For Quick Alerts
ALLOW NOTIFICATIONS  
For Daily Alerts

ಸೌಂದರ್ಯ ಮತ್ತು ಆರೋಗ್ಯಕ್ಕೆ ಕೀಲಿಕೈ ಆಲೀವ್

|
Health Benefit Of Olive Leaf Extract
ಆಲೀವ್ ಅಂದರೆ ಔಷಧಿಯ ಗಣಿ ಎನ್ನಬಹುದು. ಇದರ ಎಣ್ಣೆಯನ್ನು ಸೌಂದರ್ಯವರ್ಧಕವಾಗಿ, ತ್ವಚೆ ರಕ್ಷಣೆಗೆ ಮತ್ತು ಅಡುಗೆಯಲ್ಲಿ ಕೂಡ ಬಳಸಬಹುದು. ಅಡುಗೆಯಲ್ಲಿ ಬಳಸಿದರೆ ಆರೋಗ್ಯ ಹೆಚ್ಚುವುದು, ಇದನ್ನು ಮಸಾಜ್ ಗೆ ಬಳಸಿದರೆ ತ್ವಚೆ ಕಾಂತಿ ಹೆಚ್ಚುವುದು. ಇದರ ಎಣ್ಣೆಯಿಂದ ಮಾತ್ರವಲ್ಲ , ಆಲೀವ್ ಎಲೆಗಳನ್ನು ಬಳಸಿ ಅನೇಕ ರೀತಿಯ ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ.

ಮೆಡಿಟೇರಿಯನ್ ಪ್ರದೇಶದಲ್ಲಿ ಬೆಳೆಯುವ ಆಲೀವ್ ನಿಂದ ಎಲೆಗಳನ್ನು ಸಂಗ್ರಹಿಸಿ ಅದನ್ನು ಬಳಸಿ ಅನೇಕ ಕಾಯಿಲೆಗಳನ್ನು ಗುಣಪಡಿಸಲಾಗುವುದು. ಔಷಧಿಗಾಗಿ ಸಂಗ್ರಹಿಸಿದ ಎಲೆಗಳನ್ನು Olive leaf extract (OLE) ಎಂದು ಕರೆಯಲಾಗುತ್ತದೆ. ಇದನ್ನು ಫುಡ್ ಮಾರ್ಕೆಟ್ ಗಳಲ್ಲಿ , ಸೂಪರ್ ಮಾರ್ಕೆಟ್ ಗಳಲ್ಲಿ ಲಭ್ಯವಿದ್ದು ಈ ಎಲೆಗಳಿಂದ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.

ಸಲಹೆ: ಆಲೀವ್ ಎಲೆಗಳನ್ನು ನೀರಿನಲ್ಲಿ ಬೇಯಿಸಿ ಒಂದು ಗ್ಲಾಸ್ ನೀರಿನಂತೆ ದಿನದಲ್ಲಿ 5-6 ಬಾರಿ ಕುಡಿಯಬೇಕು. ಅಂದರೆ ಮಾತ್ರ ಪ್ರಯೋಜನ ಪಡೆಯಲು ಸಾಧ್ಯ.

ಆಲೀವ್ ಎಲೆಯ ಪ್ರಯೋಜನಗಳು:

ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್: ಆಲೀವ್ ಎಲೆಯಲ್ಲಿ anti-inflammatory ಗುಣವಿರುವುದರಿಂದ ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್, ಹೊಟ್ಟೆಉರಿ ಹಾಗೂ ಹೊಟ್ಟೆ ನೋವಿನಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.

ರೋಗನಿರೋಧಕ ಶಕ್ತಿ: ದೇಹವು ಕಾಯಿಲೆಗಳ ವಿರುದ್ಧ ಹೋರಾಡಲು ರೋಗ ನಿರೋಧಕ ಸಾಮರ್ಥ್ಯವನ್ನು ಹೊಂದಿರಬೇಕು. ಈ ಆಲೀವ್ ಲೀಫ್ ಎಕ್ಸಟ್ರಾಕ್ (Olive Leaf Extract ) ನಿಯಮಿತವಾಗಿ ಬಳಸುತ್ತಾ ಬಂದರೆ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು. ಇದು ರೋಗಕಾರಕ ಬ್ಯಾಕ್ಟೀರಿಯಾಗಳನ್ನು ತಯಾರಿಸಬಹುದು.

ಒಬೆಸಿಟಿ ಕಡಿಮೆ ಮಾಡುತ್ತೆ: ಆಲೀವ್ ಎಲೆಗಳನ್ನು ಹಾಕಿ ತಯಾರಿಸಿದ ಟೀ ಕುಡಿದರೆ ದೇಹದ ತೂಕ ಕಡಿಮೆಯಾಗುತ್ತದೆ. ಆದ್ದರಿಂದ ಒಬೆಸಿಟಿ ಮತ್ತು ಬೊಜ್ಜಿನ ಸಮಸ್ಯೆಯಿಂದ ಬಳಲುವವರು ಇದರಿಂದ ಟೀ ಮಾಡಿ ಕುಡಿದರೆ ಉತ್ತಮ ಪ್ರಯೋಜನ ಕಂಡುಕೊಳ್ಳಬಹುದು.

ಮೊಡವೆ: ಮೊಡವೆ ಹೆಚ್ಚಿನ ಯುವಕ, ಯುವತಿಯರಲ್ಲಿ ಕಂಡು ಬರುವ ದೊಡ್ಡ ತ್ವಚೆ ಸಮಸ್ಯೆಯಾಗಿದೆ. ಆಲೀವ್ ಎಣ್ಣೆ ಹಚ್ಚಿದರೆ ಮುಖದ ಕಾಂತಿ ಹೆಚ್ಚಾದರೆ ಅದರ ಎಲೆಯನ್ನು ಸೇವಿಸಿದರೆ ಮೊಡವೆ ಸಂಪೂರ್ಣವಾಗಿ ಗುಣಮುಖವಾಗುವುದು.

English summary

Health Benefit Of Olive Leaf Extract | Tips For Health | ಆಲೀವ್ ಲೀಫ್ ಎಕ್ಸಟ್ರಾಕ್ ಆರೋಗ್ಯಕರ ಪ್ರಯೋಜನಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

The extracts of Olive leafs, is a cure to many health problems. Olive leaf extract if taken with tea over a long period of time, can cure some chronic diseases.
Story first published: Wednesday, June 13, 2012, 17:41 [IST]
X
Desktop Bottom Promotion