For Quick Alerts
ALLOW NOTIFICATIONS  
For Daily Alerts

ಕೂದಲ ಆರೋಗ್ಯಕ್ಕಾಗಿ ಗಂಡಸರಿಗೆ 7 ಸಲಹೆಗಳು

|

ಕೂದಲ ವಿಚಾರವೇ? ಅದು ಗಂಡಸರಿಗೆ? ಎಂದು ಮೂಗು ಮುರಿಯುವ ಮುನ್ನ ನಿಮ್ಮ ತಲೆ ಮೇಲೆ ಕೈ ಇಟ್ಟುಕೊಳ್ಳಿ. ಕೂದಲ ಸಂರಕ್ಷಣೆ ಮತ್ತು ಪಾಲನೆ ಎಂಬುದು ಈಗ ಕೇವಲ ಹೆಂಗಸರಿಗೆ ಸಂಬಂಧಿಸಿದ ವಿಷಯವಾಗಿ ಉಳಿದಿಲ್ಲ. ಅದು ಈಗ ಗಂಡಸರಿಗು ಸಹ ಸೇರಿದ ವಿಷಯವಾಗಿದೆ. ಕೂದಲನ್ನು ಟ್ರಿಮ್ ಮಾಡಬೇಕೊ, ಉದ್ದ ಬಿಡಬೇಕೊ, ಬಣ್ಣ ಬಳಿಯಬೇಕೆ, ಬೇಡವೇ, ಕೂದಲಿಗೆ ಎಂತಹ ಶಾಂಪೂ ಬಳಸಬೇಕು ಅಥವ ಬೇಡ ಎಂಬಿತ್ಯಾದಿ ಗೊಂದಲಗಳು ಮತ್ತು ವಿಷಯಗಳು ಗಂಡಸರನ್ನು ಸಹ ಕಾಡುತ್ತಿರುತ್ತದೆ. ಆದರೆ ನೆನಪಿರಲಿ ನಿತ್ಯ ಶಾಂಪೂ ಬಳಸುವುದರ ಮೂಲಕ ಗಂಡಸರ ಕೂದಲು ಹೊಳಪು ಬರುವುದಿಲ್ಲ.

ಕೂದಲ ಸಂರಕ್ಷಣೆಗೆ ಸ್ವಲ್ಪ ಹೆಚ್ಚಿನ ಕಾಳಜಿಯ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ಶಾಂಪೂ ಮತ್ತು ಕಂಡೀಶನರುಗಳ ಅಗತ್ಯವಾಗಿರುತ್ತದೆ. ಏಕೆಂದರೆ ಇವುಗಳು ಕೂದಲಿಗೆ ಅಗತ್ಯವಾದ ಆರೋಗ್ಯವನ್ನು ನೀಡುತ್ತವೆ. ಪ್ರತಿನಿತ್ಯ ಕೂದಲಿಗೆ ಎಣ್ಣೆಯನ್ನು ಹಾಕುವ ಮೂಲಕವು ಕೂದಲಿನ ಅರೋಗ್ಯವನ್ನು ಕಾಪಾಡಬಹುದು. ಅದರಲ್ಲೂ ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡುತ್ತಿದ್ದರೆ, ರಕ್ತ ಪರಿಚಲನೆಯುಂಟಾಗಿ ಕೂದಲು ಮತ್ತಷ್ಟು ಗಟ್ಟಿ ಮುಟ್ಟಾಗಿ ಬೆಳೆಯುತ್ತದೆ.

7 tips to men for healthy hair

ಕೂದಲನ್ನು ಹಲವು ಬಗೆಗಳಲ್ಲಿ ವಿಂಗಡಿಸಬಹುದು. ಎಣ್ಣೆ ಕೂದಲು, ಒಣ ಕೂದಲು ಮತ್ತು ಸಾಮಾನ್ಯ ಕೂದಲು ಎಂಬ ಬಗೆಗಳು ಚಾಲ್ತಿಯಲ್ಲಿವೆ. ನಿಮ್ಮ ಕೂದಲಿನ ಗುಣಕ್ಕೆ ತಕ್ಕಂತೆ ನೀವು ಶಾಂಪೂ, ಎಣ್ಣೆ, ಕಂಡೀಶನರ್ ಮತ್ತು ಕೂದಲಿನ ಸಂರಕ್ಷಕಗಳನ್ನು ಬಳಸುವುದು ಉತ್ತಮ. ಉದಾಹರಣೆಗೆ ಒಣಕೂದಲಿಗೆ ಮೊಯಿಶ್ಚರೈಸರ್ ಹೆಚ್ಚಾಗಿರುವ ಜೊಜೊಬಾ, ಲೋಳೆ ಇತ್ಯಾದಿ ಸ್ವಾಭಾವಿಕ ಉತ್ಪನ್ನಗಳಿಂದ ಕೂಡಿದ ಕಂಡೀಶನರ್ ಖರೀದಿಸುವುದು ಉತ್ತಮ. ಆದರೆ ಜಿಡ್ಡು ಕೂದಲು ಇರುವ ವ್ಯಕ್ತಿಯು ಸದಾ ಕೂದಲಿಗೆ ಅಗತ್ಯವಾಗಿಬೇಕಾದ ಆರೋಗ್ಯಕಾರಿ ಅಂಶಗಳನ್ನು ಹಾಕುವುದು ಒಳಿತು.

