For Quick Alerts
ALLOW NOTIFICATIONS  
For Daily Alerts

ಪ್ರತಿದಿನ ಎಷ್ಟು ಪ್ರಮಾಣದ ಪ್ರೊಟೀನ್ ಅವಶ್ಯಕ?

|
Milk And Milk Products
ಹಾಲಿನಲ್ಲಿ ಮತ್ತು ಹಾಲಿನ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಅಂಶ ಅಧಿಕವಿದ್ದು ಒಂದು ಕಪ್ ಹಾಲು ಕುಡಿದರೆ 8 ಗ್ರಾಂ ಪ್ರೊಟೀನ್, ಚೀಸ್ ನಲ್ಲಿ 8-10 ಗ್ರಾಂ ಪ್ರೊಟೀನ, ಒಂದು ಕಪ್ ಪನ್ನೀರ್ ನಲ್ಲಿ 30 ಗ್ರಾಂ ಪ್ರೊಟೀನ್, ಮೊಸರಿನಲ್ಲಿ 8-12 ಗ್ರಾಂ ಪ್ರೊಟೀನ್ ಇದೆ. ನಮ್ಮ ದೇಹಕ್ಕೆ ಪ್ರೊಟೀನ್ ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಅನ್ನುವುದು ನಮ್ಮ ವಯಸ್ಸು ಮತ್ತು ದೇಹದ ಎತ್ತರ ಮತ್ತು ತೂಕವನ್ನು ಅವಲಂಭಿಸಿದೆ.

150 lbs ಅಂದರೆ 68 ಕೆಜಿಯಿರುವ ಒಬ್ಬ ಮನುಷ್ಯನಿಗೆ 55 ಗ್ರಾಂ ಪ್ರೊಟೀನ್ ಅವಶ್ಯಕ.ಇದಕ್ಕಿಂತ ಕಡಿಮೆ ತೂಕವಿರುವವರು ಕಡಿಮೆ ಪ್ರಮಾಣದಲ್ಲಿ ಪ್ರೊಟೀನ್ ತೆಗೆದುಕೊಳ್ಳಬೇಕು. ಸುಮಾರು 90 ಕೆಜಿ ತೂಕವಿರುವ ವ್ಯಕ್ತಿಗೆ 74 ಗ್ರಾ ಪ್ರೊಟೀನ್ ಅವಶ್ಯಕ.

ಪ್ರೊಟೀನ್ ಅಂಶ ಬೆಳೆಯುವ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಪ್ರೊಟೀನ್ ಇರುವ ಆಹಾರವನ್ನು ಅವಶ್ಯಕವಾಗಿ ತಿನ್ನಬೇಕು. ಪ್ರೊಟೀನ್ ಕೊರತೆಯಿಂದ ಮೂಳೆ ಸವೆತ, ನಿಶ್ಯಕ್ತಿ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಮಕ್ಕಳಿಗೆ ದಿನದಲ್ಲಿ ತೆಳುವಾದ ಹಾಲು 2 ಗ್ಲಾಸ್ ಕುಡಿಯಬಹುದು, ದೊಡ್ಡವರು ಗಟ್ಟಿ ಹಾಲು 2 ಗ್ಲಾಸ್ ಕುಡಿಯಬಹುದು, ವಯಸ್ಸಾದವರು ದಿನದಲ್ಲಿ ಒಂದು ಲೋಟ ಹಾಲು ಮಾತ್ರ ಕುಡಿಯಬೇಕು, ಇಲ್ಲದಿದ್ದರೆ ಅಜೀರ್ಣ ಸಮಸ್ಯೆ ಉಂಟಾಗುವುದು.

English summary

Milk And Milk Products | Tips For Health | ಹಾಲು ಮತ್ತು ಹಾಲಿನ ಉತ್ಪನ್ನಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Milk and all other milk products are all protein rich vegetarian foods. Each cup of milk has 8 grams of protein, cheese has 6-10 grams of protein, paneer has 30 grams and yoghurt has 8-12 grams of protein.
X
Desktop Bottom Promotion