For Quick Alerts
ALLOW NOTIFICATIONS  
For Daily Alerts

ಮನೆಮದ್ದಾಗಿ ಲೋಳೆಸರದ ಪಾತ್ರ

By Super
|

ಲೋಳೆಸರ ಒಂದು ಬಹುಪಯೋಗಿ ಸಸ್ಯವಾಗಿದ್ದು, ಇದು ಭಾರತದಲ್ಲಿ ಮಾತ್ರವಲ್ಲದೇ, ಪ್ರಪಂಚದಾದ್ಯಂತ ಒಂದು ಅತ್ಯುತ್ತಮ ಮನೆ ಔಷಧಿಯ ಮೂಲವೆಂದು ಅನುಮೋದಿಸಲ್ಪಟ್ಟಿದೆ. ಈ ಸಸ್ಯದ ಔಷಧೀಯ ಚಿಕಿತ್ಸಾತ್ಮಕ ಗುಣಗಳು ಶರೀರದ ಒಳಗೂ ಮತ್ತು ಹೊರಗೂ ಉಪಯುಕ್ತವಾಗಿದ್ದು, ಈ ಕಾರಣದಿಂದಾಗಿ ಇದು ಅನೇಕ ಸಾವಯವ ದ್ರಾವಣಗಳ ತಯಾರಕರ ಪಾಲಿಗೆ ಒಂದು ವರದಾನದಂತಿದೆ.

ಆರೋಗ್ಯಕ್ಕೆ ಸಂಬಂಧಿಸಿದಂತೆ ಲೋಳೆಸರದ ನಾನಾ ಬಗೆಯ ಉಪಯೋಗಗಳನ್ನು ಪಟ್ಟಿ ಮಾಡಿದ್ದು, ಇವು ನಿಮಗೆ ಖಂಡಿತವಾಗಿಯೂ ಕುತೂಹಲಕಾರಿಯಾಗಿರುತ್ತದೆ.

ಕಲೆರಹಿತ ತ್ವಚೆಗಾಗಿ

ಕಲೆರಹಿತ ತ್ವಚೆಗಾಗಿ

ಇದರ ಉಪಶಮನಕಾರಿ ಗುಣಲಕ್ಷಣದಿಂದಾಗಿ ಲೋಳೆಸರಅನ್ನು ತ್ವಚೆಯ ಗುಳ್ಳೆಗಳು ಮತ್ತು ಮೊಡವೆಗ ಇತ್ಯಾದಿಗಳ ಚಿಕಿತ್ಸೆಗೆ ಬಳಸುತ್ತಾರೆ.

ಮಹಿಳೆಯರು ಸದಾ ಕಾಲವೂ ಕಲೆಗಳಿಲ್ಲದ ತ್ವಚೆಗಾಗಿ ಇನ್ನಿಲ್ಲದ ಪರಿಹಾರಗಳ ಬೆನ್ನೇರಿ ಹೋಗುತ್ತಾರೆ. ಇಂಥವರಿಗೆ ಲೋಳೆಸರ ಒಂದು ಉತ್ತಮ ಸಾವಯವ ಉತ್ತರವಾಗಬಲ್ಲದು. ಒಂದು ಬೇಸರದ ಸಂಗತಿಯೆಂದರೆ, ಲೋಳೆಸರ ವು ಮೊಡವೆಗಳು ಮತ್ತು ಗುಳ್ಳೆಗಳನ್ನು ಗುಣಪದಿಸುವುದಿಲ್ಲ ಆದರೆ, ತ್ವಚೆಯ ಉರಿಯನ್ನು ಮತ್ತು ರಕ್ತವರ್ಣವನ್ನು ತಗ್ಗಿಸುತ್ತದೆ. ಎಷ್ಟೇ ಆದರೂ, ಹಾರ್ಮೋನುಗಳ ಅಸಮತೋಲನದಿಂದ ಉಂಟಾಗುವ ಮೊಡವೆಗಳಿಗೆ ತಜ್ಞರನ್ನು ಕಾಣುವುದು ಅಗತ್ಯವಾಗಿದೆ.

