For Quick Alerts
ALLOW NOTIFICATIONS  
For Daily Alerts

ಮುಟ್ಟು ನಿಲ್ಲುವ ಸಮಯದಲ್ಲಿ ಹಾಟ್ ಫ್ಲಾಷ್ ಸಮಸ್ಯೆ

|
Hot flashes in women
ಮಹಿಳೆಯರಲ್ಲಿ ಕ್ಯಾಲ್ಸಿಯಂ ಕೊರತೆ ಜೊತೆಗೆ ಕಾಣಿಸಿಕೊಳ್ಳುವ ಮತ್ತೊಂದು ಸಮಸ್ಯೆ ಹಾಟ್ ಫ್ಲಾಷ್. ದೇಹದಲ್ಲಿ ಈಸ್ಟ್ರೋಜನ್ ಪ್ರಮಾಣ ಕಡಿಮೆಯಾದಾಗ ಈ ರೀತಿ ಉಂಟಾಗುತ್ತದೆ. ವಯಸ್ಸು ಹೆಚ್ಚಾಗುತ್ತಿದ್ದ ಹಾಗೆ, ಮುಟ್ಟು ನಿಲ್ಲುವ ಸಮಯದಲ್ಲಿ ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾಗುವುದರಿಂದ ಈ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತದೆ.

ಮಹಿಳೆಯರಿಗೆ ಮುಟ್ಟು ನಿಲ್ಲುವ ಸಮಯದಲ್ಲಿ ಹಾಟ್ ಫ್ಲಾಷ್ ಕಂಡುಬರುವುದು. ಹಾಟ್ ಫ್ಲಾಷ್ ಅಂದರೆ ಸೆಕೆಯಾಗುವುದು ಮುಖ್ಯವಾಗಿ ಮುಖ, ಕುತ್ತಿಗೆ ಮತ್ತು ತಲೆ ತುಂಬಾ ಬಿಸಿಯಾಗಿ ಉರಿ ಅನಿಸತೊಡಗುವುದು. ಮೈಯೆಲ್ಲಾ ಬೆವರಲಾರಂಭಿಸುತ್ತದೆ. ಈ ರೀತಿ ಸ್ವಲ್ಪ ಹೊತ್ತು ಅಥವಾ 30 ನಿಮಿಷದವರೆಗೆ ಆಗುವುದು. ಅಗ ತ್ವಚೆಯೆಲ್ಲಾ ಕೆಂಪಾಗುತ್ತದೆ.

ಹಾಟ್ ಫ್ಲಾಷ್ ನ 4 ಲಕ್ಷಣಗಳು:
1. ಮೈ ಬಿಸಿ 30 ನಿಮಷಕ್ಕಿಂತ ಅಧಿಕವಿರುವುದಿಲ್ಲ
2. ರಾತ್ರಿಯಲ್ಲಿ ಮೈ ತುಂಬಾ ಬೆವರುವುದು
3. ಮುಖ ಕೆಂಪಾಗುವುದು
4. ಈ ರೀತಿ ಉಂಟಾದರೆ ಹವಾನಿಯಂತ್ರಣ ಕೊಠಡಿಯಲ್ಲಿ ಕುಳಿತರೂ ಸೆಕೆಯಾಗುವುದು.

ಹಾಟ್ ಫ್ಲಾಷ್ ಉಂಟಾದರೆ ಈ ರೀತಿ ಮಾಡಿ:
1. ಸಡಿಲವಾದ ಹತ್ತಿ ಬಟ್ಟೆಯನ್ನು ಧರಿಸಬೇಕು.
2. ತಂಪಾದ ರೂಮಿನಲ್ಲಿ ನಿದ್ದೆ ಮಾಡಿ
3. ಖಾರದ ಆಹಾರ ತಿನ್ನುವುದಾಗಲಿ ಆಲ್ಕೋಹಾಲ್, ಕಾಫಿ ಕುಡಿಯುವುದಾಗಲಿ ಮಾಡಬಾರದು.
ವಿಟಮಿನ್ ಇ ಇರುವ ಆಹಾರ ಸೇವನೆ ಮತ್ತು ಹಾರ್ಮೋನ್ ಗಳ ನಿಯಂತ್ರಣಕ್ಕೆ ಔಷಧಿಯನ್ನು ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು.

English summary

Hot flashes problem in women | Tips for women health | ಮಹಿಳೆಯರಲ್ಲಿ ಹಾಟ್ ಫ್ಲಾಷ್ | ಮಹಿಳೆಯರ ಆರೋಗ್ಯಕ್ಕಾಗಿ ಕೆಲ ಸಲಹೆಗಳು

Hot flashes are experienced by women at menopausal age . A product of complex hormonal changes, accompanied by the aging process, hot flashes happen because of the declining levels of estrogen in the body.
Story first published: Tuesday, February 28, 2012, 16:46 [IST]
X
Desktop Bottom Promotion