For Quick Alerts
ALLOW NOTIFICATIONS  
For Daily Alerts

ರಕ್ತಹೀನತೆಯಿಂದ ಹೊರಬರುವ ಸುಲಭ ಮಾರ್ಗವಿದು

|
Tips to Combat Anaemia
ರಕ್ತಹೀನತೆ ಹಲವರ ಸಮಸ್ಯೆ. ರಕ್ತದಲ್ಲಿನ ಹಿಮೊಗ್ಲೊಬಿನ್ ಮತ್ತು ಕೆಂಪು ರಕ್ತ ಕಣಗಳು ಕಡಿಮೆಯಾಗುವುದೇ ರಕ್ತಹೀನತೆಯ ಸೂಚನೆ.

ಸಾಮಾನ್ಯವಾಗಿ 100 ಎಂಎಲ್ ರಕ್ತದಲ್ಲಿ 15 ಗ್ರಾಂ ಹಿಮೊಗ್ಲೊಬಿನ್ ಅಂಶವಿದ್ದು, ಒಂದು ಕ್ಯುಬಿಕ್ ಮಿಲಿಮೀಟರ್ ರಕ್ತದಲ್ಲಿ 5 ಮಿಲಿಯನ್ ಕೆಂಪು ಕಣಗಳು ಇರುತ್ತವೆ. ಆದರೆ ಈ ಸಂಖ್ಯೆಯಲ್ಲಿ ಅತಿಯಾದ ಇಳಿಕೆಯಾದರೆ ಅದನ್ನು ರಕ್ತಹೀನತೆ ಎಂದು ಪರಿಗಣಿಸಲಾಗುತ್ತದೆ.

ಈ ರಕ್ತಹೀನತೆ ಅನೇಕ ಲಕ್ಷಣಗಳನ್ನು ಹೊಂದಿದೆ. ದುರ್ಬಲತೆ, ಬಳಲಿಕೆ, ಬೇಗನೆ ಸುಸ್ತಾಗುವುದು, ಸಣ್ಣಗಾದಂತೆ ಕಾಣುವುದು ಮತ್ತು ಮುಖದಲ್ಲಿ ವಯಸ್ಸಿಗೆ ಮುನ್ನವೇ ಸುಕ್ಕು ಕಾಣಿಸಿಕೊಳ್ಳುವುದು ಹೀಗೆ ಹಲವು ಸಮಸ್ಯೆ ಕಾಣಿಸುತ್ತವೆ. ಆದರೆ ಈ ಸಮಸ್ಯೆಯನ್ನು ಮುಂದುವರೆಯಲು ಬಿಟ್ಟರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

ರಕ್ತಹೀನತೆ ಇದ್ದವರು ಏನು ತಿನ್ನಬೇಕು?
* ಕಬ್ಬಿಣಾಂಶ ಹೆಚ್ಚಿರುವ ಆಹಾರ, ಎಳ್ಳು, ಬಾದಾಮಿ, ಹಾಲಿನ ಉತ್ಪನ್ನಗಳು, ಮಾಂಸಾಹಾರ
* ತರಕಾರಿ: ಬೀಟ್ ರೂಟ್, ಪಾಲಾಕ್, ಸೊಯಾಬೀನ್, ಮೂಲಂಗಿ, ಕ್ಯಾರೆಟ್, ಟೊಮೆಟೊ
* ಹಣ್ಣು: ಬಾಳೆಹಣ್ಣು, ಕಪ್ಪು ದ್ರಾಕ್ಷಿ, ಸ್ಟ್ರಾಬೆರಿ, ಸೇಬು, ನೆಲ್ಲಿಕಾಯಿ
ಈ ಮೇಲೆ ತಿಳಿಸಿದ ಪದಾರ್ಥಗಳನ್ನು ದಿನನಿತ್ಯ ಆಹಾರದೊಂದಿಗೆ ಸೇವಿಸುವುದರಿಂದ ರಕ್ತಹೀನತೆಯನ್ನು ನಿವಾರಿಸಬಹುದು.

English summary

Anaemia Causes | Tips to Combat Anaemia | ರಕ್ತಹೀನತೆ | ರಕ್ತಹೀನತೆಗೆ ಪರಿಹಾರ

Anaemia is a very common ailment which most of the people suffering from. Haemoglobin and red blood corpuscles fall from their normal level is called as anaemia. So here are some tips that shows how to combat anaemia.
Story first published: Monday, December 12, 2011, 11:33 [IST]
X
Desktop Bottom Promotion