For Quick Alerts
ALLOW NOTIFICATIONS  
For Daily Alerts

ದೇಹದ ತೂಕ ಹತೋಟಿಯಲ್ಲಿಡಲು ಬೇಕು ನಿದ್ದೆ

|
Sleep Well To Get Proper Weight
ಆರೋಗ್ಯವಾಗಿರಲು ಆಹಾರದಷ್ಟೇ ನಿದ್ದೆ ಕೂಡ ಮುಖ್ಯ. ನಿದ್ದೆ ಅತೀ ಕಡಿಮೆ ಮಾಡಿದರೂ ಕಷ್ಟ, ತುಂಬಾ ನಿದ್ದೆ ಮಾಡಿದರೂ ಕಷ್ಟ. ನಿದ್ದೆ ಸರಿಯಾಗಿ ಮಾಡದಿದ್ದರೆ ಅದು ದೇಹದ ಹಾರ್ಮೋನ್ ನಲ್ಲಿ ವ್ಯತ್ಯಾಸ ಉಂಟಾಗುವುದರಿಂದ ದೇಹದ ತೂಕದಲ್ಲಿ ವ್ಯತ್ಯಾಸ ಕಂಡು ಬರುತ್ತದೆ ಎಂದು ಚಿಕಾಗೊದಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

ನಿದ್ದೆ ಮತ್ತು ಆರೋಗ್ಯ:

* ನಿದ್ದೆ ಮಾಡಿದಾಗ ದೇಹದಲ್ಲಿ ghrelin ಹಾರ್ಮೋನ್ ನ ಉತ್ಪತ್ತಿ ಹೆಚ್ಚಾಗುತ್ತದೆ. ಈ ಹಾರ್ಮೋನ್ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಆದರೆ ಅತೀ ಕಡಿಮೆ ನಿದ್ದೆ ಮಾಡಿದರೆ ದೇಹದಲ್ಲಿ ಶಕ್ತಿ ಕುಂದುವುದು, ಅತೀ ಹೆಚ್ಚು ನಿದ್ದೆ ಮಾಡಿದರೂ ಕೂಡ ಅದರಿಂದ ಅಡ್ಡ ಪರಿಣಾಮ ಉಂಟಾಗುತ್ತದೆ. ಹಸಿವು ನಿಯಂತ್ರಣದಲ್ಲಿ ಇರಲು ದಿನದಲ್ಲಿ 6 ಗಂಟೆ ನಿದ್ದೆ ಅವಶ್ಯಕ.

* ನಿದ್ದೆ ಜೊತೆ ಆಹಾರಕ್ರಮ ಕೂಡ ಸರಿಯಾಗಿದ್ದರೆ ಮಾತ್ರ ಉತ್ತಮವಾದ ಆರೋಗ್ಯ ಪಡೆಯಲು ಸಾಧ್ಯ. ಇಲ್ಲದಿದ್ದರೆ ದೇಹದ ತೂಕ ಹೆಚ್ಚಾಗುವುದು ಅಥವಾ ತುಂಬಾ ತೆಳ್ಳಗಾಗಿ ದೇಹದಲ್ಲಿ ನಿಶ್ಯಕ್ತಿ ಉಂಟಾಗುವುದು.

* ದಿನದಲ್ಲಿ 6-8 ಗಂಟೆ ನಿದ್ದೆ ಮಾಡುವುದರಿಂದ ದೇಹದಲ್ಲಿ ಕೊಬ್ಬಿನಂಶ ಸಂಗ್ರಹವಾಗುವುದು ತಡೆಯುತ್ತದೆ. ತುಂಬಾ ಹೊತ್ತು ನಿದ್ದೆ ಮಾಡಿದರೆ ದೇಹದಲ್ಲಿ ಬೊಜ್ಜು ಹೆಚ್ಚಾಗುವುದು.

* ಕಡಿಮೆ ನಿದ್ದೆ ಮಾಡಿದರೆ ದೇಹದಲ್ಲಿ ಗ್ಲೂಕೋಸ್ ಪ್ರಮಾಣದಲ್ಲಿ ವ್ಯತ್ಯಾಸ ಉಂಟಾಗಿ ಡಯಾಬಿಟಿಸ್ ಅಥವಾ ಸಕ್ಕರೆ ಕಾಯಿಲೆಯಂತಹ ತೊಂದರೆ ಉಂಟಾಗುವುದು.

