For Quick Alerts
ALLOW NOTIFICATIONS  
For Daily Alerts

ದಾಸವಾಳ ಹೂವಿನಲ್ಲಿದೆ 14 ಔಷಧೀಯ ಗುಣಗಳು!

|

ದಾಸವಾಳ ಹೂವಿನಲ್ಲಿ ಹತ್ತಕ್ಕೂ ಹೆಚ್ಚಿನ ಆರೋಗ್ಯಕರ ಗುಣವಿದೆಯೆಂದು ಗೊತ್ತಿದೆಯೇ? ದಾಸವಾಳ ಹೂ ಕೂದಲಿನ ಬೆಳವಣಿಗೆಗೆ ಒಳ್ಳೆಯದೆಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಷಯ, ಇದಲ್ಲದೆ ಮಹಿಳೆಯರಲ್ಲಿ ಬಿಳುಪು ಹೋಗುವುದನ್ನು ತಡೆಯುವುದರಿಂದ ಹಿಡಿದು ಇನ್ನು ಅನೇಕ ಆರೊಗ್ಯಕರ ಗುಣಗಳು ಇದರಲ್ಲಿ ಇದೆ.

ದಾಸವಾಳದ ಹೂವಿನಲ್ಲಿ anti oxidants ಗುಣ ಅಧಿಕವಿದ್ದು ಈ ಹೂವನ್ನು ಬಳಸಿ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

ಶೀತಕ್ಕೆ ಉತ್ತಮ ಮದ್ದು

ಶೀತಕ್ಕೆ ಉತ್ತಮ ಮದ್ದು

ಶೀತ, ಕೆಮ್ಮು, ತಲೆನೋವು ಕಾಣಿಸಿದಾಗ ದಾಸವಾಳ ಹೂವನ್ನು ತಿಂದರೆ ಅಥವಾ ಅದರಿಂದ ಟೀ ಮಾಡಿ ಕುಡಿದರೆ ಈ ಸಣ್ಣ-ಪುಟ್ಟ ಸಮಸ್ಯೆಗಳಿಂದ ಪಾರಾಗಬಹುದು.

 ಶಕ್ತಿಯನ್ನು ವರ್ಧಿಸುತ್ತದೆ

ಶಕ್ತಿಯನ್ನು ವರ್ಧಿಸುತ್ತದೆ

antioxidants ಅಧಿಕವಿರುವುದರಿಂದ ಇದು ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರಹಾಕಿ, ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ.

ಹಾಟ್ ಪ್ಲಾಷ್ ಕಡಿಮೆ ಮಾಡುತ್ತೆ

ಹಾಟ್ ಪ್ಲಾಷ್ ಕಡಿಮೆ ಮಾಡುತ್ತೆ

ಮಹಿಳೆಯರಿಗೆ ಮೆನೋಪಸ್ ಸಮಯದಲ್ಲಿ ಹಾಟ್ ಪ್ಲಾಷ್ ಸಮಸ್ಯೆ ಕಂಡು ಬರುತ್ತದೆ. ತುಂಬಾ ಸೆಕೆಯಾದಂತೆ ಅನಿಸುವುದು, ಮೈಯೆಲ್ಲಾ ಬೆವರುವುದು ಈ ಸಮಸ್ಯೆಯಿಂದ ಹೊರಬರಲು ಕೆಂಪು ಅಥವಾ ಬಿಳಿ ದಾಸವಾಳದ ಹೂವನ್ನು ತಿನ್ನುವುದು ಅಥವಾ ಅದರ ಟೀ ಮಾಡಿ ಕುಡಿಯುವುದು ಒಳ್ಳೆಯದು.

ಯೌವನದ ರಕ್ಷಣೆ

ಯೌವನದ ರಕ್ಷಣೆ

ವಯಸ್ಸು ಹೆಚ್ಚಾಗಿ ಸೌಂದರ್ಯ ಕಮ್ಮಿಯಾಗುವುದನ್ನು ನಾವು ಯಾರೂ ಬಯಸುವುದಿಲ್ಲ, ಆದರೂ ನಾವು ಸತ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ, ಆದರೆ ಸ್ವಲ್ಪ ಆರೈಕೆ ಮಾಡಿದರೆ ಯೌವನದ ಚೆಲುವು ಬೇಗನೆ ಕಡಿಮೆಯಾಗುವುದನ್ನು ತಡೆಯಬಹುದು.

ಮೊಡವೆ ಸಮಸ್ಯೆಯೇ?

ಮೊಡವೆ ಸಮಸ್ಯೆಯೇ?

ಮೊಡವೆ ಕಡಿಮೆ ಮಾಡಲು ದುಬಾರಿ ಚಿಕಿತ್ಸೆ ಮಾಡಿಸುತ್ತೇವೆ, ಆದರೆ ದಿನಾ ದಾಸವಾಳ ಹೂವಿನ ಜ್ಯೂಸ್ ಕುಡಿಯುವುದರಿಂದ ಮೊಡವೆ ಬರುವುದನ್ನು ತಡೆಯಬಹುದು, ಅಲ್ಲದೆ ಈ ಜ್ಯೂಸ್ ನಿಮ್ಮ ತ್ವಚೆ ಕಾಂತಿಯನ್ನೂ ಹೆಚ್ಚಿಸುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಈ ಹೂವಿನಲ್ಲಿ antioxidants ಮತ್ತು ವಿಟಮಿನ್ ಸಿ ಅಧಿಕವಿರುವುದರಿಂದ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ.

