For Quick Alerts
ALLOW NOTIFICATIONS  
For Daily Alerts

ನ್ಯುಮೊನಿಯಕ್ಕೆ 15 ಮನೆಮದ್ದುಗಳು

By Staff
|

ಮನೆಮದ್ದಿನ ವಿಷಯಕ್ಕೆ ಬಂದಾಗ ಹಲವರು ಇದರ ಮೊರೆಹೋಗುತ್ತಾರೆ. ಏಕೆಂದರೆ ಇದು ಹೆಚ್ಚು ಸುರಕ್ಷಿತ ಮತ್ತು ಯಾವುದೇ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ. ಅಲೋಪತಿಗೆ ಹೋಲಿಸಿದಾಗ ಮನೆಮದ್ದಿನ ಚಿಕಿತ್ಸೆ ಹೆಚ್ಚು ಒಳ್ಳೆಯದು. ನ್ಯುಮೊನಿಯವನ್ನು ಕೂಡ ಹಲವು ವಿಧದಲ್ಲಿ ಸ್ವಯಂಚಿಕಿತ್ಸೆಯಿಂದ ನೀವೆ ಗುಣಪಡಿಸಿಕೊಳ್ಳಬಹುದು. ನ್ಯುಮೊನಿಯಕ್ಕೆ ಹಲವು ಮನೆಮದ್ದುಗಳು ಲಭ್ಯವಿದೆ. ನಿಮಗೆ ಹೊಂದುವಂತದ್ದನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ನೀವು ನ್ಯುಮೊನಿಯಾದಿಂದ ಬಳಲುತ್ತಿದ್ದಲ್ಲಿ ಈ ಕೆಳಗೆ ಹೇಳಿರುವ ಮನೆಮದ್ದುಗಳನ್ನು ಪ್ರಯತ್ನಸಬಹುದು.

ನಿಮಗೆ ನ್ಯುಮೊನಿಯ ಎಂದರೆ ಏನೆಂದು ತಿಳಿದಿಲ್ಲವಾದರೆ ನಾವು ವಿವರಿಸುತ್ತೇವೆ. ಶ್ವಾಸಕೋಶದ ಉರಿ/ಸೋಂಕನ್ನು ನ್ಯುಮೊನಿಯ ಎಂದು ಕರೆಯುತ್ತಾರೆ. ಇದು ಸೋಂಕು, ವೈರಸ್ ಅಥವ ಬ್ಯಾಕ್ಟಿರಿಯಾ ಕಾರಣದಿಂದ ಬರಬಹುದು. ಇದಕ್ಕೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಒದಗಿಸದಿದ್ದಲ್ಲಿ ಜೀವನಪೂರ್ತಿ ನಿಮ್ಮನ್ನು ಕಾಡಬಹುದು. ಜೊತೆಗೆ ಶ್ವಾಸಕೋಶಗಳಿಗೆ ತೊಂದರೆಯುಂಟಾಗಿ ಜೀವ ಕೂಡ ಹೋಗುವ ಸಾಧ್ಯತೆಯಿರುತ್ತದೆ.

ನ್ಯುಮೊನಿಯ ಗುಣಪಡಿಸಲು 15 ಮನೆಮದ್ದುಗಳು:

1. ಬೆಳ್ಳುಳ್ಳಿ

1. ಬೆಳ್ಳುಳ್ಳಿ

ನ್ಯುಮೊನಿಯಾಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆಯಿದು. ನಿಮ್ಮ ದಿನದ ಆಹಾರಕ್ರಮದಲ್ಲಿ ಹೆಚ್ಚು ಬೆಳ್ಳುಳ್ಳಿಯನ್ನು ಬಳಸಿ. ಬೆಳ್ಳುಳ್ಳಿಯಲ್ಲಿ ಸಹಜವಾದ ಆ್ಯಂಟಿಬಯೊಟಿಕ್ ಗುಣವಿದ್ದು ಇದು ದೇಹದಲ್ಲಿನ ಕೆಟ್ಟ ಕ್ರಿಮಿಗಳನ್ನು ಕೊಲ್ಲುತ್ತದೆ.

2. ಅರಿಶಿಣ

2. ಅರಿಶಿಣ

ಅರಿಶಿಣದಲ್ಲಿ ಹಲವು ಔಷಧೀಯ ಗುಣಗಳಿವೆ. ಇದು ನ್ಯುಮೊನಿಯಾವನ್ನು ಗುಣಪಡಿಸುತ್ತದೆ.

