For Quick Alerts
ALLOW NOTIFICATIONS  
For Daily Alerts

ಹೈ ಬಿಪಿ ಇದ್ದರೆ, ಉಪ್ಪಿನ ಬದಲು ಈ ಆಹಾರ ತಿನ್ನಿ

By Super
|

ಉಪ್ಪಿಲ್ಲದ ಊಟ ರುಚಿಸುವುದೇ ಇಲ್ಲ. ಆದರೆ ಈ ಉಪ್ಪನ್ನು ಅಧಿಕ ತಿನ್ನುವ ಅಭ್ಯಾಸವಿದ್ದರೆ ರಕ್ತದೊತ್ತಡ ಹೆಚ್ಚಾಗುವುದು. ರಕ್ತದೊತ್ತಡ ಹೆಚ್ಚಿರುವ ಉಪ್ಪು ತುಂಬಾ ಕಮ್ಮಿಯಿರುವ ಊಟ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಆದರೆ ಉಪ್ಪಿನಲ್ಲಿರುವ ಸೋಡಿಯಂ ಅಂಶ ಆರೋಗ್ಯಕ್ಕೆ ಅವಶ್ಯಕ. ರಕ್ತದೊತ್ತಡ ಸಮಸ್ಯೆಯಿರುವವರಿಗೆ ಉಪ್ಪು ಹಾಕಿದ ಅಡುಗೆ ತಿಂದರೆ ರಕ್ತದೊತ್ತಡ ಹೆಚ್ಚುವುದು, ಸೋಡಿಯಂ ಕಮ್ಮಿಯಾದರೆ ತಲೆನೋವು, ತಲೆಸುತ್ತು, ದೇಹದ ತೂಕ ಹೆಚ್ಚಾಗುವುದು, ಸ್ನಾಯುಗಳು ಸಡಿಲವಾಗುವುದು ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಕೆಲವೊಂದು ಆಹಾರಗಳಲ್ಲೂ ಸೋಡಿಯಂ ಇವೆ. ಆದ್ದರಿಂದ ಬಿಪಿ ಇರುವವರು ಉಪ್ಪಿಗೆ ಪರ್ಯಾಯವಾಗಿ ಈ ಆಹಾರ ತೆಗೆದುಕೊಳ್ಳುವುದು ಒಳ್ಳೆಯದು.

ಚಕ್ಕೆ

ಚಕ್ಕೆ

ಚಕ್ಕೆಯನ್ನು ಅಡುಗೆಯಲ್ಲಿ ಬಳಸಿದರೆ ರಕ್ತದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡುತ್ತದೆ ಹಾಗೂ ಚಕ್ಕೆ ಹಾಕಿ, ಚಿಟಿಕೆಯಷ್ಟು ಉಪ್ಪು ಹಾಕಿ ತಯಾರಿಸಿದ ಅಡುಗೆ ರುಚಿಯಾಗಿ ಇರುತ್ತದೆ.

ಏಲಕ್ಕಿ

ಏಲಕ್ಕಿ

ಅಡುಗೆ ಮಾಡುವಾಗ ಅದಕ್ಕೆ ಏಲಕ್ಕಿ ಹಾಕಿದರೆ ಅಡುಗೆಯ ರುಚಿ ಹೆಚ್ಚುವುದು, ಇದು ಬಿಪಿ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

 ತುಳಸಿ

ತುಳಸಿ

ಅಡುಗೆಗೆ ಉಪ್ಪು ಹಾಕದೆ ತುಳಸಿ ಹಾಕಿ ಕೂಡ ತಯಾರಿಸಬಹುದು. ತುಳಸಿ ಹಾಕಿ ತಯಾರಿಸಿದ ಅಡುಗೆ ಅಷ್ಟೇನು ರುಚಿಯಾಗಿ ಇಲ್ಲದಿದ್ದರೂ ತಿನ್ನಬಹುದು ಹಾಗೂ ತುಳಸಿಯಲ್ಲಿ ಆರೋಗ್ಯಕರ ಗುಣ ಹೆಚ್ಚಿರುವುದರಿಂದ ಆರೋಗ್ಯ ವೃದ್ಧಿಸುವುದು.