ದೇಹದಲ್ಲಿ ನೀರಿನಂಶವನ್ನು ಕಾಪಾಡುತ್ತದೆ

ದೇಹದಲ್ಲಿ ನೀರಿನಂಶವನ್ನು ಕಾಪಾಡುತ್ತದೆ

ಇದು ದೇಹದಲ್ಲಿ ನೀರಿನಂಶ ಕಮ್ಮಿಯಾಗದಂತೆ ನೋಡಿಕೊಳ್ಳುತ್ತದೆ. ನೀರಿನಂಶದ ಕೊರತೆಯಿಂದ ಬಳಲುತ್ತಿರುವವರು, ಡ್ರೈ ಸ್ಕಿನ್ ಇರುವವರು ಇದರ ಜ್ಯೂಸ್ ಕುಡಿಯುವುದು ಒಳ್ಳೆಯದು.

 ಹೊಟ್ಟೆ ಹಸಿವು ಹೆಚ್ಚಿಸುತ್ತದೆ

ಹೊಟ್ಟೆ ಹಸಿವು ಹೆಚ್ಚಿಸುತ್ತದೆ

ಕೆಲವರಿಗೆ ಹೊಟ್ಟೆ ಸರಿಯಾಗಿ ಹಸಿಯುವುದಿಲ್ಲ, ಹೊಟ್ಟೆ ಹಸಿಯುತ್ತಿಲ್ಲ ಎಂದು ಊಟ ಸರಿಯಾಗಿ ಮಾಡದಿದ್ದರೆ ನಿಶ್ಯಕ್ತಿ ಉಂಟಾಗುವುದು. ಹೊಟ್ಟೆ ಹಸಿವು ಸರಿಯಾದ ರೀತಿಯಲ್ಲಿ ಆಗಲು ದಾಸವಾಳವನ್ನು ತಿನ್ನುವುದು ಒಳ್ಳೆಯದು.

 ಕೂದಲು ಉದುರುವುದನ್ನು ತಡೆಯುತ್ತದೆ

ಕೂದಲು ಉದುರುವುದನ್ನು ತಡೆಯುತ್ತದೆ

ಕೂದಲು ಉದುರುವುದನ್ನು ತಡೆಯುವ ಉತ್ತಮ ಮನೆ ಮದ್ದು ಇದಾಗಿದೆ. ಎಣ್ಣೆಯಲ್ಲಿ ದಾಸವಾಳ ಹೂವನ್ನು ಹಾಕಿ ಕಾಯಿಸಿ, ಆ ಎಣ್ಣೆಯನ್ನು ಬಳಸಿದರೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್ ಸಮಸ್ಯೆಯನ್ನು ಕಮ್ಮಿ ಮಾಡಬೇಕೆಂದು ಬಯಸುವುದಾದರೆ ದಿನಾ ಒಂದರಿಂದ ಎರಡು ದಾಸವಾಳದ ಹೂವನ್ನು ತಿನ್ನುವುದು ಒಳ್ಳೆಯದು.

 ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ

ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ

ಬಾಡಿ ಹೀಟ್ ಆಗಿದ್ದರೆ ಅದನ್ನು ಕಮ್ಮಿ ಮಾಡಲು ದಾಸವಾಳ ಹೂವಿನ ಜ್ಯೂಸ್ ಕುಡಿದರೆ ಒಳ್ಳೆಯದು.

ಕೂದಲನ್ನು ಕಪ್ಪಾಗಿಸುತ್ತದೆ

ಕೂದಲನ್ನು ಕಪ್ಪಾಗಿಸುತ್ತದೆ

ಕೂದಲು ಉದುರುವುದನ್ನು ತಡೆಯುವುದು ಮಾತ್ರವಲ್ಲ, ಪ್ರತೀದಿನ ಈ ಎಣ್ಣೆ ಹಚ್ಚಿದರೆ ಕಪ್ಪಾದ ಕೂದಲಿನ ಸೌಂದರ್ಯ ನಿಮ್ಮದಾಗುವುದು.

 ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

ದಾಸವಾಳ ಹೂವಿನಲ್ಲಿರುವ antioxidants ಗುಣ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುತ್ತದೆ. ದಾಸವಾಳ ಹೂವಿನ ಟೀ ಮಾಡಿ ಕುಡಿಯುವುದು ತುಂಬಾ ಒಳ್ಳೆಯದು.

ಬಿಳುಪು ಹೋಗುವುದನ್ನು ತಡೆಯುತ್ತದೆ

ಬಿಳುಪು ಹೋಗುವುದನ್ನು ತಡೆಯುತ್ತದೆ

ಕೆಲವು ಮಹಿಳೆಯರಲ್ಲಿ ಅಧಿಕ ಬಿಳುಪು ಹೋಗುವ ಸಮಸ್ಯೆ ಕಂಡು ಬರುವುದು, ಈ ಸಮಸ್ಯೆ ಇರುವವರು ದಿನ ಒಂದು ಬಿಳಿ ದಾಸವಾಳ ಹೂ ತಿಂದರೆ ಬಿಳುಪು ಹೋಗುವುದು ಕಮ್ಮಿಯಾಗುವುದು.

English summary

14 Health Benefits Of Hibiscus Flower

The health benefits of hibiscus can be utilised well only if you know them. And even if you are not ailing from any sickness, it is in general good for your health.
X
Desktop Bottom Promotion