For Quick Alerts
ALLOW NOTIFICATIONS  
For Daily Alerts

ಮಲಬದ್ಧತೆ ಸಮಸ್ಯೆಗೆ ಗುಡ್ ಬೈ ಹೇಳಲು ಸೂಪರ್ ಟಿಪ್ಸ್

|

ಮಲಬದ್ಧತೆ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ದೇಹದ್ಲಲಿ ಸಾಕಷ್ಟು ನೀರಿನ ಪ್ರಮಾಣ ಇಲ್ಲದಿದ್ದರೆ, ಜೀರ್ಣಕ್ರಿಯೆಯಲ್ಲಿ ತೊಂದರೆ, ಅನಾರೋಗ್ಯಕರ ಡಯಟ್, ದೈಹಿಕ ವ್ಯಾಯಾಮ ಇಲ್ಲದಿರುವುದು ಈ ಎಲ್ಲಾ ಕಾರಣಗಳಿಂದ ಮಲಬದ್ಧತೆ ಉಂಟಾಗುತ್ತದೆ.

ಪೋಷಕಾಂಶವಿರುವ ಆಹಾರಗಳನ್ನು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಬಹುದು. ಮಲಬದ್ಧತೆ ಕಾಣಿಸಿಕೊಂಡರೆ ಮಾತ್ರೆ ಅಥವಾ ಚೂರ್ಣ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಅದರ ಬದಲು ಈ ಕೆಳಗಿನಂತೆ ಮಾಡಿದರೆ ಸಾಕು ಮಲಬದ್ಧತೆ ಸಮಸ್ಯೆಯಿಂದ ಗುಣಮುಖವಾಗಬಹುದು:

How To Get Regular Bowel Movement?

ಟಿಪ್ಸ್:
ಮಲಬದ್ಧತೆಗೆ ಆಹಾರಕ್ರಮ: ನಾರಿನಂಶವಿರುವ ಪದಾರ್ಥಗಳನ್ನು ಹೆಚ್ಚಾಗಿ ತಿನ್ನಿ. ಬಾಳೆ ಹಣ್ಣು, ಸೊಪ್ಪು, ಹಾಗಲಕಾಯಿ, ಟೊಮೆಟೊ, ಈರುಳ್ಳಿ ಇವುಗಳಲ್ಲಿ ನೀರಿನಂಶ ಅಧಿಕವಿರುತ್ತದೆ. ಪ್ರತಿದಿನ ಒಂದು ಬಾಳೆಹಣ್ಣು ತಿನ್ನಿ. ಪಪ್ಪಾಯಿ, ಕಲ್ಲಂಗಡಿ, ದ್ರಾಕ್ಷಿ ಈ ರೀತಿಯ ಹಣ್ಣುಗಳನ್ನು ತಿನ್ನಬೇಕು. ಇದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುವುದು.

ಸಿಹಿ ಕಡಿಮೆ ಮಾಡಬೇಕು: ಸಿಹಿ ಇರುವ ಪದಾರ್ಥಗಳನ್ನು ತಿಂದರೆ ಮಲಬದ್ಧತೆ ಕಡಿಮೆಯಾಗುವುದಿಲ್ಲ. ಇದರಲ್ಲಿ ನಾರಿನಂಶ ಕಡಿಮೆ ಇರುವುದರಿಂದ ಜೀರ್ಣಕ್ರಿಯೆ ನಿಧಾನಕ್ಕೆ ಮಾಡುವಂತೆ ಮಾಡುತ್ತದೆ.

ಅಧಿಕ ನೀರು ಕುಡಿಯಬೇಕು:
ಸಾಕಷ್ಟು ನೀರು ಕುಡಿಯಬೇಕು. ಬರೀ ನೀರು ಕುಡಿಯಲು ಬೇಜಾರಾದರೆ ಹಣ್ಣುಗಳಿಂದ ಜ್ಯೂಸ್ ಮಾಡಿ ಕುಡಿಯಿರಿ. ನೀರು ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಲು ತುಂಬಾ ಸಹಾಯಕಾರಿ.

ಬೆಳಗ್ಗೆ ಬಿಸಿಯಾದ ನಿಂಬೆ ಜ್ಯೂಸ್: ಹದ ಬಿಸಿ ನೀರಿಗೆ ನಿಂಬೆರಸ ಹಿಂಡಿ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಬಹುದು.

ಅಧಿಕ ಕೊಬ್ಬಿನಂಶವಿರುವ ಆಹಾರ: ಪಿಜ್ಜಾ, ಬರ್ಗರ್, ಫ್ರೆಂಚ್ ಫ್ರೈ ಈ ರೀತಿಯ ಆಹಾರಗಳನ್ನು ತಿಂದರೆ ಮಲಬದ್ಧತೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು. ಅಧಿಕ ಕೊಬ್ಬಿನಂಶವಿರುವ ಆಹಾರವನ್ನು ತಿನ್ನಬಾರದು. ಹೊರಗಡೆ ತಿನ್ನುವ ಬದಲು ಮನೆ ಊಟ ಮಾಡಬೇಕು.

ವ್ಯಾಯಾಮ: ಪ್ರತಿದಿನ ಅರ್ಧಗಂಟೆ ವ್ಯಾಯಾಮ ಮಾಡಬೇಕು.

ಈ ಮೇಲೆ ಹೇಳಿದಂತೆ ನೀವು ಪಾಲಿಸಿದರೆ ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಮಲಬದ್ಧತೆ ಸಮಸ್ಯೆ ಗುಣ ಪಡಿಸದಿದ್ದರೆ ಹೊಟ್ಟೆ ಉಬ್ಬುವುದು, ಮೂಲವ್ಯಾಧಿ ಈ ರೀತಿಯ ತೊಂದರೆಗಳು ಕಂಡುಬರುವುದು. ಆದ್ದರಿಂದ ಮಲಬದ್ಧತೆಯನ್ನು ಪ್ರಾರಂಭದಲ್ಲಿಯೇ ಗುಣಪಡಿಸಿ.

English summary

How To Get Regular Bowel Movement? | Tips For Health Movements | ಮಲಬದ್ಧತೆ ಸಮಸ್ಯೆಯನ್ನು ಗುಣ ಪಡಿಸುವುದು ಹೇಗೆ? | ಆರೋಗ್ಯಕ್ಕಾಗಿ ಕೆಲ ಸಲಹೆಗಳು

You can cure constipation and improve your bowel movements by having nutritious foods, drinking lots of water and following a healthy lifestyle. Do you often suffer from improper bowel movements? Stop taking pills and churans. You have to eat healthy so to cure constipation naturally.
X
Desktop Bottom Promotion