ಮೆಣಸು

ಮೆಣಸು

ಸ್ವಲ್ಪ ಕರಿ ಮೆಣಸು ಮತ್ತು ಕೆಂಪು ಮೆಣಸು ಹಾಕಿ ತಯಾರಿಸುವ ಅಡುಗೆಗೆ ಉಪ್ಪಿನ ಅವಶ್ಯಕತೆ ಇಲ್ಲ. ತುಂಬಾ ರಕ್ತದೊತ್ತಡವಿರುವವರು ಉಪ್ಪನ್ನು ಹಾಕಿದ ಅಡುಗೆ ತಿನ್ನಲೇಬಾರದು.

ಪಲಾವ್ ಎಲೆ

ಪಲಾವ್ ಎಲೆ

ಪಲಾವ್ ಎಲೆಯನ್ನು ಕೂಡ ಉಪ್ಪಿಗೆ ಪರ್ಯಾಯವಾಗಿ ಬಳಸಬಹದು. ಇದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ.

ಕರಿ ಮೆಣಸು

ಕರಿ ಮೆಣಸು

ಕರಿ ಮೆಣಸಿನಲ್ಲಿ ಸೋಡಿಯಂ ಅಂಶವಿದ್ದು ಉಪ್ಪಿಗೆ ಪರ್ಯಾವಾಗಿ ಬಳಸಬಹುದು.

ಸೋಯಾ ಸಾಸ್

ಸೋಯಾ ಸಾಸ್

ಉಪ್ಪು ಹಾಕದೆ ಸೋಯಾ ಸಾಸ್ ಹಾಕಿ ತಯಾರಿಸಿದ ಅಡುಗೆ ಸಪ್ಪೆ ಅನಿಸುವುದಿಲ್ಲ. ಉಪ್ಪು ಹಾಕಿದ ಅಡುಗೆ ತಿನ್ನಬೇಡಿ ಎಂದು ವೈದ್ಯರು ಹೇಳಿದ್ದರೆ ಉಪ್ಪಿಗೆ ಪರ್ಯಾಯವಾಗಿ ಇದನ್ನು ಬಳಸಿ ನಾಲಗೆಯ ರುಚಿ ಹೆಚ್ಚಿಸಬಹುದು.

ಈರುಳ್ಳಿ ಪುಡಿ

ಈರುಳ್ಳಿ ಪುಡಿ

ಅಡುಗೆಗೆ ಈರುಳ್ಳಿ ಪುಡಿಯನ್ನು ಉಪ್ಪಿಗೆ ಬದಲಾಗಿ ಬಳಸಬಹುದು.

ನಿಂಬೆ ರಸ

ನಿಂಬೆ ರಸ

ಇಲ್ಲಿ ಹೇಳಿರುವ ಪದಾರ್ಥಗಳನ್ನು ಬಳಸಿ ಅದಕ್ಕೆ ಸ್ವಲ್ಪ ನಿಂಬೆ ರಸ ಹಿಂಡಿದರೆ ಅಡುಗೆ ರುಚಿಯಾಗಿರುತ್ತದೆ.

ಸೂರ್ಯಕಾಂತಿ ಬೀಜ

ಸೂರ್ಯಕಾಂತಿ ಬೀಜ

ಇದರಲ್ಲಿ ಸೋಡಿಯಂ ಅಧಿಕವಿದ್ದು ಇದನ್ನು ತಿನ್ನುವುದರಿಂದ ಅನೇಕ ಪೋಷಕಾಂಶಗಳು ದೊರೆಯುತ್ತವೆ. ಇದನ್ನು ತಿಂದರೆ ಸೋಡಿಯಂ ಕೊರತೆ ಉಂಟಾಗುವುದಿಲ್ಲ.

English summary

11 Herb And Spices As Salt Alternatives | Tips For Health | ಉಪ್ಪಿಗೆ ಪರ್ಯಾಯವಾಗಿ ಬಳಸಬಹುದಾದ ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Here are few salt alternatives or salt substitutes that can be used to prepare meals. These spices and herbs are low in sodium, and are equally healthy & tasty.
X
Desktop Bottom Promotion