ಸುಟ್ಟ ಗಾಯಗಳಿಗೆ ಉತ್ತಮ ಔಷಧಿ

ಸುಟ್ಟ ಗಾಯಗಳಿಗೆ ಉತ್ತಮ ಔಷಧಿ

"ಲೋಳೆಸರ ವು ಸ್ವಾಭಾವಿಕವಾಗಿ ಒಂದು ತಂಪುಕಾರಕವಾಗಿದ್ದು, ಇದು ಸುಟ್ಟ ಗಾಯಗಳಿಗೆ ಅತ್ಯುತ್ತಮ ಔಷಧಿಯಾಗಿದೆ. ಇದು ತ್ವಚೆಯ ಅಂಗಾಂಶಗಳನ್ನು ಬಹು ಬೇಗನೆ ದುರಸ್ತಿಪಡಿಸುತ್ತದೆ".

ಈ ಚಮತ್ಕಾರೀ ಸಸ್ಯವು ಶೀತಲ ಪರಿಣಾಮವನ್ನು ಹೊಂದಿದ್ದು, ಅದರೊಂದಿಗೆ ಕೋಶಗಳ ಪುನರುತ್ಪತ್ತಿಯಲ್ಲಿಯೂ ಸಹಕಾರಿಯಾಗಿದೆ. ಈ ಕಾರಣದಿಂದಲೇ ಇದು ಘಾಸಿಗೊಂಡ ತ್ವಚೆಯ ಅಂಗಾಂಶಗಳನ್ನು ಪುನರ್ನಿರ್ಮಿಸುತ್ತದೆ.

ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ

ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ

"ಲೋಳೆಸರ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಲೇ ಇದನ್ನು ತ್ವಚೆಯ ಸೌರ ಕಲೆಗಳನ್ನು ಕಡಿಮೆ ಮಾಡಲು ಮತ್ತು ತ್ವಚೆಯ ಅಧಿಕ ಕಪ್ಪುತನವನ್ನು ಕಡಿಮೆ ಮಾಡಲು ಯಶಸ್ವಿಯಾಗಿ ಬಳಸಬಹುದು".

ಲೋಳೆಸರ ವು ತ್ವಚೆಯನ್ನು ತಂಪಾಗಿಸಲು ಶಕ್ತಿಯನ್ನು ಹೊಂದಿದೆ, ತ್ವಚೆಗೆ ಮರುಜೀವ ತುಂಬಿ ಅದನ್ನು ತೇವವಾಗಿರಿಸಬಲ್ಲದು

ಸ್ಥಿತಿಸ್ಥಾಪಕ ಗುಣ

ಸ್ಥಿತಿಸ್ಥಾಪಕ ಗುಣ

ಲೋಳೆಸರ ದ ರಸವು ಅಧಿಕ ಅಂಶದ ತೇವವನ್ನು ತನ್ನೊಳಗೆ ಹುದುಗಿಸಿಕೊoಡಿರುವುದರಿಂದ, ಇದನ್ನು ಚರ್ಮದ ಮೇಲೆ ಲೇಪಿಸಿಕೊಂಡಾಗ ಇದು ತ್ವಚೆಯನ್ನು ತೇವವಾಗಿಸುತ್ತದೆ ಮತ್ತು ಅದರ ಸ್ಥಿತಿಸ್ಥಾಪಕ ಗುಣವನ್ನು ವೃದ್ಧಿಯಾಗುವಂತೆ ಮಾಡುತ್ತದೆ.

ಲೋಳೆಸರ ವು ನಿಮ್ಮ ಪಾಲಿಗೆ ಒಂದು ಪರಿಪೂರ್ಣವಾದ moisturizer ಆಗಿರಬಹುದು ಮತ್ತು ನೀವು ಅದನ್ನು ನಿಮ್ಮ ಮನೆಯ ಹಿತ್ತಲಿನಲ್ಲಿಯೂ ಬೆಳೆಸಬಹುದು.

ತಾರುಣ್ಯ ಕಾಪಾಡಲು

ತಾರುಣ್ಯ ಕಾಪಾಡಲು

ಲೋಳೆಸರ ಸಸ್ಯದ ದ್ರವವು ತ್ವಚೆಯನ್ನು, ಏರುತ್ತಿರುವ ವಯಸ್ಸಿನ ಪರಿಣಾಮಗಳಾದ ಸುಕ್ಕುಗಟ್ಟುವಿಕೆ, ಒಣಗಾಗುವಿಕೆ ಮೊದಲಾದವುಗಳ ವಿರುದ್ಧ ರಕ್ಷಣೆಯನ್ನು ನೀಡುತ್ತದೆ.

