For Quick Alerts
ALLOW NOTIFICATIONS  
For Daily Alerts

ನಿದ್ದೆ ಮಾತ್ರೆಗಿಂತ ನಿದ್ದೆ ಮಾಡದಿರುವುದೆ ಲೇಸು!

|
Side Affect Of Sleeping Pills
ನಿದ್ದೆ ಸಮಸ್ಯೆ ಹೆಚ್ಚಾಗಿ ಮಧ್ಯ ವಯಸ್ಸು ದಾಟಿದವರಲ್ಲಿ ಹೆಚ್ಚಾಗಿ ಕಡುಬರುತ್ತದೆ. ಹಾಸಿಗೆಯಲ್ಲಿ ಮಲಗಿ ನಿದ್ದೆ ಬರದೆ ಹೊರಳಾಡುತ್ತಾರೆ. ಮಾನಸಿಕ ಮತ್ತು ಕೆಲಸದ ಒತ್ತಡದಿಂದ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಹೀಗೆ ನಿದ್ದೆ ಬರದಿದ್ದರೆ ಹಿಂಸೆ ಅನಿಸುವುದು. ಆದ್ದರಿಂದ ಜನ ನಿದ್ದೆ ಮಾತ್ರೆ ನುಂಗುವುದು ಅಭ್ಯಾಸ ಮಾಡಿಕೊಳ್ಳುತ್ತಾರೆ. ಆದರೆ ಈ ರೀತಿ ನಿದ್ದೆ ಮಾತ್ರೆ ನುಂಗುವುದು ನಿದ್ದೆ ಬರದಿರುವುದಕ್ಕಿಂತ ಅಪಾಯಕಾರಿ. ನಿದ್ದೆ ಮಾತ್ರೆಗಳಿಂದ ತಿನ್ನುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳ ಪಟ್ಟಿ ನೋಡಿ ಇಲ್ಲಿದೆ.

1. ನಿದ್ದೆ ಮಾತ್ರೆಗಳನ್ನು ನುಂಗುವ ಅಭ್ಯಾಸ ಬೆಳೆಸಿಕೊಂಡರೆ ನಂತರ ಅದನ್ನು ತಿನ್ನದಿದ್ದರೆ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಯೋಗ, ವ್ಯಾಯಾಮ ವಿಧಾನ ಪಾಲಿಸುವುದು ಒಳ್ಳೆಯದು.

2. ನಿದ್ದೆ ಮಾತ್ರೆ ತೆಗೆದುಕೊಂಡಾಗ ಉಸಿರಾಟ ಕ್ರಿಯೆ ನಿಧಾನವಾಗಿ ನಡೆಯುತ್ತದೆ. ಅಸ್ತಮಾ ಅಥವಾ ಉಸಿರಾಟದ ತೊಂದರೆ ಇರುವವರು ಈ ಮಾತ್ರೆ ಸೇವಿಸಬಾರದು.

3. ಈ ಮಾತ್ರೆ ದಿನವೂ ತೆಗೆದುಕೊಳ್ಳುವ ಅಭ್ಯಾಸ ಬೆಳೆಸಿಕೊಂಡರೆ ಜೀರ್ಣಕ್ರಿಯೆಯಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತದೆ.

4. ಕೆಲವು ಜನರು ಈ ಮಾತ್ರೆಯನ್ನು ಜ್ಯೂಸ್ ಅಥವಾ ಮದ್ಯದ ಜೊತೆಗೆ ತೆಗೆದುಕೊಳ್ಳುತ್ತಾರೆ. ಈ ರೀತಿ ಮಾಡಿದರೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ನಿದ್ದೆ ಮಾತ್ರೆ ತಿಂದರೆ ದ್ರಾಕ್ಷಿ ಹಣ್ಣು ತಿನ್ನಬಾರದು.

5. ನಿದ್ದೆ ಮಾತ್ರೆ ತಿಂದರೆ ಬೆಳಗ್ಗೆ ಎದ್ದಾಗ ಸುಸ್ತು, ಮಂಕು, ತಲೆನೋವು ಉಂಟಾಗುವುದು.

6. ನಿದ್ದೆ ಮಾತ್ರೆ ತಿನ್ನುವುದರಿಂದ ಲೈಂಗಿಕ ಶಕ್ತಿ ಕುಂದುವುದು, ಬೆಳಗ್ಗೆ ಕೈಕಾಲುಗಳಲ್ಲಿ ಸಣ್ಣ ನಡುಕ ಕಾಣಿಸಿಕೊಳ್ಳುವುದು.

7. ತಲೆ ಸುತ್ತುವ ಸಮಸ್ಯೆ ಉಂಟಾಗುತ್ತದೆ. ದೇಹದಲ್ಲಿ ನಿಶ್ಯಕ್ತಿ ಉಂಟಾಗುವುದು.

English summary

Side Affect Of Sleeping Pills | Tips For Health | ನಿದ್ದೆ ಮಾತ್ರೆಯಿಂದ ಉಂಟಾಗುವ ಅಡ್ಡ ಪರಿಣಾಮಗಳು | ಆರೋಗ್ಯಕ್ಕಾಗಿ ಕೆಲ ಸಲಹೆ

Sleeping pills can help induce sleep in the short term but have harmful effects on the body. What happens when you take sleeping pills? Find out...
Story first published: Saturday, March 17, 2012, 11:50 [IST]
X
Desktop Bottom Promotion