For Quick Alerts
ALLOW NOTIFICATIONS  
For Daily Alerts

ಬಾಯಿ ಹುಣ್ಣಿಗೆ ಕಾರಣ ಮತ್ತು ಪರಿಹಾರ

|
Tips To Prevent Mouth Ulcers
ಬಾಯಿಯಲ್ಲಿ ಹುಣ್ಣು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಈ ರೀತಿ ಕಾಣಿಸಿಕೊಂಡರೆ ಆಹಾರವನ್ನು ಸೇವಿಸುವುದು ತುಂಬಾ ಕಷ್ಟ. ಆದರೆ ಇದನ್ನು ಕೇವಲ ಒಂದೇ ವಾರದಲ್ಲಿ ಹೋಗಲಾಡಿಸಬಹುದು. ಬಾಯಿ ಹುಣ್ಣು ಉಂಟಾಗಲು ಕಾರಣವೇನು ಮತ್ತು ಈ ಸಮಸ್ಯೆಯನ್ನು ಹೇಗೆ ನಿವಾರಿಸಬಹುದೆಂಬ ವಿವರಗಳನ್ನು ಈ ಕೆಳಗ್ಗೆ ನೀಡಲಾಗಿದೆ ನೋಡಿ.

ಬಾಯಿ ಹುಣ್ಣಿಗೆ ಕಾರಣಗಳು:
* ಖಾರವಿರುವ ಆಹಾರ ಸೇವನೆ
* ದೇಹದ ಉಷ್ಣತೆ ಹೆಚ್ಚಾದಾಗ
* ಬಾಯಿಯನ್ನು ಸರಿಯಾದ ರೀತಿಯಲ್ಲಿ ಶುಚಿ ಮಾಡದಿದ್ದರೆ
* ಫೋಲಿಕ್ ಆಸಿಡ್ ಮತ್ತು ವಿಟಮಿನ್ 'ಬಿ'ಕೊರತೆ ಉಂಟಾದರೆ
* ಕಡಿಮೆ ರೋಗನಿರೋಧಕ ಶಕ್ತಿ
* ಧೂಮಪಾನ
* ಜ್ವರ ಬಂದಾಗ
* ಅನಿಯಮಿತ ಮುಟ್ಟು

ಬಾಯಿ ಹುಣ್ಣು ತಡೆಗಟ್ಟುವ ವಿಧಾನ:

1. ಅಧಿಕ ಖಾರವಿರುವ ಆಹಾರ ಸೇವನೆ ಮಾಡಬಾರದು.

2. ಅಧಿಕ ನೀರನ್ನು ಕುಡಿಯಬೇಕು (8-10 ಗ್ಲಾಸ್ ನರು ಕುಡಿಯಬೇಕು).

3. ಎಳನೀರನ್ನು ಕುಡಿಯಿರಿ.

4. ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜಬೇಕು. ಟೂತ್ ಪೇಸ್ಟ್ ಗಳನ್ನು ಆಗಾಗ ಬದಲಾಯಿಸಬಾರದು.

5. ಬಾಯಿ ಹುಣ್ಣು ಬಂದಾಗ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಕಡಿಮೆಯಾಗುವುದು.

6. ಬಸಳೆ ಸೊಪ್ಪನ್ನು ಜಗಿದು ಉಗಿದರೆ ಬಾಯಿ ಹಣ್ಣು ನಿವಾರಣೆಯಾಗುವುದು.

English summary

Tips To Prevent Mouth Ulcers | Tips For Health | ಬಾಯಿ ನಿವಾರಿಸುವ ವಿಧಾನ | ಆರೋಗ್ಯಕ್ಕಾಗಿ ಕೆಲ ಸಲಹೆ

Mouth ulcers burn and can be painful. However, mouth ulcers are temporary and goes off in a week. There are several medications and natural remedies to cure mouth ulcers.
Story first published: Monday, February 20, 2012, 14:43 [IST]
X
Desktop Bottom Promotion