ಲೋಳೆಸರ ಸಸ್ಯವನ್ನು ಪಡೆದುಕೊಳ್ಳುವುದರ ಒಂದಕ್ಕಿಂತಲೂ ಹೆಚ್ಚಿನ ಉಪಯೋಗಗಳನ್ನು ಅದು ಬಹುಬೇಗನೆ ಸಾಬೀತುಪಡಿಸುತ್ತದೆ. ತಾರುಣ್ಯಭರಿತ ತ್ವಚೆಯನ್ನು ಪಡೆಯಲು ಒಂದು ಪ್ರಾಕೃತಿಕ ಸಾಧನಕ್ಕಾಗಿ, ಈ ಸಸ್ಯದ ಬಳಕೆಯನ್ನು ಖಂಡಿತಾ ಪ್ರಯತ್ನಿಸಬಹುದು.

ಜೀರ್ಣಾಂಗವ್ಯೂಹವನ್ನು ತoಪುಗೊಳಿಸಲು

ಜೀರ್ಣಾಂಗವ್ಯೂಹವನ್ನು ತoಪುಗೊಳಿಸಲು

ಲೋಳೆಸರಯು ಪಿತ್ತ ಶಮನಕಾರೀ ಮೂಲಿಕೆಯ ರೂಪದ ಅತೀ ಮುಖ್ಯವಾದ ಚಿಕಿತ್ಸಾತ್ಮಕ ಪ್ರಯೋಜನವನ್ನು ಹೊಂದಿದೆ. ಇದು ಆಮ್ಲೀಯತೆ (acidity), ಉದರ ಬೇನೆ (gastritis) ಅನ್ನು ಕಡಿಮೆ ಮಾಡುತ್ತದೆ ಮತ್ತು ಕರುಳಿನ ಹುಣ್ಣುಗಳು ಮತ್ತು ಉರಿಯನ್ನು ಗುಣಪಡಿಸುತ್ತದೆ.

ಲೋಳೆಸರ ವು ತ್ವಚೆಯ ಉರಿಯನ್ನು ಶಮನಗೊಳಿಸುವoತೆಯೇ, ಶರೀರದ ಅಂತರ್ಯದ ಉರಿಯನ್ನೂ ಕೂಡ ತಮ್ಪಾಗಿಸಬಲ್ಲದು. ಇದಕ್ಕೆ ನಿಮ್ಮ ಜೀರ್ಣ ಪಥವನ್ನು (digestive tract) ಆಹ್ಲಾದಗೊಳಿಸುವುದು ಮಾತ್ರವಲ್ಲದೇ, ನೀವು ಭರ್ಜರಿಯಾದ ಹಬ್ಬದ ಊಟವನ್ನು ಉಂಡ ಬಳಿಕ ನಿಮ್ಮ ಜೀರ್ಣಾಂಗವ್ಯೂಹವನ್ನು ತoಪುಗೊಳಿಸಲು ಒಂದು ಮಹೋನ್ನತ ಮಾರ್ಗವಾಗಿದೆ.

ತ್ವಚೆಯ ತಾಜಾತನ ಕಾಪಾಡಲು

ತ್ವಚೆಯ ತಾಜಾತನ ಕಾಪಾಡಲು

ಇದು ಅನೇಕ ವಿಟಮಿನ್ಸ್ ಮತ್ತು ಅಮೈನೊ ಆಮ್ಲಗಳನ್ನು ಹೊಂದಿದ್ದು, ಈ ಗುಣಗಳು ಇದನ್ನೂoದು immuno - modulator ಆಗಿಸಿದೆ, ಚೇತೋಹಾರಕವನ್ನಾಗಿಸಿದೆ, ಮತ್ತು ಆಂಟಿಆಕ್ಸಿಡೆಂಟ್ ಅನ್ನಾಗಿಯೂ ಮಾಡಿದೆ.

ಇದರ ಸರಳ ಅರ್ಥವೇನೆoದರೆ, ಲೋಳೆಸರ ವು ಅವಶ್ಯಕತೆಗೆ ತಕ್ಕಂತೆ ರೋಗನಿರೋಧಕ ಶಕ್ತಿಯನ್ನು ಹೆಚಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ. ಲೋಳೆಸರ ದ ಚೇತೋಹಾರೀ, ಮರುಪೂರಕ (restorative) ಗುಣಲಕ್ಷಣಗಳ ಬಗ್ಗೆಯಂತೂ ಬಹಳಷ್ಟು ಹೇಳಲ್ಪಟ್ಟಿದೆ. ಲೋಳೆಸರವು ನಿಮ್ಮ ತ್ವಚೆಯನ್ನು ತಾಜಾವಾಗಿಸಿ, ಅದು ಕಣ್ಣು ಕೋರೈಸುವ ಕಾಂತಿಯನ್ನು ಹೊಂದುವಂತೆ ಮಾಡುತ್ತದೆ. ಆಂಟಿಆಕ್ಸಿಡೆಂಟ್ ಗಳು ಏನು ಮಾಡುತ್ತವೆ ಎಂಬುದಂತೂ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಲೋಳೆಸರ ವು ನಿಮ್ಮ ತ್ವಚೆಯು ತಾರುಣ್ಯಪೂರ್ಣವಾಗಿ ಕಾಣುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಕರುಳು ಬೇನೆ ಕಡಿಮೆ ಮಾಡುತ್ತದೆ

