For Quick Alerts
ALLOW NOTIFICATIONS  
For Daily Alerts

ಸರ್ವ ರೋಗಗಳಿಗೆ ಡಾಕ್ಟರ್ ಮನೆಯಲ್ಲೇ ಇದ್ದಾರೆ

|
Basil Plant Health Benefits
ತುಳಸಿ ಸಾಮಾನ್ಯ ಎಲ್ಲರ ಮನೆಯಲ್ಲೂ ಬೆಳೆಯುವ ದೈವಿಕ ಸಸ್ಯ. ತುಳಸಿ ಧಾರ್ಮಿಕವಾಗಿ ಮಾತ್ರ ಹೆಸರು ಗಳಿಸಿಲ್ಲ, ಅದರಲ್ಲಿ ಹಲವು ಔಷಧೀಯ ಗುಣಗಳೂ ಇದೆ. ಆದರೆ ಈ ಅಂಶ ತುಳಸಿ ಬೆಳೆಸಿದ ಎಷ್ಟೋ ಜನರಿಗೂ ತಿಳಿದಿರುವುದಿಲ್ಲ. ಇದರ ಎಲೆಯ ಗಂಧವೇ ವಾತಾವರಣವನ್ನು ತಂಪು ಮತ್ತು ಕಲ್ಮಶರಹಿತವಾಗಿಸುವ ಶಕ್ತಿ ಹೊಂದಿದೆ.

ತುಳಸಿಯಲ್ಲಿ ಶಾಮ (ಕೃಷ್ಣ) ತುಳಸಿ ಮತ್ತು ರಾಮ ತುಳಸಿ ಎಂಬ ಎರಡು ವಿಧವಿದೆ. ರಾಮ ತುಳಸಿಗಿಂತ ಕೃಷ್ಣ ತುಳಸಿ ಹೆಚ್ಚು ಆರೋಗ್ಯಕರ ಅಂಶ ಪಡೆದುಕೊಂಡಿದೆ.

ತುಳಸಿಯಿಂದ ಆರೋಗ್ಯ ವೃದ್ಧಿ ಹೇಗೆ?

1. ಜ್ಞಾಪಕ ಶಕ್ತಿ ಹೆಚ್ಚುತ್ತದೆ: ಐದು ತುಳಸಿ ಎಲೆಯನ್ನು ಪ್ರತಿದಿನ ತಿಂದರೆ ಹಲವು ಸೋಂಕು ಮತ್ತು ರೋಗವನ್ನು ದೂರವಿರಿಸಬಹುದು. ಇದರ ಸೇವನೆಯಿಂದ ಜ್ಞಾಪಕ ಶಕ್ತಿಯೂ ಹೆಚ್ಚಾಗಿ ಬುದ್ಧಿವಂತಿಕೆಯೂ ಚುರುಕುಗೊಳ್ಳುತ್ತದೆ. ಇದನ್ನು ವಯಸ್ಸಾದವರು ಸೇವಿಸಿದರೆ ಸುಸ್ತು ಕಡಿಮೆಗೊಳ್ಳುತ್ತದೆ.
2. ರಕ್ತ ಶುದ್ಧೀಕರಣ: ತುಳಸಿ ಎಲೆ ರಕ್ತವನ್ನು ಶುದ್ಧೀಕರಣಗೊಳಿಸುತ್ತದೆ. ಇದು ಸೌಂದರ್ಯವನ್ನೂ ವೃದ್ಧಿಸುತ್ತದೆ.
3. ಹೊಳೆವ ತ್ವಚೆ: ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ರಸವನ್ನು ನೀರಿನೊಂದಿಗೆ ಬೆರೆಸಿ ಸೇವಿಸಿದರೆ ತ್ವಚೆಯ ಸಾಂದ್ರತೆ ಹೆಚ್ಚಾಗುತ್ತದೆ.
4. ಜೀರ್ಣಕ್ರಿಯೆ: ತುಳಸಿಯನ್ನು ತಿಂದರೆ ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯಲು ಅನುವು ಮಾಡಿಕೊಡುತ್ತದೆ.
5. ವಾಂತಿ, ಪಿತ್ತ, ವಾಕರಿಕೆ: ತುಳಸಿ ತಿಂದರೆ ತಕ್ಷಣವೇ ವಾಂತಿ ವಾಕರಿಗೆ ನಿಂತು ಹೋಗುತ್ತದೆ. ಪಿತ್ತದ ಸಮಸ್ಯೆಯಿದ್ದವರೂ ಇದರಿಂದ ಪ್ರಯೋಜನ ಪಡೆದುಕೊಳ್ಳಬಹುದು.
6. ಕಿಡ್ನಿ ಕಲ್ಲಿನ ಸಮಸ್ಯೆ: ತುಳಸಿ ಎಲೆಯನ್ನು ತಿಂದರೆ ಕಿಡ್ನಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ನೆರವಾಗುತ್ತದೆ. ಕಿಡ್ನಿ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದವರು ತುಳಸಿ ಎಲೆ ಜೊತೆ ಜೇನನ್ನು ಬೆರೆಸಿ 6 ತಿಂಗಳು ನಿರಂತರವಾಗಿ ಕುಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.
7. ಆಸಿಡಿಟಿ, ಪೈಲ್ಸ್: ಆಸಿಡಿಟಿ ಮತ್ತು ಪೈಲ್ಸ್ ತೊಂದರೆಗೆ ತುತ್ತಾದವರು ತುಳಸಿ ಸೇವಿಸುವುದರಿಂದ ಕ್ರಮೇಣ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಇದರಿಂದ ಚರ್ಮದ ಮೇಲಿನ ಬಿಳಿ ಮಚ್ಚೆಯೂ ಹೋಗುತ್ತದೆ.
8. ಕೊಲೆಸ್ಟ್ರಾಲ್: ತುಳಸಿ ಬೊಜ್ಜನ್ನು ನಿಯಂತ್ರಿಸುವುದಲ್ಲದೆ ರಕ್ತದಲ್ಲಿನ ಕೊಬ್ಬಿನಂಶವನ್ನೂ ನಿಯಂತ್ರಿಸುತ್ತದೆ. ಜ್ವರ, ಕೆಮ್ಮು ಮತ್ತು ಟಿಬಿ ರೋಗಿಗಳೂ 3 ಗ್ರಾಂ ತುಳಸಿಯನ್ನು ಪ್ರತಿನಿತ್ಯ ಸೇವಿಸಿದರೆ ಉಪಯೋಗ ಹೊಂದಬಹುದು.

English summary

Basil Plant Health Benefits | Tulsi for Good Health | ತುಳಸಿ ಎಲೆಯ ಆರೋಗ್ಯಕರ ಉಪಯೋಗ | ತುಳಸಿ ಮತ್ತು ಉತ್ತಮ ಆರೋಗ್ಯ

Tulsi or Basil not only recognized for religious point of view, but also from its fantastic medicinal properties. It has so many health benefits in it. The mere smell and its health benefits make it as best ayurvedic plant to cure many disorders. Have a look to know the several benefits of Tulsi Plant.
Story first published: Friday, December 9, 2011, 14:58 [IST]
X
Desktop Bottom Promotion