For Quick Alerts
ALLOW NOTIFICATIONS  
For Daily Alerts

ಮಲಬದ್ಧತೆ ಉಂಟುಮಾಡುವ 7 ಆಹಾರಗಳು

By Super
|

ಮಲಬದ್ಧತೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವ ಸಮಸ್ಯೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸದೇ ಇರುವ ಕಾರಣಕ್ಕೆ ಅಥವಾ ಕೆಲವೊಮ್ಮೆ ಅನಾರೋಗ್ಯಕರ ಆಹಾರವನ್ನು ಸೇವಿರುವ ಕಾರಣಕ್ಕೆ ಮಲಬದ್ಧತೆಯ ಸಮಸ್ಯೆ ಉಂಟಾಗಬಹುದು. ಇದರಿಂದ ಕರುಳಿನ ಚಲನೆ/ಪಚನ ಕ್ರಿಯೆ ಸರಿಯಾಗಿ ಆಗದೇ ನೋವುಯುಕ್ತ ಮಲವಿಸರ್ಜನೆ ಹಾಗೂ ರಕ್ತಸ್ರಾವ ಉಂಟಾಗಬಹುದು! ಮಲಬದ್ಧತೆಯ ಆರಂಭದಲ್ಲಿ ನೀವು ಪ್ರಯಾಣ ಮಾಡುವುದೂ ಕೂಡ ಅತ್ಯಂತ ಕಠಿಣವಾಗಬಹುದು. ಕಚೇರಿಗಳಲ್ಲಿ ಕೆಲಸ ಮಾಡುವುದೂ ಕೂಡ ಈ ಸಮಯದಲ್ಲಿ ಕಷ್ಟ.

ಇಂತಹ ಸಮಯದಲ್ಲಿ ಇದಕ್ಕಿರುವ ಒಂದೇ ಪರಿಹಾರವೆಂದರೆ ನಿಮ್ಮ ಆಹಾರಕ್ರಮಗಳನ್ನು ಬದಲಾಯಿಸಿಕೊಳ್ಳುವುದು. ಇಲ್ಲಿ ನಾವು ಮಲಬದ್ಧತೆ ಉಂಟು ಮಾಡುವ ಆಹಾರಗಳ ಬಗ್ಗೆ ಹೇಳಿದ್ದೇವೆ. ಮಲಬದ್ಧತೆ ಸಮಸ್ಯೆ ಬಾರದಿರಲು ಇವುಗಳನ್ನು ತಿನ್ನದಿರುವುದು ಒಳ್ಳೆಯದು.

1. ನೋವು ನಿವಾರಕಗಳು

1. ನೋವು ನಿವಾರಕಗಳು

ನೋವು ನಿವಾರಕ ಔಷಧಗಳು ಇಂದು ನಮ್ಮ ಅವಿಭಾಬ್ಯ ಅಂಗವಾಗಿ ಬಿಟ್ಟಿದೆ. ಈ ಔಷಧಗಳು ಆ ಕ್ಷಣಕ್ಕೆ ಜೀರ್ಣಕ್ರಿಯೆಗೆ ಸಹಕರಿಸಬಹುದೇ ಹೊರತು ಶಾಶ್ವತ ಪರಿಹಾರ ನೀಡಲಾರದು. ಆದ್ದರಿಂದ ಅತೀ ಅಗತ್ಯ ಸಂದರ್ಭಗಳನ್ನು ಹೊರತು ಪಡಿಸಿ ಉಳಿದ ಸಮಯದಲ್ಲಿ ಇದನ್ನು ಸೇವಿಸಲೇ ಬಾರದು.

2. ಚಿಪ್ಸ್

2. ಚಿಪ್ಸ್

ಇಂದಿನ ಯುವಜನರಿಗೆ ಇಷ್ಟವಾಗುವ ಚಿಪ್ಸ್, ಮಲಬದ್ಧತೆಯನ್ನು ಉಂಟುಮಾಡುವ ಅತ್ಯಂತ ಪರಿಣಾಮಕಾರಿ ಆಹಾರ ಎಂದರೆ ಆಶ್ಚರ್ಯವೇನಿಲ್ಲ! ಇದನ್ನು ಅಪರೂಪಕ್ಕೊಮ್ಮೆ ಮಾತ್ರ ಸೇವಿಸಬಹುದೇ ಹೊರತು ನಿತ್ಯದ ತಿಂಡಿಯಾಗಿ ಸೇವಿಸಬಾರದು. ಹೆಚ್ಚಿನ ಕೊಬ್ಬಿನ ಅಂಶವಿರುವ ಆಲೂಗೆಡ್ಡೆ ಚಿಪ್ಸ್, ಕೇವಲ ಕ್ಯಾಲೊರಿ ಹೆಚ್ಚಿಸುವುದು ಮಾತ್ರವಲ್ಲದೆ ತಡವಾದ ಜೀರ್ಣಕ್ರಿಯೆಗೂ ಕಾರಣವಾಗಬಹುದು.

3. ಹಾಲಿನ ಉತ್ಪನ್ನಗಳು

3. ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳಾದ ಹಾಲು, ಚೀಸ್, ಐಸ್ ಕ್ರೀಂ ಮೊದಲಾದವು ನಿಮ್ಮ ಜೀರ್ಣ ವ್ಯವಸ್ಥೆಗೆ ಹಾನಿಕಾರಕ. ಅತಿಯಾದ ಕೊಬ್ಬನ್ನು ಹೊಂದಿರುವ ಹಾಲಿನ ಉತ್ಪನ್ನಗಳು ಸಂಪೂರ್ಣ ಕರುಳಿನ ಕಾರ್ಯವನ್ನು ಸ್ಥಗಿತಗೊಳಿಸುತ್ತವೆ.