ಕರುಳು ಬೇನೆ ಕಡಿಮೆ ಮಾಡುತ್ತದೆ

ಇದು ಪ್ರಾಕೃತಿಕ ನಾರಿನಂಶವನ್ನು ಹೊಂದಿದ್ದು ಮಲಬದ್ಧತೆಯನ್ನು ಕಡಿಮೆ ಮಾಡಿ, ಜೀರ್ಣಾಂಗವ್ಯೂಹವನ್ನು ಶಕ್ತಿಯುತವನ್ನಾಗಿಸುತ್ತದೆ.

ಈ ಹಿಂದೆ ಸೂಚಿಸಿರುವಂತೆ, ಲೋಳೆಸರ ವು ನಿಮ್ಮ ಜೀರ್ಣಪಥಕ್ಕೆ (digestive tract) ಒಂದು ಮಹತ್ತರ ಪರಿಹಾರವಾಗಿದೆ. ಆದರೆ ವಿಷಯ ಇಷ್ಟಕ್ಕೇ ಮುಗಿಯುವುದಿಲ್ಲ. ಲೋಳೆಸರ ದಲ್ಲಿರುವ ನಾರಿನಂಶವು ನಿಮ್ಮ ಜೀರ್ಣ ಕ್ರಿಯೆಗೆ ಮತ್ತು ಮಲವಿಸರ್ಜನೆಗೆ ಮತ್ತಷ್ಟು ಪೂರಕವಾಗಬಲ್ಲದು. ಮಲಬದ್ಧತೆಯಾದಾಗ, ಲೋಳೆಸರವು ಉರಿಯುಕ್ತ ಕರುಳಿಗೆ (ಕರುಳು ಬೇನೆ) ಪರಿಹಾರವನ್ನು ತೋರಬಲ್ಲದು.

ಸೂಕ್ಷ್ಮಾಣು ಪ್ರತಿಬಂಧಕ

ಸೂಕ್ಷ್ಮಾಣು ಪ್ರತಿಬಂಧಕ

ಲೋಳೆಸರವು ಬ್ಯಾಕ್ಟೀರಿಯಾ, ವೈರಾಣುಗಳು, ಫಂಗೈಗಳು , ಮತ್ತು ಯೀಸ್ಟ್ ಗಳ ವಿರುದ್ಧ ಸೂಕ್ಷ್ಮಾಣು ಪ್ರತಿಬಂಧಕ (anti-microbial) ಪರಿಣಾಮಗಳನ್ನು ಹೊಂದಿದೆ.

ಲೋಳೆಸರವು ಶರೀರದ ಹೊರ ಮತ್ತು ಒಳಭಾಗಗಳೆರದರಲ್ಲಿಯೂ ನಾನಾ ತೆರನಾದ ಸೂಕ್ಷ್ಮಾಣುಗಳೊಂದಿಗೆ ಹೋರಾಡಬಲ್ಲದು. ಈ ಸಸ್ಯವನ್ನು ಅದರ ಮಹತ್ತರ ಗುಣಲಕ್ಷಣಗಳಿಗಾಗಿ ನಿಮ್ಮ ಜೊತೆ ಕೊಂಡೊಯ್ಯಬೇಕು ಮತ್ತು ಯಥಾರ್ಥವಾಗಿಯೇ, ನಿಮ್ಮ ಮನೆಯ ಸಸ್ಯಗಳ ಕುಟುಂಬ ವರ್ಗಕ್ಕೆ ಓರ್ವ ಹೊಸ ಸದಸ್ಯನನ್ನಾಗಿ ಸೇರಿಸಬೇಕು.

English summary

12 Important Health Benefits of Aloe Vera

Aloe Vera is a multi functional plant that has gained favour and acceptance as an excellent home remedy source in India and the world over.
X
Desktop Bottom Promotion