For Quick Alerts
ALLOW NOTIFICATIONS  
For Daily Alerts

40 ನಂತರ ಮಹಿಳೆಯರಲ್ಲಿ ಕಾಡುತ್ತೆ ಖಿನ್ನತೆ-ಏಕೆ?

By Super
|
Why Depression In Women After 40
ಮನೆಯಲ್ಲಿ ನೀವು ಗಮನಿಸಿರಬಹುದು. ಅಮ್ಮ ಅಥವಾ ಹೆಂಡತಿ ಪ್ರಾಯ 40 ದಾಟಿದ ನಂತರ ಬೇಗನೆ ಚಿಕ್ಕ ವಿಷಯಕ್ಕೆ ಕೋಪ ಪಡುತ್ತಾರೆ. ಮಕ್ಕಳು ನನ್ನ ಸರಿಯಾಗಿ ನೋಡುತ್ತಿಲ್ಲ, ಗಂಡನಿಗೆ ನನ್ನ ಮೇಲೆ ಪ್ರೀತಿಯಿಲ್ಲ ಅಂತ ಅಪವಾದ ಹೇಳುತ್ತಾ ತಾವೂ ತುಂಬಾ ಖಿನ್ನತೆ ಹೊಂದುತ್ತಾರೆ. ಈ ರೀತಿಯ ಸಮಸ್ಯೆ ಹೆಚ್ಚಿನ ಮಹಿಳೆಯರಲ್ಲಿ ಕಂಡು ಬರುತ್ತದೆ. ಏಕೆ ಅವರು ಈ ರೀತಿ ಖಿನ್ನತೆಗೆ ಒಳಗಾಗುತ್ತಾರೆ ಇದಕ್ಕೆ ಪರಿಹಾರ ಏನು ಎಂಬ ವಿಚಾರದ ಬಗ್ಗೆ ನೋಡೋಣ ಬನ್ನಿ.

1. ಮೆನೊಪಸ್: ಮೆನೊಪಸ್ ಅಂದರೆ ಈ ಸಮಯದಲ್ಲಿ ಮಹಿಳೆಯರಲ್ಲಿ ಜೀವ ಉತ್ಪತ್ತಿಯ ಸಾಮರ್ಥ್ಯ (productive ability) ಕಡಿಮೆಯಾಗುವುದು. ಅಂದರೆ ಮುಟ್ಟು ನಿಲ್ಲುವ ಹಂತವಾಗಿರುತ್ತದೆ. ಈ ಸಮಯದಲ್ಲಿ ದೇಹದಲ್ಲಿ ಅನೇಕ ಹಾರ್ಮೋನ್‌ಗಳ ವ್ಯತ್ಯಾಸ ಉಂಟಾಗುತ್ತದೆ. ಹಾಟ್ ಫ್ಲಾಷ್‌ನಂತಹ ಸಮಸ್ಯೆ ಉಂಟಾಗುವುದು. ಈ ಸಮಯದಲ್ಲಿ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆಗೆ ಗಮನ ಕೊಡದಿದ್ದರೆ ಖಿನ್ನತೆ ಹೆಚ್ಚಾಗುವುದು.

2. ಜವಬ್ದಾರಿ: ವಯಸ್ಸು 40 ದಾಟಿದ ಮೇಲೆ ಮಕ್ಕಳ ಜೀವನದ ಬಗ್ಗೆ ಅನೇಕ ಜವಬ್ದಾರಿಯಿರುತ್ತದೆ. ಇದರಿಂದ ತುಂಬಾ ಮಾನಸಿಕ ಒತ್ತಡ ಅನುಭವಿಸುತ್ತಿರುತ್ತಾರೆ.

3. ಮಕ್ಕಳು ಮನೆ ಬಿಟ್ಟು ದೂರ ಹೋಗುತ್ತಾರೆ:
ಮಗಳು ಇದ್ದರೆ ಮದುವೆ ಮಾಡಿಸಿದ ಮೇಲೆ ದೂರ ಹೋಗುತ್ತಾಳೆ, ಮಗ ಓದು, ಉದ್ಯೋಗ ಅಂತ ಮನೆಯಿಂದ ದೂರ ಹೋಗುವ ಪರಿಸ್ಥಿತಿ ಉಂಟಾಗಬಹುದು. ಈ ಸಮಯದಲ್ಲಿ ಹೆಚ್ಚಿನ ಮಹಿಳೆಯರು ಮಾನಸಿಕ ಒತ್ತಡ ಅನುಭವಿಸುತ್ತಾರೆ.

4. ಭಯ: ಮಕ್ಕಳು ತಂದೆ-ತಾಯಿಯನ್ನು ಬಿಟ್ಟು ದೂರ ಹೋಗಿಬಿಡುವುದು, ಪೋಷಕರ ಹಿತದ ಬಗ್ಗೆ ಯೋಚಿಸದಿರುವುದು ಇಂತಹ ಸುತ್ತಮುತ್ತಲಿನ ಘಟನೆಗಳನ್ನು ನೋಡಿದಾಗ ನಮ್ಮ ಮಕ್ಕಳು ನಮ್ಮನ್ನು ಹೀಗೆ ಮಾಡಬಹುದೇ ಎಂಬ ಭಯ ಉಂಟಾಗುವುದು.

5. ಸೌಂದರ್ಯ: ಮುಂಚಿನ ಚೆಲುವು ಕಮ್ಮಿಯಾಗುತ್ತದೆ, ಇದನ್ನು ಒಪ್ಪಿಕೊಳ್ಳಲು ಅನೇಕ ಮಹಿಳೆಯರು ತಯಾರಿರುವುದಿಲ್ಲ. ಇದು ಕೂಡ ಮಾನಸಿಕ ಖಿನ್ನತೆಯನ್ನು ಉಂಟು ಮಾಡುತ್ತದೆ.

ಪರಿಹಾರ: ಈ ಸಮಯದಲ್ಲಿ ಮನೆಯವರು ಅಂದರೆ ಗಂಡ ಮತ್ತು ಮಕ್ಕಳು ಅವರನ್ನು ಪ್ರಿತಿಯಿಂದ ನೋಡಿಕೊಳ್ಳಬೇಕು. ಯಾವತ್ತಿಗೂ ಅವರನ್ನು ನೋಡಿಕೊಳ್ಳುತ್ತೇವೆ ಎಂಬ ಭರವಸೆಯನ್ನು ಮಕ್ಕಳು ತುಂಬಬೇಕು.ಈ ರೀತಿ ಮಾಡಿದರೆ ಮಾನಸಿಕ ಖಿನ್ನತೆ ದೂರವಾಗುವುದು.

English summary

Why Depression In Women After 40 | Tips For Women Health | 40ರ ನಂತರ ಮಹಿಳೆಯರಿಗೆ ಖಿನ್ನತೆ ಏಕೆ? | ಮಹಿಳೆಯರ ಆರೋಗ್ಯಕ್ಕಾಗಿ ಕೆಲ ಸಲಹೆಗಳು

Most of the women will go for depression stage due many reason. during this time they need love and help from family members inorder to get rid from that. Here is a reason about why women go to depression after 40. Take a look.
X
Desktop Bottom Promotion