ಇಲ್ಲಿ ನಾವು ನಿಮಗಾಗಿ ಕೆಲವು ಜನಪ್ರಿಯ ಹೇರ್ ಕೇರ್ ಸಲಹೆಗಳನ್ನು ನೀಡಿದ್ದೇವೆ ಓದಿ ತಿಳಿಯಿರಿ;

1. ಪ್ರತಿನಿತ್ಯ ತೊಳೆಯಿರಿ
ನಿತ್ಯ ಕೂದಲನ್ನು ಸ್ವಚ್ಛವಾಗಿ ತೊಳೆಯುವುದು ಆರೋಗ್ಯಕ್ಕೆ ಉತ್ತಮ. ತೊಳೆಯುವಾಗ ಅದಕ್ಕೆ ಅಗತ್ಯವಾದ ಶಾಂಪೂವನ್ನು ಬಳಸಿ. ಆದಷ್ಟು ತಙ್ಞರ ಶಿಫಾರಸಿನ ಮೇಲೆ ಶಾಂಪೂವನ್ನು ಬಳಸುವುದು ನಿಮಗೆ ಉತ್ತಮ.

2. ಶಾಂಪೂ
ಕೂದಲನ್ನು ಸರಿಯಾಗಿಟ್ಟುಕೊಳ್ಳಲು ಶಾಂಪೂ ಅತ್ಯಗತ್ಯ. ಆದರೆ ನಿಮ್ಮ ಶಾಂಪೂವನ್ನು ಪದೇ ಪದೇ ಬದಲಾಯಿಸುವುದು ಒಳ್ಳೆಯದಲ್ಲ. ಶಾಂಪೂ ನಮ್ಮ ಕೂದಲ ಮೇಲೆ ಬೀರುವ ಪರಿಣಾಮವನ್ನು ಅರಿತುಕೊಳ್ಳಲು ನಮಗೆ ಕೆಲ ಕಾಲ ಹಿಡಿಯುತ್ತದೆ. ಒಂದು ವೇಳೆ ನೀವು ಬಯಸಿದಂತೆ ನಿಮ್ಮ ಶಾಂಪೂ ಕೆಲಸ ಮಾಡಲಿಲ್ಲವಾದರೆ, ಆಗ ನಿಮ್ಮ ಶಾಂಪೂಗೆ ಕೋಕ್ ನೀಡಿ ಹೊಸ ಶಾಂಪೂವನ್ನು ಆಯ್ಕೆ ಮಾಡಿಕೊಳ್ಳಬಹುದು.

3. ಎಣ್ಣೆ ಹಚ್ಚಿ
ಕೂದಲನ್ನು ಸಂರಕ್ಷಿಸಲು ಅದಕ್ಕೆ ನಿತ್ಯ ಎಣ್ಣೆ ಸವರುವುದು ಅತ್ಯಗತ್ಯ. ಈ ಎಣ್ಣೆಯಿಂದ ಕೂದಲಿಗೆ ಹಲವಾರು ವಿಧದ ಅನುಕೂಲಗಳು ಉಂಟಾಗುತ್ತದೆ. ಆದಷ್ಟು ಬೆಚ್ಚಗಿನ ಎಣ್ಣೆಯನ್ನೆ ಕೂದಲಿಗೆ ಹಚ್ಚಿ. ರಾತ್ರಿ ಮಲಗುವ ಮುನ್ನ ಅಥವಾ ಸ್ನಾನಕ್ಕೆ 3 ಗಂಟೆಯ ಮುನ್ನ ಕೂದಲಿಗೆ ಎಣ್ಣೆ ಹಚ್ಚಿಕೊಂಡು ಮಲಗುವುದು ಒಳ್ಳೆಯದು.

4. ಕಂಡೀಶನಿಂಗ್
ಕಂಡೀಶನಿಂಗ್ ನಿಮ್ಮ ಕೂದಲನ್ನು ಸದೃಢವಾಗಿ ಮತ್ತು ಸುಂದರವಾಗಿಟ್ಟುಕೊಳ್ಳಲು ನೆರವಾಗುತ್ತದೆ. ಅಲೋವಿರಾ( ಲೋಳೆ), ಟ್ರೀ ಟೀ ಆಯಿಲ್, ಜೊಜೊಬಾ ಆಯಿಲ್ ಮುಂತಾದವುಗಳು ಸ್ವಾಭಾವಿಕವಾದ ಕಂಡೀಶನರುಗಳಾಗಿ ಬಳಕೆಯಾಗುತ್ತಿವೆ. ವಾಣಿಜ್ಯ ಉದ್ದೇಶಕ್ಕಾಗಿ ಬ್ರಾಂಡ್ ರೂಪದಲ್ಲಿ ದೊರೆಯುವ ಕಂಡೀಶನರುಗಳು ನಿಮ್ಮ ಕೂದಲಿನ ಮೇಲೆ ಉತ್ತಮ ಪರಿಣಾಮ ಬೀರಬಹುದು.