3. ಶುಂಠಿ

3. ಶುಂಠಿ

ಬೆಳ್ಳುಳ್ಳಿಯಂತೆ ಶುಂಠಿಯನ್ನು ಬಳಸಿ. ಶುಂಠಿ ಎಲ್ಲ ರೀತಿಯ ಶ್ವಾಸಕೋಶ ಸಂಬಂಧಿ ಖಾಯಿಲೆಗಳನ್ನು ಗುಣಪಡಿಸುತ್ತದೆ. ಟೀಯೊಂದಿಗೆ ತುರಿದ ಶುಂಠಿಯನ್ನು ಹಾಕಿಕೊಂಡು ಪ್ರತಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ.

4. ತುಳಸಿ

4. ತುಳಸಿ

ತುಳಸಿ ನ್ಯುಮೊನಿಯಾವನ್ನು ಗುಣಪಡಿಸುತ್ತದೆ. ಇದು ಕೆಟ್ಟ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತದೆ. ಇದನ್ನು ದಿನದಲ್ಲಿ 6 ಬಾರಿ ನಿಯಮಿತವಾಗಿ ತೆಗೆದುಕೊಳ್ಳಬೇಕು.

5. ವಿಟಮಿನ್ ಸಿ

5. ವಿಟಮಿನ್ ಸಿ

ವಿಟಮಿನ್ ಸಿ ಹೆಚ್ಚಿರುವ ಹಲವು ಆಹಾರಗಳಿವೆ. ಸ್ಟ್ರಾಬೆರ್ರಿ, ಸೀಬೆಕಾಯಿ ಮತ್ತು ಟೊಮೆಟೊಗಳು ವಿಟಮಿನ್ ಸಿ ಹೆಚ್ಚಿರುವ ಕೆಲವು ಆಹಾರಗಳು. ಇವುಗಳನ್ನು ನಿಮ್ಮ ಆಹಾರಕ್ರಮದಲ್ಲಿ ಬಳಸಿ.

6. ನೀರು

6. ನೀರು

ನ್ಯುಮೊನಿಯಾದಿಂದ ಬಳಲುತ್ತಿರುವ ರೋಗಿಗಳು ಹೆಚ್ಚು ನೀರನ್ನು ಕುಡಿಯಬೇಕು. ಇದರಿಂದ ದೇಹದಲ್ಲಿ ನಿರ್ಜಲೀಕರಣವಾಗುವುದನ್ನು ತಪ್ಪಿಸಬಹುದು.

7. ಕ್ಯಾರೆಟ್ ಜ್ಯೂಸ್

7. ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ನಿಮ್ಮ ಕಣ್ಣುಗಳಿಗೆ ಮಾತ್ರವಲ್ಲ ನಿಮ್ಮ ಶ್ವಾಸಕೋಶಗಳಿಗೆ ಕೂಡ ಒಳ್ಳೆಯದು. ನ್ಯುಮೊನಿಯ ರೋಗಿಗಳು ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿಯುವುದು ಒಳ್ಳೆದು ಎಂದು ಹೇಳಲಾಗುತ್ತದೆ. ಇದರಿಂದ ವಿಟಮಿನ್ ಎ ಹೆಚ್ಚು ಉತ್ಪಾದನೆಯಾಗುತ್ತದೆ. ಇದು ರೋಗಗ್ರಸ್ಥ ದೇಹಕ್ಕೆಅತ್ಯವಶ್ಯಕವಾದದ್ದು.

8. ಕೆಂಪುಮೆಣಸು

8. ಕೆಂಪುಮೆಣಸು

ಪರಿಣಿತರ ಪ್ರಕಾರ ಇದು ನ್ಯುಮೊನಿಯ ಸೋಂಕಿನ ವಿರುದ್ಧ ಹೋರಾಡುತ್ತದೆ. ಇದರಲ್ಲಿ ಹೆಚ್ಚಿನಂಶದ ಆ್ಯಂಟಿಮೈಕ್ರೋಬಿಯಲ್ ಗುಣಗಳಿದ್ದು ಸೇವನೆಗೆ ಒಳ್ಳೆಯದು.

