For Quick Alerts
ALLOW NOTIFICATIONS  
For Daily Alerts

ಪಪ್ಪಾಯಿಯಲ್ಲಿದೆ 6 ಪ್ರಮುಖ ಆರೋಗ್ಯಕರ ಗುಣಗಳು

|
Health Benefit From Papaya
ಪಪ್ಪಾಯಿ ಹಣ್ಣನ್ನು ತಿಂದರೆ ದೇಹ ತುಂಬಾ ಉಷ್ಣ ಆಗುತ್ತದೆ, ಮಹಿಳೆಯರು ತಿಂದರೆ ಮುಟ್ಟಿನ ಸಮಯದಲ್ಲಿ ವಿಪರೀತ ರಕ್ತಸ್ರಾವವಾಗುತ್ತದೆ ಎಂದು ಪಪ್ಪಾಯಿ ಮೇಲೆ ತುಂಬಾ ಅಪವಾದಗಳಿವೆ. ಮತ್ತೆ ಕೆಲವರು ಇದನ್ನು ತಿನ್ನಲು ಬಳಸುವುದಕ್ಕಿಂತ ಫೇಶಿಯಲ್ ಮಾಡಲು ಮಾತ್ರ ಬಳಸುತ್ತಾರೆ. ಆದರೆ ಪಪ್ಪಾಯಿಯಲ್ಲಿ ಅನೇಕ ಆರೋಗ್ಯಕರ ಗುಣಗಳಿದ್ದು, ಇದನ್ನು ತಿನ್ನುವುದರಿಂದ ಈ ಕೆಳಗಿನ ಪ್ರಮುಖ ಪ್ರಯೋಜನ ಪಡೆಯಬಹುದಾಗಿದೆ.

1. ಪಪ್ಪಾಯಿಯಲ್ಲಿದೆ antioxidants: ಪಪ್ಪಾಯಿಯಲ್ಲಿ ಅಧಿಕ antioxidants ಮತ್ತು ಎ, ಸಿ, ಇ ವಿಟಮಿನ್ ಗಳು ಇದೆ. ಇದರಲ್ಲಿರುವ antioxidants ಕೊಲೆಸ್ಟ್ರಾಲ್ ಆಕ್ಸಿಡೈಸ್ ( oxidise) ಆಗುವುದನ್ನು ತಪ್ಪಿಸುತ್ತದೆ. ಕೊಲೆಸ್ಟ್ರಾಲ್ ಆಕ್ಸಿಡೈಸ್ ಆದರೆ ರಕ್ತಸಂಚಾರದಲ್ಲಿ ವ್ಯತ್ಯಾಸ ಉಂಟಾಗಿ ಹೃದಯಾಘಾತ ಆಗಬಹುದು. ಆದರೆ ಪಪ್ಪಾಯಿ ಈ ರೀತಿ ಆಗದಂತೆ ತಡೆಯಲು ಸಹಕಾರಿಯಾಗಿದೆ.

2. ನಾರಿನಂಶ: ಪಪ್ಪಾಯಿಯಲ್ಲಿ ನಾರಿನಂಶ ಅಧಿಕವಿದ್ದು, ಈ ನಾರಿನಂಶ ಕೊಲೆಸ್ಟ್ರಾಲ್ ಶೇಖರವಾಗದಂತೆ ತಡೆಯುವುದರ ಜೊತೆಗೆ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗದಂತೆ ತಡೆಯುತ್ತದೆ.

3. ಫಾಲಿಕ್ ಆಸಿಡ್: ಇದರಲ್ಲಿರುವ ಫಾಲಿಕ್ ಆಸಿಡ್ ಹೃದಯದ ಸ್ವಾಸ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ.

4. ಪಪಾಯಿನ್ ಪ್ರೊಟೀನ್: ಇದರಲ್ಲಿರುವ ಪಪಾಯಿನ್ ಪ್ರೊಟೀನ್ ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಕಾರಿಯಾಗಿದೆ. ಈ ಪ್ರೊಟೀನ್ ಸುಲಭವಾಗಿ ಜೀರ್ಣವಾಗದ ಆಹಾರವನ್ನು ಅಮೈನೊ ಆಸಿಡ್ ಆಗಿ ಪರಿವರ್ತನೆ ಗೊಳಿಸಿ ಮಲಬದ್ಧತೆ ಸಮಸ್ಯೆ ನಿವಾರಿಸುವಲ್ಲಿ ಸಹಕಾರಿಯಾಗಿದೆ.

5. ಪಪ್ಪಾಯಿಯಲ್ಲಿ ಇರುವ ಅಂಶ ಹೊಟ್ಟೆ ಉರಿ ಮತ್ತು ಎದೆ ಉರಿ ಕಡಿಮೆ ಮಾಡುವುದು. ಸಂದಿ ನೋವು ಮತ್ತು ಅಸ್ತಮಾ ಕಾಯಿಲೆ ಇರುವವರು ಇದನ್ನು ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

6. ಬೇಟಾ ಕೆರೊಟಿನ್: ಇದರಲ್ಲಿ ವಿಟಮಿನ್ ಸಿ ಮತ್ತು ಬೇಟಾ ಕೆರೊಟಿನ್ ಈ ಅಂಶಗಳು ಕ್ಯಾನ್ಸರ್ ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಈ ಎಲ್ಲಾ ಅಂಶಗಳು ಪಪ್ಪಾಯಿಯಲ್ಲಿದ್ದು ಪ್ರತಿದಿನ ಒಂದು ಪೀಸ್ ಪಪ್ಪಾಯಿ ತಿನ್ನುವುದು ಒಳ್ಳೆಯದು.

English summary

Health Benefit From Papaya | Tips For Health | ಪಪ್ಪಾಯಿಯ ಆರೋಗ್ಯಕರ ಗುಣಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Papaya is healthy also because it is rich in dietary fibres and vitamins. These dietary fibres and vitamin also help control the cholesterol levels in the blood.
X
Desktop Bottom Promotion