* ನಿದ್ದೆ ಕಮ್ಮಿಯಾದರೆ ಕಾಣಿಸಿಕೊಳ್ಳುವ ಮತ್ತೊಂದು ಸಮಸ್ಯೆ ಅಂದರೆ ಖಿನ್ನತೆ. ಖಿನ್ನತೆ ಕಾಣಿಸಿಕೊಂಡರೆ ಮನಸಿಕ ಮತ್ತು ದೈಹಿಕ ಆರೋಗ್ಯ ಸಂಪೂರ್ಣ ಹದಗೆಡುತ್ತದೆ.

* ನಿದ್ದೆ ಸರಿಯಾಗಿ ಮಾಡದಿದ್ದರೆ ಮನಸಿಕ ಒತ್ತಡ ಹೆಚ್ಚಾಗಿ ಮನಸ್ಸಿನ ನೆಮ್ಮದಿ ಕಳೆದುಕೊಳ್ಳುವುದು.

* ಕಡಿಮೆ ನಿದ್ದೆ ಮಾಡಿದರೆ ಜ್ಞಾಪಕ ಶಕ್ತಿ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಅಲ್ಲದೆ ಮೈಕೈ ನೋವು, ನಿಶ್ಯಕ್ತಿ ಉಂಟಾಗುವುದು.

* ಮಿತಿ ಮೀರಿ ನಿದ್ದೆ ಮಾಡಿದರೆ ಒಬೆಸಿಟಿ ಮತ್ತು ತಲೆನೋವು, ಆಲಸ್ಯ ಮುಂತಾದ ತೊಂದರೆಗಳು ಉಂಟಾಗುತ್ತದೆ.
ಆದ್ದರಿಂದ ಪ್ರತಿದಿನ ಕನಿಷ್ಠ 6 ಗಂಟೆ ಗರಿಷ್ಠ 8 ಗಂಟೆ ಕಾಲ ನಿದ್ದೆ ಮಾಡಬೇಕು. ನಿದ್ರಾ ಹೀನತೆ ಸಮಸ್ಯೆ ಇದ್ದರೆ ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಅದರ ಬದಲು ಯೋಗ, ಪ್ರಾಣಾಯಾಮ, ವ್ಯಾಯಾಮ ಸಂಗೀತ ಕೇಳುವುದು ಮಾಡಿದರೆ ಮಾಸಿಕ ಒತ್ತಡ, ಖಿನ್ನತೆ ಕಡಿಮೆಯಾಗಿ ನಿದ್ದೆ ಸರಿಯಾಗಿ ಮಾಡಲು ಸಹಕಾರಿಯಾಗುತ್ತದೆ.

* ದೇಹಕ್ಕೆ ಮಸಾಜ್ ಮಾಡುವುದರಿಂದ ಕೂಡ ನಿದ್ರಾ ಹೀನತೆ ಸಮಸ್ಯೆ ಹೋಗಲಾಡಿಸಬಹುದು.

ದೇಹದ ತೂಕವನ್ನು ಸಮತೋಲದಲ್ಲಿಡುವಲ್ಲಿ ಈ ಮೇಲಿನ ಅಂಶಗಳು ಪ್ರಮುಖವಾಗಿದ್ದು ನಿದ್ದೆ ಸರಿಯಾಗಿ ಮಾಡುವುದರಿಂದ ಗಟ್ಟಿಮುಟ್ಟಾದ ಆರೋಗ್ಯ ಮತ್ತು ಮೈಕಟ್ಟು ಪಡೆಯಬಹುದು.

English summary

Sleep Well To Get Proper Weight | Tips For Health | ಸಮತೂಕಕ್ಕೆ ಬೇಕು ಸರಿಯಾದ ನಿದ್ದೆ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Lack of sleep in turn leads to depression, diabetes, heart diseases etc. On the other hand, a good night's sleep might help you lose weight and stay in fit.
X
Desktop Bottom Promotion