For Quick Alerts
ALLOW NOTIFICATIONS  
For Daily Alerts

ಈ ಹಣ್ಣುಗಳ ಸಿಪ್ಪೆ ಬಿಸಾಡಿದರೆ ಆರೋಗ್ಯಕ್ಕೆ ನಷ್ಟ!

|

ಆರೋಗ್ಯಕರ ಆಹಾರಕ್ರಮವೆಂದರೆ ಅದರಲ್ಲಿ ಹಣ್ಣುಗಳು ಇರಬೇಕು. ಕನಿಷ್ಠವೆಂದರೂ ಒಂದು ಬಗೆಯ ಹಣ್ಣಾದರೂ ತಿನ್ನಬೇಕು. ಆದರೆ ಈ ಹಣ್ಣುಗಳನ್ನು ತಿನ್ನುವಾಗ ಹೆಚ್ಚಿನ ಹಣ್ಣುಗಳನ್ನು ನಾವು ಸಿಪ್ಪೆ ತೆಗೆದು ತಿನ್ನುತ್ತೇವೆ. ಕೆಲ ಹಣ್ಣುಗಳಲ್ಲಿ ತಿರುಳಿನಲ್ಲಿ ಇರುವುದಕ್ಕಿಂತ ಅದರ ಸಿಪ್ಪೆಯಲ್ಲಿ ಅಧಿಕ ಪೋಷಕಾಂಶವಿರುತ್ತದೆ. ಅದರಲ್ಲೂ ಈ ಕೆಳಗಿನ ಹಣ್ಣುಗಳನ್ನು ಹೆಚ್ಚಿನವರು ಸಿಪ್ಪೆ ತೆಗೆದು ತಿನ್ನುತ್ತಾರೆ, ಅದರ ಬದಲು ಸಿಪ್ಪೆ ಸಹಿತ ತಿಂದರೆ ಹೆಚ್ಚಿನ ಪೋಷಕಾಂಶ ದೇಹಕ್ಕೆ ದೊರೆಯುತ್ತದೆ.

Healthy Fruit Peels To Eat

ಮಾವಿನ ಹಣ್ಣಿನ ಸಿಪ್ಪೆ: ಹೆಚ್ಚಿನವರು ಇದರ ಸಿಪ್ಪೆಯನ್ನು ತಿನ್ನಲು ಇಷ್ಟಪಡುವುದಿಲ್ಲ, ಆದರೆ ಇದರ ಸಿಪ್ಪೆಯಲ್ಲಿ ಅಧಿಕ ಪೋಷಕಾಂಶವಿದ್ದು, ಡಯಾಬಿಟಿಸ್ ಸಮಸ್ಯೆಗೆ ತುಂಬಾ ಒಳ್ಳೆಯದು. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಮಾವಿನ ಹಣ್ಣಿನ ಸಿಪ್ಪೆ ಸಹಕಾರಿಯಾಗಿದೆ.

ಸೇಬಿನ ಸಿಪ್ಪೆ: ಹೆಚ್ಚಿನ ಜನರು ಸಿಪ್ಪೆ ಸಹಿತ ತಿನ್ನುತ್ತಾರೆ, ಆದರೆ ಕೆಲ ಜನರು ಸೇಬಿನ ಸಿಪ್ಪೆ ತೆಗೆದು ತಿನ್ನುತ್ತಾರೆ. ಅವರಿಗೆ ನಾವು ಹೇಳುವ ಹಿತವಾದ ಸಲಹೆ ಏನೆಂದರೆ ಸಿಪ್ಪೆ ಸಹಿತ ತಿನ್ನಿ. ಏಕೆಂದರೆ ಇದರಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಎ ಅಧಿಕವಿರುತ್ತದೆ. ಅಲ್ಲದೆ ಇದರಲ್ಲಿ ಅಧಿಕ ನಾರಿನಂಶವಿದೆ, ಇದು ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಸಹಕಾರಿಯಾಗಿದೆ. ಅಲ್ಲದೆ ಇದರಲ್ಲಿ antioxidants ಪ್ರಮಾಣ ಅಧಿಕವಾಗಿದ್ದು ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.

ನಿಂಬೆ ಹಣ್ಣಿನ ಸಿಪ್ಪೆ: ನಿಂಬೆರಸ ಹಿಂಡಿ ಸಿಪ್ಪೆಯನ್ನು ಬಿಸಾಡುತ್ತೇವೆ. ಆದರೆ ನಿಂಬೆ ಹಣ್ಣಿನ ಸಿಪ್ಪೆ ಆರೋಗ್ಯಕ್ಕೆ ಮತ್ತು ತ್ವಚೆಗೆ ಒಳ್ಳೆಯದು. ಇದು ದೇಹದಲ್ಲಿ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ, ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಿಂಬೆ ಹಣ್ಣಿನ ಸಿಪ್ಪೆ ತಿಂದರೆ ತ್ವಚೆ ಆರೋಗ್ಯ ಹೆಚ್ಚಾಗುವುದು.

ಕಿತ್ತಳೆ ಹಣ್ಣಿನ ಸಿಪ್ಪೆ: ಕೆಲವೇ ಕೆಲವು ಜನರಷ್ಟೇ ಕಿತ್ತಳೆ ಹಣ್ಣಿನ ಸಿಪ್ಪೆ ಬಿಸಾಡುವುದಿಲ್ಲ, ಆದರೆ ಕಿತ್ತಳೆ ಹಣ್ಣಿನ ಸಿಪ್ಪೆ, ಕಿತ್ತಳೆ ಹಣ್ಣಿನ ತೊಳೆಯಷ್ಟೇ ಪ್ರಯೋಜನಕಾರಿಯಾಗಿದೆ. ಇದರ ಸಿಪ್ಪೆಯನ್ನು ಗೊಜ್ಜು ಮಾಡಿ ಸೇವಿಸಬಹುದು. ಇದನ್ನು ತಿಂದರೆ ಜೀರ್ಣಕ್ರಿಯೆ ಕಡಿಮೆಯಾಗುವುದು, ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಬಿಡುವುದಿಲ್ಲ. ಇದನ್ನು ಒಣಗಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ತ್ವಚೆ ಕಾಂತಿ ಹೆಚ್ಚುವುದು. ಆದ್ದರಿಂದ ಇನ್ನು ಮುಂದೆ ಕಿತ್ತಳೆ ಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಯೋಚಿಸಿದರೆ ಒಳ್ಳೆಯದು.

ಕಿವಿ ಹಣ್ಣು: ಕಿವಿ ಹಣ್ಣು ಹಣ್ಣುಗಳಲ್ಲಿಯೇ ಅತ್ಯಂತ ಪೋಷಕಾಂಶಗಳನ್ನು ಹೊಂದಿರುವ ಹಣ್ಣಾಗಿದೆ. ಪ್ರತಿದಿನ ಒಂದು ಕಿವಿಹಣ್ಣು ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಣ್ಣನ್ನು ಸಿಪ್ಪೆ ಸಹಿತ ತಿನ್ನಿ, ಅಧಿಕ ಪ್ರಯೋಜನ ಪಡೆಯಿರಿ.

English summary

Healthy Fruit Peels To Eat | Tips For Health | ಈ ಹಣ್ಣುಗಳನ್ನು ಸಿಪ್ಪೆ ಸಹಿತ ತಿನ್ನಿ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Are you in the habit of eating the fruits and shedding away its peels? It's time to change this habit then. You should eat fruit peel along with the fruit as it will provide you with a lot of nutrition.
X
Desktop Bottom Promotion