9. ಎಳ್ಳು

9. ಎಳ್ಳು

ನ್ಯುಮೊನಿಯಾದಿಂದ ಬಳಲುತ್ತಿರುವವರು ಇದನ್ನು ತಮ್ಮ ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳುವುದು ಒಳ್ಳೆಯದು. ಇದು ದೇಹದಲ್ಲಿನ ಕೆಟ್ಟ ಬ್ಯಾಕ್ಟಿರೀಯಾಗಳನ್ನು ಕಡಿಮೆ ಮಾಡುತ್ತದೆ.

10. ಜೇನು ತುಪ್ಪ

10. ಜೇನು ತುಪ್ಪ

ಸಕ್ಕರೆಗೆ ಬದಲಾಗಿ ಜೇನುತುಪ್ಪ ಬಳಸಿ. ಇದರಲ್ಲಿ ಆ್ಯಂಟಿಬ್ಯಾಕ್ಟಿರಿಯಲ್ ಗುಣಗಳಿವೆ. ಇದು ದೇಹದೊಳಗಿನ ಕೆಟ್ಟ ಕೀಟಾಣುಗಳನ್ನು ಕೊಲ್ಲುತ್ತದೆ.

11. ಮೆಂತ್ಯೆ

11. ಮೆಂತ್ಯೆ

ಮೆಂತ್ಯೆಯಲ್ಲಿ ಹಲವು ಔಷಧೀಯ ಗುಣಗಳಿವೆ. ನ್ಯುಮೊನಿಯ ಗುಣಪಡಿಸಲು ಮೆಂತ್ಯೆ ಪರಿಣಾಮಕಾರಿಯಾದ ಔಷಧಿ.

12. ಕಪ್ಪು ಚಹಾ

12. ಕಪ್ಪು ಚಹಾ

ನ್ಯುಮೊನಿಯಾದಿಂದ ಬಳಲುತ್ತಿರುವವರು ಎಲ್ಲ ಬಗೆಯ ಹಾಲಿನ ಉತ್ಪನ್ನಗಳಿಂದ ದೂರವಿರುವುದು ಒಳ್ಳೆಯದು. ಕಪ್ಪು ಚಹಾ ನ್ಯುಮೊನಿಯಕ್ಕೆ ಉತ್ತಮ ಮನೆಮದ್ದು.

13. ಬೀಟ್ ರೂಟ್

13. ಬೀಟ್ ರೂಟ್

ಬೀಟ್ ರೂಟ್ ಅನ್ನು ನ್ಯುಮೊನಿಯ ರೋಗಿಗಳು ಅವಶ್ಯಕವಾಗಿ ಬಳಸಬೇಕು. ಇದರಲ್ಲಿ ಶಕ್ತಿಯನ್ನು ವರ್ಧಿಸುವ ಅಂಶ ಹೆಚ್ಚಿದ್ದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

14. ಮಾಂಸಹಾರ ಬೇಡ

14. ಮಾಂಸಹಾರ ಬೇಡ

ನಿಮಗೆ ಮಾಂಸಾಹಾರ ಇಷ್ಟವಿದ್ದರೂ ಕೂಡ ಅದರಿಂದ ದೂರವಿರುವುದು ಒಳ್ಳೆಯದು. ಹಾಗೂ ತಿನ್ನಬೇಕೆನಿಸಿದರೆ ಸಾಲೊಮನ್ ಅಥವ ತುನದಂತಹ ಮೀನಿನ ಮಾಂಸವನ್ನು ತಿನ್ನಿ. ಇದರಲ್ಲಿ ಒಮೆಗ ಫ್ಯಾಟಿ ಆಸಿಡ್ ಗಳು ಹೆಚ್ಚಿರುತ್ತದೆ.

15. ಬಾರ್ಬರಿ

15. ಬಾರ್ಬರಿ

ಇದು ನ್ಯುಮೊನಿಯಾದ ಚಿಕಿತ್ಸೆಗೆ ಹೆಚ್ಚು ಬಳಸಲಾಗುವ ಮೂಲಿಕೆ. ಇದನ್ನು ಕಪ್ಪು ಚಹಾದೊಂದಿಗೆ ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿಯಬೇಕು. ಇದನ್ನು ಬರಿಹೊಟ್ಟೆಯಲ್ಲಿ ಕುಡಿಯಬೇಕು.

English summary

15 Home Remedies To Treat Pneumonia

When it comes to home remedies there are a lot of people who go in for it since it is safe to use and has no side effects. Compared to allopathy medications, home remedies is the best treatment.
X
Desktop Bottom Promotion