For Quick Alerts
ALLOW NOTIFICATIONS  
For Daily Alerts

ಹ್ಯಾಂಗ್ ಓವರಿನಿಂದ ಎದ್ದುಬರಲು 5 ಐಡಿಯಾ

|
Home Remedy for Hangover
ಇದೀಗ ಹೊಸ ವರುಷ ಕಾಲಿಡುತ್ತಿದೆ. ಎಲ್ಲೆಲ್ಲೂ ಪಾರ್ಟಿಗಳ ಅಬ್ಬರ. ಹೊಸ ವರುಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಒಬ್ಬೊಬ್ಬರು ಅನುಸರಿಸುವ ರೀತಿ ಒಂದೊಂದು. ಅದರಲ್ಲಿ ಆಲ್ಕೊಹಾಲ್ ಹೊರತಾಗಿಲ್ಲ.

ಈ ಲೇಖನವನ್ನು ಓದುವವರಿಗೆ ಮೊದಲ ಸಲಹೆ ಎಂದರೆ ಮದ್ಯರಹಿತ ಪಾರ್ಟಿ ಮಾಡಿ ಎಂದು. ಆದರೆ ಆಲ್ಕೊಹಾಲ್ ಅನಿವಾರ್ಯ ಎನ್ನುವವರಿಗೆ ಈ ಸಲಹೆ ಅನ್ವಯಿಸುತ್ತದೆ. ಕುಡಿತದ ಅಮಲಿನಲ್ಲಿ ಆರೋಗ್ಯ ಕೆಡಿಸಿಕೊಳ್ಳುವವರಿಗೆ ಇದು ಸ್ವಲ್ಪ ಉಪಯೋಗಕ್ಕೆ ಬರುತ್ತದೆ.

ಕುಡಿತ ಹೆಚ್ಚಾದರೆ ತಲೆ ಸುತ್ತು, ಸುಸ್ತು, ತಲೆ ನೋವು, ವಾಂತಿ, ವಾಕರಿಕೆ ಇವು ಸಹಜ. ಇದನ್ನು ನಿವಾರಿಸಿಕೊಳ್ಳಲು ಇಲ್ಲೊಂದಿಷ್ಟು ಸುಲಭ ಮಾರ್ಗಗಳನ್ನು ನೀಡಲಾಗಿದೆ.

ಕುಡಿತದ ಅಮಲಿಗೆ ಮನೆ ಮದ್ದು ಯಾವುದು?
* ಬಿಸಿ ನೀರಿನ ಸ್ನಾನ: ಕುಡಿತ ಹೆಚ್ಚಾಗಿ ನಿಶೆ ಇನ್ನೂ ಇಳಿದಿಲ್ಲ ಎಂದಾದರೆ ಮೊದಲು ಬಿಸಿ ನೀರಿನ ಸ್ನಾನ ಮಾಡಿಕೊಳ್ಳಿ. ಇದರಿಂದ ಬೆವರಿನ ಮೂಲಕ ಕೆಲವು ವಿಷಯುಕ್ತ ಅಂಶಗಳು ದೇಹದಿಂದ ಹೋಗಲು ನೆರವಾಗುತ್ತದೆ.

* ಚೆನ್ನಾಗಿ ನೀರು ಕುಡಿಯಿರಿ: ಆಲ್ಕೊಹಾಲ್ ಸೇವಿಸುವಾಗಲೂ ಅಥವಾ ಸೇವಿಸಿದ ನಂತರವೂ ಅತಿಯಾಗಿ ನೀರನ್ನು ಕುಡಿಯಬೇಕು. ಇದರಿಂದ ಕುಡಿತದ ವಿಷಕಾರಿ ಅಂಶಗಳು ಬೇಗನೆ ದೇಹದಿಂದ ಹೊರಗೆ ಹೋಗುತ್ತದೆ. ಹೆಚ್ಚು ನೀರು ಕುಡಿದರೆ ತಲೆನೋವನ್ನು ಮತ್ತು ಕುಡಿತದಿಂದ ಹೊಟ್ಟೆಯಲ್ಲಿ ಉಂಟಾಗುವ ಸಮಸ್ಯೆಯನ್ನು ನಿವಾರಿಸಲು ಹೆಚ್ಚು ಸಹಕಾರಿ.

* ಬಾಳೆಹಣ್ಣು ತಿನ್ನಿ: ಕುಡಿತದ ಅಮಲು ನೆತ್ತಿಗೇರಿ ಸಮಸ್ಯೆ ತಂದಾಗ ಬಾಳೆಹಣ್ಣು ಹೆಚ್ಚು ಉಪಯೋಗಕ್ಕೆ ಬರುತ್ತದೆ. ಬಾಳೆಹಣ್ಣನ್ನು ಹೆಚ್ಚು ತಿಂದರೆ ಅದರಲ್ಲಿನ ಪೊಟಾಶಿಯಂ ಕುಡಿತದ ಅಮಲಿನಿಂದ ಹೊರಬರಲು ಸಹಾಯ ಮಾಡುತ್ತದೆ.