5. ಡ್ರೈಯಿಂಗ್
ನಿಮ್ಮ ಕೂದಲನ್ನು ಶಾಂಪೂ ಹಾಕಿ ತೊಳೆದ ಮೇಲೆ ಹಲವಾರು ವಿಧಗಳಲ್ಲಿ ಅದನ್ನು ಒಣಗಿಸಬಹುದು. ಕೆಲವೊಮ್ಮೆ ಕೂದಲನ್ನು ಕಂಡೀಶನರ್ ಹಾಕಿದ ಟವೆಲಿನಲ್ಲಿ ಸುತ್ತಿ ಒಣಗಿಸಬಹುದು. ಇಲ್ಲವಾದಲ್ಲಿ ಎಲೆಕ್ಟ್ರಾನಿಕ್ ಹೇರ್ ಡ್ರೈಯರ್ ಬಳಸಬಹುದು. ಆದರೆ ಹೆಚ್ಚಿನ ಶಾಖವನ್ನು ನಿಯಂತ್ರಿಸಿ, ಇದರಿಂದ ಕೂದಲಿಗೆ ಯಾವುದೇ ಹಾನಿ ಸಂಭವಿಸುವುದಿಲ್ಲ.

6. ಚೆನ್ನಾಗಿ ಬಾಚಿಕೊಳ್ಳಿ
ಸ್ನಾನ ಮಾಡಿದ ನಂತರ ನಿಮ್ಮ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ. ಆದರೆ ತುಂಬಾ ಹೊತ್ತು ನಿಮ್ಮ ಕೂದಲನ್ನು ಬಾಚುತ್ತ ನಿಂತುಕೊಳ್ಳಬೇಡಿ. ಕೂದಲು ಉದುರುವುದನ್ನು ತಡೆಗಟ್ಟಲು ಕೂದಲನ್ನು ಬಾಚುವುದು ಉತ್ತಮ. ಒದ್ದೆ ಇರುವಾಗ ತಲೆ ಬಾಚಲು ಹೋಗಬೇಡಿ. ಬಾಚುವಾಗ ನಿಧಾನವಾಗಿ ಬಾಚಿ. ಸ್ನಾನದ ನಂತರದ ಶವರ್ ಕಂಡೀಶನರ್ ಬಳಸಿದಲ್ಲಿ, ನಿಮ್ಮ ಕೂದಲು ಮತ್ತಷ್ಟು ಬಾಳಿಕೆ ಬರುತ್ತದೆ.

7. ಡೈ ಮಾಡುವಾಗ ಎಚ್ಚರವಿರಲಿ
ಬಹಳಷ್ಟು ಜನ ಗಂಡಸರಿಗೆ ವಯಸ್ಸಾದಂತೆ ಬರುವ ಕಂದು ಮತ್ತು ಬಿಳಿ ಕೂದಲುಗಳು ಭಾರೀ ಸಂಕೋಚವನ್ನುಂಟು ಮಾಡುತ್ತಿರುತ್ತವೆ. ಇದರಿಂದಾಗಿ ಅವರು ಭೀತಿಗೊಳ್ಳುವುದರ ಜೊತೆಗೆ ಆತ್ಮ ವಿಶ್ವಾಸವನ್ನು ಸಹ ಕಳೆದುಕೊಳ್ಳುತ್ತಾರೆ. ಬಿಳಿ ಕೂದಲುಗಳೆ ಬಂದರೆ ಬರಲಿ ಬಿಡಿ, ಅದಕ್ಕಾಗಿ ನಮ್ಮ ಬಳಿ ಹೇರ್ ಡೈ ಇದೆಯಲ್ಲವೆ? ಆದರೆ ಡೈ ಆಯ್ಕೆ ಮಾಡುವಾಗ ಎಚ್ಚರವಿರಲಿ, ಮೊದಲು ತಙ್ಞರನ್ನು ಸಂಪರ್ಕಿಸಿ ನಿಮ್ಮ ಡೈ ಆಯ್ಕೆ ಮಾಡಿಕೊಳ್ಳಿ. ಆದಷ್ಟು ರಾಸಾಯನಿಕರಹಿತವಾದ ಸಸ್ಯ ಜನ್ಯ ಹೇರ್ ಡೈ ಬಳಸಿರಿ.

English summary

7 tips to men for healthy hair

7 tips to men for healthy hair. Beauty tips are not only for women. Even men have to follow certain direction to keep their in good condition.
Story first published: Friday, November 22, 2013, 16:36 [IST]
X
Desktop Bottom Promotion