For Quick Alerts
ALLOW NOTIFICATIONS  
For Daily Alerts

ನೂಡಲ್ಸ್ ತಿಂದರೆ ಆರೋಗ್ಯ ಕೆಡಬಹುದಾ?

|
Affect Of Noodles On Health
ಇದು ಫಾಸ್ಟ್ ಫುಡ್ ಜಮಾನ. ಬೆಳಗ್ಗೆ ಎದ್ದು ಗಡಿಬಿಡಿಯಿಂದ ಆಫೀಸ್ ಗೆ ರೆಡಿಯಾಗುವಾಗ ಸುಲಭದಲ್ಲಿ ಮಾಡುವ ತಿಂಡಿ ಅಂದರೆ ನೂಡಲ್ಸ್. ಬಾಯಿಗೆ ರುಚಿ ಮತ್ತು ಹೊಟ್ಟೆಯೂ ಬೇಗನೆ ತುಂಬುವುದರಿಂದ ಇದು ನಮ್ಮೆಲ್ಲರ ಮೆಚ್ಚಿನ ಆಹಾರ ಅಂದರೆ ತಪ್ಪಾಗಲಾರದು. ಆದರೆ ಈ ನೂಡಲ್ಸ್ ಸೇವಿಸುವುದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ತಿಳಿಯಬೇಕೆಂದರೆ ಮುಂದೆ ಓದಿ.

1. ಬೇಯಿಸಿ ಪ್ಯಾಕ್ ಮಾಡಿದ ನೂಡಲ್ಸ್ ( ರೆಡಿ ಮೇಡ್ ನೂಡಲ್ಸ್ ) ಸೇವನೆ ಆರೋಗ್ಯಕ್ಕೆ ಒಳ್ಲೆಯದಲ್ಲ. ಏಕೆಂದರೆ ಇಂತಹ ಆಹಾರ ವಿಷಮಯವಾಗಿರುವುದರಿಂದ, ಇದನ್ನು ಸೇವಿಸಿದಾಗ ದೇಹದ ಆರೋಗ್ಯ ಕೆಡುವುದು.

2. ಇದರಲ್ಲಿ ಅಧಿಕ ಪ್ರಮಾಣದ ಕಾರ್ಬೋಹೈಡ್ರೇಟ್ ಇರುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಮಾಡುತ್ತದೆ. ಆದ್ದರಿಂದ ದಿನವೂ ನೂಡಲ್ಸ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.

3. ಆರೋಗ್ಯಕರವಾದ ಯಾವುದೇ ಖನಿಜಾಂಶವಾಗಲಿ, ಪ್ರೊಟೀನ್ ಅಂಶವಾಗಲಿ ನೂಡಲ್ಸ್ ನಲ್ಲಿ ಇಲ್ಲ.

4. ನೂಡಲ್ಸ್ ಅನ್ನು ಮೈದಾ ಬಳಸಿ ಮಾಡಿರುವುದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುವುದು.

5. ನೂಡಲ್ಸ್ ಅನ್ನು ಸರಿಯಾಗಿ ಬೇಯಿಸದಿದ್ದರೆ ಬೇಗನೆ ಜೀರ್ಣವಾಗುವುದಿಲ್ಲ.

ಆರೋಗ್ಯಕರ ರೀತಿಯಲ್ಲಿ ನೂಡಲ್ಸ್ ಸೇವಿಸಲು ಕೆಲ ಸಲಹೆ:

1. ನೂಡಲ್ಸ್ ಅನ್ನು ಚೆನ್ನಾಗಿ ಬೇಯಿಸಿ. ಇದನ್ನು ತಯಾರಿಸುವಾಗ ಜೊತೆಗೆ ಕ್ಯಾರೆಟ್, ಬೀನ್ಸ್, ಬಟಾಣಿಯಂತಹ ತರಕಾರಿಗಳನ್ನು ಜೊತೆಯಲ್ಲಿ ಹಾಕಿ ನೂಡಲ್ಸ್ ತಯಾರಿಸಿ.

2. ಮಾಂಸಾಹಾರಿಗಳಾದರೆ ನೂಡಲ್ಸ್ ಜೊತೆ ಮೊಟ್ಟೆ ಅಥವಾ ಚಿಕ್ಕನ್ ಸೇರಿಸಿ ತಯಾರಿಸಿ ತಿನ್ನುವುದು ಒಳ್ಳೆಯದು.

ನೂಡಲ್ಸ್ ಪ್ರಿಯರು ನೂಡಲ್ಸ್ ಅನ್ನು ಅಪರೂಪಕ್ಕೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು.

English summary

Is Noodles a healthy diet | Noodles Doodles | Chinese Cuisine| ಆರೋಗ್ಯದ ಮೇಲೆ ನೂಡಲ್ಸ್ ಪರಿಣಾಮ | ಆರೋಗ್ಯಕ್ಕಾಗಿ ಕೆಲ ಸಲಹೆ

We all love to have noodles and the best thing about noodles is it is easy to make. Instant noodles are easy to make and filling too but did you know excessive consumption of noodles can be unhealthy
Story first published: Friday, February 24, 2012, 17:46 [IST]
X
Desktop Bottom Promotion