* ವಿಟಮಿನ್ ಸಿ: ಕುಡಿತ ಹೆಚ್ಚಾಗಿ ತುಂಬಾ ತಲೆ ನೋವು ಉಂಟಾಗಿದ್ದರೆ, ಅಥವಾ ತುಂಬಾ ತಲೆ ಸುತ್ತು ಕಾಣಿಸಿಕೊಂಡಿದ್ದರೆ ಅಂತಹ ಸಮಯದಲ್ಲಿ ವಿಟಮಿನ್ ಸಿ ಪೂರಿತ ಆಹಾರ ಸೇವಿಸಬೇಕು. ಇದರಿಂದ ದೇಹ ಮತ್ತು ಮನಸ್ಸು ಎರಡಕ್ಕೂ ರಿಲ್ಯಾಕ್ಸ್ ಆಗುತ್ತದೆ.

* ಖಾರದ ಪದಾರ್ಥ ಬೇಡ: ಅತಿ ಖಾರದ ಪದಾರ್ಥಗಳನ್ನು ಈ ಸಮಯದಲ್ಲಿ ಸೇವಿಸಬಾರದು. ಆದರೆ ಹೊಟ್ಟೆ ತುಂಬಾ ಊಟ ಮಾಡುವುದನ್ನು ಮರೆಯಬೇಡಿ. ತರಕಾರಿ ಸೂಪ್ ಈ ಸಮಯಕ್ಕೆ ತುಂಬಾ ಒಳ್ಳೆಯದು.

* ನಿಂಬೆರಸ: ಬಿಸಿ ನೀರಿಗೆ ನಿಂಬೆರಸ ಹಿಂಡಿ ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯಬೇಕು. ಇದರಿಂದ ಸುಸ್ತು ಕಡಿಮೆಯಾಗಿ ವಾಂತಿ ಮತ್ತು ವಾಕರಿಕೆ ನಿಲ್ಲುತ್ತದೆ. ಬೇಗನೆ ದೇಹ ಚುರುಕಾಗುವಂತೆ ಮಾಡುತ್ತದೆ. ಆದರೆ ಆಸಿಡ್ ಪೂರಿತ ಮತ್ತು ಹುಳಿಅಂಶದ ಜ್ಯೂಸ್ ಸೇವನೆ ಬೇಡ.

* ಶುಂಠಿ: ನೀರಿಗೆ ಅಥವಾ ಊಟಕ್ಕೆ ಶುಂಠಿಯನ್ನು ಸೇರಿಸಿ ಸೇವಿಸಿದರೆ ತಲೆ ಸುತ್ತು, ತಲೆ ನೋವು, ಸುಸ್ತು ಎಲ್ಲವೂ ಪರಿಣಾಮಕಾರಿಯಾಗಿ ಕಡಿಮೆಯಾಗುತ್ತದೆ.

* ಕಾಫಿ ಕುಡಿಯಲೇಬೇಡಿ: ತಲೆ ನೋವು ಬಂದಾಗ ಕಾಫಿ ಕುಡಿದರೆ ಬೇಗನೆ ರಿಲ್ಯಾಕ್ಸ್ ಆಗುತ್ತದೆ ಎಂದು ಹಲವರ ಮಾತು. ಆದರೆ ಇದು ತಪ್ಪು ಕಲ್ಪನೆ. ಕಾಫಿ ಅಥವಾ ಇನ್ನಿತರ ಕೆಫೆನ್ ಅಂಶ ಹೊಂದಿರುವ ಪಾನೀಯಗಳು ದೇಹದಲ್ಲಿ ಇನ್ನಷ್ಟು ನೀರಿನಂಶವನ್ನು ಕಡಿಮೆಗೊಳಿಸಿ ಸಮಸ್ಯೆಯನ್ನು ದ್ವಿಗುಣಗೊಳಿಸುತ್ತದೆ. ಆದರೆ ಕಾಫಿ ಬದಲಾಗಿ ಮಸಾಲಾ ಟೀ ಅಥವಾ ಗ್ರೀನ್ ಟೀ ಕುಡಿದರೆ ಹೆಚ್ಚು ಉಪಯೋಗ.

English summary

Home Remedy for Hangover | New Year Party | ಕುಡಿತದ ನಿಶೆಗೆ ಮನೆಮದ್ದು | ಹೊಸ ವರ್ಷದ ಪಾರ್ಟಿ

New year is on the way. So every where there is a party to welcome new year. Alcohol is not exception from party. Our first advice to you is not to consume alcohol. But if you get hangover, here are some homemade remedies to shed hangover quickly. Take a look.
Story first published: Saturday, December 31, 2011, 11:37 [IST]
X
Desktop Bottom Promotion