ ಉತ್ತಮವಾದ ಫಲಿತಾಂಶವನ್ನು ಕಾಣಬಹುದು.

ಬಾದಾಮಿ

ಬಾದಾಮಿ

ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೆ ಕೂಡ ಹೆಚ್ಚಾಗಿ ಬೆವರು ಬರುತ್ತದೆ. ಆದ್ದರಿಂದ ಜೀರ್ಣಕ್ರಿಯೆ ಸುಲಭವಾಗಿಸುವ ಬಾದಾಮಿ, ಸೊಪ್ಪು ಈ ರೀತಿಯ ಆಹಾರಗಳನ್ನು ತಿನ್ನುವುದು ಒಳ್ಳೆಯದು.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಬಿ ಇದ್ದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ದೇಹದಲ್ಲಿ ನೀರಿನಂಶವನ್ನು ಕಾಪಾಡುತ್ತದೆ.

English summary

Foods To Reduce Excessive Sweating | Tips For Health | ಅಧಿಕವಾಗಿ ಬೆವರುವುದನ್ನು ತಡೆಯಲು ಟಿಪ್ಸ್ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Smelly sweat is another embarrassing problem. As summer is coming closer, we need to be more careful as sweating is most common in this hot season. Proper hygiene can help overcome this embarrassing problem.
X
Desktop Bottom Promotion