4. ಕುಕ್ಕೀಸ್

4. ಕುಕ್ಕೀಸ್

ಕುಕ್ಕೀಸ್ ಗಳು ಸಾಮಾನ್ಯವಾಗಿ ಹಲವರ ಅತ್ಯಂತ ಇಷ್ಟವಾದ ತಿನಿಸು. ಕುಕೀಸ್, ಪ್ಯಾಸ್ಟ್ರಿ ಮತ್ತು ಕೇಕ್ ಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ಹೊಂದಿದ್ದು, ಕಡಿಮೆ ಪ್ರಮಾಣದಲ್ಲಿ ಫೈಬರ್ ಮತ್ತು ದ್ರವವನ್ನು ಹೊಂದಿರುತ್ತವೆ. ಈ ಆಹಾರ ಪದಾರ್ಥಗಳ ಅತಿಯಾದ ಸೇವನೆ, ನಿಮ್ಮ ಹೊಟ್ಟೆಯ ಅನಾರೋಗ್ಯವನ್ನುಂಟು ಮಾಡಬಹುದು.

5. ಬಾಳೆಕಾಯಿ

5. ಬಾಳೆಕಾಯಿ

ಆಶ್ಚರ್ಯವೇ ಆದರೂ ಬಾಳೆಹಣ್ಣುಗಳೂ ಕೂಡ ಮಲಬದ್ಧತೆಗೆ ಕಾರಣವಾಗಬಲ್ಲದು. ಬಲಿತ ಬಾಳೆಹಣ್ಣುಗಳ ಸೇವನೆ ಒಳ್ಳೆಯದೇ ಆದರೂ ಹೆಚ್ಚು ಬಲಿತಿರದ ಬಾಳೆಹಣ್ಣುಗಳು ನಾರಿನ ಅಂಶವನ್ನು ಹೊಂದಿರುವುದಿಲ್ಲ. ಆದ್ದರಿಂದ ಮಲವಿಸರ್ಜನೆಗೆ ತೊಂದರೆಯಾಗಬಹುದು.

6. ಕರಿದ ಆಹಾರಗಳು

6. ಕರಿದ ಆಹಾರಗಳು

ಫ್ರೆಂಚ್ ಫ್ರೈ, ಆನಿಯನ್ ರಿಂಗ್ ಮತ್ತು ಡೊನುಟ್ಸ್ ನಂತಹ ಕರಿದ ಆಹಾರ ಪದಾರ್ಥಗಳು ಮಲಬದ್ಧತೆಯನ್ನು ಉಂಟುಮಾಡಬಹುದು. ಈ ಹೆಚ್ಚಿನ ಕೊಬ್ಬು ಜಿಡ್ಡಿನ ಆಹಾರ ಪಚನ ವ್ಯವಸ್ಥೆಯನ್ನು ನಿಧಾನ ಗೊಳಿಸುತ್ತದೆ. ಜೀರ್ಣಾಂಗ ಕ್ರಿಯೆಗೆ ತೊಂದರೆಯನ್ನುಂಟುಮಾಡುವ ಇದನ್ನು ನಿಮ್ಮ ಆಹಾರ ಕ್ರಮದಿಂದ ದೂರವಿಡಿ. ಕರಿದ ಪದಾರ್ಥಗಳ ಬದಲಿಗೆ ಬೇಯಿಸಿದ ಆಹಾರಗಳನ್ನು ಸೇವಿಸಿ.

7. ಕೆಂಪು ಮಾಂಸ / ರೆಡ್ ಮೀಟ್

7. ಕೆಂಪು ಮಾಂಸ / ರೆಡ್ ಮೀಟ್

ನಿಯಮಿತವಾಗಿ ಸೇವಿಸುವ ಕೆಂಪು ಮಾಂಸವೂ ಸಹ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ತೊಂದರೆಯನ್ನುಂಟು ಮಾಡಬಹುದು. ಆಗಿರಬಹುದು. ಇದು ದೇಹದಲ್ಲಿ ಫೈಬರ್ ನ ಅಂಶವನ್ನು ಕಡಿಮೆಗೊಳಿಸುತ್ತದೆ.

ನೀವು ಸೇವಿಸುವ ಎಲ್ಲಾ ಆಹಾರದಲ್ಲಿಯೂ ಫೈಬರ್ ಅಂಶವನ್ನು ಹೆಚ್ಚಿಸಿ ಮಲಬದ್ಧತೆಯನ್ನು ದೂರವಿಡಿ. ಸಾಕಷ್ಟು ಪ್ರಮಾಣದಲ್ಲಿ ನೀರಿನ ಸೇವನೆ ಹಾಗೂ ಸರಿಯಾದ ಆಹಾರ ಕ್ರಮ ನಿಮ್ಮ ಕರುಳಿನ ಸಮಸ್ಯೆಯನ್ನು ದೂರಗೊಳಿಸಿ ಮಲಬದ್ಧತೆ ಉಂಟಾಗದಂತೆ ತಡೆಯಬಹುದು. "ಆರೋಗ್ಯಕರ ಆಹಾರ, ಆರೋಗ್ಯಕರ ಜೀವನಕ್ಕೆ ಮುನ್ನುಡಿ".

English summary

7 Foods That Cause Constipation

Constipation is a common issue that we face often due to irregular schedule of meals or even sometimes due to the unhealthy food habits.
X
Desktop Bottom Promotion